’ಭಾರತೀಸುತರ ನೆನಪಿನಲ್ಲಿ’ – ಗೊರೂರು ಶಿವೇಶ್

ನಮ್ಮ ನಿನ್ನೆಗಳನ್ನಾಳಿದ ಲೇಖಕ ಭಾರತೀಸುತgs1

ಗೊರೂರು ಶಿವೇಶ್

ಆಗಿನ್ನು ಓದಿನಗೀಳು ನಿಧಾನವಾಗಿ ಹತ್ತಲು ಪ್ರಾರಂಭವಾಗಿತ್ತು.ಓದುಎಂದರೆ ಶಾಲಾ ಪುಸ್ತಕಗಳದ್ದಲ್ಲ .ಬದಲಾಗಿ ಕಥೆಪುಸ್ತಕಗಳದ್ದು.ಚಿಕ್ಕಪ್ಪನವರ ಮನೆಗೆ ಬರುತ್ತಿದ್ದ ಸುಧಾ, ಪ್ರಜಾಮತದಎಲ್ಲಾ ಧಾರವಾಹಿಗಳನ್ನು ಓದಿ ಮುಗಿಸಿದ ನಂತರವೂ ಮುಗಿಯದದಾಹ. ಬೇರೆಎಲ್ಲಾದರೂ ಸಿಗಬಹುದಾದಕಾದಂಬರಿ ಪುಸ್ತಕಗಳ ಬೇಟೆಯನ್ನರಸುತ್ತಿದ್ದ ಸಮಯ.ಆಗ ದೊಡ್ಡಪ್ಪನವರಅಂಗಡಿಯಲ್ಲಿಯಾವುದೋರೂಪದಲ್ಲಿ ಬಂದು ಸೇರಿದ್ದ ಪುಸ್ತಕವೊಂದುಕಣ್ಣಿಗೆ ಬಿತ್ತು.ಓದಿ ಕೊಡುತ್ತೇನೆಂದುತಂದವನುಅವರು ಕೇಳಲಿಲ್ಲವಾಗಿ ನಾನು ವಾಪಸ್ ನೀಡಲಿಲ್ಲವಾಗಿ ಆ ಪುಸ್ತಕ ನಮ್ಮ ಮನೆಯಲ್ಲಿ ಉಳಿಯಿತು.ಓದಲು ಮತ್ತಾವುದೇ ಸರಕು ಸಿಗದಿದ್ದಾಗ ಮತ್ತೆ ಮತ್ತೆಓದಿದಕೃತಿಅದು.ಆದುವೆ ಭಾರತೀಸುತ ಬರೆದಕಾದಂಬರಿ’ಗಿರಿಕನ್ನಿಕೆ’
೨
ಆ ಕೃತಿ ನನಗೆ ತುಂಬಾಇಷ್ಟವಾದ್ದದ್ದುಕೃತಿಕಾರ ಸೃಷ್ಟಿಸಿದ ವೈನಾಡು ಹಾಗೂ ಕೊಡಗಿನಸೊಬಗು.ಪಂಜೆ ಮಂಗೇಶರಾಯರಿಂದ ‘ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿಬಿಮ್ಮನೆಬಂದಳೂ’ ಎಂದು ಹಾಡಿ ಹೊಗಳಿಸಿಕೊಂಡ ಆ ರಮ್ಯಪರಿಸರವನ್ನು, ಅಲ್ಲಿಯ ಜನಜೀವನವನ್ನು ಸುಂದರವಾಗಿ ಕಟ್ಟಿಕೊಟ್ಟ ಕೃತಿ ‘ಗಿರಿಕನ್ನಿಕೆ’. ಅದುಇತರೆಲೇಖಕರುಸೃಷ್ಠಿಸಿದಲೋಕಕ್ಕಿಂತಭಿನ್ನವಾದಕಥಾಲೋಕ, ಭಾಷೆಮತ್ತುಪಾತ್ರಗಳು, ‘ಇದು ತಂಬ್ರಾಕಳಬಿತ್ತು’ ಎಂಬಅರ್ಥವಾಗದಗಿರಿಜನರಭಾಷೆ. ದೇಚು ಮತ್ತು  ಕೊಳಂಬಮುಂತಾದಪಾತ್ರಗಳು, ಕಾಫಿತೋಟದಲ್ಲಿ ಕೆಲಸಮಾಡುವಕೂಲಿಕಾರರು, ಅವರ ಶೋಷಣೆ, ಮೇಸ್ತ್ರಿಗಳ ದೌರ್ಜನ್ಯ, ಕೂಲಿಕಾರರ ಅಸಹಾಯಕತೆ, ತಮ್ಮದೆರೀತಿಯ ಪ್ರತಿಭಟನೆ, ಬಡತನದ ನಡುವೆಯ ಅರಳುವ ಪ್ರೇಮದ ಈ ಕೃತಿ ನಮ್ಮನ್ನು ಹಿಡಿದಿಡುವುದುಅವರಜೀವನದ ಭಾಗವಾಗಿರುವ ವಿವಿಧರೀತಿಯ ಬೇಟೆಯ ವಿವರಗಳಿಂದ.
2
ಗಿರಿಕನ್ನಿಕೆ ಮುಂದೆಡಾ.ರಾಜ್ಕುಮಾರ್ ಮತ್ತುಜಯಮಾಲ ನಾಯಕ ನಾಯಕಿಯಾಗಿಗಿರಿಕನ್ಯೆ ಚಲನಚಿತ್ರವಾಗಿ ಮೂಡಿಬಂತು. ಕೃತಿಯನ್ನು ನಾಯಕಪ್ರಧಾನವಾಗಿಸಿ, ರಾಜ್ಕುಮಾರ್ರವರ ಇಮೇಜಿಗೆ ತಕ್ಕಂತೆ ಬದಲಾವಣೆ ಮಾಡಿದರಿಂದಲೋ ಏನೋ ಹತ್ತರಲ್ಲಿ ಹನ್ನೊಂದುಎಂಬಂಥ ಸಿನಿಮಾವಾಯಿತು. ಇವತ್ತಿಗೂ ಆ ಚಿತ್ರ ನೆನಪಾಗುವುದು ಚಿತ್ರದ ಮಧುರವಾದ ಹಾಡುಗಳಿಂದ.ಏನೆಂದು ನಾ ಹೇಳಲಿ ಮಾನವನ ಆಸೆಗೆ ಕೊನೆಯಲ್ಲಿ, ನಗುನಗುತಾ ನೀ ಬರುವೆ, ಥೈಥೈಥೈ ಬಂಗಾರಿ ಹಾಗೂ ಕೂಡಿ ಬಾಳೋಣ ಹಾಡುಗಳು ರಸಿಕರ ಮನದಲ್ಲಿ ಈಗಲೂ ಉಳಿದಿದೆ.
ಗಿರಿಕನ್ಯೆ ಬಿಡುಗಡೆಯ ನಾಲ್ಕೈದು ವರ್ಷಗಳ ಆಸುಪಾಸಿನಲ್ಲಿ ಬಿಡುಗಡೆಯಾದ ಭಾರತೀಸುತರ ಕಾದಂಬರಿಯನ್ನಾದರಿಸಿದ ಮೂರು ಚಿತ್ರಗಳು ಕನ್ನಡ ಚಲನಚಿತ್ರರಂಗದಇತಿಹಾಸದಲ್ಲಿ ಮೈಲುಗಲ್ಲಾದ ಚಿತ್ರಗಳಾಗಿ ಉಳಿದುಕೊಂಡಿದೆ. ಅವುಗಳೆಂದರೆ 1973ರಲ್ಲಿ ಬಿಡುಗಡೆಯಾದ ಎಡಕಲ್ಲುಗುಡ್ಡದ ಮೇಲೆ, 1979ರಲ್ಲಿ ಬಿಡುಗಡೆಯಾದ ಹುಲಿಯ ಹಾಲಿನ ಮೇವು, 1977 ರಲ್ಲಿ ಬಿಡುಗಡೆಗೊಂಡ ಬಯಲುದಾರಿ.
‘ಎಡಕಲ್ಲುಗುಡ್ಡದಮೇಲೆ’ನನ್ನ ಅಕ್ಕ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲೆಂದು ಅರಕಲಗೂಡಿನ ಪರೀಕ್ಷಾ ಕೇಂದ್ರಕ್ಕೆ ಹೋದಾಗ ಪರೀಕ್ಷೆಯ ಕೊನೆಯದಿನ ಬಾಲದಂತೆ ಹಿಂಬಾಲಿಸಿ ನೋಡಿದ ಚಿತ್ರ. ಚಿತ್ರದ ಆರಂಭದಲ್ಲಿಯೆ’ಮನುಷ್ಯನಿಗೆಹೊರಗಿನಶತ್ರುಗಳುಶತ್ರುಗಳೇಅಲ್ಲ. ಒಳಗಿನಶತ್ರುಗಳೇನಿಜವಾದಶತ್ರುಗಳು. ಅವುಗಳೇ ಕಾಮ, ಕ್ರೋಧ, ಮದ, ಮತ್ಸರ, ಲೋಭಮತ್ತಮೋಹ’ ಎಂದು ವಿವರಿಸುತ್ತಾ ಅದನ್ನು ಎದೆನಡುಗಿಸುವ ರೀತಿಯಲ್ಲಿ ಚೂರಿ ಹಿಡಿದ ಶಿಲ್ಪವೊಂದು ವೃತ್ತಾಕಾರದಲ್ಲಿಸುತ್ತುತ್ತಿದ್ದದೃಶ್ಯದ ಹಿನ್ನೆಲೆಯಲ್ಲಿಚಿತ್ರದತಾರಾಗಣ ಮತ್ತುತಂತ್ರಜ್ಞರ ಹೆಸರು ಮೂಡುತ್ತಿದ್ದದ್ದು ನೆನಪಿನಲ್ಲಿ ಉಳಿದಿದೆ.
3
ಎಡಕಲ್ಲುಗುಡ್ಡದ ಮೇಲೆ ಕಾದಂಬರಿಯ ಮೇಲೆ ಡಿ.ಹೆಚ್. ಲಾರೆನ್ಸ್’ಲೇಡಿಚಾಟರ್ಲಿಸ್ಲವ್’ನದಟ್ಟಪ್ರಭಾವವಿದೆ.ಇಟಲಿಯಲೇಖಕನ ಈ ಕೃತಿ 1960 ರವರಗೆ ಇಂಗ್ಲೇಂಡಿನಲ್ಲಿ ನಿಷೇದಿತವಾಗಿದ್ದಕೃತಿ.ಯುದ್ಧದಲ್ಲಿ ಸೆಲ್ ದಾಳಿಗೆ ತುತ್ತಾಗಿ ಪಾಶ್ರ್ವವಾಯು ಪೀಡಿತನಾಗಿ ನಿಷ್ಕ್ರಿಯನಾಗಿಊರು ಸೇರುವಚಾಟರ್ಲಿಯ ಹದಿಹರೆಯದ ಪತ್ನಿಕಾನಿರಿಡ್, ತನ್ನತೋಟಕ್ಕೆ ಕೆಲಸಗಾರನಾಗಿ ಬರುವಯುವಕನ ನಡೆಗೆಆಕಷರ್ಿತವಾಗುವ ಮೂಲಕಥೆಇಲ್ಲಿಯೂ ಮುಂದುವರಿದಿದೆ.ಕೊಡಗಿನ ಪರಿಸರಕ್ಕೆತಕ್ಕಂಥೆ ಒಗ್ಗಿಸಿ ನಂಜುಂಡ, ದೇವಕಿ, ಮಾದವಿಯ ಪಾತ್ರಗಳ ಮೂಲಕ ಕೊಂಚ ಬೋಲ್ಡ್ಎನ್ನಿಸುವಕಾದಂಬರಿಯನ್ನು ಚಿತ್ರವಾಗಿಸಿದವರು ಪುಟ್ಟಣ್ಣಕಣಗಾಲ್. ಆ ಕಾರಣಕ್ಕೆ ಈ ಚಿತ್ರ ವಿಚಿತ್ರಕುತೂಹಲಕ್ಕೇ ಒಳಗಾಗಿತ್ತು.ಆ ಚಿತ್ರದ’ವಿರಹನೂರುನೂರುತರಹ’ಗೀತೆಸಾರ್ವಕಾಲಿಕ ಕ್ಲಾಸಿಕ್ಗೀತೆಯಾಗಿಯೂ ಉಳಿದುಕೊಂಡಿದೆ.
೪
ಇನ್ನೂ’ಹುಲಿಯಹುಲಿಯಮೇವು’ ಪಂಜೆ ಮಂಗೇಶ ರಾಯರ ಗೀತೆಯ ಸಾಲುಗಳನ್ನೇ ಶೀರ್ಷಿಕೆಗಳನ್ನಾಗಿಸಿಕೊಂಡ ಕಾದಂಬರಿ. ನಾನು ಎಸ್.ಎಸ್.ಎಲ್.ಸಿ ಪರೀಕ್ಷೆಯ ಪ್ರವೇಶಪತ್ರವನ್ನು ಪಡೆದುಬಂದು ನೋಡಿದರೆ ಟೇಬಲ್ಮೇಲೆ ಕಂಡದ್ದು ಈ ನಾನೂರುಪುಟಕ್ಕೂಮಿಕ್ಕಿದಕಾದಂಬರಿಅದರಆಕರ್ಷಣೆ ಪಠ್ಯಪುಸ್ತಕವನ್ನೆ ಪಕ್ಕಕ್ಕಿರಿಸುವಂತೆ ಮಾಡಿತು. ನಾಳೆ ನಾಳೆ ಎನ್ನುತ್ತಾಓದುವ ದಿನಗಳನ್ನು ಮುಂದೂಡುತ್ತಾ ಬಂದು ಕೊನೆಗೆ ಈ ಕಾದಂಬರಿಯದೆಸೆಯಿಂದಾಗಿ ಆ ಓದುವ ದಿನಗಳು ಮತ್ತೂಎರಡು ದಿನ ಮುಂದೂಡಲ್ಪಟ್ಟವು. ಸಿರಿಬಾಯಿ ದೊಡ್ಡ ವೀರಪ್ಪನ ಬಳಿ ಸೈನ್ಯದಲ್ಲಿಕಾವಲುಭಟನಾಗಿದ್ದಚಂಗುಮಣಿಯ ಸಾಹಸ, ಹೋರಾಟ, ಪ್ರೇಮ, ಬಲಿದಾನಗಳ ಕುರಿತಾದಕಾದಂಬರಿ ಮುಂದೆರಾಜ್ಕುಮಾರ್, ಜಯಪ್ರದ, ಜಯಚಿತ್ರ ಮುಂತಾಗಿ ಬಹುತಾರಾಗಣದಚಿತ್ರವಾಯಿತು. ಆ ಕಾಲಕ್ಕೆ ಅದುಅಧಿಕವೆಚ್ಚದಚಿತ್ರವೂಆಗಿದ್ದು ಪ್ರೇಮ ಸಾಹಸ ಹದವಾಗಿ ಬೆರೆತಚಿತ್ರವೂ ಹೌದು.
5
ಅವರ ಮತ್ತೊಂದು ಕಾದಂಬರಿ’ಬಯಲುದಾರಿ’ದೊರೆ-ಭಗವಾನ್ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ. ಎಸ್ಟೇಟ್ಮಾಲೀಕನ ಮಗಳು ಚಂದ್ರ ಹುಡುಗಾಟಿಕೆಯ ಸ್ವಭಾವದಗೋಪಿಯನ್ನುಪ್ರೇಮಿಸಿಮುಂದೆಸೇನೆಗೆ ತೆರಳಿಅಲ್ಲಿವಿಮಾನಪಘಾತದಲ್ಲಿಅಸುನೀಗಿದೆನೆಂದು ಅವನನೆನಪಿನಲ್ಲಿಜೀವ ಸವೆಸಲು ಯತ್ನಿಸುವಚಿತ್ರ. ಆ ಚಿತ್ರದ ಬಾನಲ್ಲೂ ನೀನೆ ಭುವಿಯಲ್ಲೂ ನೀನೆ, ನಲ್ಲೆಎಲ್ಲಿರುವೆ, ಕನಸಲೂ ನೀನೆ ಮನಸಲೂ ನೀನೆ ಮುಂತಾದ ಗೀತೆಗಳಿಂದ ಇವತ್ತಿಗೂಜನಮಾನಸದಲ್ಲಿ ಉಳಿದಿರುವ ಚಿತ್ರ.
ಅವರಇನ್ನೊಂದು ಪ್ರಮುಖಕಾದಂಬರಿ ‘ಗಿಳಿಯುಪಂಜರದೊಳಿಲ್ಲ’ ಕರ್ನಾಟಕಸಾಹಿತ್ಯಅಕಾಡೆಮಿ ಪ್ರಶಸ್ತಿ ವಿಜೇತಕೃತಿ. ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ನಮಗಿದ್ದ ಪಠ್ಯದಲ್ಲಿ ಮನೆಯ ಮುಂದೆ ಬಂದ ಆನೆಗೆ ಮಕ್ಕಳು ಸೇಂದ್ರ ಬಾಳೆಹಣ್ಣಿನ್ನು ತಿನ್ನಿಸಿ ಸಂಭ್ರಮಿಸುವ ಸನ್ನಿವೇಶ ಈ ಕೃತಿಯ ಭಾಗವಾಗಿತ್ತು. ವಿಷಮ ಸಂಬಂಧಗಳ ಕುರಿತಾದ ಈ ಕಾದಂಬರಿ ಭಾರತೀಸುತ ಇತರೆ ಕಾದಂಬರಿಗಳಂತೆ ದುಃಖಾಂತ್ಯದಕಾದಂಬರಿಆಗಿದೆ. ಪ್ರಗತಿಶೀಲ ಕಾದಂಬರಿಕಾರರಾದ ಅ.ನ.ಕೃ ತ.ರಾ.ಸುರವರ ಬಹುತೇಕ ಕಥೆಗಳಂತೆ ಭಾರತೀಸುತರ ಕಾದಂಬರಿಗಳು ವಿಷಾದಾಂತ್ಯದ ಕಾದಂಬರಿಗಳೇ ಅಗಿದೆ.
ಹುಲಿಬೋನಿನಂಥಕೃತಿಯಲ್ಲಿದುರಂತವನ್ನುಒತ್ತಾಯಪೂರ್ವಕವಾಗಿತಂದಂತೆ ಭಾಸವಾಗುತ್ತದೆ. ವೈನಾಡಿನಕಾಪಿತೋಟದಲ್ಲಿದುಡಿಯುವ ಪಣಿಯ ಮುಂತಾದಗಿರಿಜನರ ಬದುಕಿನಜೊತೆಗೆಅವರ ಭಾಷೆಯನ್ನುಇಲ್ಲಿ ಬಳಸಿಕೊಳ್ಳಲಾಗಿದೆ.ಅದರ ಸ್ಯಾಂಪಲ್ ಹೀಗಿದೆ.
‘ಈಗ ಮಳೆಹನಿಗಳು ಕಡಿಯತೊಡಗಿದ್ದುವು.ಪಣಿಚ್ಚಿಗಳುಪುರೆಗಳಿಗೆಹೊರಟರು.ಪಣಿಯರು ಆಗಲೇ ಅಲಬಿಚೆಟ್ಟಿಯನಪೂಡಿಯಕ್ಕೆ ತೆರಳಿದ್ದರು.ಹೊರಗೆ ಕಳದಲ್ಲಿ ಕರುಪ್ಪ ಮಾತ್ರ ನಿಂತಿದ್ದ.ಅರಕಮೊರವಕೈಯಲ್ಲಿನ ಹಿಡಿಪರೆಯನ್ನು ಮೂಲೆಯಲ್ಲಿರಿಸಿ, ನಾನಿನ್ನುಹೋಗಲೇ?ಎಂದುಕಾರ್ಯಕರನಅನುಮತಿಯನ್ನು ಕೇಳಿದ’.
ಇವತ್ತಿಗೆಕೂತು ಆ ಕೃಗಳನ್ನು ನೆನಪಿಸಿಕೊಳ್ಳುತ್ತಿರುವುದು ಅದರಕೃತಿಕಾರ ಭಾರತೀಸುತರಿಗೆಇದುಜನ್ಮ ಶತಮಾನೋತ್ಸವ ವರ್ಷ. ಮಡಿಕೇರಿ ಬಳಿಯ ಬಿಳಿಗಿರಿಯಲ್ಲಿ 1915 ಮೇ 15ರಂದು ಶಾನುಭೋಗರಾಮಯ್ಯ ಹಾಗೂ ಸುಬ್ಬಮ್ಮ ದಂಪತಿಗಳಿಗೆ ಜನಿಸಿದ ಇವರ ನಿಜನಾಮಧೇಯಎಸ್.ಎಲ್. ನಾರಾಯಣರಾವ್. ಕೇರಳದ ವಯನಾಡ್ ಪ್ರಾಂತ್ಯದತೋಟದಲ್ಲಿ ನಾಲ್ಕೈದು ವರ್ಷಗಳ ಕಾಲ ಕಾರಣಿಕರಾಗಿ ಸೇವೆ ಸಲ್ಲಿಸಿದ ನಂತರಕನ್ನಡ ವಿದ್ವಾನ್ ಪರೀಕ್ಷೆ ಬರೆದುತೇರ್ಗಡೆ ಹೊಂದಿ ಮಡಿಕೇರಿ ಸಮೀಪದರಾಮಸ್ವಾಮಿಕಣಿವೆಯಲ್ಲಿ ಶಿಕ್ಷಕವೃತ್ತಿ ಪ್ರಾರಂಭಿಸಿ 1973ರಲ್ಲಿ ನಿವೃತ್ತಿಯನ್ನು ಹೊಂದಿದರು. ಇವರು 32 ಕಾದಂಬರಿಗಳನ್ನು, 8 ಕಥಾಸಂಕಲನ, 19 ಮಕ್ಕಳ ಸಾಹಿತ್ಯ ಹಾಗೂ ಇತರೆ ಕೃತಿಗಳನ್ನು ರಚಿಸಿದ್ದಾರೆ.ಕುವೆಂಪುರವರ ಕೃತಿಗಳಲ್ಲಿ ಮಲೆನಾಡು, ತ.ರಾ.ಸುರವರ ಕಾದಂಬರಿಗಳಲ್ಲಿ ಚಿತ್ರದುರ್ಗದ ಕೋಟೆಕೊತ್ತಲಗಳು ಕನ್ನಡಿಗರ ಮನದಾಳದಲ್ಲಿ ಮೂಡುವಂತೆ ಚಿತ್ರಿತವಾದಂತೆ ಕೊಡಗಿನ ರಮ್ಯಪರಿಸರಜನಜೀವನ, ಭಾಷೆ, ಸಂಸ್ಕೃತಿಯನ್ನುತಮ್ಮ ಕೃತಿಗಳ ಮೂಲಕ ಕಟ್ಟಿಕೊಟ್ಟವರುಅವರು.ಮನುಷ್ಯನ ವಿಷಯ ಲೋಲುಪತೆಯನ್ನು ಭ್ರಷ್ಟತೆಯನ್ನುಓದುಗರು ಬೆಚ್ಚಿಬೀಳುವಂತೆ ಅನಾವರಣಗೊಳಿಸಿದಅವರುಅವರೆದುರು ಮುಗ್ಧರುಎದುರಿಸುವ ಸಂಕಷ್ಟವನ್ನು ವಿವರಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಅವರುಗಾಂಧೀಜಿ, ಲೆನಿನ್ರ ವಿಚಾರಗಳಿಂದ ಪ್ರಭಾವಿತರಾಗಿದ್ದರು. ಸ್ವಾತಂತ್ರ ಸಂಗ್ರಾಮದಲ್ಲಿಕೊಡವರತ್ಯಾಗ ಬಲಿದಾನದಕುರಿತಾಗಿ ಮಾದಯ್ಯ ಮತ್ತು ವೇಣುಇವರಕೊನೆಯದಿನಗಳು, ಇಳಿದು ಬಾ ತಾಯಿ ಮುಂತಾದಕೃತಿಯಲ್ಲಿಕಟ್ಟಿಕೊಟ್ಟಿದ್ದಾರೆ.ಕೊನೆಯವರೆವಿಗೂ ಹಿಡಿದಿಡುವಅವರಕಥನತಂತ್ರ, ಪ್ರಗತಿಶೀಲರಲ್ಲಿ ಕೊಂಚ ಹೆಚ್ಚು ಎನಿಸುವ ಶೃಂಗಾರ ಸನ್ನಿವೇಶಗಳು, ಅವರ ಕಾದಂಬರಿಗಳ ಯಶಸ್ಸಿಗೆ ಪೂರಕವಾಗಿ ನಿಂತಿದೆಎನ್ನಬಹುದು.
ಆದರೆ ಉಳಿದ ಲೇಖಕರಿಗೆ ಸಿಕ್ಕ ಮಾನ್ಯತೆಇವರಿಗೆ ಸಿಕ್ಕಿದೆಯೆ ಎಂದರೆಉತ್ತರ ನಿರಾಶೆಯೆ.ಅವರಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಮಡಿಕೇರಿಜಿಲ್ಲಾ ಕ.ಸಾ.ಪ ಒಂದು ಸಣ್ಣ ಸಮಾರಂಭ ಆಯೋಜಿಸಿರುವುದನ್ನು ಬಿಟ್ಟರೆ ಉಳಿದೆಡೆ ಅವರ ನೆನಪಿನ ಕಾರ್ಯಕ್ರಮವಾದ್ದದ್ದು ನನ್ನಅರಿವಿಗೆ ಬಂದಿಲ್ಲ. ಅ.ಭಾ ಸಾಹಿತ್ಯ ಸಮ್ಮೇಳನವಿರಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದು ಕಾಣೆ.ಕಳೆದ ವರ್ಷ ಮಡಿಕೇರಿಯಲ್ಲಿ ನಡೆದ 80ನೇ ಅಖಿಲಭಾರತ ಸಾಹಿತ್ಯ ಸಮ್ಮೇಳನದ ಪ್ರಧಾನವೇದಿಕೆಗೆ ಭಾರತಿಸುತರ ಹೆಸರನ್ನುಇಟ್ಟು ಸ್ಮರಿಸಲಾಗಿದೆ.ಆದರೆ ಸಮ್ಮೇಳನ್ಲದಲಿ ತಡಕಾಡಿದರೂಅವರ ಕೃತಿಗಳು ಕಂಡುಬರಲಿಲ್ಲ.
ಕೊಡಗಿನ ಪರಿಸರದದಟ್ಟ ನಿರೂಪಣೆ, ಕೊಡಗಿನ ಸಮಾಜದಅದರಲ್ಲೂ ತಳಸಮುದಾಯಗಳ ಬದುಕಿನ ಹೋರಾಟದ ಸೂಕ್ಷ್ಮಚಿತ್ರಣಕನ್ನಡಕಥಾಲೋಕಕ್ಕೆ ಭಾರತೀಸುತಕೊಟ್ಟಕೊಡ್ಡಕೊಡುಗೆ.ತಮ್ಮರಮ್ಯಕುತೂಹಲಕಾರಿಕಥನತಂತ್ರದ ಮೂಲಕ ನನ್ನ ನಿನ್ನೆಗಳನ್ನಾಳಿದ ಭಾರತೀಸುತರಿಗೆ ನನ್ನ ನುಡಿನಮನ.

‍ಲೇಖಕರು G

August 18, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. shashikala

    your article reminded me of our childhood reading. Bharathisutha added a different flavour to the kannada fiction. True that he has not been recognised to the extent re really deserved. I am not able to see his books i the bookshops too
    Shashikala

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: