ಸುಡೋ ಕವಿಯೊಬ್ಬನಿಗೆ ಹಾಡಬಹುದಾದ ಚರಮಗೀತೆ…

ಮಹಾಂತೇಶ ನವಲಕಲ್

ಇಟ್ಟುಕೊಂಡ ಕಿರೀಟವೆಲ್ಲ ನಿನ್ನ ಆತ್ಮರತಿಯ ವೃಂತ ಕೋಶದಲ್ಲೆ ಜನಿಸಿದ್ದು
ವಜ್ರದ ಕಲ್ಲುಗಳಂತೆ ಇರುವ
ಶಿರಸ್ತ್ರಾಣಕೆ ಹಚ್ಚಿದ
ಪಿಕನಾಸಿ ಗಾಜುಗಳೆಲ್ಲ
ಒಂದೊಂದಾಗಿ ಕಳಚಿ ಬೀಳುತ್ತಲಿವೆ,
ಆ ಗಾಜಿನ ತುಂಡುಗಳಲ್ಲಿ
ನಿನ್ನ ನೂರಾರು ಮುಖಗಳ ಪ್ರತಿಫಲನದ ಅನಾವರಣ.
ಒಂಕ್ಕೊಂದು ತಾಳವಿಲ್ಲ ತೆಂಕವಿಲ್ಲ

ಆರಕ್ಕೆ ಏರಲಿಲ್ಲ
ತಪ್ಪಾಯ್ತು
ಮೂರಕ್ಕೂ ಏರಲಿಲ್ಲ
ನಿದ್ರೆ ಕಣ್ಣಿನ ಮಂಪರಿನಲ್ಲಿ
ಬಡಬಡಿಸುವ ಅಂತರ್ ಪಿಶಾಚಿಯೇ
ಸುಡೋ ಶ್ರೆಷ್ಠಮಯ ಪೋಷಾಕಿನಲ್ಲಿ ಜಗವೆಲ್ಲ ಕನಿಷ್ಠಮಯ ಹಳದಿಯೇ


ಪಾದ ನೆಕ್ಕಿ ಪ್ರಸಾದವೆಂಬಂತೆ ಸ್ವೀಕರಿಸಿ ಗಳಿಸಿದ ಪದಕಗಳೆಲ್ಲ ಕಾಯುತ್ತಿವೆ
ನಿನ್ನ ಅಂತಿಮ ಕಾರ್ಯದ ಮುಂದೆ
ಚರಮಗೀತೆ ಹಾಡಲು
ಇನ್ನು ಕಾಯುತ್ತಿವೆ ಕೆಲವು ನಿನ್ನ ಜೊತೆ ಸಹಗಮನಿಗಳಾಗಿ ಬೂದಿಯಾಗಲು


ಭವ್ಯ ಏಕಾಂತದಲಿ ಆಂಗಿಕ ಅಂಗಿತೊಟ್ಟು
ಮತ್ತೆ ಬಾಹ್ಯದಲಿ ಗೋಣೆಗರಿಸಿ’
ಸಭೆಯಲ್ಲಿ’ ಮನೆಯಲ್ಲಿ ‘ಶೌಚಾಚಮನಗಳಲಿ’
ಹುಚ್ಚನಂತೆ ಉಚ್ಚರಿಸುತ್ತಿರುವ ಪದ್ಯದ ಸಾಲುಗಳು ಕೂಡ
ನೀನು ಬಾಲ್ಯದಲಿ ಬಾಲಯ್ಯನ ತೋಟದಲ್ಲಿ
ಕದ್ದ ಜಂಪಲ ಹಣ್ಣನ್ನು ಹೋಲುತ್ತವೆ


ಎಡಗಾಲಿನ ಹರಿದ ಚಪ್ಪಲಿಗೂ
ಸಹ್ಯ ಭಾಷೆ ಇದೆ ಎಂದು
ನಿನ್ನ ಹೊಲಸು ನಾಲಿಗೆ
ಕ್ಷಣಕ್ಷಣಕ್ಕೂ ಪಿಸುಗುಟ್ಟಿದರೂ
ಆ ನಾಲಿಗೆಯಿಂದ ಒಲ್ಲದ
ಮನಸ್ಸಿನಿಂದಲೇ ಅದನೆ ನುಡಿಸುತ್ತಿರುವೆ


ಬದುಕಿದ್ದಾಗಲೇ ನರಕದಲಿ
ಅಮರನಾಗುವ ಕರತಲಾಮಲಕ
ವಿದ್ಯೆಯನು ನಿನಗೆ ಕಲಿಸಿರುವ
ಆ ಮಹಾನ್ ಗುರುವನ್ನು ಹುಡುಕುತ್ತಿರುವೆ ಏಕೆಂದರೆ
ಈ ಪಾಪ ಕೂಪದಿಂದ ಪಾರು ಮಾಡುವವ
ಅವನೊಬ್ಬನೆ
ಹೋದ ದಾರಿ ಬಂದಂತೆ
ಬರುವ ದಾರಿ ಗೊತ್ತಿರುವುದು
ಆ ಪರಮ ಗುರುವಿಗೆ ಮಾತ್ರ

‍ಲೇಖಕರು Admin

April 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: