ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಯೋಗೇಂದ್ರಾಚಾರ್ ಎ ಎನ್ ಕವಿತೆ- ಸ್ಥಾನ ಗಿಟ್ಟಿಸಿಕೊಂಡವರು…
ಯೋಗೇಂದ್ರಾಚಾರ್ ಎ ಎನ್ ಮನೆಯ ಹಬ್ಬದಲಿತಟ್ಟೆ ಲೋಟ ಹಿಡಿದುಸಿಹಿ ಹೋಳಿಗೆಯ ಪಡೆದುಸ್ಥಾನ ಗಿಟ್ಟಿಸಿಕೊಂಡಿದ್ದಾರೆ ತಟ್ಟೆ ಲೋಟಗಳಷ್ಟೇ ಅಲ್ಲಕೈ ಕಾಲು ಹಿಡಿದರೂಹೂರಣದ ಘಮಲುಕಾಣದ ಕಣ್ಮಣಿಗಳುಜಾಗಟೆ ಬಾರಿಸಿದ್ದಾರೆಬೀದಿ ಬೀದಿಗಳಲ್ಲಿದೊಂಬರಾಟ ನಡೆಸಿಮನೆ ಹೋಳಿಗೆಯಹೂರಣಕ್ಕೆ ಹೇಸಿಗೆಯ ಮೆತ್ತಿಹೆದರಸಿ ಬೆದರಿಸಿಮನೆಯಲ್ಲೇಸ್ಥಾನ...
Pic by Jon Flobront
‘ಚಂದ್ರಗಿರಿಯ ತೀರದಲ್ಲಿ’ ಪ್ರಕಟವಾಗಿ 25 ವರ್ಷಗಳು ಕಳೆದು ಹೋಗಿವೆ..
ಸಮುದಾಯ ಸಾಂಸ್ಕೃತಿಕ ಸಂಘಟನೆಯನ್ನು ಕಟ್ಟಿ ಬೆಳಸಿದ ಪ್ರಮುಖರಲ್ಲೊಬ್ಬರು ವಾಸುದೇವ ಉಚ್ಚಿಲ್. ದಕ್ಷಿಣ ಕನ್ನಡದ ಉಚ್ಚಿಲದವರಾದ ವಾಸುದೇವ ಅವರು ಸದಾ ಜನಪರ ಹೋರಾಟದೊಂದಿಗೆ ಗುರುತಿಸಿಕೊಂಡವರು. ಸಾರಾ ಅವರನ್ನು ದಶಕಗಳಿಂದ ಬಲ್ಲ ಅವರು ಸಾರಾ ಅವರ ಅಭಿನಂದನಾ ಸಮಾರಂಭದ ಬಗ್ಗೆ ಟಿಪ್ಪಣಿಯನ್ನು ಕಳಿಸಿದ್ದಾರೆ. ಅವರಿಗೆ ವಂದನೆಗಳು....
ಕುಟ್ಟ ಬ್ಯಾರಿಯ ಮೂಲಕ ಸಾರಾ ಅಬೂಬಕರ್…
ಪುರುಷೋತ್ತಮ ಬಿಳಿಮಲೆ ಪುತ್ತೂರಿನಿಂದ ಬೆಳ್ಳಾರೆ ಅಥವಾ ಕಾಣಿಯೂರು ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಮಾರ್ಗದಲ್ಲಿ ಪಂಜ ಹೆಸರಿನ ಪುಟ್ಟ ಪೇಟೆಯೊಂದು ಸಿಗುತ್ತದೆ. ಈ ಪೇಟೆಯಲ್ಲಿ ಇಳಿದು ಕಾಲ್ನಡಿಗೆಯಲ್ಲಿ ಎಂಟು ಕಿ.ಮೀ ನಡೆದರೆ ಬಿಳಿಮಲೆ ಎಂಬ ಹೆಸರಿನ ಹಳ್ಳಿ ದೊರೆಯುತ್ತದೆ. ಪಶ್ಚಿಮಘಟ್ಟದ ಭಾಗವಾದ ಬಂಟಮಲೆಯ ದಟ್ಟ...
ಸಾರಾ ಅಬೂಬಕ್ಕರ್ ಇನ್ನಿಲ್ಲ…
ಎಂ ಆರ್ ಕಮಲ ಕವಿತೆ- ಕಣ್ಣಗಿ…
ತಮಿಳಿನ ಶಿಲಪ್ಪದಿಕಾರಂ ಕಾವ್ಯದ ಪಾತ್ರ ಎಂ ಆರ್ ಕಮಲ ಒಂದು ಮಾಗಿ ಮುಂಜಾವು ಆತ ಬರುವನೆಂದುಕಾಯುತ್ತಿದ್ದೇನೆ - ಕಣ್ಣಗಿ ಕಣ್ಣಾಗಿ.. ರಾತ್ರಿ ಸೋರಿದ ಹಾಗೆ ಕರಗುವ ಕನಸಿನ ಭಯಭಯ ಹಗಲಲ್ಲಿ, ಆತ ಬಾರದಿದ್ದರೆ,ಈ ಹಗಲು-ರಾತ್ರಿಗಳ ರಾಟೆ ಮುಗಿದರೆಆತನ ನೆನಪೂ ಇರುವುದಿಲ್ಲ..? ಯಾಕೆ ನನ್ನೆದೆಯಲ್ಲಿ ಈ ತಳಮಳಕಾದಿರುವ ಕಣ್ರೆಪ್ಪೆಗಳು...
ಗಂಗಾಧರ ಕೊಳಗಿ ಕಥೆ- ಉತ್ತರವಿಲ್ಲದ ಪ್ರಶ್ನೆ…
ಗಂಗಾಧರ ಕೊಳಗಿ ಚಿಕ್ಕ ಚೀಲವೊಂದರಲ್ಲಿ ಒಂದಿಷ್ಟು ದಿನಸಿ ಸಾಮಗ್ರಿಗಳ ಚೀಲವನ್ನು ಎಡಭುಜದ ಮೇಲಿಟ್ಟುಕೊಂಡು ಬರುತ್ತಿದ್ದ ಶಾಮಣ್ಣ ದೂರದಲ್ಲಿ ಮರಗಿಡಗಳ ನಡುವೆ ಮಸುಕಾಗಿ ಕಾಣುತ್ತಿದ್ದ ತಮ್ಮ ಮನೆ ಬೇರೆ ರೀತಿಯಲ್ಲಿ ಕಾಣತೊಡಗಿದ್ದಕ್ಕೆ ಅರೆಕ್ಷಣ ಗೊಂದಲಪಟ್ಟರು. ಎಂದೂ ಅನಿಸದಿದ್ದದ್ದು ಇಂದ್ಯಾಕೆ ಈ ಥರ ತೋರುತ್ತಿದೆ ಎನ್ನುವ...
Pic by Ibrahim Samsek
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಕ್ಕಿ ಬಯಸಿ ಹಕ್ಕಿ ಸ್ವರ್ಗದಲ್ಲಿ – 5
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಸಪ್ನ ‘ಅವಧಿ’ ಟಾಪ್ ಟೆನ್
ಶೀಲಾ ಪೈ ಕಥೆ- ಡಿ ಕಪ್…
ಶೀಲಾ ಪೈ ಕಪಾಟಿನಲ್ಲಿ ಬಟ್ಟೆಗಳನ್ನು ಜೋಡಿಸಿಡುತ್ತಿದ್ದಳು ವಿನಯ. ದೇವಿ ಒಂದೊಂದೇ ಬಟ್ಟೆಯನ್ನು ಅಚ್ಚುಕಟ್ಟಾಗಿ ಮಡಿಸಿಕೊಡುತ್ತ ಅವಳಿಗೆ ಸಹಾಯ ಮಾಡುತ್ತಿದ್ದಳು. ಕುರ್ತಾ, ಸಲ್ವಾರ್, ಸೀರೆಗಳು, ರವಿಕೆಗಳು ಎಂದೆಲ್ಲ ವಿಂಗಡಿಸಿ ಅಟ್ಟಿ ಮಾಡಿ ನೀಟಾಗಿ ಜೋಡಿಸುವಾಗ ಕಣ್ಣಿಗೆ ಬಿದ್ದದ್ದು ಸುಮಾರು ಐವತ್ತು, ಅರವತ್ತರಷ್ಟು...
ಪಿ ಆರ್ ವೆಂಕಟೇಶ್ ಕವಿತೆ- ಕತ್ತಲಲ್ಲಿ ಚಂದ್ರ…
ಪಿ ಆರ್ ವೆಂಕಟೇಶ್ ಪ್ರತಿ ರಾತ್ರಿಯ ಮುಗಿಲ ಕೌಳದಲ್ಲಿಚಂದ್ರ ಕಣ್ಣೀರ ಹನಿಯಂತೆ ಕಾಣುತ್ತಾನೆನೆಲದ ಕತ್ತಲ ಧೂಳ ಹನಿತುಂಬ ಬಿಂಬಿಸಿ. ಕನಸ ಶವಹಾಸಿಗೆ ಅಪ್ಪಿದ ಮನಸು ನಿದ್ದೆಯೊದ್ದುತಡಕಾಡಿದೆ.ಕಣ್ಣಹನಿ ವದ್ದೆಗೆ ತಣ್ಣಗಾದ ತೆಲೆದಿಂಬಿಗೆ ಬೆಳದಿಂಗಳ ಬಿಸಿಯುಸಿರು. ನೆಲದ ಬಿರುಕುಗಳೆಲ್ಲ ಒಟ್ಟಾಗಿ ಮುಗಿಲಿಗೆ ರಾಚಿಅರ್ಥವಾಗದ ಚಿತ್ರ...
ಓದಲೇಬೇಕಾದ ಪುಸ್ತಕ ʼದ್ವಾಪರʼ
ಎಲ್ ಆರ್ ಪಿ ಎಚ್ ಕೆ ಎಸ್ ಕೋಲಾರ ಓದಿದ ಪುಸ್ತಕಗಳ ಸಣ್ಣ ಪರಿಚಯ ಲೇಖನ ಹಾಕುವುದು ನನ್ನ ಅಭ್ಯಾಸವಾದರೂ ಅದರಲ್ಲಿ ಒಂದು ಶಿಸ್ತು ಇಂದಿಗೂ ಇಲ್ಲ. ಏನೋ ಉತ್ಸಾಹ, ಸಮಯ, ಒತ್ತಡ ಎಲ್ಲ ಕೂಡಿಬಂದಾಗ ಬರಹ ಸಾಗಿಬಿಡುತ್ತದೆ. ಎಲ್ಲೋ ನಿಂತಿತೆಂದರೆ ಅದೆಷ್ಟೋ ದಿನಗಳು ಸ್ಥಗಿತ… ಹಾಗೆ ಓದಿಯೂ, ಮೆಚ್ಚಿಯೂ, ಆಳವಾಗಿ ಚಿಂತಿಸಿಯೂ…ಏನನ್ನೂ...
ಗೀತಾ ಜಿ ಹೆಗಡೆ ಕಲ್ಮನೆ ಕವಿತೆ- ಮನಸ್ಸು ಗರಿ ಗರಿ…
ಗೀತಾ ಜಿ ಹೆಗಡೆ ಕಲ್ಮನೆ ಹೊಸ ವರ್ಷದ ಬೆಳ್ಳಂಬೆಳಗ್ಗೆ ಅಂದುಕೊಂಡೆಇವತ್ತಿನಿಂದ ದಿನಚರಿನೇ ಬೇರೆಎಲ್ಲಾ ಕಟ್ನಿಟ್ನಾನೇ ಬೇರೆನನ್ನ ಸ್ಟೈಲೇ ಬೇರೆ. ಪ್ರೀತಿ ಪಾತ್ರಳಾದ ಚಹಾಕ್ಕೆ ಗುಡ್ ಬೈಆಗಾಗ ಹಣುಕಿಹಾಕುವ fbಗೆ ಜೈಸುಮ್ಮನೆ ಕೂತು ಮಾಡುವ ಕಾಲಹರಣಕ್ಕೆ ಟೂ ಟೂಗಂಟೆಗಟ್ಟಲೆ ನೋಡುವ ಧಾರಾವಾಹಿಗೆ ಟಾ ಟಾಇತ್ಯಾದಿ ಇತ್ಯಾದಿ ಲೀಸ್ಟ್...
ಸದಾಶಿವ್ ಸೊರಟೂರು ಕಥಾ ಅಂಕಣ – ಅವ್ವ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
Art by rogerio Coelho
ಸತ್ಯಪ್ರಕಾಶ್ ರಾಮಯ್ಯ ಕವಿತೆ- ಪ್ರತಿರೋಧ…
ಸತ್ಯಪ್ರಕಾಶ್ ರಾಮಯ್ಯ ಇಳಿ ಸಂಜೆಯಲಿ ನೆಲಚುಂಬಿಸುವ ಕಿರಣಗಳುಟಿಸಿಲೊಡೆದ ಕೊನೆಯಿಲ್ಲದ ಕಾಲುದಾರಿಗಳುದಾರಿಯ ಇಕ್ಕೆಲಗಳಲಿ ಎಲ್ಲ ರಹಸ್ಯಗಳಿಗೆಸಾಕ್ಷಿಯಾದರೂ ಬಿಮ್ಮನೆ ನಿಂತ ಮರಗಳುಹಠಾತ್ತಾಗಿ ಕಣ್ಣೀರು ಹಾಕಿದ ಕಾರ್ಮೋಡಗಳುಕೆಂಪಾದ ಸೂರ್ಯನ ಕಡೆಗೆ ಹಾರಿದ ಒಂಟಿ ಹಕ್ಕಿಕೋಣೆಯ ಕಿಟಕಿಯಲಿ ಬಂಧಿಯಾದ ಸರಳುಗಳುಪಿಸುಮಾತುಗಳನು ಹೊತ್ತು...
ವಸುಂಧರಾ ಕದಲೂರು ಕವಿತೆ- ಕೆಸರಲ್ಲಿ ಕಂಬ ನೆಡುವ ‘ಗ್ಯಾನಿ’ಗೆ
ವಸುಂಧರಾ ಕದಲೂರು ಕೆಸರಲ್ಲಿ ಕಂಬ ನೆಡುವ ನಿಜ‘ಗ್ಯಾನಿ’ ನೀನು ನೆಟ್ಟ ಕಂಬದಉಸ್ತುವಾರಿಗೆ ನನ್ನ ಬಿಡುವೆ. ಕಂಬ ಚಿಗುರಿ ಹೂವೊಂದು ಅರಳಿಸುವಆಶಯದಲಿ ಕಾಪಿಡುವ ಬೇಲಿ ಹಾಕುತ್ತೇನೆಬೇಲಿಯ ಹೂಗಳೂ ಅದೆಷ್ಟು ಚೆಂದ! ಹೂತ ಕಂಬ ಬೇರು ಬಿಡಲಿ: ಕೆಳಗೆಬೇರು ಮೇಲೆ ಚಿಗುರು! ಬೇಲಿಹೂ ಗೆಬರುವ ಜೇನುಹುಳು ಕೆಸರಿಗೆ ಬೀಳದಿರಲಿ ನಿನ್ನ ಕಂಬ ಕೆಸರ...
ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ಇನ್ನಿಲ್ಲ…
ಸಿ ಕೆ ಗುಂಡಣ್ಣ ಕನ್ನಡ ರಂಗಭೂಮಿಯ ಹಿರಿಯ ರಂಗ ನಿರ್ದೇಶಕ , ತನ್ನದೇ ಆದ ವಿಶಿಷ್ಟ ರೀತಿಯ ನಾಟಕಗಳಿಗೆ ಮತ್ತು ನಿರ್ದೇಶನಕ್ಕೆ ಹೆಸರಾಗಿದ್ದ ಗೋಪಾಲಕೃಷ್ಣ ನಾಯರಿ ಅವರು ಇಂದು ಬೆಳಿಗ್ಗೆ 5.30ರ ಸುಮಾರಿಗೆ ನಿಧನ ಹೊಂದಿದ್ದಾರೆ. ಅವರಿಗೆ 68 ವರುಷ ಈ ವರುಷದ ಫೆಬ್ರವರಿ ತಿಂಗಳಿಗೆ ತುಂಬುತ್ತಿತ್ತು. ಸ್ವಲ್ಪ ಸಮಯದ ಅನಾರೋಗ್ಯದಿಂದ...
ಗೋಪಾಲ ಕೃಷ್ಣ ನಾಯರಿ ಇನ್ನಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ!
ಸಿ ಬಸವಲಿಂಗಯ್ಯ ನಾಯರಿ ನನಗೆ ಮೊದಲು ರಘುನಂದನ್ ಮೂಲಕ ಪರಿಚಯವಾದರು. ನಂತರ ನಾನು ದೆಹಲಿ NSD ಗೆ ೧೯೮೧ ರಲ್ಲಿ ಸೇರಿದ ನಂತರ ಹೆಚ್ಚು ಆತ್ಮೀಯರಾದರು. ಎಂಬತ್ತರ ದಶಕದಲ್ಲಿ ಕನ್ನಡ ನಾಡಿನಿಂದ ರಂಗಭೂಮಿ ಅಧ್ಯಯನಕ್ಕಾಗಿ NSD ಗೆ ಬಹಳಷ್ಟು ಜನ ಹೋಗಲು ನಮ್ಮವರೇ ಆದ ಬಿ. ವಿ.ಕಾರಂತರು ಆಗ nsd ಯ ನಿರ್ದೆಶಕರಾಗಿದ್ದದ್ದು ಮುಖ್ಯ ಕಾರಣ...
ಮಂತ್ರ ಚಿಕಿತ್ಸೆ…
ಡಾ ಎಸ್ ಬಿ ರವಿಕುಮಾರ್ ನಾನು ಚಳ್ಳಕೆರೆಯ ದೊಡ್ಡ ಪ್ರಮಾಣದ ಕುರಿ ಸಾಕಾಣಿಕಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾಗ ಬೆಂಗಳೂರಿನ ಐವಿಆರ್‍ಐನಲ್ಲಿ (ಭಾರತೀಯ ಪಶುವೈದ್ಯಕೀಯ ಅನುಸಂಧಾನ ಸಂಸ್ಥೆ) ಡಾ. ಗಜೇಂದ್ರಗಡ್ ಕುರಿಗಳಲ್ಲಿನ ಸ್ಕ್ರೇಪಿ ಎನ್ನುವ ಕಾಯಿಲೆ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. ಸಂಶೋಧನೆಗಾಗಿ “ನಿಮ್ಮಲ್ಲಿ...




















