ಇಂದು ಅವಧಿಯಲ್ಲಿ...
ಮೂಕನಂತೆ ಹೊರಟವನಿಗೆ ಮಾತು ಕಲಿಸುವವರು ಸಿಕ್ಕಂತಾಗಿ…
ಮಂಜುನಾಥ್ ಲತಾ ನೆನ್ನೆ ಮಧ್ಯಾಹ್ನ ಹೀಗೆಯೇ ಆಯಿತು. ಪುಸ್ತಕಗಳ ವಿನ್ಯಾಸ ಕೆಲಸಕ್ಕೆಂದು ಬೆಂಗಳೂರಿಗೆ ಬಂದುಳಿದಿದ್ದ ನನಗೆ ಎರಡು ದಿನಗಳ 'ಬೆಂಗಳೂರು ಲಿಟರೇಚರ್ ಫೆಸ್ಟಿವಲ್' ಥರದ್ದೊಂದು ಇದೆಯೆಂಬುದು ಗೊತ್ತಿರಲಿಲ್ಲ. ನಾಗತಿಹಳ್ಳಿ ರಮೇಶಣ್ಣ 'ಬಾರೋ ಇಂಥವುಗಳನ್ನೂ ನೋಡಿ ತಿಳಿಯುವುದು ಇರುತ್ತದೆ' ಎಂದು ಕರೆದರು. ಅವರೊಂದಿಗೆ ನಾವು...
ಮರಗಿಡಗಳ ಸಹವಾಸ…
ರಹಮತ್ ತರೀಕೆರೆ ಜೆಎನ್‍ಯುನ ಇತಿಹಾಸ ಪ್ರಾಧ್ಯಾಪಕಿ ಪ್ರೊ. ಜಾನಕಿ ನಾಯರ್ ಒಮ್ಮೆ ನಮ್ಮ ಮನೆಗೆ ಬಂದರು. ಹಿತ್ತಲೊಳಗಿನ ದಿವಿಹಲಸನ್ನು ನೋಡಿದವರೇ ʼವಾ! ಕಾಟ್ಟ್ ಚಕ್ಕ! ರಹಮತ್, ನನಗಿದು ಬೇಕು’ ಎಂದರು-ಸೀತೆ ಮಾಯಾಜಿಂಕೆಗೆ ಆಸೆಪಟ್ಟಂತೆ. ಎಲೆಯ ಚಂದಕ್ಕೆ ಮಲೆನಾಡಿನಿಂದ ತಂದು ಹಾಕಿದ್ದ ಮರವಿದು. ಇದುವೊ ಹೆಮ್ಮರವಾಗಿ...
ಈ ಸಂತ ಕಬೀರ ಎಂಥ ಅದ್ಭುತ ದಾರ್ಶನಿಕ ಕವಿ!
ಬಿ ಎಂ ಹನೀಫ್ ನಿನ್ನೆ ರಾತ್ರಿ ಅಶೋಕ ಹೋಟೆಲ್ಲಿನ ಕೊಳದ ಪಕ್ಕದಲ್ಲಿ ಕುಳಿತು ಮೀರ್ ಮುಖ್ತಿಯಾರ್ ಅಲಿ ಮತ್ತು ತಂಡ ಕಬೀರನ ದೋಹಾಗಳನ್ನು ಹಾಡುತ್ತಿದ್ದರೆ ಒಂದು ಹಂತದಲ್ಲಿ ಪಳಕ್ಕೆಂದು ಕಣ್ಣೀರು ಚಿಮ್ಮಿತು. ಹೊತ್ತಿಕೊಂಡ ಕಾಡ್ಗಿಚ್ಚಿನಲ್ಲಿಧಗಧಗನೆ ಉರಿಯುತ್ತಿತ್ತು ಮರಪಕ್ಷಿಯೊಂದು ಉರಿಯುತ್ತಿದ್ದ ಮರವನ್ನೇ ನೋಡುತ್ತಿತ್ತುಮರ...
ಪಾರ್ವತಿ ಜಿ ಐತಾಳ್ ಅನುವಾದಿತ ಕಥೆ- ನೀಲಾಕಾಶ…
ಮೂಲ : ಪಿ ಸುರೇಂದ್ರನ್ ಕನ್ನಡಕ್ಕೆ : ಪಾರ್ವತಿ ಜಿಐತಾಳ್ ಹಚ್ಚ ಹಸುರಿನ ವಿಶಾಲವಾದ ಬಯಲುಗಳ ಮೂಲಕ ಪ್ರಯಾಣ. ಧಾನ್ಯಗಳಿಗೂ ಹೂಹಣ್ಣುಗಳಿಗೂ ಪ್ರಸಿದ್ಧವಾದ ಹಳ್ಳಿಗಳು ಒಂದೊಂದಾಗಿ ಹಿಂದೆ ಸರಿಯುತ್ತಿದ್ದವು. ಉಬ್ಬಸ ಬಿಡುತ್ತ ಸಾಗುವ ಉಗಿಬಂಡಿಯ ವೇಗ ಕಡಿಮೆಯಾಗಿತ್ತು. ಆ ಹಳ್ಳಿಗಳ ಪರಿಸರದಲ್ಲಿಯೇ ಸುತ್ತಾಡುತ್ತಿದೆಯೆಂದು ಮಹಾದೇವನಿಗೆ...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಕ್ಕಿ ನೆಲೆಯರಸಿ ನೀರ್ದಾಣಗಳಿಗೆ…
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಸಹನಾ ಹೆಗಡೆ ಅನುವಾದಿಸಿದ ಕಾದಂಬರಿ ‘1984’
ಸಹನಾ ಹೆಗಡೆ ಕೃತಿ : ‘1984’ಮೂಲ ಇಂಗ್ಲಿಷ್ : ಜಾರ್ಜ್ ಆರ್ವೆಲ್ಕನ್ನಡಕ್ಕೆ : ಸಹನಾ ಹೆಗಡೆಪ್ರಕಾಶನ : ಕುವೆಂಪು ಭಾಷಾ ಭಾರತಿ ಈ ಕೃತಿಯು ಈಗಾಗಲೇ ಕನ್ನಡಕ್ಕೆ ಅನುವಾದಿಸಲ್ಪಟ್ಟಿದೆಯೇ ಎನ್ನುವ ಬಗ್ಗೆ ನನ್ನ ಬಳಿ ಖಚಿತ ಮಾಹಿತಿಯಿಲ್ಲ. ಸಾಹಿತ್ಯಕ-ವೈಚಾರಿಕ ಬರಹಗಳ ಓದು, ಭಾಷಣ, ಚರ್ಚೆ, ಸಂವಾದಗಳಲ್ಲಿ ಮತ್ತೆ ಮತ್ತೆ...
Latest
Invite
ರಂಗ ಪ್ರಯೋಗದಲ್ಲಿ ನಾಳೆ ‘ಯಶೋಧರಾ’
ಯೂ ಟ್ಯೂಬ್ ನಲ್ಲೇಕೆ ನಾಟಕ ನೋಡೋದು. ಅವರ್ಯಾರೂ ನಟರಲ್ಲ. ಶಿರಸಿಯಲ್ಲಿ ಇರುವ ವೈದ್ಯರುಗಳು ವರ್ಷಕ್ಕೊಮ್ಮೆ ಒಂದು ನಾಟಕ ಆಡುತ್ತಾರೆ. ಅವರ ಜತೆ ಕೆಲ ಆಸಕ್ತ ಬೇರೆ ವೃತ್ತಿಯವರೂ ಸೇರುವುದುಂಟು. ಮಾಡೋದು ಒಂದೇ ಶೋ. ಒಂದು ತಿಂಗಳ ತಾಲೀಮು. ಆಸ್ಪತ್ರೆ, ಆಪರೇಷನ್ ಅಂತ ಕೆಲಸ ಮುಗಿಸಿ ರಾತ್ರಿ ರಿಹರ್ಸಲ್ ಗೆ ಸೇರುತ್ತಾರೆ. ಗಂಭೀರವಾಗಿ...
‘ಕೆಂಡದ ಬೆಳುದಿಂಗಳು’ ಕೃತಿ ಬಿಡುಗಡೆ
ಬಾ ಕವಿತಾ
ನಾದದ ನಗುವಾಗೆಂದು ಉಸುರುತ್ತಲೇ ಇತ್ತು
ನರೇಶ ಮಯ್ಯ ** ಬುದುಕ್ಕನೆದ್ದಿದ್ದೆ ಸರಿರಾತ್ರಿಯೆಂಬೋ ಚೋಜುಗದೊಂದು ಚಣದಲ್ಲಿಉಸುರುತಿತ್ತದುಇಂಚಿಂಚೂ'ಮಗುವಾಗುನಟರಾಜನೊಲಿವ ಜೋಳುಗೆಯಪ್ರಸಾದ...
ಕೊಲ್ಲುವವರ ಬಂದುಕಿಗೀಟು ನಿದ್ರೆ ಕೊಡು ಪ್ರಭುವೆ..
ವಿಶಾಲ್ ಮ್ಯಾಸರ್ ** ಈ ನಿಕಶಕ್ಕೊಳಪಟ್ಟ ನಿದ್ರೆ ಅದೆಲ್ಲೋ ಯಾವಾಗಲೋ ಬಂದು ಬಾಣ ಬಿಡುವ ಮುನ್ನ ಯಪ್ಪಾ ಅದು ಶತಮಾನದ ಸುಸ್ತು ಹೊತ್ತು ಗೊತ್ತೆಂಬುದಿಲ್ಲ...
ಪುಸ್ತಕದ ಪರಿಚಯ
Book Shelf
‘ಇವ ಲೆಬನಾನಿನವ’-ಜೀವಂತ ಪುಸ್ತಕದ ಜೀವಂತಿಕೆಯ ಪುಟಗಳು
ವೀರಣ್ಣ ಮಡಿವಾಳರ **‘ಹುಚ್ಚ ಒಬ್ಬ ನಿಜವಾದ ಸಂಗೀತಗಾರನೇ, ಆದರೆ ಆತ ನುಡಿಸುವ ವಾದ್ಯದ ಶೃತಿ ತಪ್ಪಿದೆಯಷ್ಟೇ’ ಇಂಥದೊಂದು ಅನನ್ಯ ಸಾಲನ್ನು ಸೃಜಿಸಿದ ಆತ್ಮದ ಸೌಂದರ್ಯ ಎಂಥದಿರಬಹುದು ಎಂದು ನಾನು ಕಳೆದ ಹದಿನೈದು ವರ್ಷಗಳಿಂದ ಹುಡುಕುತ್ತಲೇ ಇದ್ದೇನೆ. ಸಿಕ್ಕಷ್ಟೂ ಸಮೃದ್ಧಗೊಳ್ಳುತ್ತಿರುವ, ಓದಿದಷ್ಟೂ ಬಾಕಿ ಉಳಿಯುವ, ಹುಡುಕಿದಷ್ಟೂ...
ಗೋಪಾಲ ತ್ರಾಸಿ ಓದಿದ ‘ಕಡಲ ಕರೆಯ ಚಿತ್ರಗಳು’
ಅಕ್ಕರೆಯಿಂದ ಊರು ಸುತ್ತಾಡಿಸುವಂತಹ ಅನುಭೂತಿ ಗೋಪಾಲ ತ್ರಾಸಿ ‘ಚರಾ’ ಕಾವ್ಯನಾಮದಲ್ಲಿ ವಿದ್ವಾನ್ ರಾಮಚಂದ್ರ ಉಚ್ಚಿಲರು ಬರೆದ ತಮ್ಮೂರು ಸೋಮೇಶ್ವರ- ಉಚ್ಚಿಲ ಕರಾವಳಿಯ ಜನಜೀವನ ಸಾಂಸ್ಕ್ರತಿಕ ಚಿತ್ರಣವುಳ್ಳ ವಿಶಿಷ್ಟ ಪ್ರಬಂಧ ಕೃತಿಯಿದು. ಮೊದಲು ಮುದ್ರಣಗೊಂಡದ್ದು 1956 ರಲ್ಲಿ, ಕನ್ನಡ ನಾಡು ಮೈಸೂರು ರಾಜ್ಯವಾಗಿ...
ಎಸ್ ಬಿ ರವಿಕುಮಾರ್ ಓದಿದ ‘ಸೋಲಿಗ ಚಿತ್ರಗಳು’
ಡಾ ಎಸ್ ಬಿ ರವಿಕುಮಾರ್ ಹೆಚ್ಚಿನ ವಿದ್ಯಾವಂತರ ಗುರಿ ಉದ್ಯೋಗ ಪಡೆಯುವುದೇ ಆಗಿದೆ. ಅದರಲ್ಲೂ ಉಪನ್ಯಾಸಕರಂಥ ಬಿಳಿಕಾಲರಿನ ಉದ್ಯೋಗ ದೊಡ್ಡ ಪಟ್ಟಣದಲ್ಲಿ ದೊರೆತರಂತೂ ಜೀವನ ಸಾರ್ಥಕವಾಯಿತು ಎಂದು ಭಾವಿಸುವವರೇ ಹೆಚ್ಚು. ಆದರೆ ಇಲ್ಲೊಬ್ಬ ಮಹಾಶಯರಿದ್ದಾರೆ. ಮೈಸೂರಿನ ಪ್ರತಿಷ್ಟಿತ ಸುತ್ತೂರು ಕಾಲೇಜಿನಲ್ಲಿ...
ಖುಷಿ ಖುಷಿಯಾಗಿ ‘ಸೋನ ಪಾಪಡಿ’
ತಮ್ಮಣ್ಣ ಬೀಗಾರ ರಾಜಶೇಖರ ಕುಕ್ಕುಂದ ಸೋನ ಪಾಪಡಿ ಹಿಡಿದುಕೊಂಡು ನಗುತ್ತ ನಿಂತಿದ್ದಾರೆ. ಸೋನ ಪಾಪಡಿ ಅಂದಮೇಲೆ ಕೇಳಬೇಕೇ? ಮಕ್ಕಳು ಮುತ್ತಿಗೆ ಹಾಕಿ ಚಪ್ಪರಿಸದೇ ಇರಲಾರರು. ಹೌದು ಮಕ್ಕಳಿಗೆ ರಂಜನೆಯ ತಿಳಿ ಹಾಸ್ಯ ಇಷ್ಟವೇ. ಅವರು ಮಂಗನ ಹಾಗೆ ಬಾಲ ತೂಗಿ (ಬಾಲ ಇಲ್ಲದಿದ್ದರೂ) ಕುಣಿಯತ್ತಾರೆ, ಕಪ್ಪೆಯ ಹಾಗೆ ಜಿಗಿಯುತ್ತ ದೊಪ್ಪನೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









