ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೈಸೂರಿನ ಕಿರುರಂಗಮಂದಿರದಲ್ಲಿ ‘ಅಯೋಧ್ಯಾ ಕಾಂಡ’ ಪ್ರದರ್ಶನ…

ವಾಲ್ಮೀಕಿ ರಾಮಾಯಣ ಆಧಾರಿತ ನಾಟಕ ‘ಅಯೋಧ್ಯ ಕಾಂಡ’ ನಾಟಕವು ದಿನಾಂಕ 13-11-2022ರ ಭಾನುವಾರ ಸಂಜೆ 7 ಗಂಟೆಗೆ ಮೈಸೂರಿನ ಕಿರುರಂಗಮಂದಿರ ಪ್ರದರ್ಶನಗೊಳ್ಳಲಿದೆ. ಈ ನಾಟಕದ ಪ್ರದರ್ಶನ ಉಚಿತವಾಗಿರುತ್ತದೆ ಹಾಗು ಇಷ್ಟಪಟ್ಟವರು ತಮಗದಷ್ಟು ದೇಣಿಗೆ ನೀಡಿ ನಾಟಕವನ್ನು ವೀಕ್ಷಿಸಬಹುದು.

ಈ ನಾಟಕವನ್ನು ಹಿರಿಯ ರಂಗನಿರ್ದೇಶಕರಾದ ಪ್ರಸನ್ನ ಅವರು ರಚಿಸಿ  ನಿರ್ದೇಶಿಸಿದ್ದು, ಅನುಶ್ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ, ವಸ್ತ್ರಾಲಂಕಾರ ನಂದಿನಿ.ಕೆ.ಆರ್ ಹಾಗೂ ಪ್ರಸಾದನ ಬಿ.ಎಮ್. ರಾಮಚಂದ್ರ ನಿರ್ವಹಿಸಲಿದ್ದಾರೆ. ಮುಖ್ಯ ಪಾತ್ರದಲ್ಲಿ ಉಡುಪಿಯವರಾದ ಪ್ರದೀಪ್, ರಾಷ್ಟ್ರೀಯ ನಾಟಕ ಶಾಲೆಯ ಪದವೀಧರೆ ಪದ್ಮಶ್ರೀ.ಸಿ.ಆರ್, ಮುನ್ನ, ರಾಜಲಕ್ಷ್ಮಿ  ಹಾಗೂ ವಿಶ್ವಾಸ್ ಅಭಿನಯಿಸಲಿದ್ದಾರೆ.

ನವಂಬರ್ ತಿಂಗಳ ಈ ಪ್ರದರ್ಶನಗಳು ನಾಟಕದ ಮರು ಪ್ರದರ್ಶನವಾಗಿದ್ದು, ಈಗಾಗಲೇ ಸುಮಾರು ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ. ಇದೊಂದು ಸಂಗೀತಮಯ ನಾಟಕವಾಗಿದ್ದು, ಸಂಗೀತಾಭಿಮಾನಿಗಳಲ್ಲಿ ಆಸಕ್ತಿ ಕೆರಳಿಸಿದೆ. ನಾಡಿನ ಹಲವು ಲೇಖಕರು, ರಂಗಕರ್ಮಿಗಳು ಹಾಗೂ ಸಂಗೀತ ವಿಮರ್ಶಕರು ನಾಟಕದ ಕುರಿತು ಈಗಾಗಲೇ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಮ್ಮ ಈ ನಾಟಕದ ಮರು ಪ್ರದರ್ಶನ ಸುದ್ದಿಯನ್ನು ತಮ್ಮ ಜನಪ್ರಿಯ ಮಾಧ್ಯಮಗಳಲ್ಲಿ ಪ್ರಕಟಿಸಬೇಕೆಂದು ಹಾಗೂ ನಾಟಕ ಪ್ರದರ್ಶನಕ್ಕೆ ಪತ್ರಕರ್ತರನ್ನು ಹಾಗೂ ಛಾಯಾಚಿತ್ರಗಾರರನ್ನು ಕಳುಹಿಸಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.

‍ಲೇಖಕರು Admin

13 November, 2022

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading