ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಎಚ್ ಎಸ್ ವೆಂಕಟೇಶಮೂರ್ತಿ ಅವರ ಹೊಸ ಪುಸ್ತಕಗಳು
ಸಾಹಿತ್ಯ ಪರಿಷತ್ತಿನಲ್ಲಿ ’ಪದ ಪದ ಚರಿತ’
ಪಾಲಹಳ್ಳಿ ವಿಶ್ವನಾಥ್ ಬರೆದ ಕಥೆ ’ಅ೦ಗದನ ವಿದ್ಯಾಭ್ಯಾಸ’
ಪಾಲಹಳ್ಳಿ ವಿಶ್ವನಾಥ್ ಮಗು ೨ ವರ್ಷಗಳಾದರೂ ತೊಟ್ಟಿಲಲ್ಲೆ ಮಲಗಿದ್ದಿತು. ಮಕ್ಕಳಿ೦ದ ಮೊದಲು ಹೊರಡಬೇಕಾದ ಯಾವ ಅಕ್ಷರವೂ ಮಗುವಿನ ಬಾಯಿಯಿ೦ದ ಹೊರಬ೦ದಿರಲಿಲ. ತಾಯಿಯನ್ನು ಮ ಎ೦ದೋ ,ತ೦ದೆಯನ್ನು ಪ,ಬ ಎ೦ದೋ ಕರೆಯಬೇಕಲ್ಲವೆ? ಇದರಿ೦ದ ತ೦ದೆ ತಾಯಿಯರಿಗೆ ವಿಪರೀತ ಯೋಚನೆಯಾಯಿತು. ಆದರೆ ಕೆಲವರು "ಹೇಳಲಾಗುವುದಿಲ್ಲ, ಎಷ್ಟೋ ಅತಿ ಬುದ್ಧಿವ೦ತ...
'ಬರುವುದಿಲ್ಲ ತಾವರೆಎಲೆ ಮೇಲಿನ ಹನಿ ಬಿಂದುವಾಗಲು..' ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ ನನಗೆ ಬರುವುದಿಲ್ಲ ತಾವರೆಯ ಎಲೆ ಮೇಲಿನ ಹನಿಯಂತೆ ಬದುಕಲು ಯಾವತ್ತೂ ಕಲಿಯಲಿಲ್ಲ ನಾನು ತಾವರೆಯಿಂದ ಬಿಂದುವನ್ನು ಬೇರ್ಪಡಿಸಿ ನೋಡಲು ಯಾವ ಆಧ್ಯಾತ್ಮದ ಮಾತುಗಳೂ ಬೇರು ಮೊಲೆಯೂಡಿಸುವ ಎಲೆಯಾಗಿಸಲಿಲ್ಲ ಕಂದನ ಬಾಯಂಚಿನ ಹನಿಯಾಗಲೂ ಬಿಡಲಿಲ್ಲ ಅರ್ಥವಾಗಲಿಲ್ಲ ಎಂದೂ ಹಾಗೆ ಇದ್ದೂ ಇಲ್ಲದಂತಿರುವ ಲಾಜಿಕ್ಕು ! ನನ್ನ...
ಪ್ರವಾಸ ಅನುದಾನ ಯೋಜನೆಯಡಿ ಅರ್ಜಿ ಆಹ್ವಾನ
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರವಾಸ ಅನುದಾನ ಯೋಜನೆಯಡಿ ಅರ್ಜಿ ಆಹ್ವಾನ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2015-16ನೇ ಸಾಲಿನಲ್ಲಿ ಹಮ್ಮಿಕೊಂಡಿರುವ ಯೋಜನೆಗಳಲ್ಲಿ `ಪ್ರವಾಸ ಅನುದಾನ' ಯೋಜನೆಯೂ ಒಂದಾಗಿದೆ. ಈ ಯೋಜನೆಯಡಿ 10 ಜನ ಆಸಕ್ತ ಲೇಖಕರನ್ನು ಆಯ್ಕೆ ಮಾಡಲಾಗುವುದು. ಹೀಗೆ ಆಯ್ಕೆಯಾದ ಲೇಖಕರು ವಿವಿಧ ರಾಜ್ಯಗಳಿಗೆ ಪ್ರವಾಸ...
ಮೋಹಿತ್ ಸೂರಿ ಎಂಬ ರೋಮ್ಯಾಂಟಿಕ್ ನಿದೇಶಕನ ಕುರಿತು….
ಮಲ್ಲಿಕಾರ್ಜುನ ದಳವಾಯಿ ಸಿನಿಮಾ ಒಂದು ಸೃಜನಶೀಲ ಮಾಧ್ಯಮ. ಜಗತ್ತಿನಲ್ಲಿ ಅತೀ ಹೆಚ್ಚು ಜನರನ್ನು ರಂಜಿಸುವ ಬೃಹತ್ ಮನರಂಜನಾ ಸರಕು. ಇಂತಹ ಕ್ಷೇತ್ರದಲ್ಲಿ ಬಹಳ ದಿನ ಕಾಲೂರಿ ನಿಲ್ಲಲು, ಸತತವಾಗಿ ಗೆಲ್ಲಲು ಅಗಾಧ ಪರಿಶ್ರಮ ಹಾಗೂ ಭಿನ್ನ ಚಿಂತನೆ, ಬದಲಾವಣೆಗೆ ಒಗ್ಗಿಕೊಳ್ಳುವ ಮನಸ್ಸು ಇರಬೇಕಾಗುತ್ತದೆ. ಇಲ್ಲಿಗೆ ಕೆಲವರು ತುಂಬ ಬೇಗ...
ಅಭಿನಯ ತರಂಗದಿಂದ ಅಭಿನಯ ಶಿಬಿರ
ರಾಜಾಸ್ಥಾನವೆಂಬ ಸ್ವರ್ಗದ ತುಣುಕು : ಜೈಸಲ್ಮೇರ್, ಜೈಸಲ್ಮೇರ್!
(ಹಿಂದಿನ ತುಣುಕುಗಳು) ಕರ್ಣಿ ಮಾತಾ ಮಂದಿರದಿಂದ ಸೀಧಾ ಲಾಡ್ಜಿಗೆ ನಮ್ಮ ಸವಾರಿ ಹೊರಟಿತು. ಲಾಡ್ಜ್ ತುಂಬ ಲಕ್ಷುರಿಯಿಂದ ಐಸಾರಾಮಿಯಾಗಿತ್ತು. ವಿದೇಶೀಯರಿಂದಲೇ ತುಂಬಿತ್ತು. ತಿರುಗಾಟದಲ್ಲಿ ತುಸು ಹೆಚ್ಚೇ ದಣಿದಿದ್ದುದರಿಂದ ಹಸಿವಾಗಿತ್ತು. ರಾಜಸ್ಥಾನಿ ಬಾಜರಾ ರೋಟಿಯ ಬಿಸಿಯಾದ, ರುಚಿಯಾದ ಭೋಜನ ಸವಿದು, ಬೇಗನೇ ನಿದ್ದೆಗೆ ಜಾರಿದೆವು....
ಆ ಹುಡುಗ ಎಲ್ಲಿದ್ದಾನೋ?
ಗೆಳತಿಗೊಂದು ಪತ್ರ - ನಳಿನ ಡಿ ಭೃಂಗದ ಬೆನ್ನೇರಿ ಹೋಗಬಾರದು, ಹೀಗೆ ಹೋಗಿ ಹಾಗೆ ಬಂದರೂ ತಳಮಳಗಳ ಸಂತೆಯೊಳಗೆ ಸೋಲದೆ ಬೇರೇನು ಮಾಡಬಹುದೇಳು ಗೆಳತಿ. ಎಷ್ಟೇ ದೂರ ಬಂದರೂ ಕೆಲವೆಡೆ ಸಿಕ್ಕಿಹಾಕಿಕೊಂಡ ಮನಸ್ಸನ್ನು ಸುಧಾರಣೆ ಮಾಡೋದೇ ಕಷ್ಟಕರ. ಮುಂದಿಲ್ಲೊಂದು ದಿನ ಅದಕ್ಕೆ ಸರಿಪಡಿಸಲೇಬೇಕಾದ ದಾರಿ ಸಿಕ್ಕಿಕೊಳ್ಳಲೂಬಹುದಂದುಕೊಳ್ಳುವೆ....
ಪ್ರತೀಭಾ ಕಾಗೆ ಕವನ
ಡಾ ಪ್ರತೀಭಾ ಕಾಗೆ ಬಣ್ಣಗಳ ಭಾವ ಬಣ್ಣಗಳೆಷ್ಟೊ ಕುಂಚದಿ ಮೂಡಿದವು ಹತ್ತು ಮೂಡಲಾರದವು ಇನ್ನು ಮತ್ತೆಷ್ಟೊ ಇಹವು ಕಡುಕೆಂಪು ಬಣ್ಣ ಅತಿಗಾಢವೆಂದೆನಿಸಿತೋ ಮೂಡಿಸಿತು ಕಲೆಗಳ ಮಾಸದ ಗಾಯಗಳ ಮೂಡಿಸಿತ್ತು. ಕಪ್ಪು ಬಣ್ಣವೇಕೊ ಇನ್ನು ಕಪ್ಪಾಗಿಹುದು ಬಿಳಿ ಬಣ್ಣವ ಸೇರಿದರೂ ಬಿಳಿಯಾಗದು. ಗಾಢ ಅಂಧಕಾರವ ತೊರುತಿಹುದು ತಿಳಿಯಾಗುವ ಭರವಸೆ...
ಕೆ ಎಚ್ ಕಲಾಸೌಧದಲ್ಲಿ ’ವೇಷ’
'ಬಾಲ್ಯಕ್ಕೂ ಬೇಕೆ ಕೌನ್ಸ್‌ಲಿಂಗ್..’ ಸ್ವರ್ಣಾ ಬರೀತಾರೆ
ಸ್ವರ್ಣ ಎನ್ ಪಿ ಆಪ್ತಸಮಾಲೋಚನೆ ಅಥವಾ ಕೌನ್ಸೆಲ್ಲಿಂಗ್ ಏಕೆ ಬೇಕು ? ಯಾರಿಗೆ ಬೇಕು ? ತಿಂದುಂಡು ಹಾಯಾಗಿರುವ ಬಾಲ್ಯಕ್ಕೂ ಸಮಸ್ಯೆಯೇ ? ಮಕ್ಕಳಿಗೆ ಆಪ್ತ ಸಮಾಲೋಚಕರ ಅಗತ್ಯವಿದೆಯೇ ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನದಲ್ಲಿದ್ದೇನೆ. ಪ್ರಯತ್ನದ ಭಾಗವಾಗಿ ನಾನು ಕಂಡ ,ಕೇಳಿದ ಕೆಲವು ಘಟನೆಗಳು ನೆನಪಾದವು , ಈ...
'ಆ ಮೋಡದ ರೆಕ್ಕೆ ಗಾಳಿ…' – ಹೇಮಾ ಕಳ್ಳಂಬೆಳ್ಳ
ಮೋಡದ ರೆಕ್ಕೆ - ಹೇಮಾ ಕಳ್ಳಂಬೆಳ್ಳ ಈ ಗಾಳಿಗೂ, ಆ ಮೋಡಕೂ ಅದು ಯಾವಾಗ ಇಂತಹದೊಂದು ತೀವ್ರ ಸ್ನೇಹವಾಯ್ತೋ ಯಾರಿಗೂ ಗೊತ್ತಿಲ್ಲ. ಇವೆರಡೂ ಒಂದನ್ನ ಬಿಟ್ಟು ಇನ್ನೊಂದು ಇದುವರೆಗೂ ಇಲ್ಲ. ಇಡೀ ಮೋಡವನ್ನೇ ಮೈ ಮೇಲೆ ಹೊರುವುದರಿಂದ ನನಗೇನು ಲಾಭ, ಅಥವಾ ಉಪಯೋಗ? ಈ ಪ್ರಶ್ನೆಗೆ ಉತ್ತರ ಸ್ವತಃ ಗಾಳಿಗೆ ಗೊತ್ತಿಲ್ಲ. ...
ಬಾಲಕರು ದುಡಿಯುವುದು ತಪ್ಪಲ್ಲ..
ಡಾ ಎಸ್ ಬಿ ಜೋಗೂರ ಇವರು ಬೆಳೆಯುವ, ಬಲಿಯುವ ಮುನ್ನವೇ ಮೈ ಬಗ್ಗಿಸಿ ದುಡಿಯುವ ಪುಟ್ಟ ಜೀವಗಳು. ಜೀವನದ ಮರ್ಮ ತಿಳಿಯುವ ಮುನ್ನವೇ ರೇಜಿಗೆ ಹುಟ್ಟಿಸುವ ಬದುಕಿಗೆ ಬೆಂಡಾದವರು. ಆಡಿ, ಓದಿ ನಲಿಯಬೇಕಾದ ವಯಸಿನಲ್ಲಿ ಎಲ್ಲವೂ ಮುಗಿದು ಹೋದಂತೆ ಬದುಕುವ ಎಳೆಯರು. ಉಪವಾಸ ವನವಾಸಗಳ ಸಹವಾಸದಲ್ಲಿಯೇ ಬೆಳೆಯಬೇಕಾದ ಅನಿವಾರ್ಯದ ನಡುವೆ, ಪಾಪಿ...
ಉರಿಯುವುದು ನಾನು ನೀನೇಕೆ ಕರಗುತ್ತಿ ?
ಉರಿವ ಮೇಣದ ಬತ್ತಿ ಎಚ್ ಎ ಪಾಟೀಲ್ ಉರಿವ ಬತ್ತಿ ಅಕ್ಕಸದಿ ಮೇಣಕ್ಕೆ ಹೇಳಿತು ಉರಿಯುವುದು ನಾನು ನೀನೇಕೆ ಕರಗುತ್ತಿ ? ಮೇಣದ ಉತ್ತರ ಉರಿಯುವುದು ನೀನಾದರೂ ಇಂಧನ ನಾನು ಕರಗದೆ ಗತ್ಯಂತರವಿಲ್ಲ ಎರಡೂ ಕೂಡಿ ಬೆಳಗುವ ಜ್ಯೋತಿಯ ಬೆನ್ನು ಬಿದ್ದವು ನಿನ್ನದೆ ಸುಖದ ಬದುಕು ಕರಗುವವರು ಯಾರೋ ಉರಿವವರು ಯಾರೋ ಉರುವಣಿಗೆ ಮಾತ್ರ...
ಎನ್ ಎಸ್ ಶಂಕರ್ ಕೇಳುವ ’ಲಂಕೇಶ್, ಇಂತಿ ಕೆಲವು ಪ್ರಶ್ನೆಗಳು’
ಪಟ್ಟಾಭಿಷೇಕವೆಂಬ 'ಖಾಸಗೀ ದರ್ಬಾರು' – ಜಿ ಪಿ ಬಸವರಾಜು
ಜಿ ಪಿ ಬಸವರಾಜು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಂತರ ಮೈಸೂರು ಅರಮನೆಯ ಉತ್ತರಾಧಿಕಾರಿಯಾಗಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಗದ್ದುಗೆ ಏರಿದ್ದಾರೆ. ಆಧುನಿಕ ಶಿಕ್ಷಣವನ್ನು ಪಡೆದಿರುವ ಯದುವೀರ, ಪ್ರಜಾಪ್ರಭುತ್ವದ ಅರ್ಥ ಮತ್ತು ಮಹತ್ವವನ್ನೂ ತಿಳಿದಿರಬಹುದು. ಮೈಸೂರು ಅರಸರ ಪಾಲಿಗಿರುವುದು ಈಗ ಆಸ್ತಿ ಮಾತ್ರ ಎಂಬ...
ನಾಟಕ ಸಾಹಿತ್ಯ ಸಂವೇದನಾ ಶಿಬಿರಕ್ಕೆ ಆಹ್ವಾನ
ಕರ್ನಾಟಕ ಸಾಹಿತ್ಯ ಅಕಾಡೆಮಿಯು 2015ರ ಜುಲೈ 14, 15 ಮತ್ತು 16 ರಂದು ದಾವಣಗೆರೆಯ ಬಳಿಯ ದೊಡ್ಡ ಬಾತಿಯ ತಪೋವನ ತರಬೇತಿ ಸಂಸ್ಥೆಯಲ್ಲಿ ವಸತಿ ಸಹಿತ ಮೂರು ದಿನಗಳ ರಾಜ್ಯಮಟ್ಟದ “ ನಾಟಕ ಸಾಹಿತ್ಯ ಸಂವೇದನಾ ಶಿಬಿರ ‘’ ವನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ. • ರಾಜ್ಯದ ಯಾವುದೇ ಜಿಲ್ಲೆಗೆ ಸೇರಿರುವ ರಂಗ ಚಟುವಟಿಕೆಗಳಲ್ಲಿ...
ಎಂ ಎಸ್ ಶ್ರೀರಾಂ ಕೇಳಿದ ಕ್ವಿಜ಼್
ಕ್ವಿಜ್ ಮಧ್ಯದಲ್ಲಿ ಮುಖ ಕಾಣದಂತೆ ತಲೆತಗ್ಗಿಸಿ ನಿಂತಿರುವುದು ಗೋನವಾರ ಕಿಶನ್ ರಾವ್. ಹಿನ್ನೆಯಲ್ಲಿರುವ ಕಾರು ರಾಮಚಂದ್ರ ಶರ್ಮರ Peugeot... ಇದು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣ ಚಿತ್ರದಲ್ಲಿರುವ ಮಿಕ್ಕ ಯುವಕರು-ಯುವತಿ ಯಾರು?...
’ನಿತ್ಯವೂ ನನ್ನಂಗಳದಲಿ ಅಕ್ಷರ ಜಾತ್ರೆ’ – ಆರತಿ ಘಟಿಕಾರ್
ಕಪ್ಪು ಹಲಗೆ ಆರತಿ ಘಟಿಕಾರ್ ಗೋಡೆಯೊಳಗಿನ ಬಂಧಿ, ಕಪ್ಪನೆಯ ಮಿರುಗು ಖಾಲಿ ಶಿಲೆಗೆ , ಒತ್ತಿ ಬರದದ್ದೆಲ್ಲವೂ ಬೆರಗು ಗೌಜು ಗದ್ದಲದಲ್ಲೆ ಎವೆಯಕ್ಕದ ತುಂಟ ನೋಟ , ಬೆತ್ತದ ಬೆದರಿಕೆಯ ಶಿಸ್ತಿನ ಪಾಠ ,ಹೇಗಾಯಿತೋ ಬಳಪದೊಂದಿಗೆ ಸ್ನೇಹ , ಈಗ ನಿತ್ಯದ ಒಡನಾಟ ಗೀಚಿದರೇನೋ ಗಣಿತ ,ಇತಿಹಾಸ , ಚರಿತ್ರೆ ನಿತ್ಯವೂ ನನ್ನಂಗಳದಲಿ ಅಕ್ಷರ ಜಾತ್ರೆ...
ಕೃಷಿ ಸಂಬಂಧಿತ ಪುಸ್ತಕಗಳಿಗೆ ಕೃಷಿ ಪುಸ್ತಕ ಪ್ರಶಸ್ತಿ
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಕನ್ನಡ ಅಧ್ಯಯನ ವಿಭಾಗ ಜಿ.ಕೆ.ವಿ.ಕೆ. ಬೆಂಗಳೂರು-560065 ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೃಷಿ ಪುಸ್ತಕ ಪ್ರಶಸ್ತಿ - 2014 ಕನ್ನಡದಲ್ಲಿ ಪ್ರಕಟವಾಗಿರುವ ಕೃಷಿ ಸಂಬಂಧಿತ ಪುಸ್ತಕಗಳಿಗೆ ಕೃಷಿ ಪುಸ್ತಕ ಪ್ರಶಸ್ತಿ - 2014 ನೀಡುವ ಸಲುವಾಗಿ ಲೇಖಕರಿಂದ ಪುಸ್ತಕಗಳನ್ನು ಆಹ್ವಾನಿಸಿದೆ....
