ಮುಕ್ತ ಜ್ಞಾನದ ಸುತ್ತ ಒಂದಷ್ಟು ಇತ್ತೀಚಿನ ಸುದ್ಧಿಗಳು

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು.

ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ.

ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ ಮಾಡುತ್ತಿದ್ದಾರೆ.

ಸಂಚಯ, ಸಂಚಿ, ಕಿಂದರಿಜೋಗಿ ಹೀಗೆ ನಾನಾ ಮುಖಗಳಲ್ಲಿ ಅವರ ಪ್ರತಿಭೆ ಪ್ರಕಟವಾಗಿದೆ.

| ಕಳೆದ ಸಂಚಿಕೆಯಿಂದ |

೧. ರಸ್ತೆ ಯ ಮೇಲೆ ಓಡಾಡುವಾಗ, ಹೈವೇಯಲ್ಲಿ ಗಾಡಿ ಓಡಿಸುವಾಗ ಯಾವ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಬೇಕು, ‍ಟ್ರಾಫಿಕ್ ರೂಲ್‌ಗಳು (ಹಳ್ಳಿ ಮತ್ತು ನಗರಗಳಲ್ಲಿ), ಲೆವೆಲ್ ಕ್ರಾಸಿಂಗ್‌ಗಳಲ್ಲಿ, ರಾಜ್ಯ ಮತ್ತು ರಾಷ್ಟ್ರ ಹೆದ್ದಾರಿಗಳನ್ನು ನಿರ್ಮಿಸುವಾಗ ಬಳಸಬಹುದಾದ ಮಾರ್ಗಸೂಚಿಗಳೇನು, ಸ್ಟ್ರಿಲ್ ಬಿರ್ಡ್ಜ್, ಕಾಂಕ್ರೀಟ್ ‍ಹಾಸುಗಳ ನಿರ್ವಹಣೆ ಹೇಗೆ – ಎಂಬ ಹತ್ತು ಹಲವು ಮಹತ್ವದ ವಿಷಯಗಳನ್ನು ನಮ್ಮ ಇಂಡಿಯನ್ ರೋಡ್ಸ್ ಕಾಂಗ್ರೆಸ್ ಸ್ಟಾಂಡರ್ಡ್‌ಗಳಲ್ಲಿ (Indian Roads Congress Standards) ‌ನೀಡಲಾಗಿದೆ.

ಈ ಮಾಹಿತಿ ಇಂಗ್ಲೀಷ್‌ನಲ್ಲಿದ್ದು ಇವುಗಳನ್ನು ಭಾರತೀಯರು ತಮ್ಮ ಭಾಷೆಯಲ್ಲೇ ಓದಲು, ಅನುಸರಿಸಲು ಸಾಧ್ಯವಾಗದಿದ್ದರೆ ಹೇಗೆ? ಇವುಗಳನ್ನು ಕನ್ನಡದಲ್ಲಿ ರೂಪಿಸಿ ಲಭ್ಯವಾಗಿಸಿದ್ದರೆ ನಮ್ಮ ಮಕ್ಕಳು, ಹಳ್ಳಿಗರು, ಕನ್ನಡದ ವಿದ್ಯಾರ್ಥಿಗಳು, ಜೊತೆಗೆ ಕೇವಲ ಕನ್ನಡ ಬರುವ ನಾಗರೀಕರೂ ಬಳಸಬಹುದಿತ್ತಲ್ಲವೇ?

ಇದನ್ನು ಸಾಧ್ಯವಾಗಿಸಲು ಅಮೇರಿಕಾದ ಕಂಪ್ಯೂಟರ್ ವಿಜ್ಞಾನಿ ಮತ್ತು ಮುಕ್ತ ಜ್ಞಾನದ ನಮ್ಮ ಕನ್ನಡದ ಕೆಲಸಗಳಿಗೂ ಕೈ ಜೋಡಿಸುತ್ತಿರುವ ಡಾ. ಕಾರ್ಲ್ ಮಲಮದ್ ಅವರ ಪಬ್ಲಿಕ್ ರಿಸೋರ್ಸ್ ಸಂಸ್ಥೆ ಗೂಗಲ್ ವಿಷನ್ ಎಪಿಐ ಮತ್ತು ನ್ಯೂರಲ್ ನೆಟ್‌ವರ್ಕ್ ಬಳಸಿ ಅನುವಾದದ ಸಾಹಸಕ್ಕೆ ಕೈ ಹಾಕಿದೆ. ಈ ಯೋಜನೆಯ ಬಗ್ಗೆ ಇಲ್ಲಿ ವಿವರವಾಗಿ ತಿಳಿದುಕೊಳ್ಳಬಹುದು -> https://law.resource.org/pub/in/bis/irc/translate/

Public Resource has put considerable effort into making available rules and regulations and other important knowledge of use to students, teachers, government officials, and citizens of India. Among those resources are the codes and standards of the esteemed Indian Roads Congress. All of those road codes have been made available on our servers and on the Internet Archive on a strictly non-commercial basis to assist the students and the lifelong learners of India in their pursuit of an education so that they may better their status and their opportunities and to secure for themselves and for others justice, social, economic and political.

ಈ ಅನುವಾದ ಕಾರ್ಯ ಕನ್ನಡವೂ ಒಳಗೊಂಡಂತೆ ಭಾರತದ ೯ ಭಾಷೆಗಳ ಮೇಲಿನ ಪ್ರಯೋಗವಾಗಿದೆ. ಇಲ್ಲಿ ಲಭ್ಯವಾಗಿಸಿರುವ ನುಡಿಗಟ್ಟುಗಳನ್ನು ಪರಿಶೀಲಿಸಿ ಕಾರ್ಲ್‌ ಅವರಿಗೆ ಒದಗಿಸಿದಲ್ಲಿ, ಭಾಷಾ ಸಮುದಾಯ ಒಮ್ಮೆ ಈ ಇಡೀ ಸುರಕ್ಷತಾ ಮಾರ್ಗಸೂಚಿಗಳನ್ನು ಜನರಿಗೆ ಲಭ್ಯವಾಗಿಸಲು ಕೊಡುಗೆ ನೀಡಿದಂತಾಗುತ್ತದೆ. ಮಾರ್ಗಸೂಚಿಗಳನ್ನು ಒಮ್ಮೆ ಓದಲು ಕೂಡ ಈ ಯೋಜನೆಯ ಕೊಂಡಿಗೆ ನೀವು ಎಡತಾಗಬಹುದು. 

‍೨. ಇಂಟರ್ನೆಟ್ ಆರ್ಕೈವ್ ಸ್ಕಾಲರ್  – https://scholar.archive.org/ ‍

ಸಂಶೋಧನಾಸಕ್ತರಿಗೆ ಇಂಟರ್ನೆಟ್ ಆರ್ಕೈವ್ ಸಿಹಿಸುದ್ಧಿ ನೀಡಿದೆ. ೨೫ ಮಿಲಿಯನ್ ಸಂಶೋಧನಾ ಲೇಖನಗಳನ್ನು ಮತ್ತು ಇತರೆ ಸಂಶೋಧನಾ ದಾಖಲೆಗಳನ್ನು ಸುಲಭವಾಗಿ ಇಂಟರ್ನೆಟ್ ಆರ್ಕೈವ್‌ನಲ್ಲಿ ಓದಿ ನೋಡುವಂತೆ ಅವಕಾಶ ಮಾಡಿಕೊಡಲಾಗಿದೆ. ಇಲ್ಲಿ ೧೮ ನೇ ಶತಮಾನದ ಜರ್ನಲ್‌ಗಳಿಂದ್ ಹಿಡಿದು ಇತ್ತೀಚಿನ ಓಪನ್ ಆಕ್ಸೆಸ್ ಕಾನ್ಪರೆನ್ಸ್‌ಗಳ ವರದಿ ಮತ್ತು ಪೂರ್ವ-ಮುದ್ರಣ ಪ್ರತಿಗಳನ್ನೂ ಕೂಡ ಇಂಟರ್ನೆಟ್‌ನ ಜಾಡುಹಿಡಿದು ನೀಡಲಾಗಿದೆ. 

ಇಂಟರ್ನೆಟ್ ಆರ್ಕೈವ್ ಸ್ಕಾಲರ್ ಈ ಕೆಳಗಿನ ಮೂರು ವಿಧಾನಗಳ ಮೂಲಕ ತನ್ನ ಹುಡುಕು ಪರಿವಿಡಿಯನ್ನು ಜನರಿಗೆ ದೊರಕಿಸುತ್ತದೆ. 

೧. ವೇ ಬ್ಯಾಕ್ ಮಷೀನ್ ಮೂಲಕ ಮತ್ತು ಆರ್ಕೈವ್-ಇಟ್ ಪಾರ್ಟ್ನರ್ ಕಲೆಕ್ಷನ್‌ಗಳ ಮೂಲಕ ಉಳಿಸಲಾದ ಸಾರ್ವಜನಿಕ ಜಾಲ ಮಾಹಿತಿಗಳು (Public web content)

೨. ಡಿಜಿಟೈಜ್ ಮಾಡಿದ ಮುದ್ರಿತ ಮಾಹಿತಿ – ಪೇಪರ್ ಮತ್ತು ಮೈಕ್ರೋ ಫಿಲ್ಮ್ ಕಲೆಕ್ಷನ್ನುಗಳು 

೩. ಸಾಮಾನ್ಯ ಮಾಹಿತಿ – ಇಂಟರ್ನೆಟ್ ಆರ್ಕೈವ್ ಮತ್ತು ಇತರೆ ಸಹಭಾಗಿತ್ವಗಳ ಮೂಲಕ ಲಭ್ಯವಾದ ಕಲೆಕ್ಷನ್ನುಗಳ ಮೂಲಕ 

ಇವುಗಳೆಲ್ಲದರ ಮೆಟಾಡೇಟಾ ‍ fatcat.wiki, ಎಂಬ ಮುಕ್ತ ಮತ್ತು ಸಾರ್ವಜನಿಕರು ಸಂಪಾದಿಸಬಲ್ಲ ಸಂಶೋಧನಾ ಕೆಲಸಗಳ ಪರಿವಿಡಿಯ ಮೂಲಕ ಬರುತ್ತದೆ. ವಿಕಿ ಆದ ಕಾರಣ – ಇಲ್ಲಿ ಸಂಪಾದಿಸಲಾಗುವ ಎಲ್ಲ ಮಾಹಿತಿಗಳ ಇತಿಹಾಸವನ್ನು, ಬದಲಾವಣೆಯ ಜಾಡನ್ನು ಹಿಡಿಯುವುದೂ ಸುಲಭವಾಗುತ್ತದೆ. 

 2019 FORCE11 conference presentation ವಿಡಿಯೋ ಈ ಯೋಜನೆಯನ್ನು ಸಾಧ್ಯವಾಗಿಸಿದ ತಾಂತ್ರಿಕ ಮಾಹಿತಿ ಮತ್ತು ಯೋಜನೆಯ ಮಹತ್ವದ ಗುರಿಗಳ ಪಕ್ಷಿನೋಟವನ್ನು ನಿಮಗೆ ನೀಡಬಲ್ಲದು. 

ಈ ಯೋಜನೆ ಸಂಶೋಧನಾಸಕ್ತರಿಗೆ ಸಂಪೂರ್ಣ ಮಾಹಿತಿಯ ಆಗರವನ್ನು, ಡೇಟಾ ಮೈನಿಂಗ್‌ಗೆ ಬೇಕಾದ ಡಿರೈವ್‌ಮಾಡಲದ ಡೇಟಾ ಆರ್ಕೈವ್‌ಗಳನ್ನೂ ಸಾರ್ವಜನಿಕ ಬಳಕೆಗೆ ತೆಗೆದಿಡುವ ಆಶಯವನ್ನು ಹೊಂದಿದೆ. 

೪.  ಸ್ಕೈ‌-ಹಬ್ ನ ‌ಸೃಷ್ಟಿಕರ್ತೆ  ಅಲೆಕ್ಸಾಂಡ್ರ ‌ಅಸನೋವ್ನ ಎಲ್ಬಾಕ್ಯಾನ್ (Alexandra Elbakyan) ‌- ಸ್ಕೈ-ಹಬ್ ಸೃಷ್ಟಿಸಿದ್ದೇತಕ್ಕೆ? ಪ್ರಸಿದ್ಧ ವಿಜ್ಞಾನ ಪ್ರಕಟಣಾ ಸಂಸ್ಥೆಗಳು ಇವರ ಮೇಲೆ ಹರಿಹಾಯುತ್ತಿರುವುದೇತಕ್ಕೆ? ಇವರು ಈ ಯೋಜನೆಯನ್ನು ನೆಚ್ಚಿ, ವಿಶ್ವದಾದ್ಯಂತ ಕಾನೂನು ಸಮರ ಎದುರಿಸುತ್ತಿರುವುದೇತಕ್ಕೆ. ನಮ್ಮ ದೆಹಲಿ ಹೈ-ಕೋರ್ಟ್‌ನಲ್ಲಿ ಇವರ ವಿರುದ್ಧ ಇರುವ ಮೊಕದ್ದಮೆಯ ಬಗ್ಗೆ ಅವರಾಡಿರುವ ಮಾತುಗಳಲ್ಲಿ ಇಲ್ಲಿ ಓದಬಹುದು‍. ಇದರ ಬಗ್ಗೆ ಮುಕ್ತ ಕಣದಲ್ಲಿ ಮತ್ತೊಂದು ಪೂರ್ಣ ಲೇಖನವನ್ನೇ ಬರೆಯುವೆ. 

‌ಕೊಸರು:- ಸಂಶೋಧನೆಗೆ ಬೇಕಿರುವ ಮುಕ್ತ ಮಾಹಿತಿ – ಕನ್ನಡಕ್ಕೂ ಸಿಗಲಿ, ಸಂಶೋಧನೆಗಳು ಹೊಸತನ್ನು ಭಾಷೆಗೆ, ಬದುಕಿಗೆ ನೀಡಲಿ… 

‍ಲೇಖಕರು ಓಂಶಿವಪ್ರಕಾಶ್

March 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: