ಬೇಲೂರು ರಘುನಂದನ್ ಕಾಲಂ : ರೇಖಾರಾಣಿ ಕಂಡಂತೆ ಪುಟ್ಟಮಲ್ಲಿ

Umasiri-1411
ಉಮಾಶ್ರೀ ಎಂದರೆ ಒಬ್ಬ ತಾಯಿ, ಒಬ್ಬ ಸಾಕವ್ವ, ಪುಟ್ಟಮಲ್ಲಿ ಅನ್ನೋ ಅಜ್ಜಿ , ಸಮರ್ಥ ನಟಿ ಕೊನೆಗೆ ಆಕೆ  ಕಲರ್ ಅಂತಲೇ ನನಗೆ ಅನ್ನಿಸಿದೆ. ಅಂದು ಮಾಧ್ಯಮಗಳು ಉಮಾಶ್ರೀ ಎಂದರೆ ಕೀಳುದರ್ಜೆಯ ನಟಿ, ನಾಲ್ಕನೇ ದರ್ಜೆಯ ನಟಿ, ಸೆಕ್ಸ್ ಬಾಂಬ್, ದ್ವಂದ್ವಾರ್ಥ ಮಾತಾಡುವ ನಟಿ, ಮುಗ್ಧತೆಯಲ್ಲಿ ಪೋಲಿ ಮಾತಾಡುವ ನಟಿ ಹೀಗೆ ಅನೇಕ ರೀತಿಗಳಲ್ಲಿ ಉಮಾಶ್ರೀ ಅವರ ಅಭಿನಯವನ್ನು ಕುರಿತು ಮಾತಾಡಿದ ದಿನಗಳು ಬೇಕಾದಷ್ಟಿವೆ. ಉಮಾಶ್ರೀ ಅವರ ಸಿನೆಮಾ ಯಾನ ಆರಂಭಿಕ ಘಟ್ಟದಲ್ಲಿನ ಡಬ್ಬಲ್ ಮೀನಿಂಗ್ ಪಾತ್ರಗಲ್ಲಿ ಹೆಚ್ಚು ಅಭಿನಯಿಸುತ್ತಿದ್ದರು. ಅಭಿನಯಿಸುತ್ತಿದ್ದರೂ ಅನ್ನುವುದಕ್ಕಿಂತ ಉಮಾಶ್ರೀ ಅವರಿಗೆ ಇಂಥದೇ ಪಾತ್ರಗಳನ್ನು ಕೊಡುತ್ತಿದ್ದರು.ಅದನ್ನು ಅವರು ಅಭಿನಯಿಸುತ್ತಿದ್ದರು. ಹೀಗೆ ಪತ್ರಿಕೋಧ್ಯಮದಲ್ಲಿ ಮತ್ತು ಸಿನೆಮಾ ಕ್ಷೇತ್ರದಲ್ಲಿ ಇಪ್ಪತೈದು ವರ್ಷಗಳಿಗೂ ಹೆಚ್ಚು  ಅನುಭವ ಉಳ್ಳ ರೇಖಾರಾಣಿ ಅವರು ಉಮಾಶ್ರೀಯವರ ಬಗೆಗೆ ತಮ್ಮ ಗ್ರಹಿಕೆಗಳನ್ನು ಗಂಟನ್ನು ಬಿಚ್ಚುತ್ತಾ ಹೋಗುತ್ತಾ ಮತ್ತೆ ಮೂರು ದಶಕಗಳ ಹಿಂದಕ್ಕೆ ಹೋಗುತ್ತಾರೆ.
ಯಾವುದೇ ಒಬ್ಬ ಕಲಾವಿದ ಅಥವಾ ಕಲಾವಿದೆಗೆ ಎರಡು ರೀತಿಯ ಆಯಾಮಗಳಿರುತ್ತವೆ. ಮೊದಲನೆಯದ್ದು ಅಭಿನಯದ ಮೂಲಕ ತಲುಪುವ ನಟನೆಯ ಆಯಾಮ ಮತ್ತೊಂದು ಪ್ರೇಕ್ಷಕನಿಂದ ತೆರೆದು ಕೊಳ್ಳುವ ಆಯಾಮ.  ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಉಮಾಶ್ರೀ ಅವರ ಬಗೆಗೆ ಮಾತಾಡಲು ಶುರು ಮಾಡಿದರೆ ಬಹುಶಃ ಒಳ್ಳೆಯದು. ಯಾಕೆಂದರೆ ನಟನೆ ಮತ್ತು ಪ್ರೇಕ್ಷಕ ಎರಡರ ನಡುವೆ ಉಮಾಶ್ರೀ ಅವರು ತಮ್ಮ ಅಭಿವ್ಯಕ್ತಿಯನ್ನು ಸಮರ್ಥವಾಗಿ ಬ್ಯಾಲೆನ್ಸ್ ಮಾಡಿದ್ದಾರೆ ಆನ್ನುವುದು ನನ್ನ ಅಭಿಪ್ರಾಯ. ಇದಕ್ಕೆ ಪೂರಕವಾಗಿ ಒಂದು ಉದಾಹರಣೆಯನ್ನು ಕೊಡುತ್ತೇನೆ “ ಸಮುದ್ರ ತೀರದಲ್ಲಿ ಖತ್ರೀನ ಖೈಫ್ ಟೂ ಪೀಸ್ ಇದ್ದಾರೆ ಅನ್ನುವ ಸುದ್ಧಿ ಹರಡುತ್ತದೆ. ಹೀಗಿದ್ದಾಗ ಸಮುದ್ರ ತೀರದಲ್ಲಿ ಟೂ ಪೀಸ್ ನಲ್ಲಿ ಇರದೇ ಮತ್ತೆ ಹೇಗೆ ಇರಲು ಸಾಧ್ಯ. ಆಮೇಲೆ ಇನ್ನೂ ಅನೇಕರು ಅದೇ ಸಮುದ್ರ ತೀರದಲ್ಲಿ ಟೂ ಪೀಸ್ ನಲ್ಲಿಯೇ ಇರುತ್ತಾರೆ. ಅವರನ್ನೆಲ್ಲಾ ಹೊರತು ಪಡಿಸಿ ಖತ್ರೀನ ಇದ್ದದ್ದು ಯಾಕೆ ಮುಖ್ಯ ಆಗುತ್ತದೆ. ಗಂಡಸರಂತೂ ಟೂ ಪೀಸ್ ಇರಲಿ ಅವರು ಸಿಂಗಲ್ ಪೀಸ್ ನಲ್ಲಿಯೇ ಇರುತ್ತಾರೆ” ಹೀಗೆಲ್ಲಾ ಇದ್ದಾಗ ನೋಡುವ ದೃಷ್ಟಿಕೋನಗಳು ಎಂಥವು ಎಂಬುದು ನಮ್ಮ ಅರಿವಿಗೆ ಬರಬೇಕಾಗುತ್ತದೆ. ಈ ಉದಾಹರಣೆಯನ್ನು ನಾನು ಉಮಾಶ್ರೀ ಅವರ ವಿಷಯಕ್ಕೆ ಯಾಕೆ ಹೇಳುತ್ತಿದ್ದೇನೆ ಅಂದ್ರೆ ಸಿನೆಮಾ ಅನ್ನುವ ಸಮುದ್ರ ಉಮಾಶ್ರೀ ಅವರನ್ನು ಡಬ್ಬಲ್ ಮೀನಿಂಗ್ ಅಥವಾ ಬೇರೆ ರೀತಿಯ ಪಾತ್ರಗಳನು ಮಾಡಿಸಿರಬಹುದು. ಅದನ್ನು ನಾವು ಪ್ರೇಕ್ಷಕರು ನೋಡಿದ್ದೇವೆ. ವಿಮರ್ಶೆ ಮಾಡಿದ್ದೇವೆ ಏನೆಲ್ಲಾ ಹೇಳಿ ಟೀಕಿಸಬೇಕೋ ಹಾಗೆಲ್ಲಾ ಟೀಕಿಸಿದ್ದೇವೆ. ಪ್ರೇಕ್ಷಕರು ಕೇಳಿದರು ಅದಕ್ಕೆ ನಿರ್ಮಾತೃಗಳು ಪಾತ್ರ ಮಾಡಿಸಿದರು. ಇಲ್ಲಿ ಉಮಾಶ್ರೀ ಅವರದ್ದು ಜೀವನದ ಪ್ರೆಶ್ನೆ ಆಗಿದ್ದರಿಂದ ಆಯ್ಕೆಗಳು ಅವರ ಬಳಿ ಇರಲಿಲ್ಲ. ಹೀಗಿದ್ದಾಗ ನಾವು ಅವರನ್ನು ಕೀಳು ದರ್ಜೆಯ ನಟಿ ಅದು ಇದೂ ಎಂದು ಹೇಳಲು ಯಾವ ಹಕ್ಕೂ ಇಲ್ಲ. ಯಾಕೆಂದರೆ ಇಲ್ಲಿ ಉಮಾಶ್ರೀ ಅವರ ಪಾಲು ತುಂಬಾ ಕಡಿಮೆ.
196870_1032225331128_3504_n
ಇನ್ನೂ ಮುಂದುವರೆದು ಒಂದು ಸಿನೆಮಾ ನಿರ್ಮಾಣ ಆಗುವ ಹಿನ್ನೆಲೆಯಲ್ಲಿ ಸಾಕಷ್ಟು ಜನ ಕೆಲಸ ಮಾಡಿರುತ್ತಾರೆ. ಒಬ್ಬ ಪ್ರೊಡ್ಯೂಸರ್ ಏನು ಕೇಳುತ್ತಾನೆ ಅದನ್ನು ನಿರ್ದೇಶಕ ತೆರೆಯ ಮೇಲೆ ತರುತ್ತಾನೆ. ಇಲ್ಲಿ ಸಂಭಾಷಣೆ ಬರೆಯುವವರು ಮೇಕಪ್ ಮಾಡುವರು , ಕ್ಯಾಮೆರಾ ಹೀಗೆ ಬೇರೆ ಬೇರೆ ವಿಭಾಗಗಳು ಸಿನೆಮಾವನ್ನು ಗೆಲ್ಲಿಸಲು ಅಥವಾ ಸಿನೆಮಾ ತಯಾರಿಗೆ ಬೇರೆ ಬೇರೆ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುತ್ತದೆ. ಇವರೆಲ್ಲರ ಆಶಯದಂತೆ ಒಬ್ಬ ಕಲಾವಿದ ಅಭಿನಯಿಸಬೇಕು. ಇಲ್ಲಿ ಕಲಾವಿದನ ಸ್ವಾತಂತ್ರಕ್ಕೆ ಜಾಗ ಇರುವುದಿಲ್ಲ. ಇದ್ದರೂ ತೀರಾ ಕಮ್ಮಿ. ತನ್ನ ಅಳತೆಯೊಳಗೆ ನಿರ್ದೇಶಕ ಏನು ಕೆಳುತ್ತಾನೋ ಅದನ್ನು ಒಬ್ಬ ನಟಿಯಾಗಿ ಉಮಾಶ್ರೀ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಮಾತು ಮೇಕಪ್ ಆಂಗಿಕ ಡೈಲಾಗ್ ಇವು ಎಲ್ಲವುಗಳ ಜೊತೆ ಉಮಶ್ರೀ ಒಬ್ಬರೇ ಇರುವುದಿಲ್ಲ ಒಂದು ಟೀಮ್ ಇರುತ್ತೆ. ಆ ಟೀಮ್ ಇದನ್ನೆಲ್ಲಾ ಮಾಡಿಸಿರುತ್ತೆ. ಆ ಟೀಮ್ ಮಾಡಿಸದ್ದನ್ನು ಒಬ್ಬ ಕಲಾವಿದೆಯಾಗಿ ಉಮಾಶ್ರೀ ಮಾಡಿರುತ್ತಾರೆ. ಇಷ್ಟಕ್ಕೂ ಟೀಮಿನದ್ದು ತಪ್ಪು ಅನ್ನುವುದು ನನ್ನ ವಾದವಲ್ಲ. ಕಾಲದ ಅಗತ್ಯಕ್ಕೆ ತಕ್ಕಂತೆ ಸಿಎಮಾಗಳು ನಿರ್ಮಾಣ ಆಗುತ್ತಿರುತ್ತವೆ. ಹಾಗಾಗಿ ಉಮಾಶ್ರೀ ಒಬ್ಬ ಕೀಳು ದರ್ಜೆಯ ನಟಿ ಎಂದು ಹೇಳುವಾಗ, ಡಬ್ಬಲ್ ಮೀನಿಂಗ್ ನಟಿ ಎಂದು ಹೇಳುವಾಗ ಖಂಡಿತವಾಗಿಯೂ ಅಂದು ನಮ್ಮ ಸಾಂಸ್ಕೃತಿಕ ಲೋಕಕ್ಕೆ ಎಚ್ಚರ ಇರಬೇಕಾಗಿತ್ತು.
ಸುಮಾರು 6000 ಕ್ಕೂ ಹೆಚ್ಚಿನ ನಾಟಕಗಳಲ್ಲಿ ಅಭಿನಯಸಿದ ಉಮಾಶ್ರೀ ಅವರು ಸುಮಾರು 400 ಕ್ಕೂ ಹೆಚ್ಚಿನ ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ನಾಟಕದಲ್ಲಿ ಒಡಲಾಳ, ಶರ್ಮಿಷ್ಠೆ, ಸಂಸಾರದಲ್ಲಿ ಸರಿಗಮ ಹೀಗೆ ಕೆಲವೇ ಪಾತ್ರಗಳು ಜನ ಮನಸಿನಲ್ಲಿ ಉಳಿದವು. ಉಮಾಶ್ರೀ ಅವರು ಯಾವಾಗ ಅನುಭವದ ಮೂಲಕ ಸಿನೆಮಾ ಲೋಕದಲ್ಲಿ ಗಟ್ಟಿಯಾದ ನೆಲೆ ನಿಂತು ಬಿಟ್ಟರು. ಸಿನೆಮಾ ಅನ್ನುವಂಥಹ ಪರಿಣಾಮಕಾರಿ ಮಾಧ್ಯಮದಲ್ಲಿ ಉಮಾಶ್ರೀ ಅವರ ಎಂಟ್ರೀ ಬಹುಬೇಗ ಜನರ ಬಳಿ ಕರೆದುಕೊಂಡು ಹೋಯಿತು. ಉಮಾಶ್ರೀ ಅವರ ಅಭಿನಯ ಜನರಿಗೆ ಇಷ್ಟ  ಆಯಿತು. ಎಷ್ಟೇ ಪ್ರತಿಭೆ ಮತ್ತು ಸಾಮರ್ಥ್ಯ ಇದ್ದರೂ ಮತ್ತೆ ಮತ್ತೆ ಆ ರೀತಿಯ ಪಾತ್ರಗಳನ್ನೇ ಮಾಡಿಸಿದರು. ಉಮಾಶ್ರೀ ಅವರು ಅಭಿನಯಿಸಿದರು ಅಷ್ಟೇ.
ತಮಿಳಿನಲ್ಲಿ ಕೋ.ವೈ. ಸರಳ ಅನ್ನುವ ಒಬ್ಬ ಕಲಾವಿದೆ ಇದ್ದಾರೆ. ಆಕೆಯೂ ಕೂಡ ಒಬ್ಬ ಅದ್ಭುತ ನಟಿ. ಸರಳ ಕೂಡ ನಗೆ ಚಟಾಕಿ, ಬಜಾರಿ ಮತ್ತು ಡಬ್ಬಲ್ ಮೀನಿಂಗ್ ಸಂಭಾಷಣೆಯ ಸಿನೆಮಾಗಳನ್ನು ಹೆಚ್ಚು ತಮಿಳಿನಲ್ಲಿ ಮಾಡಿದವರು. ಆಕೆಯಲ್ಲಿನ ಪ್ರತಿಭೆಯನ್ನು ಕಮಲ ಹಾಸನ್ ಅವರು ಗುರುತಿಸಿ ‘ಮಹಾನದಿ’ ಅನ್ನುವ ಸಿನೆಮಾದಲ್ಲಿ ತಮ್ಮ ಹೆಂಡತಿಯ ಪಾತ್ರವನ್ನು ಕೊಟ್ಟರು. ಅಲ್ಲಿಯ ಜನರು ಅದನ್ನು ಒಪ್ಪಿಕೊಂಡರು. ಆ ಸಿನೆಮಾ ಮತ್ತು ಅದರಲ್ಲಿನ ಅಭಿನಯ ಎಲ್ಲವೂ ತಮಿಳಿನ ಜನರ ಮನಸಿನಲ್ಲಿ ಗಟ್ಟಿಯಾಗಿ ನೆಲೆ ನಿಂತಿತು. ಕೋ. ವೈ. ಸರಳ ಅವರ ಒಳಗೆ ತಾನು ಮಾಡುತ್ತಿದ್ದ ಪಾತ್ರಕ್ಕಿಂತ ಅತ್ಯುತ್ತಮ  ಕಲಾವಿದೆ ಅವರ ಒಳಗೆ ಇದ್ದಳು. ಅವಕಾಶ ಸಿಗುವ ತನಕ ಕಾಯುತ್ತಿದ್ದರು ಅಷ್ಟೇ. ಹಾಗೆಯೇ ಉಮಾಶ್ರೀ ಅವರ ವಿಷಯದಲ್ಲಿ ಪುಟ್ನಂಜ ಸಿನೆಮಾದಲ್ಲಿ ಅಭಿನಯಿಸುವ ತನಕ ಅದೇ ಡಬ್ಬಲ್ ಮೀನಿಂಗ್ ಡೈಲಾಗ್ ಹೊಡೆಯುವ ಉಮಾಶ್ರೀಯ ಒಳಗೇ ಇದ್ದ ಪುಟ್ಟಮಲ್ಲಿ ಜಗತ್ತಿಗೆ ಕಾಣಲೇ ಇಲ್ಲ. ಭಾರತದ ಬಹಳ ಮುಖ್ಯ ನಟಿಯರಾದ ಮನೋರಮಾ, ಕೋ.ವೈ. ಸರಳ, ಶಬಾನ ಆಜ್ಮಿ ಹಾಗೂ ನಮ್ಮ ಕನ್ನಡದ ಮಣ್ಣಿನ ಉಮಾಶ್ರೀ ಈ ಎಲ್ಲಾ ಕಲಾವಿದೆಯರು ಬದುಕಿನ ಅನಿವಾರ್ಯತೆಗಾಗಿ ಮೊದಲೆಲ್ಲಾ ಯಾವುದೇ ಆಯ್ಕೆಗಳಿಲ್ಲದೇ ದೊರಕಿದ ಎಲ್ಲ ಪಾತ್ರಗಳನ್ನು ಮಾಡಲೇ ಬೇಕಾಯಿತು. ಮನೋರಮಾ ಅವರನ್ನು ನಾನು ಸಂದರ್ಶಿಸಿದ ಸಮಯದಲ್ಲಿ ಅವರು ಹೇಳಿಕೊಂಡ ತಮ್ಮ ಕಥೆಗೂ ಉಮಾಶ್ರೀ ಅವರ ಬದುಕಿನ ಕಥೆಗೂ ಅಂಥಾ ದೊಡ್ಡ ವ್ಯತ್ಯಾಸವೇನಿಲ್ಲ. ಕಾಲ  ಮತ್ತು ಪ್ರದೇಶ ಬೇರೆ ಆಗಬಹುದು ಅಷ್ಟೇ. ಕೋ. ವೈ ಬುದುಕೂ ಕೂಡ ಹೀಗೆ ಅನ್ನಿಸುತ್ತೆ. ಒಟ್ಟು ಇವರೆಲ್ಲಾ ತಮ್ಮ ಒಳಗಿನ ಕಲೆಯನ್ನು ಬದುಕಿನ ಅಗತ್ಯಕ್ಕೆ ದುಡಿಸಿಕೊಂಡವರು.
ಉಮಾಶ್ರೀ ಅವರ ಮೊದ ಮೊದಲಿನ ಪಾತ್ರಗಳನ್ನ ನೋಡಿದರೆ ನಾವು ನಗುತ್ತೇವೆ ಹೊರತು ಅಸಹ್ಯಪಟ್ಟುಕೊಳ್ಳುವುದಿಲ್ಲ. ಅವರು ಅಭಿನಯಿಸುವಾಗ ಮುಗ್ಧತೆ ಕಾಣುತ್ತದೆ ಹೊರತು ಅಶ್ಲೀಲತೆ ಕಾಣುವುದಿಲ್ಲ. ಉಮಾಶ್ರೀ ಅವರ ಅಭಿನಯದಲ್ಲಿ ಅಶ್ಲೀಲತೆ ಕಂಡಿದ್ದರೆ ಬಹುಶಃ ಪಡವಲಕಾಯಿ ಸಂಭಾಷಣೆ ಇನ್ನಿತರ ಡಬ್ಬಲ್ ಮೀನಿಂಗ್ ಮಾತುಗಳಲ್ಲಿ ನಾವು ನಗುತ್ತಿರಲಿಲ್ಲ. ಅದರಲ್ಲೂ ಎನ್. ಎಸ್. ರಾವ್ ಮತ್ತು ಉಮಾಶ್ರೀ ಅವರ ಜೋಡಿಯಂಥೂ ಸೂಪರ್ ಡೂಪರ್ ಹಿಟ್. ಎಷ್ಟೋ ಸಿನೆಮಾಗಳಲ್ಲಿ ಇವರಿಬ್ಬರ ಕಾಲ್ ಶೀಟ್ ತೆಗೆದುಕೊಂಡು ಅಮೇಲೆ ಹೀರೋ ಹೀರೋಯಿನ್ ಡೇಟ್ಸ್ ತೆಗೆದುಕೊಂಡಿದ್ದಕ್ಕೆ ಸಾಕಷ್ಟು ಉದಾಹರಣಗಳು ಉಂಟು. ಉಮಾಶ್ರೀ ಮತ್ತು ಎನ್.ಎಸ್. ರಾವ್ ಅವರ ಕಾಂಬಿನೇಶನ್ ಕನ್ನಡದಲ್ಲಿ ತುಂಬಾ ಹಿಟ್ ಆಗೋಗಿತ್ತು. ಇಬ್ಬರ ಕೆಮಿಸ್ಟ್ರಿ ಕೂಡ ಮ್ಯಾಚ್ ಆಗಿತ್ತು. ಒಬ್ಬರಿಗೊಬ್ಬರು ಸವಾಲು ಹಾಕಿಕೊಂಡೇ ಅಭಿನಯಿಸುತ್ತಿದ್ದರು. ರಾವ್ ಅವರು ಒಂದು ಸಲ ಕಿಲ ಕಿಲ ಅಯ್ಯಯ್ಯಪ್ಪೋ ಅಂದ್ರೆ ಅದನ್ನು ಸಮರ್ಥವಾಗಿ ಉಮಾಶ್ರೀ ಎದುರುಗೊಂಡು ತೆರೆಯ ಮೇಲೆ ತನ್ನನ್ನು ಗಟ್ಟಿಯಾಗಿ ರೆಜಿಸ್ಟರ್ ಮಾಡಿಕೊಳ್ಳಲು ಸಫಲರಾಗಿದ್ದಾರೆ. ಪಡ್ಡೆ ಹುಡುಗರು, ಯುವಕರು ಎನ್.ಎಸ್. ರಾವ್ ಮತ್ತು ಉಮಾಶ್ರೀ ಅವರ ಅಭಿನಯ ನೋಡೋಕೆ ಅಂತಲೇ ಸಿನೆಮಾಗೆ ಹೋಗುತ್ತಿದ್ದರು. ಒಂದು ಹಂತದಲ್ಲಿ ಕನ್ನಡ ಸಿನೆಮಾ ರಂಗದಲ್ಲಿ ಇವರಿಬ್ಬರ ಜೋಡಿ ಒಳ್ಳೆಯ ಯಶಸ್ಸು ಪಡೆದ ಸಂದರ್ಭದಲ್ಲೇ ಇದ್ದಕ್ಕಿದ್ದಂತೆ ಏನ್.ಎಸ್. ರಾವ್ ಅವರು ತೀರಿಕೊಂಡರು. ಮಾಧ್ಯಮಗಳು ಉಮಾಶ್ರೀ ಕಲಾವಿಧವೆ ಆದರು. ಇನ್ನು ಮುಂದೆ ಸಿನೆಮಾ ರಂಗದಲ್ಲಿ ಜಾಗವೇ ಇಲ್ಲ ಅನ್ನುವಂತೆ ಬಿಂಬಿಸಿ ಬಿಟ್ಟಿತು. ಈ ಎಲ್ಲಾ ಘಟನೆಗಳು ಉಮಾಶ್ರೀ ಅವರಿಗೂ ನೋವು ತಂದಿತ್ತು ಕೂಡ. ಆಕೆ ಒಬ್ಬ ಕಲಾವಿದೆಯಾಗಿ ನಟನೆ ಮಾಡಿರುತ್ತಾರೆ. ಜವಾಬ್ದಾರಿಯುತ ಮಾಧ್ಯಮಗಳು ಉಮಾಶ್ರೀ ಅವರ ಬಗೆಗೆ ವೈಯಕ್ತಿಕ ನಿಂದನೆ ಮಾಡಿದ್ದು ಇಂದಿಗೂ ಮರೆಯಲು ಆಗುವುದಿಲ್ಲ. ಆದ್ರೆ ಇದನ್ನೆಲ್ಲಾ ಎಂದಿಗೂ ಉಮಾಶ್ರೀ ಅವರು ಮನಸಿನಲ್ಲಿ ಇಟ್ಟುಕೊಂಡು ಮುಂದಿನ ಬದುಕಿನ ಬಾಗಿಲುಗಳನ್ನು ಮುಚ್ಚಿಕೊಂಡಿಲ್ಲ. ಅದಕ್ಕಾಗಿಯೇ ಹೇಳುವುದು ಆಕೆ ಒಬ್ಬ ಸಾಧಕಿ ಎಂದು.
08_umashree
ಅಂದು ಉಮಾಶ್ರೀ ಅವರನ್ನು ಸಮಾಜ ಮತ್ತು ಮಾಧ್ಯಮ ಹೇಗೆ ನೋಡುತ್ತಿತ್ತು ಅನ್ನುವುದನ್ನು ಇನ್ನೆರಡು ಘಟನೆಗಳು ನೆನಾಪಾಗುತ್ತಿವೆ. ಅವೇನೆಂದರೆ ಒಮ್ಮೆ ಗಾಂಧೀ ಬಜಾರಿನಲ್ಲಿ ಶೂಟಿಂಗ್ ನಡೆಯುತ್ತಿತ್ತು. ನಾನೂ ಅಲ್ಲಿಗೆ ಹೋಗಿದ್ದೆ. ಅಂದು ‘ನನಗೆ ಮೂಡ್ ಬಂದು ಬಿಟ್ಟಿದೆ’ ಎಂದು ಉಮಾಶ್ರೀ ಅವರು ಹೇಳುವ ಮತ್ತು ಅಭಿನಯಿಸುವ ಶಾಟ್ ಚಿತ್ರೀಕರಣ ಆಗುತ್ತಿತ್ತು. ಉಮಾಶ್ರೀ ಅವರು ‘ನನಗೆ ಮೂಡ ಬಂದುಬಿಟ್ಟಿದೆ’ ಅನ್ನುವ ಡೈಲಾಗ್ ಮುಖದಲ್ಲಿ ತೋರಿಸುತ್ತೇನೆ ಅಂದ್ರು. ಅದಕ್ಕೆ ಡೈರೆಕ್ಟರ್ ಇಲ್ಲಮ್ಮ ಕೈ ಮೈ ಎಲ್ಲಾ ಆಂಗಿಕವಾಗಿ ಬಳಸಿಕೊಂಡು ಅಭಿನಯಿಸಬೇಕು ಎಂದು ತಾಕೀತು ಮಾಡಿದ್ರು. ಅದಕ್ಕೆ ಉಮಾಶ್ರೀ ಅವರು ‘ಹಾಗೇ ಮಾಡೋಕೆ ಸ್ವಲ್ಪ ಕಷ್ಟ ಆಗುತ್ತೆ ಸರ್.ಅದು ಬೇರೆ ಅರ್ಥ ಬರುತ್ತೆ’ ಅಂದ್ರು. ಹಾಗೇ ಮಾಡಬೇಕು ಎಂದು ಡೈರೆಕ್ಟರ್ ಪಟ್ಟು ಹಿಡಿದರು. ಕೊನೆಗೆ ಉಮಾಶ್ರೀ ಅವರು ಹಾಗೆಯೇ ಅಭಿನಯಿಸಿದರು. ತನ್ನ ಎಚ್ಚರ ಗೊತ್ತಿದ್ದ ಕಲಾವಿದೆ ಆಕೆ. ಅಭಿನಯಕ್ಕೆ ಇರಬಹುದಾದ ಬಹುದೊಡ್ಡ ಆಳ ಅಗಲಗಳು ಆಕೆಗೆ ಗೊತ್ತಿತ್ತು. ಆದರೆ ಮತ್ತೂ ಅನಿವಾರ್ಯಕ್ಕೆ ಕಟ್ಟು ಬಿದ್ದು ಅಭಿನಯಿಸಿದರು.
ಮತ್ತೊಂದು ಘಟನೆ ನನಗೆ ಚೆನ್ನಾಗಿ ನನೆಪಿದೆ. ಶೂಟಿಂಗ್ ಸ್ಪಾಟ್ ನಲ್ಲಿ ಮೇಕಪ್ ಮಾಡುವಾಗ ಮೇಕಪ್ ಮ್ಯಾನ್ ಗೆ ಕಷ್ಟ ಆಗುವ ರೀತಿಯಲ್ಲಿ ಸಹ ಕಲಾವಿದರು ತಲೆ ಅಲ್ಲಾಡಿಸುತ್ತಿದ್ದರು. ಇದನ್ನು ನೋಡಿದ ಉಮಾಶ್ರೀ ಅವರು ಸ್ವಲ ಸರಿಯಾಗಿ ‘ತಲೆ ಹಿಡೀರಿ’ ಅಂದ್ರು. ಇದೇನಾಯಿತು ಅಂದ್ರೆ ಉಮಾಶ್ರೀ ಅವರು ತಲೆ ಹಿಡೀರಿ ಅಂದ್ರು ಅನ್ನುವ ಸುದ್ಧಿ ಎಲ್ಲ ಪತ್ರಿಕೆಗಳಲ್ಲಿ ಬಂತು. ಪಾಂಡಿತ್ಯ ಪ್ರದರ್ಶನ ಎಂಬಂತೆ ಪತ್ರಕರ್ತರು ಈ ಸುದ್ಧಿಯನ್ನು ಬರೆದರೂ. ಇಲ್ಲಿ ಉಮಾಶ್ರೀ ಅವರು ಹೇಳಿದ್ದು ಯಾವ ರೀತಿಯಲ್ಲಿ ತಪ್ಪಿದೆ. ಮೇಕಪ್ ಮಾಡಲು ತೊಂದ್ರೆ ಆಗುತ್ತೆ ಅನ್ನುವ ದೃಷ್ಟಿಯಿಂದ ಗಟ್ಟಿಯಾಗಿ ತಲೆ ಹಹೇಳಿದ ಮಾತು ತಪ್ಪಾಗಿ ಬಿಂಬಿಸಲಾಯಿತು.
ಉಮಾಶ್ರೀ ಅವರಿಗೆ ಸಂಭಾಷಣೆ ಬರೆಯೋದು ಅಂದ್ರೆ ಲಡ್ಡು ತಿಂದಹಾಗೆ. ಆಕೆ ಎಷ್ಟೇ ಉದ್ದ ಸಂಭಾಷಣೆ ಬರೆದರೂ ನಿರರ್ಗಳವಾಗಿ ಅಭಿನಯಿಸಿ ಬಿಡುತ್ತಾರೆ. ಕನ್ನಡದಲ್ಲಿ ಈ ತರದ ಇನ್ನೊಬ್ಬ ಕಲಾವಿದೆಯನ್ನು ನಾನು ನೋಡಿಲ್ಲ. ಸಿನೆಮಾದಲ್ಲಿ ಮಂಡಿ ತನಕ ಸೀರೆ ಉಡುವ ಸಂದರ್ಭದಲ್ಲೂ ಅವರು ಪೆಟ್ಟಿಕೊಟ್ ಹಾಕಿ ಸೀರೆ ಉಡುತ್ತಿದ್ದರು. ಸೆರಗು ಒಂಚೂರು ಜಾರಿಸಿದ್ದಕ್ಕೆ ಅಶ್ಲೀಲ. ಕೀಳು ದರ್ಜೆ ಅಂತೆಲ್ಲಾ ಮಾತಾಡಿತು ಈ ಲೋಕ. ನನ್ನ ಸಿನೆಮಾದಲ್ಲಿ ನಾಯಕ ನಟಿಗೆ ಬಟ್ಟೆ ಕೊಳ್ಳುವ ಸಲುವಾಗಿ ಜಯನಗರ ಶೋಆಫ್ ಗೆ ಕರೆದುಕೊಂಡು ಹೋಗಿದ್ದೆ. ಆಲ್ಲಿ ಆಕೆ ಸಿಕ್ಸ್ ಇಂಚ್ ಎಂದು ಸ್ಕರ್ಟ್ ಹುಡುಕುತ್ತಿದ್ದಳು. ಅದಕ್ಕೆ ನಾ ಅವಳಿಗೆ ನನ್ನ ಸಿನೆಮಾಗೆ ಈ ರೀತಿ ಉಡುಪು ಅಗತ್ಯ ಇಲ್ಲ ಅಂದೆ. ಮಾರನೇ ದಿನ ಆ ನಟಿಯ ತಾಯಿ ಫೋನ್ ಮಾಡಿ ನೀವು ಕೊಡಿಸಲಿಲ್ಲ ಅಂದ್ರೆ ಅಡ್ಡಿಯಿಲ್ಲ. ಸಿಕ್ಸ್ ಇಂಚ್ ಸ್ಕರ್ಟ್ ನಾವೇ ತರುತ್ತೇವೆ ಅಂದ್ರು. ಹೀಗಿದ್ದಾಗ ಉಮಾಶ್ರೀ ಅವರ ವಿಷಯದಲ್ಲಿ ಶೀಲ ಮತ್ತು ಅಶ್ಲೀಲದ ಮಾತುಗಳನ್ನು ಹೇಗೆ ಕಟ್ಟಿಕೊಟ್ಟಿದ್ದಾರೆ ಅನ್ನುವುದನ್ನು ನೆನಪಿಸಿಕೊಂಡರೆ ಆತಂಕ ಮತ್ತು ಬೇಸರ ಎರಡೂ ಆಗುತ್ತದೆ.
‘ನೋಯಲಿಲ್ಲ ನಲುಗಲಿಲ್ಲ ಮಡಿಲ ತುಂಬಾ ತುಂಬಿಕೊಂಡೆ. ತೂಗಲಿಲ್ಲ ಹಾಲುಣಿಸಲಿಲ್ಲ ಜೀವ ತುಂಬಿ ತಾಯಿಯಾದೆ’ ಅನ್ನುವ ಈ ಪದ್ಯದ ಸಾಲುಗಳಂತೆ ಉಮಾಶ್ರೀ ಅವರನ್ನು ಅವರದ್ದೇ ಬದುಕು ಈ ಎತ್ತರಕ್ಕೆ ಕರೆದುಕೊಂಡು ಬಂದಿದೆ. ಸಿನಿಮಾ ಲೋಕದಲ್ಲಿ ಉಮಾಶ್ರೀ ಈ ಎತ್ತರಕ್ಕೆ ಬೆಳೆದಿರುವುದು ಅವರ ಪ್ರತಿಭೆ ಮತ್ತು ಸ್ವ ಶ್ರಮದಿಂದಲೇ. ಒಟ್ಟಾರೆ ಆಕೆ ಒಬ್ಬ ಸಮರ್ಥ ನಟಿ ಮತ್ತು ಸಾಧಕಿ. ಉಮಾಶ್ರೀ ಅವರಿಗೆ ಪರ್ಯಾಯವಾಗಿ ಇನ್ನೊಬ್ಬ ಉಮಾಶ್ರೀ ಕನ್ನಡಕ್ಕೆ ಇನ್ನೂ ದಕ್ಕಿಲ್ಲ. ದಕ್ಕಲು ಸಾಧ್ಯವೂ ಇಲ್ಲ.
 

‍ಲೇಖಕರು avadhi-sandhyarani

August 23, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

13 ಪ್ರತಿಕ್ರಿಯೆಗಳು

  1. ಡಾ.ಶಿವಾನಂದ ಕುಬಸದ

    ಉತ್ತಮ ಕಲಾವಿದೆಯ ಬಗೆಗೆ, ಕಲಾವಿದೆಗೆ ತನ್ನ ಪಾತ್ರಗಳ ಆಯ್ಕೆಯಲ್ಲಿನ ಅಸಹಾಯಕತೆಯ ಬಗೆಗೆ, ಅಂಥ ಅಸಯಾಕತೆಯಲ್ಲೂ ಉಮಾಶ್ರೀಯವರು ಮಿಂಚಿದ ಬಗೆಗೆ ಚೆನ್ನಾಗಿ ನಿರೂಪಿಸಿದ್ದೀರಿ.

    ಪ್ರತಿಕ್ರಿಯೆ
  2. Shrishail

    Cinemagalalli daanshoor radavaru hehe daanigalalla ,haageye avashyakate uruvante patra madida kalavidarannu vayaktikavaagi teekisuvudu alpa tilucalike ya lakshana……idu Ella inthaha kalaavidara alalu.tumba olleya lekhana meshtre.

    ಪ್ರತಿಕ್ರಿಯೆ
  3. paramnesh R

    ಆಗ ಅಭಿನಯವನ್ನ ಅನುಭವ ಅಂತಿದ್ರು.. ಆದ್ರೆ ಈಗ ಅನುಭವವೇ ಅಭಿನಯವಾಗಿದೆ..!

    ಪ್ರತಿಕ್ರಿಯೆ
  4. ಮಮತ

    ಕಲಾವಿದೆಯನ್ನಾಗಿ ಉಮಾಶ್ರೀಯವರನ್ನ ಸಿನೆ ಜಗತ್ತು ನಡೆಸಿಕೊಂಡ ಬಗೆಗೆ ಬಹು ಬೇಸರ ಮತ್ತು ನೋವು. ಹೆಣ್ಣು ಮಗಳನ್ನು ಆ ಲೋಕ ಕಂಡ ಬಗೆಯೂ ಇಲ್ಲಿ ವ್ಯಕ್ತವಾಗಿದೆ. ಉಮಾಶ್ರೀ ಯವರನ್ನು ಸಮರ್ಥವಾಗಿ ತೊಡಗಿಸಿಕೊಂಡು ಸಾಂಸ್ಕೃತಿಕವಾಗಿ ಬಹು ದೊಡ್ಡ ಅಡಿಪಾಯ ಹಾಕಬಹುದಾಗಿದ್ದ, ಇತಿಹಾಸ ನಿರ್ಮಿಸಬಹುದಾಗಿದ್ದ ಆಕೆಯಲ್ಲಿದ್ದ ಕಲಾವಿದೆಯನ್ನು ದೊಡ್ಡ ಆಲವನ್ನಾಗಿ ಮಾಡಬಹುದಾಗಿದ್ದ ಸಂದರ್ಭದಲ್ಲಿ ” ತೆರೆ ಮೇಲೆ ಉಪಯೋಗಿಸಿಕೊಂಡ” ವ್ಯವಸ್ಥೆ ಬಗ್ಗೆ ಹೇಸಿಗೆ. ಅವರ ಪರಿಸ್ಥಿತಿ ಮೈ ಜುಂ ಎನಿಸಿತು

    ಪ್ರತಿಕ್ರಿಯೆ
  5. Dheeraj jain

    ನೋಯಲಿಲ್ಲ ನಲುಗಲಿಲ್ಲ ಮಡಿಲ ತುಂಬಾ ತುಂಬಿಕೊಂಡೆ. ತೂಗಲಿಲ್ಲ ಹಾಲುಣಿಸಲಿಲ್ಲ ಜೀವ ತುಂಬಿ ತಾಯಿಯಾದೆ…………..jeevanada aneka majulugalannu dati thammade ada chpapannu moddisiruva kalarathna namma umasri amma…rekah madam really well narrated…nija prapanchakke inthaha vyakthigala naijatheyannu thorisuvudhu sandarbhakke sariyagide..ekendare eegina kalvidharigy evellavu kuda ondu pataviddanthe..thank u rekah madam and hrudayasparshi abinandanegalu belur raghunandan sir hagu bhavathumbida baraha….nanna nechina ammanige mathomme namaskara..shubhavagali

    ಪ್ರತಿಕ್ರಿಯೆ
  6. RUDRESHA

    Ondhu besara mudidhu shooting spot li director heg heltharo adhanu obba kalavidhe yagi manasilladhidaru,, innobara kushigagi,, innobaranu naguvigagi natisutharala
    Umashri amma ge nanna vandhenagalu…

    ಪ್ರತಿಕ್ರಿಯೆ
  7. Anonymous

    Umaashree endare thattane nenapaguvudu Diggajaru cinemaada ammana pathra.. aa cinema nodidagalella eegaloo kooda ammana abhinayakke kanneeraguttene… yaava pathra kottaroo aa pathrada parakaaya maadi abhinayisuvudideyalla.. adakke umashree ammane saati..!!!
    Raghu sir neevu thumbaa great…!!! Hats off u sir

    ಪ್ರತಿಕ್ರಿಯೆ
  8. dinesh maneer

    ನಿಮ್ಮ ದೃಷ್ಟಿಕೋನ ತುಂಬಾ ನೇರವಾಗಿದೆ. ಒಬ್ಬ ಕಲಾಕಾರನ/ಳ ಸಾಮರ್ಥ್ಯವನ್ನು ಹೇಗೆ ಅಲೆಯಬೇಕು ಎಂದು ತುಂಬಾ ಚೆನ್ನಾಗಿ ಬರೆದಿದ್ದೀರಿ .
    ದಿನೇಶ್ ಮಾನೀರ್

    ಪ್ರತಿಕ್ರಿಯೆ
  9. ನಿಮ್ಮ ಅಭಿಮಾನಿ

    ರಘು ಅವರೆ ನಿಮಗೆ ಹ್ರುತ್ಪೂರ್ವಕ ಅಭಿನಂದನೆಗಳು
    ನಿಮ್ಮ ಬರಹ ಸರಳ ಹಾಗೂ ಸುಕ್ಷ್ಮತೆಗೆ ಒಳಗಾಗಿದೆ
    ಉಮಾಶ್ರೀ, ಒಬ್ಬ ಬಡ ಕುಟುಂಬದಿಂದ ಬಂದಂತಹ ಮಹಿಳೆ ಅನೇಕ ಕಸರತ್ತುಗಳನ್ನು ಮಾಡಬೇಕಾಗಿ ಬಂತು ಅವರ ನಿಜ ಜೀವನದಲ್ಲಿ ಹಾಗೂ ಚಿತ್ರಿಕೊದ್ಯಮದಲ್ಲಿ, ಸಿನಿಮಾ ಡೈರೆಕ್ಟರ್ ಹೇಳಿದ ಹಾಗೆ ಅಭಿನಯ ಮಾಡಿರುತ್ತಾರೆ ಸನ್ನಿವೇಶಕ್ಕೆ ತಕ್ಕಹಾಗೆ ಅಭಿನಯಿಸಿದ್ದಾರೆ ಹೊರತು ಅಲ್ಲಿ ಅಶ್ಲೀಲತೆ ಎನ್ನುವ ಎರಡನೇಯ ಮಾತೆ ಇಲ್ಲ, ಇಂದು ಸಿನೆಮಾಗಳಲ್ಲಿ ಹಿರೋಯಿನ್ ದೇಹ ಪ್ರದರ್ಶನ ಮಾಡಲ್ವೇ? ಅಂದು ಮಾಡುತ್ತಿರಲಿಲವೇ? ಜಯಮಾಲಿನಿ, ಜೋತಿ ಲಕ್ಷ್ಮಿ, ಹೆಲೆನ್,ಅನುರಾಧ…. ಇಂತಹ ಮಹಾನ ಅಭಿನೇತ್ರಿಯರು ಕೂಡ ತಮ್ಮ ನ್ರತ್ಯದ ಮೂಲಕ ಜನರ ಮನ ರಂಜಿಸುತ್ತಿರಲಿಲ್ವೇ? ಹಿರೋಯಿನ್ ನಟಿಸಿದರೆ ಅದು “ಅತ್ಯತಮ ನಟನೆ
    ಎನುವ ಬಿರಿದು” ಪೋಶಕಿ ನಟಿ ಅಭಿನಯಿಸಿದರೆ ಅದು ಅಶ್ಲೀಲತೆ,ಜನರು ನೋ ಡುತ್ತಿದ್ದಾರೆ ಅಂದಿನಿಂದ ಇಂದಿನವರೆಗೂ, ಅದೇ ಕಣ್ಣುಗಳಿಂದ ,ಜನ ಎಂದೂ ಹಾಗೂ ಎಲ್ಲೂ ಮಾತನಾಡಲಿಲ್ಲ ಉಮಾಶ್ರೀ ಅವರ ಬಗೆ, ಜನರು ಮಾತ್ರ ಡೈಲಾಗ್/ಅಭಿನಯಕ್ಕೆ ಪ್ರಸಂಶೆ ನೀಡುತ್ತಾ ಬಂದಿರುತ್ತಾರೆ, ದ್ವಂದ್ವ/ ತಾರತ್ಮ್ಯ ಇರುವುದು ಚಿತ್ರಿಕೊದ್ಯಮ ಹಾಗೂ ಪತ್ರಿಕೊದ್ಯಮದಲ್ಲಿ….
    ಸಿನೆಮಾ ತಂಡ ಹಿರೋಯಿನ್ ಬಗ್ಗೆ ಅಪಾರ ಕಾಳಜಿ ವಹಿಸಿ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವುದು, ಅವರಿಗೆ ಬೇಕಾದಷ್ಟು ಸಂಭಾವನೆ ನೀಡಿ ಪಿಕ್-ಡ್ರಾಪ್ ಮಾಡುವುದು, ಮನೆವರೆಗೂ ಕಾರ ಅಥವ ಸಂದರ್ಭ ಬಂದರೆ ಏರ್ ಟಿಕೆಟ್ ಫ್ರೀ ಬುಕ್ ಮಾಡುತ್ತಾರೆ ಇನ್ನೂ ಪೋಷಕಿ ನಟಿಯರು? ಅವರನ್ನು ಏಕ ವಚನಧಲ್ಲಿ ಮಾತನಾಡಿಸುವಧು, ಏನೇ ಹೋಗೆ ಬಾರೆ ಅನ್ನುವಧು, ಇಧನ್ನೇ ಪತ್ರಿಕೆ ಯವರು ಬೇರೆ ರೀತಿಯಲ್ಲಿ ಬರೆಯುವುಧು
    ಎದು ನೆರ ತಾರತಮ್ಯ
    ಇನ್ನಾಧರು ಉಮಾಶ್ರೀ ಇವರ ಬಗ್ಗೆ ಅವರು ನಟಿಸಿರುವ ಚಿತ್ರಗಳನ್ನು ಮಹಿಳ ಪ್ರಧಾನ ಧ್ರುಷ್ತಿಕೋನ ವಿಚಾರವಿರಲಿ ಹಾಗೂ ಅವರ ಅಭಿನಯವನ್ನು ಅಭಿನಯ ಅಂತಷ್ಟೇ ನೋಡಲಿ ಎನ್ನುವಧು ನನ್ನ ಆನಿಸಿಕೆ
    ಆ ದೇವಿ ಉಮಾಶ್ರಿ ಅವರಿಗೆ ಇನ್ನು ರಾಜಕೀಯ ಸಾಮರ್ಥ್ಯ ಕೊಡಲಿ ಹಾಗೂ ಚಿಥ್ರರಂಗಧಲ್ಲಿ ಇನ್ನು ಬೇರೆ ಯಾರು ಮಡಕೆ ಅಗಧೆ ಇರುವಂತಹ ಪತ್ರಗಳನ್ನು ಇವರು ನೈಜವಾಗಿ ಅಭಿನಯಿಸಲಿ ಎಂಧು ಹಾರೈಸುಥ್ಥೇನೆ
    ಇನ್ನು ರಘು ಅವರೆ ಈ ಚಿಕ್ಕ ಪ್ರಾಯಧಲ್ಲಿ ಅಧ್ಬುತ ಬರವಣಿಗೆ ನಿಮ್ಮಧು
    ನೀವು ಒಂಧು ಸಿನೆಮಾ ನಿರ್ಧೇಶನ ಯಾಕೆ ಮಾಡಬಾರದು?
    ನಿಮ್ಮ ಬರವಣಿಗೆ ನಿಮಗೆ ಒಂದು ವರವಾಗಲಿ ….
    ನಿಮ್ಮ ಅಭಿಮಾನಿ

    ಪ್ರತಿಕ್ರಿಯೆ
  10. Goutami Torvi

    Her tremendous acting cannot be matched and measured. One of the amazing actresses in the KFI. She carried herself very gracefully through perseverance, hard work and nobility.
    She has also involved herself in politics and proving her efficiency and working very hard to bring the downtrodden women into main stream through education and economic support.
    My wishes to Umashri Amma will always remain..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: