ಓಂಶಿವಪ್ರಕಾಶ್ ಲೇಖನಗಳು

ಓಂಶಿವಪ್ರಕಾಶ್

ಕಳೆದ ೨೦ ವರ್ಷಗಳಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಶಿಕ್ಷಕನಾಗಿ, ತಂತ್ರಜ್ಞನಾಗಿ, ತಂತ್ರಜ್ಞಾನ ನಿರ್ವಾಹಕನಾಗಿ, ವ್ಯಾವಹಾರಿಕ ಅಭಿವೃದ್ಧಿಯ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದೇನೆ. ಹುಟ್ಟಿದ್ದು ಮೈಸೂರು, ಬೆಳೆದದ್ದು ಬೆಂಗಳೂರು. ‍೨೦೦೬ ರಿಂದ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ (Free & Open Source Software) ಬಗ್ಗೆ ಕನ್ನಡದಲ್ಲಿ ಲಿನಕ್ಸಾಯಣ‌.ನೆಟ್‌ನಲ್ಲಿ ಬರೆಯುತ್ತಿದ್ದು FOSS ಚಳುವಳಿಯ ಮೂಲಕ ಕನ್ನಡ ಭಾಷಾ ತಂತ್ರಜ್ಞಾನದ ಸುತ್ತ ಸ್ವಯಂಸೇವಕನಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ‍ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕೆಲಸ ಮಾಡುತ್ತಾ ವಚನ ಸಂಚಯ, ದಾಸ ಸಂಚಯ, ರನ್ನ , ಜನ್ನ ಹೀಗೆ ಹತ್ತು ಹಲವು ಕನ್ನಡ ಸಾಹಿತ್ಯ ಪ್ರಕಾರಗಳನ್ನು ಸಾಮಾನ್ಯನಿಗೂ ಕೂಡ ಸಂಶೋಧನೆಯ ಸಾಧ್ಯತೆ ಲಭ್ಯವಾಗಿಸುವಲ್ಲಿ ಸಂಚಯವನ್ನು (‌https://sanchaya.org) ೨೦೧೧ರಲ್ಲಿ ಪ್ರಾರಂಭಿಸಿದ ಮೊದಲಿಗರಲ್ಲಿ ನಾನೂ ಒಬ್ಬ. ‍ಹಾಗೆಯೇ, ೨೦೧೪ರಲ್ಲಿ ಸ್ಥಾಪಿಸಿದ `ಸಂಚಿ ಫೌಂಡೇಷನ್’ (https://sanchifoundation.org)- ಒಂದು ಲಾಭರಹಿತ ಸಂಸ್ಥೆಯಾಗಿದ್ದು, ದೃಶ್ಯ-ಶ್ರಾವ್ಯ ಮಾಧ್ಯಮದ ಮೂಲಕ ದಾಖಲೀಕರಣದ ಕೆಲಸದಲ್ಲಿ ತೊಡಗಿದೆ. ವಿಕಿಪೀಡಿಯ, ಮೊಜಿಲ್ಲಾ ಫೌಂಡೇಷನ್, ಕ್ರಿಯೇಟೀವ್ ಕಾಮನ್ಸ್ ಸಮುದಾಯಗಳಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಾ, ಕನ್ನಡ ತಂತ್ರಜ್ಞಾನ, ಲಿಪ್ಯಂತರಣ, ‍L10n, ಸಮುದಾಯ ಸಹಭಾಗಿತ್ವ ಇತ್ಯಾದಿಗಳಲ್ಲಿ ಬಿಡುವಿನ ಸಮಯ ಕಳೆಯುತ್ತೇನೆ. ‍ಐಟಿ ಸುರಕ್ಷತೆ (IT Security), ಖಾಸಗಿತನ (ಪ್ರೈವಸಿ), ಪಾಲಿಸಿ, ಕಾಪಿರೈಟ್, ಕ್ರಿಯೇಟೀವ್ ಕಾಮನ್ಸ್ ಇತ್ಯಾದಿಗಳ ಬಗ್ಗೆ ಕನ್ನಡದಲ್ಲಿ ಮಾಹಿತಿ ಲಭ್ಯವಾಗಿ, ಮುಕ್ತ ಶೈಕ್ಷಣಿಕ ಸ‍ಂಪನ್ಮೂಲಗಳನ್ನು ಕಟ್ಟಲು ಎಲ್ಲರ ಜ್ಞಾನದ ಕ್ರೂಢೀಕರಣ ಆಗಬೇಕು ಎಂಬುದು ನನ್ನ ಆಶಯವಾಗಿದೆ.

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

%d bloggers like this: