ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಲೀಕ್ ಔಟ್: ಸೋರಿದ್ದಲ್ಲ, ಕಟ್ಟುಪಾಡಿನ ಛಾವಣಿ ಕುಸಿದಿದ್ದು
- ಪ್ರೀತಿ.ಟಿ.ಎಸ್ ಮೊದಲಿಯಾರ್ ಇಂದು ಸಂಜೆ ಅಕ್ಷತಾ ಪಾಂಡವಪುರರ ಲೀಕ್ ಔಟ್ ನೋಡಿ ಹೊರಹೋದಾಗ ತಂಪು ಗಾಳಿಯು ಬೇರೊಂದು ಅರ್ಥ ನೀಡುತ್ತಿತ್ತು. ಅದೇ ಸಮಯಕ್ಕೆ ಅಲ್ಲಿಯೇ ಇದ್ದ ನನ್ನ ತಮ್ಮ ಬಂದು - ಹೇಗಿತ್ತು ಅಕ್ಕ ನಾಟಕ? ಎಂದು ಕೇಳಿದ. ನಾನು ಸುಮ್ಮನಾದೆ. ಕೆಲವು ನಾಟಕಗಳಿಗೆ ವಿಮರ್ಶೆ ಬೇಕಾಗಿಲ್ಲ. ಚಪ್ಪಾಳೆಯ ಸದ್ದು ಬೇಕಿಲ್ಲ, ಆದರೆ...
ಒಂದು ಕಲ್ಲು ಕೆದಕಿದ ಕುತೂಹಲದ ಕಥೆ ‘ಬೆಳದಿಂಗಳು’
ಡಾ .ಆನಂದ ಪಾಟೀಲ ಅವರ ಮಕ್ಕಳ ಕಾದಂಬರಿ 'ಬೆಳದಿಂಗಳು' 'ಅಭಿನವ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಶ್ರೀಧರ ಗಸ್ತಿ ಅವರ ಬರಹ ಇಲ್ಲಿದೆ. -ಶ್ರೀಧರ ಗಸ್ತಿ ಮಕ್ಕಳ ಸಾಹಿತ್ಯವೆಂದರೆ ಕೇವಲ ಕಾಲ್ಪನಿಕ ಲೋಕ, ಮಾಯೆ, ರಾಕ್ಷಸ ಮತ್ತು ಅದ್ಭುತಗಳ ಜಗತ್ತಷ್ಟೇ ಅಲ್ಲ. ಮಕ್ಕಳ ಸಹಜ ಕುತೂಹಲ, ಹುಡುಕಾಟದ ಮನೋಭಾವ,...
ಶತಮಾನದ ಸೂರ್ಯಾಸ್ತ
ಮೂಲ: ರವೀಂದ್ರನಾಥ ಟ್ಯಾಗೋರ್ ಕನ್ನಡಕ್ಕೆ : ಡಾ. ವಸಂತಕುಮಾರ್ ಎಸ್. ಕಡ್ಲಿಮಟ್ಟಿ ಪಡುವಣದನೆತ್ತರ-ಕೆಂಬಣ್ಣಿನ ಮೋಡಗಳು ಮತ್ತುದ್ವೇಷದ ಸುಂಟರಗಾಳಿಯ ಮಧ್ಯೆಶತಮಾನದ ಕಟ್ಟ ಕಡೆಯ ನೇಸರನುಅಸ್ತಂಗತನಾಗುತ್ತಾನೆ.ಜನಾಂಗಗಳ ಸ್ವಮೋಹದಬೆತ್ತಲೇ ಉತ್ಸಾಹಕುಡಿದ ಅಮಲಿನ ಸಮೂಹ ಸನ್ನಿಯಲಿಉಕ್ಕಿನ ಘರ್ಷಣೆ ಮತ್ತುಪ್ರತೀಕಾರದ ಕೂಗುಮಾರಿಕವಿತೆಗಳಿಗೆ...
ಭರವಸೆಯ ಗಜ಼ಲ್ ನೌಕೆ ‘ಬದುಕು ಬಾರಾ ಕಮಾನು’
ಗೋವಿಂದ ಹೆಗಡೆ ಅವರ ಗಜ಼ಲ್ ಸಂಕಲನ 'ಬದುಕು ಬಾರಾ ಕಮಾನು' ಈ ಕೃತಿಯ ಕುರಿತ ಕೆ. ಜನಾರ್ದನ ತುಂಗ ಅವರ ಬರಹ ಇಲ್ಲಿದೆ. -ಕೆ. ಜನಾರ್ದನ ತುಂಗ ನಲವತ್ತು ವರ್ಷಗಳಿಂದ ಬರೆಯುತ್ತಿರುವ ಡಾ. ಗೋವಿಂದ ಹೆಗಡೆಯವರು ಕನ್ನಡ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಕೈಯಾಡಿಸಿದ್ದಾರೆ. ಅವರ “ಕನಸು ಕೋಳಿಯ ಕತ್ತು, “ಕವಿತೆಗೆ ಕಾಲುಗಳಿಲ್ಲ” ಮತ್ತು...
ದಲಿತ ಲೋಕ ಕಥನ ‘ಕಾಲಡಿಯ ಕಣ್ಣು’
ಸಿ ಎಂ ಮುನಿಯಪ್ಪ ಹಸಾಳ ಅವರ 'ಕಾಲಡಿಯ ಕಣ್ಣು' 'ಮುಂಗೋಳಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಹಿರಿಯ ಸಾಹಿತಿ ಅರವಿಂದ ಮಾಲಗತ್ತಿ ಅವರ ಬರಹ ಇಲ್ಲಿದೆ. -ಅರವಿಂದ ಮಾಲಗತ್ತಿ ಚಿಕ್ಕಹಳ್ಳದ ಹುಟ್ಟೂರಿನಿಂದ ಆರಂಭವಾದ ಇಲ್ಲಿಯ ಕಥನ ತಾಯಿಯ ಪರಲೋಕದ ಪಯಣದೊಂದಿಗೆ ಮುಕ್ತಾಯಗೊಳ್ಳುತ್ತದೆ. ಕೃತಿ ಅತ್ಯಂತ ಸಣ್ಣ ಸಣ್ಣ...
ಹರಿದು ಹೋಗುವ ಮೊದಲು
-ರಂಗಸ್ವಾಮಿ ಸಿದ್ದಯ್ಯ ಗಜಲ್ ಕಣ್ಣೀರು ಇಬ್ಬನಿ ಬಿಂದುವಿನಂತೆ ಕರಗಿ ಹೋಗುವ ಮೊದಲುದೇಹದ ಉಸಿರು ಪರಿಮಳವಾಗಿ ಹರಿದು ಹೋಗುವ ಮೊದಲು ಹೃದಯದೊಳಗೆ ಬಚ್ಚಿಟ್ಟ ಒಲವಿನ ಹನಿಯೊಂದುಕಣ್ಣಂಚಲಿ ಮುತ್ತಾಗಿ ಜಾರಿ ಹೋಗುವ ಮೊದಲು ಉಸಿರಿನ ನಾದ ಎದೆಯ ವೀಣೆಯಲಿ ನಿಂತು ಸ್ಥಿರವಾಗಿಮನದೊಳಗಿದ್ದ ಮಾತು ಮೌನವಾಗಿ ಹೋಗುವ ಮೊದಲು ಕನಸಿನ ಕಿಟಕಿಯಲಿ...
ರಕ್ಕಸ ಅರಸನ ಪ್ರಲಾಪ
-ಪಾಲಹಳ್ಳಿ ವಿಶ್ವನಾಥ್ ಇಂದು ಹಿಮಪರ್ವತದಲ್ಲಿ ಸದ್ದೇ ಇಲ್ಲ. ಬಹಳ ನಿಶ್ಶಬ್ದವಾಗಿದೆ. ಅಮ್ಮ ಸ್ವಲ್ಪ ಹೊತ್ತಿನ ಹಿಂದೆ ತನ್ನ ಕಪ್ಪು ಮುಖವಾಡ ಹಾಕಿಕೊಂಡು ಹೊರಗೆ ಹೋದಳು. ಅಣ್ಣನ ನವಿಲು ಸುಸ್ತಾಗಿ ಮಲಗಿದೆ. ನನ್ನ ಇಲಿಯೂ ಹಾಗೆಯೇ; ಅದರ ಕಡೆಯಿಂದ ಒಂದು ಚಿಕ್ಕ ಶಬ್ದವೂ ಇಲ್ಲ. ಅಪ್ಪ ಕಮಲಾಸನದಲ್ಲಿ ಕುಳಿತಿದ್ದಾರೆ, ಕಣ್ಣುಗಳನ್ನು...
ಪುಸ್ತಕ ಅಂಕಣ – ಮರೆಯಲಾಗದ ಕಾದಂಬರಿ
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ರೀಲ್ಸ್ ಲೋಕದ ಹುಚ್ಚಾಟ ಮತ್ತು ಎದೆ ನಡುಗಿಸುವ ಬೀಭತ್ಸ ಮಾಟ
-ಗೊರೂರು ಶಿವೇಶ್ ರೀಲ್ಸ್ ಲೋಕದ ಹುಚ್ಚಾಟ ಮತ್ತು ಎದೆ ನಡುಗಿಸುವ ಬೀಭತ್ಸ ಮಾಟ: 'ವಿಡಿಯೋ' ಚಿತ್ರದ ವಿಶ್ಲೇಷಣೆ ಭಾಷೆ, ಧರ್ಮ, ಗಡಿಗಳನ್ನು ಮೀರಿ ಮನುಷ್ಯನ ಬೆನ್ನುಮೂಳೆಯಲ್ಲಿ ನಡುಕ ಹುಟ್ಟಿಸುವ ಏಕೈಕ ಕಸುವು ಅತೀಂದ್ರಿಯ ಶಕ್ತಿಗಳದ್ದು. ಕತ್ತಲ ಕೋಣೆಯಲ್ಲಿ ತನ್ನಷ್ಟಕ್ಕೇ ತಾನೇ ತೆರೆದುಕೊಳ್ಳುವ ಕಿಟಕಿ, ಬಿಳಿಸೀರೆಯ ಮೋಹಿನಿ,...
ಅಪ್ಪನ ವಾಚು, ಸಾವಿನ ಮನೆಯಲ್ಲಿ ಕಂಡ ಬದುಕಿನ ನಿರಂತರತೆ
ಇತ್ತೀಚೆಗೆ ತಾನೇ ತಮ್ಮ ತಂದೆಯನ್ನು ಕಳೆದುಕೊಂಡ ಕಥೆಗಾರ ಶಿವಕುಮಾರ ಮಾವಲಿ ಅವರ ಕಾಡುವ ಬರಹ ಇಲ್ಲಿದೆ. 1996ರ ಸಂಕ್ರಾಂತಿಯ ಮರುದಿನ ಗಾಜನೂರಿನ ತುಂಗಾ ಆಣೆಕಟ್ಟೆಯ ಸಮೀಪಲ್ಲಿದ್ದ ಮೊರಾರ್ಜಿ ವಸತಿ ಶಾಲೆಗೆ ಅಪ್ಪ ನನ್ನನ್ನು ಬಿಟ್ಟು ಬರಲು ಬಂದಿದ್ದರು. ಹಾಸ್ಟೆಲ್ ಗೆ ಬೇಕಾದ ವಸ್ತುಗಳ ಜೊತೆ ಶಿವರಾಜ ಬಸ್ ಇಳಿದಾಗ, ಆ ಚಿಕ್ಕ...
ಒಂಟಿತನವ ರೂಢಿಸಿಕೊಳ್ಳಬೇಕಿದೆ.
-ವೀರೇಂದ್ರ ರಾವಿಹಾಳ್ ಒಂಟಿತನ ಲೋಕ ಎಂದಿದ್ದರೂ ನಮ್ಮ ಜೊತೆಹೆಜ್ಜೆ ಹಾಕುವುದಿಲ್ಲಅದಕ್ಕೆಂದೇಒಂಟಿತನವ ರೂಢಿಸಿಕೊಳ್ಳಬೇಕಿದೆ. ಜೊತೆಗಿದ್ದವರುದಾರಿ ಬದಲಿಸಿ ನಡೆದಾಗನಮ್ಮ ಹೆಜ್ಜೆಗಳನ್ನೇನಂಬಿಕೊಳ್ಳಬೇಕಿದೆ. ಕರೆದಾಗ ಬರುವವರಿಗಿಂತಕರೆಯದಿದ್ದರೂನಮ್ಮೊಳಗೇ ಉಳಿಯುವಂತಮೌನವೊಂದು ಬೇಕಿದೆ. ನಮ್ಮ ನೆರಳಿಗೂಒಂದು ದಿನ...
ಸೋತವನ ಆತ್ಮಕತೆ
- ಆಶಿಕ್ ಮುಲ್ಕಿ ಇಂದು ಒಂದೇ ದಿನ. ಇವತ್ತು ಪಾಠ ಮುಗಿಸಿ ತರಗತಿಯಿಂದ ಕಾಲು ಆಚೆಗಿಟ್ಟರೆ ರವಿಶಂಕರ ಭಟ್ಟರು ತನ್ನ ಸುದೀರ್ಘ ಶಿಕ್ಷಕ ವೃತ್ತಿಗೆ ವಿದಾಯ ಹೇಳುತ್ತಾರೆ. ಈಗ ನಿಂತು ಒಂದರೆಕ್ಷಣ ಮೂವತ್ತೇಳು ವರ್ಷಗಳ ಶಿಕ್ಷಕ ಬದುಕಿನ ಕಡೆಗೆ ಇಣುಕಿದರೆ, ಅವರ ಪಾಠ ಕೇಳುತ್ತಾ, ಗರಡಿಯಲ್ಲಿ ಪಳಗುತ್ತಾ ಹೋದ ಮಕ್ಕಳು ಇಂದು ಬದುಕಿನ ಹಲವು...
ಕಟ್ಟೀಮನಿ: ನೂರರ ನೆನಪು
-ಜಿ.ಪಿ.ಬಸವರಾಜು 1 ಕೇವಲ ಒಂದೂಕಾಲು ಶತಮಾನದಷ್ಟು ಇತಿಹಾಸ ಹೊಂದಿರುವ ಕನ್ನಡ ಕಾದಂಬರಿ ಪರಂಪರೆಯಲ್ಲಿ ಸಿಕ್ಕುವ ಶಿಖರ ಕೃತಿಗಳು ಬೆರಳೆಣಿಕೆಯಷ್ಟು. ಇವು ಎಲ್ಲ ಕಾಲದಲ್ಲೂ ಬೆಳಗುವ ಕೃತಿಗಳು ಎಂಬುದು ನಿಜ. ಇವುಗಳಿಗೆ ಕನ್ನಡ ವಿಮರ್ಶಾ ಲೋಕದಲ್ಲಿ ಸರಿಯಾದ ಗೌರವ ದೊರಕಿದೆ; ಓದುಗರ ಪ್ರೀತಿಯೂ ಸಮೃದ್ಧವಾಗಿದೆ. ಇದೆಲ್ಲ ಹೆಮ್ಮೆ...
ಪ್ರೀತಿಗೆ ಅದೆಷ್ಟು ರೆಕ್ಕೆಗಳು
-ದೇವಿಕಾ ನಾಗೇಶ್ ಪ್ರೀತಿ ರೆಕ್ಕೆ ಪ್ರೀತಿಗೆ ಅದೆಷ್ಟು ರೆಕ್ಕೆಗಳುಬಣ್ಣ, ಭಾವ,ಮೋಹಕ ಬೆಳಕುಅಕ್ಕರೆಯ ಅಗ್ನಿಕುಂಡಸಕ್ಕರೆಯಂತೆ ವಿಷ ಅಂದರೆ ವಿಷಕಸು ಅಂದರೆ ಕಸು ಅವರವರ ಭಾವಕ್ಕೆ ದಕ್ಕಿದಂತೆಮೃದು ಮಧುರ ಹುಳಿ ಒಗರುನಾದಿದಷ್ಟೂ…ಬೆತ್ತಲಾಗುವಆ..ಕಾರ ವಿಕಾರದುಡಿಸುವ ದುಗುಡಕೆಕಾಲ ಕಂಗಾಲು ಕೋಶದ ಹೂ ಹಸಿರುಭೂಮಿ ವಿಸ್ತಾರ ಬಯಸಿದೆಬಾನಿಗೂ...
ಕಳೆದು ಹೋದವರ ಹಾಡು : ಗಾಳಿಗಿಟ್ಟ ದೀಪಗಳ ಪ್ರತಿಬಿಂಬ!
-ಡಾ. ರಾಜೇಂದ್ರಕುಮಾರ್ ಕೆ. ಮುದ್ನಾಳ್ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿ ಒಂದಲ್ಲ ಒಂದು ವಸ್ತುವನ್ನು ಕಳೆದುಕೊಂಡಿರುತ್ತಾನೆ. ತನಗೆ ಪ್ರಿಯವಾದದ್ದನ್ನು ಕಳೆದುಕೊಂಡಾಗ ಪರಿತಪಿಸುತ್ತಾನೆ. ಆತ್ಮೀಯ ಸ್ನೇಹಿತರು ದೂರವಾದಾಗ ನೊಂದುಕೊಳ್ಳುತ್ತಾನೆ . ಈ ಜಗವನ್ನು ಬಿಟ್ಟು ಹೋದ ತಂದೆ-ತಾಯಿ ಬಂಧು ಬಳಗವನ್ನು ನೆನಪಿಸಿಕೊಂಡು...
ಸಹೃದಯಿ ಪ್ರೇಕ್ಷಕರನ್ನು ಸೃಷ್ಟಿಸಿದ ಸಪ್ತಕ
-ರಾಘವೇಂದ್ರ ಬೆಟ್ಟಕೊಪ್ಪ ಐದು ದಶಕಗಳ ಸಾಂಸ್ಕೃತಿಕ ಸೇವೆಯ ಕಲಾ ಯಾನಕ್ಕೆ 19ಕ್ಕೆ ಶಿರಸಿಯಲ್ಲಿ ಗೌರವ ಸಂಗೀತವನ್ನು ಕೇಳಿಸುವುದು ಸುಲಭ. ಆದರೆ ಸಂಗೀತವನ್ನು ಕೇಳುವ ಕಿವಿ, ಅದನ್ನು ಗ್ರಹಿಸುವ ಮನಸ್ಸು, ಆಸ್ವಾದಿಸುವ ಹೃದಯವನ್ನು ರೂಪಿಸುವುದು ಅಷ್ಟು ಸುಲಭವಲ್ಲ. ಐದು ದಶಕಗಳ ಹಿಂದೆ ಸಣ್ಣದೊಂದು ಕನಸಾಗಿ ಆರಂಭವಾದ ಸಪ್ತಕದ ಪಯಣ ಇಂದು...
ಮಾತು ನಿಂತರೂ ಉಳಿದ ರಂಗ ಸಂಕೇತ: ಜಂಬೆ ನೆನಪು
-ಜೆ ಶ್ರೀನಿವಾಸ ಮೂರ್ತಿ ನಲವತ್ತೈದು- ನಲವತ್ತಾರು ವಷ೯ದ ಹಿಂದಿನ ಮಾತು, ಎನ್.ಎಸ್ ಡಿ ಅಲ್ಲಿ ಬಿ. ವಿ. ಕಾರಂತರು ಚಂದ್ರಗುಪ್ತ ನಾಟಕವನ್ನು ಮಾಡಿಸಿದ್ದರು. ಆ ನಾಟಕದಲ್ಲಿ ಚಂದ್ರಗುಪ್ತನನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ಚಾಣಾಕ್ಯ ನಾಟಕದ ಕೊನೆಗೆ ʼʼನನ್ನ ಕೆಲಸವಾಯಿತು, ನಾನಿನ್ನು ನನ್ನ ಕುಟೀರಕ್ಕೆ ಹೊಗುತ್ತೇನೆ…ʼʼ ಎಂದು...
ಸಪ್ನ ‘ಅವಧಿ’ ಟಾಪ್ ಟೆನ್
ಪ್ರೀತಿಯ ಜಂಬೆ ಸಾರ್..
-ಚೀ ಜ ರಾಜೀವ ಪ್ರೀತಿಯ ಜಂಬೆ ಸಾರ್,ಅದೊಂದು ದಿನನೀವು ಫೋನಾಯಿಸಿದ್ದಿರಿ...ಉಭಯ ಕುಶಲೋಪರಿಮುಗಿದ ಬಳಿಕ ಮಾತು'ಪ್ರಿಯ ಗಾಂಧಿ' ಪುಸ್ತಕದೆಡೆಗೆಮಾತು ಹೊರಳಿತುನೀವೆಂದಿರಿ:"ನೀವು ಏನು ಬೇಕಾದರೂ ಬರೆಯಿರಿ,ಅವರ ಕುರಿತ ಟೀಕೆ-ಟಿಪ್ಪಣಿಯೇ ಆಗಲಿ,ತಕರಾರು,ನಿರಾಕರಣೆಯೇ ಇರಲಿ...ಆದರೆ, 'ಪ್ರೀತಿಯ ಬಾಪು' ಎಂದಿರುವಿರಲ್ಲಾ,ಅದು ನನಗೆ ತುಂಬಾ...
ಚಿದಂಬರ ರಾವ್ ಜಂಬೆ ಇನ್ನಿಲ್ಲ
ಎ.ಎಸ್.ಮೂರ್ತಿ ನೆನಪಿನಲ್ಲಿ ‘ಚಿತ್ರಾ ನಾಟಕೋತ್ಸವ’





















