ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಟಿ ಎಸ್ ಗೊರವರರ ‘ಆಡು ಕಾಯೋ ಹುಡುಗನ ದಿನಚರಿ’
ಪ್ರಸನ್ನ ಸಂತೆಕಡೂರು ಪುಸ್ತಕ ಮೋಹಿ. ಓದಿದಷ್ಟೂ ಮುಗಿಯದ ಉತ್ಸಾಹದ ಅವರು ಓದಿದ 'ಬೊಂಬಾಟ್ ಪುಸ್ತಕ'ವನ್ನು ಪ್ರತೀ ವಾರ ಅವಧಿ ಓದುಗರಿಗೆ ಪರಿಚಯಿಸಲಿದ್ದಾರೆ- ಕನ್ನಡ ಸಾಹಿತ್ಯದಲ್ಲಿ 'ಅನುಭವ ಕಥನ'ಗಳು 'ಆತ್ಮಕಥನ'ಗಳು ತುಂಬಾ ಬಂದಿವೆ. ಅದರಲ್ಲಿ ಕಾರಂತರ 'ಹುಚ್ಚು ಮನಸ್ಸಿನ ಹತ್ತು ಮುಖಗಳು' ಜೊತೆಗೆ ಅವರ ಹಲವು ಕಾದಂಬರಿಗಳು,...
ಬಿ ಆರ್ ಎಲ್ ʼನವೋನ್ಮೇಷʼ
ಕನ್ನಡದ ಮುಖ್ಯ ಕವಿ ಬಿ ಆರ್ ಲಕ್ಷ್ಮಣರಾವ್ ಅವರ ಹೊಸ ಸಂಕಲನ ಮಾರುಕಟ್ಟೆಯಲ್ಲಿದೆ. ನವೋನ್ಮೇಷಕ್ಕೆ ವಿಮರ್ಶಕ, ಕವಿ ಚಿಂತಾಮಣಿ ಕೊಡ್ಲೆಕೆರೆ ಬರೆದ ಮುನ್ನುಡಿ ಇಲ್ಲಿದೆ. ಅಂಕಿತ ಪುಸ್ತಕ ಈ ಕೃತಿಯನ್ನು ಪ್ರಕಟಿಸಿದೆ. ಚಿಂತಾಮಣಿ ಕೊಡ್ಲೆಕೆರೆ ಕನ್ನಡದ ಮಹತ್ವದ ಕವಿಗಳಲ್ಲೊಬ್ಬರಾದ ಶ್ರೀ ಬಿ.ಆರ್. ಲಕ್ಷ್ಮಣರಾವ್...
‘ಹಾವು’ ಗುರುರಾಜ ಸನಿಲ್ ಅವರೊಂದಿಗೆ ‘ಫಟಾ ಫಟ್’
'ಹಾವು ತುಳಿದೇನೆ ಮಾನಿನಿ, ಹಾವು ತುಳಿದೇನೆ?' ಎಂದು ಕೇಳಲು ಯಾರಿಗಾದರೂ ಅರ್ಹತೆ ಇದ್ದರೆ ಅದು ಗುರುರಾಜ್ ಸನಿಲ್ ಅವರಿಗೆ. ಹಾವಿನಂತೆ ಸಾಹಿತ್ಯವೂ ಅವರನ್ನು ಕಂಡು ಬುಸುಗುಟ್ಟಿದೆ. ಆದರೂ ಹಾವು ಸಾಹಿತ್ಯ ಎರಡನ್ನೂ ಹಿಡಿದು ತಮ್ಮ ಬಗಲಿಗೆ ಹಾಕಿಕೊಂಡಿರುವ ಖ್ಯಾತ ಉರಗ ತಜ್ಞ ಸನಿಲ್ ಅವರೊಂದಿಗೆ ‘ಅವಧಿ’ ನಡೆಸಿದ ಫಟಾ ಫಟ್ ಸಂದರ್ಶನ...
ಅಮೇರಿಕಾದಲ್ಲಿ ಆಹಾ! ಪುಸ್ತಕ ಪ್ರೀತಿ..
ವಿಜಯಲಕ್ಷ್ಮಿ ಕೆ.ಎಂ. ಮನುಷ್ಯನ ಮಿದುಳಿನಲ್ಲಿನ ಚಿಂತನೆಗಳು ಚಾಲನೆಯಲ್ಲಿರಬೇಕೆಂದರೆ, ಅವು ಇನ್ನಷ್ಟು ಪ್ರಖರಗೊಳ್ಳಬೇಕೆಂದರೆ, ಆ ಚಿಂತನೆಗಳು ಮಾತಾಗಬೇಕು. ಮಾತಾಡಲು ಮತ್ತೊಬ್ಬರಿರಬೇಕು. ಮತ್ತೊಬ್ಬರ ಮಾತಿಗೆ ತಮ್ಮ ಚಿಂತನೆಗಳನ್ನು ಬೆಸೆಸಬೇಕು, ಬೆಸೆಸಿ ಒರೆ ಹಚ್ಚಬೇಕು. ಆದರೆ ಈ ಅಮೇರಿಕಾ ದೇಶದಲ್ಲಿ ಮನೆಯಲ್ಲಿರುವವರಿಗೆ...
ಪುರವಣಿಗಳು ಕಣ್ಣು ಮುಚ್ಚುತ್ತಿರುವ ಈ ಕಾಲದಲ್ಲಿ..
ಸಾಹಿತ್ಯಕ್ಕೂ ಪತ್ರಿಕೆಯೇ? ಎನ್ನುವುದು ಈಗ ಹುಬ್ಬೇರಿಸುವ ಸಂಗತಿ. ಸಾಪ್ತಾಹಿಕ ಪುರವಣಿಗಳ ಮೂಲಕವೇ ತಮ್ಮ ಹಿರಿಮೆಯನ್ನು ಹೆಚ್ಚಿಸಿಕೊಂಡಿದ್ದ ಪತ್ರಿಕೆಗಳೇ ಈಗ ಅದನ್ನು ನಿರ್ದಾಕ್ಷಿಣ್ಯವಾಗಿ ಬದಿಗೆ ಸರಿಸುತ್ತಿರುವಾಗ ‘ಅವಧಿ’ ಹೊಸ ರೂಪದಲ್ಲಿ ನಿಮ್ಮ ಮುಂದೆ ಬರುತ್ತಿದೆ.
ಸಾಹಿತ್ಯ ಎನ್ನುವುದು ಲಾಭ ತಂದುಕೊಡುವ ಪ್ರಾಡಕ್ಟ್ ಅಲ್ಲ ಎನ್ನುವುದು ಟಿವಿ ಚಾನಲ್ ಗಳಿಗೆ ಈ ಮೊದಲೇ ಗೊತ್ತಿತ್ತು. ಪತ್ರಿಕೆಗಳು ಈಗ ಅರಿತುಕೊಂಡಿವೆ. ತಮ್ಮ ಕಿರೀಟಕ್ಕೆ ಒಂದು ಗರಿ ಇರಲಿ ಎನ್ನುವಂತೆ, ಗಾಳಿಪಟಕ್ಕೊಂದು ಬಾಲಂಗೋಚಿ ಎನ್ನುವಂತಾಗಿ ಹೋಗಿದ್ದ ಪುರವಣಿಗಳು ಕೋವಿಡ್ ಬಂದದ್ದನ್ನೇ ನೆಪವಾಗಿಸಿಕೊಂಡು ಅದರ ಉಸಿರನ್ನು ತಣ್ಣಗಾಗಿಸಿದೆ.
ಹೆಸರಿಲ್ಲದ ಹೂವುಗಳು
ದಾದಾಪೀರ್ ಜೈಮನ್ ಹೆಸರಿಲ್ಲದ ಹೂವುಗಳು ಬಿಕರಿಯಾಗುವ ಜಾಗೆಗಳ ಗಮನಿಸಿದ್ದಿರೇನು? ದಿಂಬಿನ ಕವರಿನ ಮೇಲೆ ಬಾಗಿಲ ಪರದೆಯ ಮೇಲೆ ಬಣ್ಣದ ಸೀರೆಗಳ ಮೇಲೆ ಗೂಡು ಹುಡುಕುವ ಬಣ್ಣದ ಹೂಗಳು ಬೇರಾವುದೋ ಊರುಗಳಿಂದ ಇಲ್ಲಿಗೆ ಬೇರಾಗಿ ಬಂದರೂ; ಹುಟ್ಟುಹಬ್ಬದ ಶುಭಾಶಯ ಹೇಳುತ್ತವೆ ಹೂದಾನಿಗಳಲ್ಲಿ ಸೆಡವಿಲ್ಲದೆ ಕೂರುತ್ತವೆ...
ಅಪ್ಜೀ… ಇಡ್ಲಿ ಬೇಕು…
ಪಿ.ಎಸ್. ಅಮರದೀಪ್ “ಅಪ್ಪಜೀ, ಇಡ್ಲಿ ಬೇಕು” ಅಂದ ಅಭಿ. ಸಮಯ ನೋಡುತ್ತೇನೆ. ರಾತ್ರಿ ಹತ್ತು ಗಂಟೆಯಾಗಿದೆ. ಈಗ್ಯಾವ ಹೋಟಲ್ಲು, ತಳ್ಳುಗಾಡಿ ಅಂಗಡಿ ನೋಡಿ, ಹುಡುಕಿ ಇಡ್ಲಿ ತರಲಿ? ಸುಮ್ಮನೇ ಮಗನನ್ನು ನೋಡಿದೆ. ಹತ್ತು ಸೆಕೆಂಡ್ ಸೀರಿಯಸ್ಸಾಗಿದ್ದವನಂತೆ ಗುಮ್ಮನಿದ್ದಂತೆ ನೋಡಿದೆ, ಖಿಲ್ಲನೆ ನಕ್ಕ. ನಿರಾಳವಾಗಿ ನಾನೂ “ ಲೇ ಮಗನೇ”...
ನಿಮ್ಮಂತೆ ಬರೆಯಲಾಗುವುದಿಲ್ಲ..
ವಿ.ಎಸ್. ಶ್ಯಾನಬಾಗ್ ನನಗೆ ನಿಮ್ಮ ಹಾಗೆ ಬರೆಯಲಾಗುದಿಲ್ಲನಿಮ್ಮ ಬಗ್ಗೆ ನೀವು ಬರೆದ ಹಾಗೆನನ್ನ ಬಗ್ಗೆ ನನಗೆ ಬರೆಯಲಾಗುವುದಿಲ್ಲನೀವು ಹೇಳಿದಹಾಗೆನಿಮ್ಮ ಸ್ನೇಹಕ್ಕೆ ಬರೆದಿದ್ದನೆಲ್ಲಒರೆಸಿ ಹಾಕಿದೆ ಎಲ್ಲ ಅವನು ಅವಳ ಹಳೆಯ ಪ್ರೀತಿಒಂದಾಗಿ ಮತ್ತೆ ಮತ್ತೆ ಬೇರೆಯಾದ ರೀತಿಎಲ್ಲ ಅನುರಾಗಕ್ಕೆಅವಳನ್ನು ಕೂಡಲಾಗುವುದಿಲ್ಲಅವನನ್ನು...
‘ಪಹಾಡ್ ಗಂಜ್’ ಎಂಬ ನಿಗೂಢ ದುನಿಯಾ
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ 'ಹಾಯ್ ಅಂಗೋಲಾ' ಬರೆದರು. ಈಗ 'ಚಲೋ ದಿಲ್ಲಿ..' ಅಪರಾತ್ರಿಯ ಹೊತ್ತಿನಲ್ಲಿ ಅಲೆದಾಡುತ್ತಿದ್ದ ನಾನಂದು ದಿಲ್ಲಿಯ ‘ಪಹಾಡ್ ಗಂಜ್’ ಏರಿಯಾದಲ್ಲಿದ್ದೆ. ದೇಶದ ರಾಜಕೀಯ ಶಕ್ತಿಕೇಂದ್ರವಾಗಿರುವ ದೆಹಲಿಯಲ್ಲಿ ಸಾಮಾನ್ಯವಾಗಿ ಎಲ್ಲಾ ಪ್ರವಾಸಿಗರು ನೋಡ ಬಯಸುವ...
ಎಸ್ ನಿಜಲಿಂಗಪ್ಪ ಅವರ ಪಾಲಿನ ಆಂಜನೇಯ ಯಾರು ಗೊತ್ತಾ?
ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ. ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ. ವಿಠ್ಠಲಮೂರ್ತಿ, ನಿಜಲಿಂಗಪ್ಪ ಅವರ ಪಾಲಿನ ಲವ-ಕುಶ ಯಾರು ಅಂತ ನಿಮಗೆ ಗೊತ್ತು. ಆದರೆ ಅವರ ಅಂತರಂಗಕ್ಕೆ ಅಂಟಿಕೊಂಡಿದ್ದ ಆಂಜನೇಯ ಯಾರು ಅಂತ ನಿಮಗೆ ಗೊತ್ತಾ? ಹಾಗಂತ ಅವತ್ತು ಬೆಂಗಳೂರಿನ ಸದಾಶಿವನಗರದ...
‘ಸ್ವ್ಯಾನ್’ಗೆ ಬರಗೂರು ಎಂಬ ಗರಿ..
ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. ಒಂದು ದಿನ ಅಂಕಿತ ಪುಸ್ತಕ ಮಳಿಗೆಯಲ್ಲಿ ಪ್ರಕಾಶ್ ಕಂಬತ್ತಳ್ಳಿ ಅವರು ಬರಗೂರು ರಾಮಚಂದ್ರಪ್ಪನವರಿಗೆ ‘ನಮ್ಮ ಪುಸ್ತಕಗಳ...
ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..
ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ, ಕಾಡೆಂದರೆ ಅದು ಪ್ರಾಣಿಗಳಿಗೆ ಇರುವ ಜಾಗ, ಕಾಡು ಮನುಷ್ಯರಿಗೆ ಅಪಾಯಕಾರಿ, ಕಾಡು ಅತಿ ಘೋರ..ಕಾಡಿನೊಳಗೆ ಯಾವ ಕಾರಣಕ್ಕೂ ಹೋಗಬಾರದು.. ಇದು ನನ್ನ ಬಾಲ್ಯದಲ್ಲಿ ಕಾಡಿನ ಮೇಲಿದ್ದ ಅಭಿಪ್ರಾಯ.....
ಯಾರೋ ಹಚ್ಚಿಟ್ಟ ಅಗ್ನಿಕುಂಡ
ನಟರಾಜು ಮಲ್ಲಸಿಂಗನಹಳ್ಳಿ ಹುಟ್ಟಿ, ಬೆತ್ತಲೆ ತೊಡೆದುಬಟ್ಟೆ ತೊಟ್ಟಿತು ದೇಹ;ಕಾಲ ಸಂದಂತೆಹಸಿವ ಕಲಿಯಿತು ಚರ್ಮಹದಗೊಂಡ ತನುಮುದಗೊಳ್ಳ ಬಯಸಿತುಬರಡಾದ ಭೂಮಿ ಎದೆತೆರೆದುಮಳೆಯ ಕಾದಂತೆ ಹಸಿ ಕತ್ತಲೆಯ ಕೂಡಿತುಸು ಹೈರಾಣಾದ ಗಾಳಿಲಾಟೀನು ಗಾಜಿನಂತಾ ರೂಮು ಕಮಟು ವಾಸನೆನುಣ್ಣಗೆ ಮೆತ್ತಿಕೊಂಡ ಬೆಳಕುಮೈಗೆ ಎಣ್ಣೆ ಹಚ್ಚಿದಂತೆ.ಬತ್ತಿಯ...
‘ಮಾಲ್ಗುಡಿ ಡೇಸ್’ನಲ್ಲಿ ಹೆಜ್ಜೆ ಹಾಕುತ್ತಾ….!
ಶ್ಯಾಮ್ ಹೆಬ್ಬಾರ್.ಎಸ್ ಮಾಲ್ಗುಡಿ ಡೇಸ್ ಅಥವಾ ಮಾಲ್ಗುಡಿಯ ದಿನಗಳು ಇದು ಹೆಸರಾಂತ ದೂರದರ್ಶನದ ಧಾರಾವಾಹಿಯಾಗಿದ್ದು, ಇದನ್ನು ಸಾಗರ ಸಮೀಪದ ಅರಸಾಳು ಗ್ರಾಮದ ಸುತ್ತಮುತ್ತಲ ಭಾಗದಲ್ಲಿ ಬಹುತೇಕ ಚಿತ್ರೀಕರಣ ಮಾಡಲಾಗಿತ್ತು. ಈ ಧಾರಾವಾಹಿಯಲ್ಲಿ ಬರುವ ರೈಲ್ವೆ ನಿಲ್ದಾಣದ ಹಲವು ಚಿತ್ರೀಕರಣಗಳನ್ನು ಅರಸಾಳು ಗ್ರಾಮದಲ್ಲಿ ಮಾಡಲಾಗಿತ್ತು....
ತೇರು
ಆನಂದ ಋಗ್ವೇದಿ "ಲೇಹನುಮ್ಯಾ, ಬಿದ್ದೂರಿನ ಹನುಮಪ್ಪನ ತೇರಿಗೆ ಬರಾಕ್ಹತ್ತೀನಿ. ನಮ್ಕ್ಯಾದಿಗಿಬಸ್ರಾಜಕರ್ದಾನ. ನೀನೂಬಾ. ಗೆಳ್ಯಾರು ಕೂಡೋಣು. ಛಂದ ಇರ್ತತಿ" ಬೆಂಗಳೂರಿಂದ ಚಿದಂಬರ ಕರೆ ಮಾಡಿದ್ದೇ ಹಿಂದೆ ಮುಂದೆ ನೋಡದೇ 'ಹೂಂ' ಅಂದ ಹನುಮಂತರಾಯ ಆಮೇಲೇ ತೇರು ಯಾವಾಗ ಅಂತ ಕ್ಯಾಲೆಂಡರ್ನೋಡಿದ. ಬಿದ್ದೂರಿನ ಹನುಮಪ್ಪನ ತೇರು ನಡೆಯೋದು...
ರೆಕ್ಕೆ ಬಲಿಸುವ ಚಂದಿರ
ಸ್ಮಿತಾ ಮಾಕಳ್ಳಿ ಅಮವಾಸ್ಯೆಗಳು ಹುಟ್ಟುತ್ತಲೇ ಇರಬೇಕುಜೇನು ತೊಟ್ಟಿಕ್ಕುವಂತೆದುಂಬಿ ಮುತ್ತುವಂತೆಮರ ಮೈದುಂಬಿಯೂ ಕೆಲವೊಮ್ಮೆ ವಿಷಾದವ ಹೊದ್ದು ನಿಂತಂತೆಮೊಗೆದಷ್ಟು ಬಾಚಿ ಮಡಿಲೊಳಗೆಕತ್ತಲು ಉಳಿಯುವಷ್ಟು ಮಾತ್ರಆ ರಾತ್ರಿಯಾಗಬೇಕು ಆ ದಿನಗಳಲ್ಲಿ ಚಂದಿರ ಮತ್ತೆಲ್ಲೋ ಹೋಗಿರಬಹುದುಆದರೆ ಕತ್ತಲು ಸುರಿಯುತ್ತಲೇ ಇರುವುದು ಯಾವೂರಿನ...
ಸ್ವಲ್ಪ ಹೊತ್ತು ನೋಡುತ್ತಾ ಕುಳಿತರೆ…
ಪುರೂರವ ಬೆಂಗಳೂರಿನ ಹಾದಿ ಬೀದಿಗಳಲ್ಲಿ ಕೆಲಸದ ನಿಮಿತ್ತ ತಿರುಗುತ್ತಾ, ಕ್ಲೈಂಟುಗಳನ್ನು ಮಾತಾಡಿಸಿ ಸೇಲು, ಡಿಮ್ಯಾಂಡು, ಸಪ್ಲೈಗಳಲ್ಲೇ ಮುಳುಗಿಹೋಗುವ ನನ್ನಂತ ಮಾರ್ಕೆಟಿಂಗ್ ಮಂದಿಗೆ ಸಂಜೆಯಾದೊಡನೆ ಪ್ರಶಾಂತ ಸ್ಥಳದಲ್ಲಿ ಕೂತು ಕೆಲಕಾಲ ಕಳೆದರೆ ಅದೇ ಸ್ವರ್ಗಸದೃಶ ಸಮಯವೆನ್ನಿಸದೇ ಇರದು. ಹಗಲು ಕೆಲಸದ ನಡುವೆ ಸಂಜೆ ಸಂಸಾರದಗೊಡವೆಗಳ...
ಒಂದು ದಾರಿಯ ಪಯಣ…
ಶಿವಶಂಕರ ಬಣಗಾರ ಒಬ್ಬಾತ ನಡೆಯುತ್ತಾ ಹೋದಮತ್ತೊಬ್ಬ ಮಗದೊಬ್ಬ ಸೇರಿಕೊಂಡರುಹಾದಿ ಸವೆದಂತೆಲ್ಲಾ ಗುಂಪು ದೊಡ್ಡದಾಯ್ತುಹಾದಿಯ ಪಯಣ ಮುಗಿದಿರಲಿಲ್ಲ ಊರ ಬಂದಲೆಲ್ಲಾ ಮಾತು ಜಾಸ್ತಿ ಆಯ್ತುಗುಂಪಿನಲ್ಲಿದ್ದವರು ಕೆಲವರು ಕಳಚಿಕೊಂಡರು;ಮತ್ತೂ ಕೆಲವರು ಸೇರಿಕೊಂಡರುಪಯಣ ಸಾಗಿತ್ತು ಗಮ್ಯ ಸ್ಥಾನ ದೂರವಿತ್ತು ದಾರಿಬುತ್ತಿಗಳು...
ಈ ಕೊರೋನಾ ಕಾಲದಲ್ಲಿ ಏನಾಯ್ತು ಅಂದ್ರೆ..
ಶೋಭಾ ದಿನೇಶ್ ಮಾರ್ಚ್ ತಿಂಗಳು ಎಂದಿನಂತೇ ಶುರುವಾಗಿತ್ತು, ಸಣ್ಣದಾಗಿ ಬಲಿಯುತ್ತಿದ್ದ ಬಿಸಿಲು, ಮಕ್ಕಳ ಪರೀಕ್ಷೆಯ ಪರಿಪಾಟಲು ನಡುವೆ ನಮ್ಮಂಥ ಸರ್ಕಾರಿ ನೌಕರರ ಧಾವಂತ ಹೇಳತೀರದು. ಆರ್ಥಿಕ ವರ್ಷದ ಕೊನೆಯ ತಿಂಗಳು ನಾವೆಲ್ಲ ಸುಡೋ ಬಾಣಲೆ ಮೇಲೆ ಕೂತಿರ್ತೀವಿ, ಅನುದಾನಗಳ ಬಳಕೆ, ನಿಗದಿಪಡಿಸಿದ ಗುರಿಗಳ ಪ್ರಗತಿ ಸಾಧನೆ ಕುರಿತಂತೆ...
ಊದು ದಾಸಯ್ಯ ನಿನ್ನ ಶಂಖ ಜಾಗಟೆಯ!
ಸೂರ್ಯಕೀರ್ತಿ ಶ್ರಾವಣದ ಮಳೆ ಸುರಿಯುತ್ತಲೇ ಇತ್ತು ಅಜ್ಜಿ ಮುಸ್ಸಂಜೆಯ ದೀಪವ ಹಚ್ಚಿ 'ಶ್ರೀಮದ್ ನಾರಯಣ ಗೋವಿಂದೋ, ಗೋವಿಂದ' ಎಂದಳು. ಕೋಣೆಯಲ್ಲಿ ಮಲಗಿದ್ದವನಿಗೆ ವಾಂತಿ ಭೇದಿಯಾಗುತ್ತಲೇ ಇತ್ತು,ಅಜ್ಜಿ 'ವಾರ' ಮಾಡುತಿದ್ದಳು. ಅಜ್ಜ ನೇಗಿಲ ಹೊತ್ತುಕೊಂಡು ಗದ್ದೆಯ ಕಡೆ ನಡೆದೆಬಿಟ್ಟ. ಒಮ್ಮೆ ' ವ್ಹ್ಯಾ ' ಎಂದು ಇನ್ನೊಮ್ಮೆ 'ಬ್ಹ್ಯಾ'...




















