ಬಸವರಾಜ ಕೋಡಗುಂಟಿ ಅಂಕಣ – ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಗ್ಗೆ ಬೆಳಕು ಚೆಲ್ಲಲಾಗಿದೆ.

10

ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕನಿಶ್ಟ ಇಪ್ಪತ್ತಾರು ಬಾಶೆಗಳು ಮತ್ತು ನಲ್ವತ್ತೆರಡು ತಾಯ್ಮಾತುಗಳು ಬಳಕೆಯಲ್ಲಿವೆ. ಜಿಲ್ಲೆಯ ಸುಮಾರು ೫೯% ಮಂದಿ ಕನ್ನಡ ಮಾತುಗರಾಗಿದ್ದಾರೆ. ತೆಲುಗು ಜಿಲ್ಲೆಯ ಇನ್ನೊಂದು ದೊಡ್ಡ ಬಾಶೆಯಾಗಿದ್ದು ಸುಮಾರು ೨೭% ಇದೆ. ಉರ‍್ದು ಬಾಶೆಗಳು ಒಂದು ಲಕ್ಶಕ್ಕೂ ಹೆಚ್ಚು ಮಂದಿ ಇಲ್ಲಿ ದಾಕಲಾಗಿದ್ದಾರೆ. ಲಂಬಾಣ ಬಾಶೆಯ ಪರಿಗಣಿಸುವಶ್ಟು ಮಂದಿ ಇಲ್ಲಿ ಕಾಣಿಸುತ್ತಾರೆ.

ಜನಗಣತಿ ಕೊಟ್ಟಿರುವ ಚಿಕ್ಕಬಳ್ಳಾಪುರದ ಬಾಶಿಕ ಮಾಹಿತಿಯನ್ನು ಕೆಳಗೆ ಕೊಟ್ಟಿದೆ.

ಬಾಶೆತಾಯ್ಮಾತುಒಟ್ಟು ಮಾತುಗರುಗಂಡುಹೆಣ್ಣು
ಆಸ್ಸಾಮಿ12111
ಆಸ್ಸಾಮಿ12111
ಬೆಂಗಾಲಿ996039
ಬೆಂಗಾಲಿ996039
ಗುಜರಾತಿ334185149
ಗುಜರಾತಿ322177145
ಸವರಾಶ್ಟ್ರ/ಸವರಾಶ್ಟ್ರಿ642
ಇತರ642
ಹಿಂದಿ1114760585089
ಬಂಜಾರಿ231211
ಬೋಜ್ಪುರಿ110
ಹಿಂದಿ326820031265
ಲಮಾಣಿ/ಲಂಬಾಡಿ730037263574
ಮಾರ‍್ವಾರಿ314173141
ಪಹರಿ101
ರಾಜಸ್ತಾನಿ21912693
ಇತರ21174
ಕನ್ನಡ745111381554363557
ಕನ್ನಡ745099381549363550
ಕುರುಬ/ಕುರುಂಬ826
ಇತರ431
ಕಾಶ್ಮೀರಿ321
ಕಾಶ್ಮೀರಿ321
ಕೊಂಕಣಿ1164769
ಕೊಂಕಣಿ1064264
ಕುಡುಬಿ/ಕುಡುಂಬಿ945
ಇತರ 110
ಮಯ್ತಿಲಿ110
ಮಯ್ತಿಲಿ110
ಮಲಯಾಳಂ661292369
ಮಲಯಾಳಂ652288364
ಯರವ945
ಮರಾಟಿ547627562720
ಮರಾಟಿ547627562720
ನೇಪಾಲಿ1337954
ನೇಪಾಲಿ1337954
ಓಡಿಯಾ25816593
ಓಡಿಯಾ25816593
ಪಂಜಾಬಿ321
ಪಂಜಾಬಿ321
ಸಿಂದಿ101
ಸಿಂದಿ101
ತಮಿಳು574128982843
ತಮಿಳು573728962841
ಇತರ422
ತೆಲುಗು339761168180171581
ತೆಲುಗು339761168180171581
ಉರ‍್ದು1455507377671774
ಉರ‍್ದು1455497377671773
ಇತರ101
ಅರಾಬಿಕ್/ಅರ‍್ಬಿ422121
ಅರಾಬಿಕ್/ಅರ‍್ಬಿ422121
ಬೊಟಿಯ502921
ಇತರ502921
ಕೂರ‍್ಗಿ/ಕೊಡಗು633
ಕೊಡವ633
ಇಂಗ್ಲೀಶು20712186
ಇಂಗ್ಲೀಶು20712186
ಗೊಂಡಿ101
ಇತರ101
ನಿಸ್ಸಿ/ದಪ್ಲ101
ನಿಸ್ಸಿ/ದಪ್ಲ101
ಟಿಬೆಟನ್220
ಟಿಬೆಟನ್220
ತುಳು1507773
ತುಳು1507773
ಇತರ238118120

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದಾಕಲಾಗಿರುವ ಬಾಶೆಗಳು ಒಟ್ಟು ಇಪ್ಪತ್ತಯ್ದು. ಇತರ ಎಂಬುದನ್ನು ಒಂದು ಬಾಶೆ ಎಂದು ಪರಿಗಣಿಸಿದಾಗ ಇದು ಇಪ್ಪತ್ತಾರು ಆಗುತ್ತದೆ. ಒಟ್ಟು ನಲ್ವತ್ತೊಂದು ತಾಯ್ಮಾತುಗಳನ್ನು ಇಲ್ಲಿ ಪಟ್ಟಿಸಿದೆ. ಇತರ ಎಂಬುದರಲ್ಲಿ ಒಂದೆ ತಾಯ್ಮಾತು ಎಂದು ಪರಿಗಣಿಸಿದಾಗ ಈ ಸಂಕೆ ನಲ್ವತ್ತೆರಡು ಆಗುತ್ತದೆ. ಇವುಗಳಲ್ಲಿ ಗುಜರಾತಿ, ಹಿಂದಿ, ಕನ್ನಡ, ಕೊಂಕಣಿ, ತಮಿಳು, ಉರ‍್ದು, ಬೊಟಿಯ ಮತ್ತು ಗೊಂಡಿ ಈ ಎಂಟು ಬಾಶೆಗಳಲ್ಲಿ ಇತರ ಎಂಬ ಗುಂಪನ್ನು ಕೊಟ್ಟಿದೆ. ಇವುಗಳ ಹೊರತಾಗಿ ಹೆಸರಿಸಿರುವ ತಾಯ್ಮಾತುಗಳು ಮೂವತ್ಮೂರು ಆಗುತ್ತದೆ. 

ಚಿಕ್ಕಬಳ್ಳಾಪುರ ಜಿಲ್ಲೆಯ ಜನಸಂಕೆ 12,55,104. ಇದರಲ್ಲಿ 7,45,111 ಮಂದಿ ಕನ್ನಡ ಮಾತಾಡುವವರು. ಅಂದರೆ 59.366% ಆಗುತ್ತದೆ. ಕನ್ನಡದ ನಂತರ ತೆಲುಗು ಬರುತ್ತದೆ. ತೆಲುಗು ಮಾತಾಡುವ 3,39,761 (27.070%) ಮಂದಿ ಜಿಲ್ಲೆಯಲ್ಲಿ ಇದ್ದಾರೆ. ಇದರ ನಂತರ ಉರ‍್ದು 1,45,550 (11.596%) ಮಂದಿ ಮಾತುಗರನ್ನು ಹೊಂದಿದೆ. ಈ ಮೂರು ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಜಿಲ್ಲೆಯ ಮೂರು ಬಾಶೆಗಳಾಗಿವೆ. ಇವುಗಳ ನಂತರ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತಾಡುವ ಒಂದೆ ಬಾಶೆ ಹಿಂದಿ – 11,147 (0.888%) ಆಗಿದೆ. ಇವುಗಳ ನಂತರ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ತಮಿಳು – 5,741 (0.457%) ಮಂದಿಯನ್ನು ಮತ್ತು ಮರಾಟಿ – 5,476 (0.436%) ಮಂದಿಯನ್ನು ಹೊಂದಿವೆ. ಆನಂತರ ಸಾವಿರಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮಾತಾಡುವ ಏಳು ಬಾಶೆಗಳು, ಮಲಯಾಳಂ, ಗುಜರಾತಿ, ಓಡಿಯಾ, ಇಂಗ್ಲೀಶು, ತುಳು, ನೇಪಾಲಿ ಮತ್ತು ಕೊಂಕಣಿ ಇವೆ. ಇವುಗಳ ಜೊತೆಗೆ ಇತರ ಎಂಬ ಗುಂಪಿನಲ್ಲಿಯೂ 238 ಮಂದಿ ಇದ್ದಾರೆ. ನೂರಕ್ಕಿಂತ ಕಡಿಮೆ ಮಂದಿ ಮಾತಾಡುವ ಹನ್ನೆರಡು ಬಾಶೆಗಳು ದಾಕಲಾಗಿವೆ. ಈ ಬಾಶೆಗಳನ್ನು ಕೆಳಗೆ ಮಾತುಗರ ಸಂಕೆಯಾದರಿಸಿ ಜೋಡಿಸಿ ಕೊಟ್ಟಿದೆ.

ಸಾಪೇಕ್ಶ ಸಂಕೆಬಾಶೆಸಂಕೆ%
ಒಂದು ಲಕ್ಶಕ್ಕಿಂತ ಹೆಚ್ಚಕನ್ನಡ7,45,11159.366% 
’’ತೆಲುಗು3,39,76127.070%
’’ಉರ‍್ದು1,45,55011.596%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಹಿಂದಿ11,1470.888%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುತಮಿಳು5,7410.457%
’’ಮರಾಟಿ5,4760.436%
’’ಮಲಯಾಳಂ, ಗುಜರಾತಿ, ಓಡಿಯಾ, ಇತರ, ಇಂಗ್ಲೀಶು, ತುಳು, ನೇಪಾಲಿ, ಕೊಂಕಣಿ2,097 0.167%
’’ಹನ್ನೆರಡು ಬಾಶೆಗಳು2210.017%
ಒಟ್ಟು ಮಾತುಗರು12,55,104100%

ಚಿಕ್ಕಬಳ್ಳಾಪುರ ಜಿಲ್ಲೆಯ ತಾಯ್ಮಾತುಗಳನ್ನು ಗಮನಿಸಿದಾಗ ಹಿಂದಿಯೊಳಗೆ ತುಸು ಬದಲಾವಣೆ ಆಗುತ್ತದೆ. ಇಲ್ಲಿ ಕರ‍್ನಾಟಕದ ಸಂದರ‍್ಬದಲ್ಲಿ ಪ್ರಮುಕವೆನಿಸುವ ಹಿಂದಿಯೊಳಗಿನ ಬಾಶೆಗಳನ್ನು ತೋರಿಸಿದೆ.

ಹಿಂದಿ 11,147

ಬಂಜಾರಿ 23

ಬೋಜ್ಪುರಿ 1

ಹಿಂದಿ 3,268

ಲಮಾಣಿ/ಲಂಬಾಡಿ 7,300

ಮಾರ‍್ವಾರಿ 314

ರಾಜಸ್ತಾನಿ 219

ಒಟ್ಟು ಹಿಂದಿ ಬಾಶೆಗೆ ದಾಕಲಾದ ಮಾತುಗರು 11,147. ಇದರಲ್ಲಿ ಹಿಂದಿ ಮಾತಾಡುವ 3,268 ಮಂದಿ ಇದ್ದಾರೆ. ಇದು ಜಿಲ್ಲೆಯ ಒಟ್ಟು ಹಿಂದಿಯ 29.317% ಮತ್ತು ಜಿಲ್ಲೆಯ 0.260% ಆಗುತ್ತದೆ. ಲಮಾಣಿ ಹೆಸರಿನಲ್ಲಿ 7,300 ಮತ್ತು ಬಂಜಾರಿ ಹೆಸರಿನಲ್ಲಿ 23 ಮಂದಿ ಇದ್ದು ಅವೆರಡನ್ನು ಸೇರಿಸಿದಾದ ಲಂಬಾಣಿ ಮಾತಾಡುವ 7,323 ಮಂದಿ ಇರುವುದು ಕಾಣಿಸುತ್ತದೆ. ಇದು ಜಿಲ್ಲೆಯ ಹಿಂದಿಯ 65.694% ಆಗುತ್ತದೆ ಮತ್ತು ಜಿಲ್ಲೆಯ 0.583% ಆಗುತ್ತದೆ. ಹೀಗಾಗಿ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತಾಡುವ ಒಂದೆ ಬಾಶೆಯಾಗಿದ್ದ ಹಿಂದಿ ಈಗ ಹತ್ತು ಸಾವಿರಕ್ಕಿಂತ ಕಡಿಮೆ ಮಂದಿ ಮಾತಾಡುವ ಬಾಶೆಗಳ ಪಟ್ಟಿಗೆ ಇಳಿಯುತ್ತದೆ ಮತ್ತು ಆ ಪಟ್ಟಿಗೆ ಲಂಬಾಣಿ ಬರುತ್ತದೆ. ತಾಯ್ಮಾತುಗಳ ಮಾತುಕತೆಯನ್ನು ಆದರಿಸಿ, ಜಿಲ್ಲೆಯ ಬಾಶೆಗಳನ್ನು ಮರುಹೊಂದಿಸಿ ತೋರಿಸಿದೆ.

ಸಾಪೇಕ್ಶ ಸಂಕೆಬಾಶೆಸಂಕೆ%
ಒಂದು ಲಕ್ಶಕ್ಕಿಂತ ಹೆಚ್ಚಕನ್ನಡ7,45,09959.365%
’’ತೆಲುಗು3,39,76127.070%
’’ಉರ‍್ದು1,45,54911.596%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಲಂಬಾಣಿ7,3230.583%
’’ತಮಿಳು5,7370.457%
’’ಮರಾಟಿ5,4760.436%
’’ಹಿಂದಿ3,2680.260%

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ಚಿಕ್ಕಬಳ್ಳಾಪುರ12,55,104ಕನ್ನಡ7,45,09959.365%1
ತೆಲುಗು3,39,76127.070%2
ಉರ‍್ದು1,45,54911.596%3
ಲಂಬಾಣಿ7,3230.583%4
ತಮಿಳು5,7370.457%5
ಮರಾಟಿ5,4760.436%6
ಹಿಂದಿ3,2680.260%7
ಮಲಯಾಳಂ6520.051%8
ಗುಜರಾತಿ3340.026%9
ಮಾರ‍್ವಾರಿ3140.025%10

‍ಲೇಖಕರು Admin

April 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: