ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ದಸ್ತಗೀರ್ ದಿನ್ನಿ ಹೊಸ ಕವಿತೆ – ಜಗವು ನಿದ್ದೆಗೆ ಜಾರಿದೆ..
ದಸ್ತಗೀರ್ ದಿನ್ನಿ ನಿನ್ನ ಬೆಳಕ ಹೂನಗೆಗಾಗಿ ನೂರು ನೋವಾದರೂ ಸಹಿಸಬಲ್ಲೆನಿನ್ನ ಪ್ರೀತಿಯ ಸಮ್ಮತಿಗಾಗಿ ಏಸು ಯುಗವಾದರೂ ಕಾಯಬಲ್ಲೆ. ನೀನು ಪ್ರೇಮದ ಸಂಪಿಗೆ ಎಸಳನ್ನಾದರೂ ಎಸೆಯಲಿಲ್ಲನಿನ್ನ ಅನುರಾಗಕ್ಕಾಗಿ ಮುಳ್ಳುಗಳ ದಾರಿಯಾದರೂ ನಡೆಯಬಲ್ಲೆ. ಬಯಲ ಕೆನ್ನಯಲಿ ಅರಳಿದ ಸಂಜೆ ಪೇಲವ ಎನಿಸಿದೆ.ನಿನ್ನ ದರುಶನಕ್ಕಾಗಿ ಸಾವಿರ ಉಳಿ...
ಸೂರ್ಯಗಿರಕಿ…
ಗೀತಾ ಹೆಗಡೆ ಬಸ್ಸು ಭರ್ರೆಂದು ರಸ್ತೆ ಸೀಳಿಹವಾ-ಮಜಲಿನಲಿ ಹಾರುತ್ತಿದೆಸರಸರನೆ ಹರಿಯುವಗಿಡ-ಮರಗಳು..ಅಲೆಲೆ!? ರಸ್ತೆಗೆ ರಸ್ತೆಯೇಸರಿಯುತ್ತಿದೆಯೆ? ಅರೆ!ನಾವಿಲ್ಲಿ ಕೂತೇ ಇದ್ದೇವೆ! ಬೆಟ್ಟ-ಗುಡ್ಡಗಳು ಚಲಿಸುವಾಗ!ರಸ್ತೆ ಪಕ್ಕದಲ್ಲಿ ಎತ್ತರದ ಬೇಲಿ-ಹೂಮೊಗ್ಗಿನಂಥ ಸ್ನಿಗ್ಧ ಮುಖದಪುಟ್ಟಿ ಕೊಯ್ಯುತ್ತಿದ್ದಾಳೆದೋಟಿ ಹಿಡಿದುಎಳೆ ಕೂಸು-...
ಪೂರ್ಣಿಮಾ ಮರಳಿಹಳ್ಳಿ ಓದಿದ ‘ಸಾರ್ಥಕ ಮನಗಳು’
ಪೂರ್ಣಿಮಾ ಮರಳಿಹಳ್ಳಿ ಚೊಚ್ಚಲ ಕಥಾ ಸಂಕಲನ 'ಸಾರ್ಥಕ ಮನಗಳು' ಪುಸ್ತಕ ಪ್ರಕಟಗೊಳ್ಳುವ ಮೂಲಕ ಸಾಹಿತ್ಯ ಲೋಕಕ್ಕೆ ಕಾಲಿಡುತ್ತಿರುವ ಉದಯೋನ್ಮುಖ ಲೇಖಕಿ ಸುಪ್ರೀತಾ ಅವರ ಮೊದಲ ಪ್ರಯತ್ನಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ವೃತ್ತಿಯಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸುಪ್ರೀತಾ ಮೂಲತಃ ದಕ್ಷಿಣ ಕನ್ನಡ...
ನವಿರು ಹಾಸ್ಯದ ‘ಹನಿಮೂನ್’
ಬನಶಂಕರ ಆರಾಧ್ಯ Voot select ನಲ್ಲಿ ಬಿಡುಗಡೆಯಾಗಿರುವ ನಾಗಭೂಷಣ್ ಹಾಗೂ ಸಂಜನಾ ಆನಂದ್ ನಟನೆಯ ಹನಿಮೂನ್ ವೆಬ್ ಸೀರೀಸ್ ನವಿರು ಹಾಸ್ಯ, ಸುಂದರ ದೃಶ್ಯ, ಉತ್ತಮ ಕಥೆಯೊಂದಿಗೆ ನೋಡಿಸಿಕೊಂಡು ಹೋಗುತ್ತದೆ. ನಾಗಭೂಷಣ್ ಸಹಜವಾಗಿ ಅಭಿನಯಿಸಿದ್ದಾರೆ. ಸಂಜನಾ ತಾನೊಬ್ಬ ಪ್ರತಿಭಾವಂತ ನಟಿ ಎಂದು ಸಾಬೀತು ಮಾಡಿದ್ದಾರೆ.ಶಿವರಾಜ್ ಕುಮಾರ್ ಅವರ...
ಕಿರುರಂಗ ಮಂದಿರದಲ್ಲಿ ತುಘಲಕ್ ನಾಟಕ ಪ್ರದರ್ಶನ…
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಇದೇ ಮೇ ತಿಂಗಳ 28 ಮತ್ತು 29ರ ಶನಿವಾರ, ಭಾನುವಾರಗಳಂದು ಸಂಜೆ 6.30ಕ್ಕೆ ಮೈಸೂರಿನ ಕಲಾಮಂದಿರದಲ್ಲಿರುವ ಕಿರುರಂಗಮಂದಿರದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕಂತ ಗಿರೀಶ ಕಾರ್ನಾಡರ ಶ್ರೇಷ್ಠ ನಾಟಕ `ತುಘಲಕ್’ ಪ್ರದರ್ಶನಗೊಳ್ಳಲಿದೆ. ರಂಗಾಯಣದ ಹಿರಿಯ ಕಲಾವಿದ ಶ್ರೀ ಮಾಯಸಂದ್ರ ಕೃಷ್ಣಪ್ರಸಾದ್ ಈ...
ಬಹುಮುಖೀ ಕೃಷ್ಣಮೂರ್ತಿ ಬಿಳಿಗೆರೆ…
ಬಹುಮುಖೀ ವ್ಯಕ್ತಿತ್ವದ ಕ್ರಿಯಾಶೀಲ ಆಚಾರ್ಯ, ಕೆ.ಬಿ. ಕ್ರಾಸಿನ ಕರ್ವಾಲೋ - ಪ್ರೊ ಕೃಷ್ಣಮೂರ್ತಿ ಬಿಳಿಗೆರೆ ಡಾ ಮೋಹನ್ ಮಿರ್ಲೆ "ಅಧಿಕಾರ ಅಹಂಕಾರವಲ್ಲ, ಜವಾಬ್ದಾರಿ" - ಇದು ಕಾಲೇಜು ಶಿಕ್ಷಣ ಇಲಾಖೆಯ, ಧಾರವಾಡ ವಿಭಾಗದ ನೂತನ ಜಂಟಿ ನಿರ್ದೇಶಕರಾಗಿ ದಿನಾಂಕ: 09.05.2022ರಂದು ಅಧಿಕಾರ ಸ್ವೀಕರಿಸಿದ ಪ್ರೊ. ಕೃಷ್ಣಮೂರ್ತಿ...
Pic by Pham huy Trung
ನಾಗರಾಜ ಕೋರಿಗೆ ‘ಡಾ ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಪ್ರಶಸ್ತಿ’
2022 ನೇ ಸಾಲಿನ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ/ನಿ ಕಥಾ ಪ್ರಶಸ್ತಿಯು ನಾಗರಾಜ ಕೋರಿ ಅವರ 'ಕಳವಳದ ದೀಗಿ ಕುಣಿದಿತ್ತವ್ವ' ಎಂಬ ಕಥೆಯ ಹಸ್ತಪ್ರತಿಗೆ ದೊರೆತಿದೆ. ಹಿರಿಯ ಬರಹಗಾರರಾದ ಎಂ.ಬಿ ಅಡ್ನೂರ ಮತ್ತು ಡಾ. ಚಿದಾನಂದ ಕಮ್ಮಾರ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. ಈ ಪುರಸ್ಕಾರವು ಐದು ಸಾವಿರ ನಗದು...
ಪಿ ಪಿ ಉಪಾದ್ಯ ಸರಣಿ ಕಥೆ 22- ಅನಂತನ ಸುಳಿವೇ ಇರಲಿಲ್ಲ.
ಪಿ ಪಿ ಉಪಾದ್ಯ 22 ಮಕ್ಕಳೋ ಅರ್ಧ ದಿನ ತರಗತಿಗಳು ತಪ್ಪಿದುವಲ್ಲ ಎಂಬ ಆನಂದದಿಂದ ಊಟ ಮುಗಿಸಿದವರು ಗುಂಪು ಗುಂಪಾಗಿ ಸಭಾಗೃಹಕ್ಕೆ ತೆರಳಿದರು. ಆದಿ ಸಮಯಕ್ಕೆ ಸರಿಯಾಗಿ ಹಾಜರಾಗಿದ್ದ. ಮುಖ್ಯೋಪಾಧ್ಯಾರೂ ಸೇರಿದಂತೆ ಇಡೀ ಅಧ್ಯಾಪಕ ವರ್ಗದವರು ಅವನನ್ನು ಸ್ವಾಗತಿಸಿ ಸಭಾಗೃಹಕ್ಕೆ ಕರೆದೊಯ್ದರು. ರಿವಾಜಿನಂತೆ ಪ್ರಾರ್ಥನೆ, ಸ್ವಾಗತದ ನಂತರ...
ಯಶೋಧೆ…
ಸುಜಾತ ಲಕ್ಷ್ಮೀಪುರ ಹೆಗಲ ಮೇಲೆ ಹೊತ್ತುಸುತ್ತಿಸಿ ಸಂತೆ ಜಾತ್ರೆತನ್ನ ತಟ್ಟೆಯಿಂದೆತ್ತಿ ತುತ್ತು ಬಾಯಿಗೆ ಇಟ್ಟುಅವ್ವನೆದೆಯೊಳಗದೆಷ್ಟು ಚಿತ್ತ ಚಿತ್ತಾರದ ಬೀಜ ನೆಟ್ಟುಫಸಲು ತೆಗೆದುಕಣಜ ಸೇರಿಸುವ ಮೊದಲುಮಲಗಿದ ಅಪ್ಪ ನೆಲ ಬಿಟ್ಟೇಳಲಿಲ್ಲ.ಧುತ್ತನೆರಗುವ ಸಾವುಬದುಕಿದವರೊಳಗದೆಂಥ ಬೆಳಕು ನೀಡಲು ಸಾಧ್ಯ? ಹರಿದ ಚಾಪೆಯ ಮೇಲೆ ಹೊದ್ದ...
ಈ ಬಿಸಿಲಾದರೊ ಗೋಗರೆದಿತ್ತೇನೊ…
ಅಶೋಕ ಹೊಸಮನಿ ಈ ಕಡು ಬಿಸಿಲ ಕಣ್ಣಾದರೊ ಬುದ್ಧನಾಗಬೇಕಿತ್ತುಕಾಲ್ಕೀಳುವ ಹೊತ್ತಿಗಾದರೊ ಹಾಜರಿರಬೇಕಿತ್ತು ಈ ಹಿಡಿ ಮಾಂಸ ಮಜ್ಜೆಯಾದರೊ ಹೂವಾಗಬೇಕಿತ್ತುಹಣ್ಣೊಂದಾದರೊ ತಾಯಿಯಾಗಬೇಕಿತ್ತು ಈ ಜಗವಾದರೊ ಹುಟ್ಟಬಾರದಿತ್ತುಮನುಷ್ಯನಾದರೊ ಬೇಡವಾಗಿತ್ತು ಈ ನೇತಾಡೊ ದನಿಯಾದರೊ ಕವಿತೆಯಾಗಬೇಕಿತ್ತುಕಂಪನದ ಪರ್ವತವಾದರೊ ರೂಢಿಯೊಳಿರಬೇಕಿತ್ತು ಈ...
ಅರ್ಚನಾ ಎಚ್ ಓದಿದ ‘ಕೋವಿಡ್ ಕಥೆಗಳು’
ಶಿವಾನಂದರ ಕೋವಿಡ್ ಕಥೆಗಳೊಡನೆ… ಅರ್ಚನಾ ಎಚ್ ಹುಟ್ಟು ಸಾವುಗಳ ನಡುವಣ ಹೊಯ್ದಾಟವೇ ಜೀವನ..ಹುಟ್ಟಿನಿಂದಲೋ, ನಂಟಿನಿಂದಲೋ ಬಂದ ಬಂಧಗಳ ಲಾಲನೆ, ಪಾಲನೆ ಹಾಗೂ ಪೋಷಣೆ ಜೀವದ ಹೊಣೆ. ಕಳೆದೆರಡು ವರ್ಷದಿಂದ ಕೋವಿಡ್ ಕರಾಳತೆಯ ಭೀಭತ್ಸ ನರ್ತನಕ್ಕೆ, ಅಕಾಲ ದುರ್ಮರಣಕ್ಕೊಳಗಾದ ಲೆಕ್ಕವಿಲ್ಲದಷ್ಟು ಜೀವಗಳು ಸಂಗಾತಿಯನ್ನು , ಪೋಷಕರನ್ನು ,...
ಷೇಕ್ಸ್‌ಪಿಯರನ ಶ್ರೀಮತಿಯನ್ನು ನಮ್ಮ ಎದೆಗಿಳಿಸಿದ ಲಕ್ಷ್ಮೀಚಂದ್ರಶೇಖರ್..
ಡಾ ಎಚ್ ಎಸ್ ಸತ್ಯನಾರಾಯಣ ಲಕ್ಷ್ಮೀಚಂದ್ರಶೇಖರ್ ಅವರ ಬದ್ಧತೆಗೆ ನಮಸ್ಕಾರ: ನಿನ್ನೆ ಸಂಜೆ ಜೆ.ಪಿ.ನಗರದ ವ್ಯೋಮ ಸ್ಟುಡಿಯೋಕ್ಕೆ ನಾನು ಮತ್ತು ಬಸವನಗುಡಿಯ ಕಾಲೇಜಿನಲ್ಲಿ ನನ್ನ ಸಹದ್ಯೋಗಿಯಾಗಿದ್ದ ಅಕ್ಕ Sandhya Ganaganur ಇಬ್ಬರೂ 'ಷೇಕ್ಸ್‌ಪಿಯರನ ಶ್ರೀಮತಿ' ನಾಟಕ ನೋಡಲು ಹೋಗಿದ್ದೆವು. ವ್ಯೋಮ ಈ ಮೊದಲು ನೋಡಿರದ ಜಾಗವಾದ್ದರಿಂದ...
ಸರೋಜಿನಿ ಪಡಸಲಗಿ ಅಂಕಣ- ಏಕಾನೂ ಅಜ್ಜಾನ ಜೋಡಿ ಜಗಳಾಡಿದ್ಲಂತ…
'ಅವಧಿ' ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ 'ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..' ಜನಪ್ರಿಯವಾಗಿತ್ತು. ಈಗ ಈ ಸರಣಿ 'ಡಾಕ್ಟರ್ ಹೆಂಡತಿ' ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು -https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ 70191...
Through Troll Football
ಅನಂತನಿಗೆ ಇದ್ದ ಮರ್ಯಾದೆ ಹೆಚ್ಚಾಗಿತ್ತು..ಪಿ ಪಿ ಉಪಾಧ್ಯ ಸರಣಿ ಕಥೆ 21-
ಪಿ ಪಿ ಉಪಾಧ್ಯ 21 ಅನಂತನಿಗೆ ಇದ್ದ ಮರ್ಯಾದೆ ಹೆಚ್ಚಾಗಿತ್ತು.. ದಿನ ಬೆಳಗಾದರೆ ಆ ತಮ್ಮ ಅಣ್ಣನ ಮೇಲೆ ಸಾರುತ್ತಿದ್ದ ಶೀತಲ ಯುದ್ಧ ಕಮಲಮ್ಮನಿಗೆ ತಲೆನೋವಾಗಿ ಪರಿಣಮಿಸಿತ್ತು. ಆ ಲೆಕ್ಕದಲ್ಲಿ ಕಿರೀ ಮಗನನ್ನು ಘಟ್ಟದ ಮೇಲೆ ಅಣ್ಣನ ಮನೆಗೆ ಕಳುಹಿಸಿದ್ದೇ ಒಳ್ಳೆಯದಾಯ್ತು. ಇಲ್ಲವೆಂದರೆ ಅವ ಇನ್ನೊಂದು ತಲೆನೋವಾಗುತ್ತಿದ್ದನೇನೋ...
ಸೀಟನ್ನುಕಾಯ್ದಿರಿಸಲಾಗಿದೆ…
ಜಿ ಲೋಕೇಶ ಇಳಿಯುವಾಗಡೋರಿನಂಚಿಗೆಉಳಿದ ವೇಲಿನಅಂಚುಪ್ರತಿನಿತ್ಯ ಹೆಸರುಹೇಳುತ್ತಿದೆ. ದಿನವು ಮುಡಿದಹೂಗಳಲ್ಲಿನಮ್ಮ ಬದುಕಿನಸಂಸಾರದ ದಿನಗಳುಕನಸು ಕಟ್ಟಿವೆ ಗಂಟಲಿನಕಿರಿಕಿರಿಗಿಲ್ಲಿವಿಕ್ಸ್ ಪೆಪ್ಪರುಮೆಂಟುಹೂಡಿದೆ ಸಹಕಾರದಕಂಜೂಸುತನ ನೋಡಿಯುನಿಲ್ಲದಂತೆಉಳಿದಿರುವ ಹೆಜ್ಜೆಗಳಿಗೆಗಂಟು ಕರಗಿಕೊಳ್ಳುವಭಯವಿದ್ದಂತೆ ದಿನವು ಹತ್ತಿ ಇಳಿದುತಲೆ...
ಕಾರುಣ್ಯದ ಮಳೆ…
ತೇಜಾವತಿ ಎಚ್ ಡಿ ಅಸೂಯೆ ದ್ವೇಷದ ಕಿಡಿಯೊಂದುಸಾವಿರ ಕುಡಿಗಳಿಗೆ ಜನ್ಮನೀಡಿದೆಎಲ್ಲವಕ್ಕೂ ಬೆಳೆದು ಹೆಮ್ಮರವಾಗುವ ಹಂಬಲಮುಖವಾಡದೊಳಗಿನ ಕರಾಳ ನರ್ತನಕ್ಕೆತಾಯಿ ಬೇರು ಕೃಶವಾಗಿಕುಸಿದು ಬೀಳುತ್ತಿರುವ ಸಾಮ್ರಾಜ್ಯವ ಕಂಡುಸಮೃದ್ಧವಾಗಿದ್ದ ರೆಂಬೆ ಕೊಂಬೆ ಹಕ್ಕಿ -ಗೂಡುಹಸಿರು ಹೂ ಹಣ್ಣುಗಳ ನೆನೆದುಭೂದೇವಿಗೆ ಮೊರೆಯಿಡುತ್ತಿದೆ ಫಕೀರನ ಸತ್ಯ...
ಶುಕ್ರ ಆಡಿಟೋರಿಯಂನಲ್ಲಿ ‘ಯಥಾ ಪ್ರಕಾರ’
ಯಥಾ ಪ್ರಕಾರ: ವ್ಯಕ್ತ ಜೀವನದಲ್ಲಿ ಬಂಧನಕ್ಕೂ ಮೀರಿ ಅವ್ಯಕ್ತ ಭಾವಗಳು ವ್ಯಕ್ತಿಗಳಲ್ಲಿ ಮೂಡುವುದು ವ್ಯಕ್ತಿತ್ವದ ಪ್ರದರ್ಶನವಾದರೆ. ಹುಟ್ಟುವ ಪ್ರತಿ ಭಾವಭಯಕೆಗು ಈ ನಾಟಕ ರೂಪಕವಾಗಿ; ಪ್ರಶ್ನಿಸುವ, ಪ್ರಶ್ನಿಸಿಕೊಳ್ಳುವ ಒಳಹೊರ ಅರಿವುವನ್ನು ಮುಟ್ಟಿಸುತ್ತದೆ. ಇದರ ರಚನೆ, ನಿರ್ದೇಶನ, ವಿನ್ಯಾಸ ಭೀಷ್ಮ ರಾಮಯ್ಯ ಮಾಡಿದ್ದು. ಮುಖ್ಯ...
ವರದೇಂದ್ರ ಕೆ ಮಸ್ಕಿ ಓದಿದ ‘ಆಮ್ರಪಾಲಿ’
'ಆಮ್ರಪಾಲಿಯಿಂದ ಅಂಬೆಪಾಲಿಯವರೆಗೆ' ವರದೇಂದ್ರ ಕೆ ಮಸ್ಕಿ ಓದುಗನನ್ನು ಕ್ರಿ ಪೂ 500 ನೇ ಶತಮಾನಕ್ಕೆ ಸೆಳೆದೊಯ್ಯುವ, ಅಭೂತಪೂರ್ವವಾಗಿ ಮನಸನ್ನು ತಲ್ಲಣಗೊಳಿಸುವ ಐತಿಹಾಸಿಕ ಕಾದಂಬರಿ ಗಾಯತ್ರಿ ರಾಜ್ ಅವರ "ಆಮ್ರಪಾಲಿ". ಒಬ್ಬ ದೇಶಭಕ್ತೆಯ ಕಥಾ ಹಂದರ, ಒಬ್ಬ ಸೌಂದರ್ಯದ ಗಣಿಯಾದ ಹೆಣ್ಣು ಎದುರಿಸುವ ರಾಶಿ ರಾಶಿ ಸವಾಲುಗಳ, ಮನದ...
ಶಾಲ್ಮಲಾ ಎಂದೊಡನೆ ನೆನಪಾಗುವುದು ಗುಪ್ತಗಾಮಿನಿ…
ಸೌಮ್ಯಶ್ರೀ ಎ ಎಸ್ ಪತ್ರಿಕೆಯೊಂದರ ಹುಟ್ಟು ಅತ್ಯಂತ ಸೂಕ್ಷ್ಮವೂ, ಸೃಜನಶೀಲವೂ ಆದ ಪ್ರಕ್ರಿಯೆ. ಒಂದು ಬರಹ ಹುಟ್ಟುವುದು ವಿಶೇಷವಾದ ಘಳಿಗೆಯಾದರೆ ಅಂಥಹಾ ಹತ್ತಾರು ಬರಹಗಳನ್ನೊಳಗೊಂಡ ಪತ್ರಿಕೆಯೊಂದು ಜನ್ಮತಾಳುವುದು ಮತ್ತೂ ವಿಶೇಷವಾದ ಘಳಿಗೆ. ನಮ್ಮ ಸಚಿವಾಲಯವೀಗ ಅಂಥಾದ್ದೇ ಸೂಕ್ಷ್ಮ, ಸೃಜನಶೀಲ, ವಿಶೇಷ ಘಳಿಗೆಗೆ...




















