ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮನಸ್ಸೆಂಬ ಹುತ್ತದಲ್ಲಿಯೇ ಹಾವಿನ ಠಾವು…
ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ ಡಾ. ಬಾಳಾಸಾಹೇಬ ಲೋಕಾಪುರ ಅವರ ಹುತ್ತ ಕಾದಂಬರಿ ಓದಿ ಮುಗಿಸಿದೆ. ಮನಸು ಹುತ್ತದ ಒಳಹೊಕ್ಕು ಬೆವೆತು ಹೊರಬಂದಂತಹ ಅನುಭವವಾಯ್ತು. ಕುತೂಹಲದ ಕಣ್ಣಿನಿಂದ ಓದಿದಾಗ ಕುತೂಹಲಕಾರಿಯಾಗಿಯೂ, ಸಾಮಾಜಿಕ ನೆಲೆಯಲ್ಲಿ ಓದಿದಾಗ ಸಾಮಾಜಿಕವಾಗಿಯೂ, ಧಾರ್ಮಿಕ ನೆಲೆಗಟ್ಟಿನಲ್ಲಿ ಓದಿದಾಗ...
ಮುನ್ನೂರ್ ಜೊತೆ ‘ಫಟಾ ಫಟ್’
ಹಿರಿಯ ಪತ್ರಕರ್ತ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಮಹಿಪಾಲರೆಡ್ಡಿ ಮುನ್ನೂರ್ ಅವರು ಕಲ್ಯಾಣ ಕರ್ನಾಟಕದಿಂದ ಹೊಸ ಸಾಹಿತ್ಯ ಪತ್ರಿಕೆ 'ಋತುಮಾನ'ಆರಂಭಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ‘ಅವಧಿ’ ನಡೆಸಿದ ಫಟಾಫಟ್ ಸಂದರ್ಶನ ಇಲ್ಲಿದೆ. ಎಡಿಟರ್ ಆಗ್ತಾ ಇದೀರಂತೆ ? ಆ ದಾರಿಯಲ್ಲಿದ್ದೇನೆ. ಪತ್ರಿಕೆ, ಚಾನಲ್...
ಮೊದಲೇ ಹೇಳಿ ಬಿಡುತ್ತೇನೆ. ನಮಗೇನೂ ಆ ಉತ್ತರ ಕೇಳಿ ಗಾಬರಿ ಆಗಲಿಲ್ಲ…
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ 'ಚೈಲ್ಡ್ ರೈಟ್ಸ್ ಟ್ರಸ್ಟ್' ನ ಭಾಗವಾಗಿರುವ ಶರ್ಮಾ ರಚಿಸಿದ 'ಆಕೆ ಮಕ್ಕಳನ್ನು ರಕ್ಷಿಸಿದಳು' ಕೃತಿ ಅತ್ಯಂತ ಜನಪ್ರಿಯ 'ಬಹುರೂಪಿ' ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ ವಿಷಯಗಳ ಬಗ್ಗೆ...
ಮುತ್ತಿನ ದಲಾಲಿ ಚಿಂದಿ ಮಾರಿದನು…
'ಬಾಲ ಒಂದಿಲ್ಲ ಅಷ್ಟೇ..' ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ 'ಪ್ರಥಮ್ ಬುಕ್ಸ್' ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ...
ಕೆ ಎ ದಯಾನಂದ ಅವರನ್ನು ಸಂದರ್ಶಿಸಿದ್ದಾರೆ ಸಾಸ್ವೆಹಳ್ಳಿ ಸತೀಶ್
ಅವಧಿ ಸಂದರ್ಶನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ, ಐ ಎ ಎಸ್ ಅಧಿಕಾರಿ ಕೆ ಎ ದಯಾನಂದ ಅವರು 'ಹಾದಿಗಲ್ಲು' ಆತ್ಮಕಥೆಯನ್ನು ಬರೆದಿದ್ದಾರೆ. ಆಳವಾದ ಸಾಂಸ್ಕೃತಿಕ ಪ್ರೀತಿ ಹಾಗೂ ಜನಪರ ನೋಟ ಇರುವ ಇವರನ್ನು ಖ್ಯಾತ ರಂಗ ನಿರ್ದೇಶಕ, ಶಿವಮೊಗ್ಗದ ಸಾಸ್ವೆಹಳ್ಳಿ ಸತೀಶ್ ಅವರು 'ಅವಧಿ'ಗಾಗಿ ಸಂದರ್ಶಿಸಿದ್ದಾರೆ. ...
ಆಹ್ವಾನಿತ ಕವಿತೆ: ವಿನಯಾ ಒಕ್ಕುಂದರ ಕಾಡುವ ಕವನಗಳು
ಕ್ಷೇಮವಿರಲಿ ನಿನಗೆ ಪ್ರಿಯ ಚೌಕಿದಾರನೆ, ನಾವು ಹಸಿವಿನ ಅನಾಥತೆಯ ಭೂತ ಬೆಂಬತ್ತಿದ ಈ ನೆಲದ್ದೇ ಜೀವಗಳು ನಿನ್ನ ಚೌಕಿಯಲಿ ನಮ್ಮ ಉಸಿರಿಲ್ಲವೇ? ಎಲ್ಲವನ್ನೂ ಎಲ್ಲರನ್ನೂ ನಿಂತಲ್ಲೇ ನಿಲ್ಲಿಸಿ ಉಳಿದಲ್ಲೇ ಉಳಿಸಿ ಫರ್ಮಾನು ಹೊರಡಿಸಿದ ನಿಯಾಮಕನೇ, ನಿನ್ನ ದಫ್ತರಿನಲಿ ಹಸಿದವರ ಹೆಸರಿಲ್ಲವೇ? ನಾವು ತಡಿಕೆಯಲ್ಲಿದ್ದು ಕಟ್ಟಿದ ಇಮಾರತಿಗೆ ಆ...
ನಿನಗೆ ನನ್ನ ಅಭಯ!
ಚೈತ್ರಾ ಶಿವಯೋಗಿಮಠ ನನಗೊಂದು ರೀತಿಯ ಆನಂದನಿನ್ನ ಮೌನ ಮತ್ತು ಭಯ.ಇರಲಿ, ನೀನು ಮೃದುವಾದಷ್ಟುನಿನಗೆ ನನ್ನ ಅಭಯ! ಯಾರನ್ನೂ ಮಾತನಾಡಿಸದಷ್ಟುನೀನು ಕೆಲಸದಲ್ಲಿ ಮಗ್ನಕಡೆ ಪಕ್ಷ ನಿನ್ನಂತರತಮದ ಧ್ವನಿಗೂಆಗಲಿಲ್ಲ ನಿನ್ನ ತಾಂತ್ರಿಕ ಪ್ರಗತಿಯ ತಪೋ ಭಗ್ನ! ಉಡುವ ಬಟ್ಟೆಗೆ, ತಿನ್ನುವ ಹೊಟ್ಟೆಗೆಅಂಕೆಯೇ ಇಲ್ಲದಷ್ಟು ಆಧುನಿಕತೆ!ಮನಸ್ಸಿಗೂ...
ಕಣಗಿಲೆ ಒಡಲೊಳಗಿನ ಕೂಸು ನನ್ನೂರು
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...
ಆ ಕಾಮಾಟಿಪುರದಲ್ಲಿ ನಾನೇ ‘ಡ್ರೈನೇಜು’
ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...
ಫೇಸ್ ‘ಬುಕ್’ ಆಗಿದೆ!
ಕವಿಗೆ ಖರ್ಚುಗಳಿರುತ್ತವೆ…
'ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು' ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
Avadhi Promo
Avadhi Promo
ವಿಠ್ಠಲರಾವ್ ಗಾಯಕ್ವಾಡ್ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ
ಕನ್ನಡ ವಿಶ್ವವಿದ್ಯಾಲಯದ ಪ್ರೊಫೆಸರ್ ವಿಠ್ಠಲರಾವ್ ಗಾಯಕ್ವಾಡ್ ಅವರಿಗೆ ೨೦೧೯ ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ ಸಂದಿದೆ. ಮರಾಠಿಯ ಖ್ಯಾತ ಸಾಹಿತಿ ಶರಣಕುಮಾರ ಲಿಂಬಾಳೆ ಅವರ ಕೃತಿಯ ಅನುವಾದ 'ದಲಿತ ಸಾಹಿತ್ಯದ ಸೌಂದರ್ಯ ಪ್ರಜ್ಞೆ' ಕೃತಿಗೆ ಈ ಪ್ರಶಸ್ತಿ ಘೋಷಣೆಯಾಗಿದೆ. ಪ್ರತಿಷ್ಠಿತ 'ಯಾಜಿ ಪ್ರಕಾಶನ' ಈ...
ಫಟಾ ಫಟ್ ಸಂದರ್ಶನ
ಲೋಕೇಶ್ ಮೊಸಳೆ ಅವರ “ಮೌಢ್ಯ ನಿವಾರಣೆಗೆ ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳ ಪಾತ್ರ: ಒಂದು ತೌಲನಿಕ ಅಧ್ಯಯನ” ಎಂಬ ಸಂಶೋಧನೆಗೆ ಮೈಸೂರು ವಿಶ್ವವಿಧ್ಯಾಲಯ ಪಿಎಚ್ ಡಿ ಘೋಷಿಸಿದ ಹಿನ್ನೆಲೆ ಅವಧಿ ನಡೆಸಿದ ಫಟಾ ಫಟ್ ಸಂದರ್ಶನ ಇಲ್ಲಿದೆ. ವೈಲ್ಡ್ ಲೈಫ್ ನಿಂದ ಪಿಎಚ್ ಡಿ ಕಡೆಗೆ, ಅದು ಹೇಗೆ? ವೈಲ್ಡ್ ಲೈಫ್ ಫೋಟೋಗ್ರಾಫಿ...
ಆಹ್ವಾನಿತ ಕವಿತೆ: ಎಸ್ ದಿವಾಕರ್ ‘ಹಾಡು’
ವಿಮರ್ಶಕ ಎಸ್ ದಿವಾಕರ್ ಇತ್ತೀಚಿಗೆ ತಾನೇ 'ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ' ಕವನ ಸಂಕಲನವನ್ನು ಹೊರತಂದಿದ್ದರು. ಈಗ ಹಾಡುಗಳ ಬೆನ್ನತ್ತಿದ್ದಾರೆ. ಅವರು ಇತ್ತೀಚೆಗೆ ಬರೆದ ಎರಡು ಕಾಡುವ ಹಾಡುಗಳು ಇಲ್ಲಿವೆ- ಗೋಪಾಲನ ಮುರಲಿ ಬೆಳಗಾಯಿತು ಬಿಸಿಲೇರಿತು ಗಿಡಬಳ್ಳಿಗಳರಳಿಈ ರಾಧೆಗೆ ಮುದ ತಂದಿತು ಗೋಪಾಲನ ಮುರಳಿ ಯಮುನಾ ಜಲ...
ಕಿಚ್ಚನೂದುವಳು ಶಾಂತಕ್ಕ…
‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...
ಹಿಟ್ಲರ್ ಒಳ್ಳೆಯವನಂತೆ…!!
ಕಾಲಲ್ಲಿ ಚಕ್ರಗಳಿದ್ದಿದ್ದರೆ ಹೀಗೆ ಹೋಗಿ ಹಾಗೆ ಬೇಕು ಎಂದು ಜಗತ್ತನ್ನು ಸುತ್ತಿಕೊಂಡು ಬರುತ್ತಿದ್ದೆ ಎನ್ನುವಷ್ಟು ಪ್ರಯಾಣಪ್ರಿಯೆ ಭಾರತಿ. ಯಾವ ದೇಶಕ್ಕಾದರೂ ಹೇಗಬೇಕು ಎಂದರೆ ಅದರ ಹೆಸರು ಹೇಗೆ ಬಂದಿರಬಹುದು ಎನ್ನುವಲ್ಲಿಂದ ಹಿಡಿದು, ಯಾವ ಗಲ್ಲಿಯ, ಯಾವ ರೆಸ್ಟೋರೆಂಟಿನಲ್ಲಿ ಏನೇನು ಸಿಗುತ್ತದೆ ಎನ್ನುವವರೆಗೆ ಮಾಹಿತಿ ಕಲೆಹಾಕಿ,...
‘ಧೂಪದ ಮಕ್ಕಳು’ ಎಂಬ ಮಕ್ಕಳ ಗಾಥೆ…
ಕುಖ್ಯಾತ ಕಾಡುಗಳ್ಳ ವೀರಪ್ಪನ್ ಕಾಲದಲ್ಲಿ ಯಾವಾಗಲೂ ಸುದ್ದಿಯಲ್ಲಿರುತ್ತಿದ್ದ ಒಂದು ಪುಟ್ಟ ಹಳ್ಳಿಯ ಹೆಸರು ಪೊನ್ನಾಚಿ. ಪೊನ್ನಾಚಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಹೊಂದಿಕೊಂಡಿರುವ ಒಂದು ಕುಗ್ರಾಮ. ಈ ಪೊನ್ನಾಚಿ ಎಂಬ ಪದದ ಮೂಲ ತಮಿಳು ಭಾಷೆ ಇರುವ ಹಾಗೆ ಕಾಣಿಸುತ್ತದೆ. ಕರ್ನಾಟಕ ಮತ್ತು...
ಹೋಗಿ ಬನ್ನಿ ಪಂಡಿತ್..





















