ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉದಯಕುಮಾರ ಹಬ್ಬು ಹೊಸ ಕವಿತೆ: ಬಾಗಿಲು ಹಾಕಿಬಿಟ್ಟಿದ್ದಾಳೆ ಇವಳು

ಉದಯಕುಮಾರ ಹಬ್ಬು

*

ಬಾಗಿಲು ಹಾಕಿಬಿಟ್ಟಿದ್ದಾಳೆ ಇವಳು

ಬಾಗಿಲು ಬಡಿ ಬಡಿದು ಕೈ ತುಂಬ ನೋಯುತಿದೆ,

ಒಂದಿಷ್ಟು ಮದುವನರಸು ಸಾಕಿ ನೋವ ಮರೆತುಬಿಡುವೆ.

ಪ್ರೀತಿ ಎಂದರೆ ಮುಚ್ಚಿದ ಬಾಗಿಲಲ್ಲ ತೆರೆದ ಬಯಲು

ಅರ್ಥ ಇರುವ ಮಾತಾಡು ಬಾಗಿಲು ಧಡಾರನೆ

ಮುಖಕ್ಕೆ ರಾಚಿಬಿಟ್ಟಳು ಅರ್ಥ ತಿಳಿಸುವ ಭಾಷೆ

ಪ್ರೀತಿ ಬಾಷೆಗೆ ಅಳವೆ? ಭಾಷಾತೀತ 

ಹೊರಗಟ್ಟಿಬಿಟ್ಟಿದ್ದಾಳೆ ಕೊಟ್ಟ ಭಾಷೆಯ ಮರೆತು.

ಒಂದಿಷ್ಟು ಹೆಚ್ಚೆ ಸುರಿ ಮದುವ ಮದುಬಟ್ಟಲಲಿ.

ಹಿಂದೊಮ್ಮೆ ಕಾಡಿದ್ದೆ, ಬೇಡಿದ್ದೆ, ಕೊಡುವ ಭರವಸೆ ಹೊತ್ತು,

ಗೊತ್ತಿಲ್ಲದೆ ಕಾದಿದ್ದೆ ಮರುಳು ಮಂಕನಾಗಿ

ನಕ್ಷತ್ರ ಲೋಕದ ರಂಭೆ ಇವಳೆ ಊರ ನಾಡಾಡಿ.

ಈಗ ಎಲ್ಲಿಂದ ಬಂತು‌ ತಲೆಗೆ ಕೋಡು

ನನ್ನ ತಲೆಗೂ ಅಡರಿತೆ? ಬಿಡು ಬಿಡು

ಕೊಡು ಕೊಡು ಮದುಪಾತ್ರೆಯು ಬರಿದಾಗಿದೆ

ಸುರಿ ಸುರಿ ಹುರಿ ಹುರಿಯುವ ಮೊದಲೆ ಮುಗಿಲ ತಾರೆ.ಸಾಕಿ.

ದೂರ ಹೋಗಿಬಿಟ್ಟಿದ್ದಾಳೆ ಬಂದರೂ ಬರಬಹುದು

ಕನಸು ಬಳ್ಳಿಯ ಅವಳ ಕುತ್ತಿಗೆಗೆ ಕಟ್ಟಿ ಎಳೆವಾಗ

ಬಲಿಯ ಕುರಿಯಂತೆ. ಕುರಿ ಯಾರು? ಹಗ್ಗ ಎಲ್ಲಿ?

ಎಲ್ಲ ಬಿಟ್ಟು ಬಿಟ್ಟು ಬಿಡದೆ ಸುರಿ ಮದುಬಟ್ಟಲಿಗೆ ಸಾಕಿ.

ಅವಳ ಕಣ್ಣು ಸರೋವರದಲ್ಲಿ ಓಡಾಡುತಿರುವ ಮೀನು

ಅಥವಾ ಕಣ್ಣ ಬಲೆಯಲ್ಲಿ ಸಿಕ್ಕ ಮೀನು.

ಮರೆತೆಲ್ಲ ಕಳೆದುಹೋಗುವೆ ಸುರಿ ಮದುಬಟ್ಟಲಿಗೆ ಸಾಕಿ.

‍ಲೇಖಕರು Admin R

5 March, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading