ಕನ್ನಡಕ್ಕೆ ಕನ್ನಡದ್ದೇ ಐಎಸ್‌ಬಿಎನ್ ಸರ್ಚ್

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು.

ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ.

ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ ಮಾಡುತ್ತಿದ್ದಾರೆ.

ಸಂಚಯ, ಸಂಚಿ, ಕಿಂದರಿಜೋಗಿ ಹೀಗೆ ನಾನಾ ಮುಖಗಳಲ್ಲಿ ಅವರ ಪ್ರತಿಭೆ ಪ್ರಕಟವಾಗಿದೆ.

|ಕಳೆದ ಸಂಚಿಕೆಯಿಂದ|

ಪುಸ್ತಕಕ್ಕೊಂದು ಹೆಸರು, ಲೇಖಕರ ಹೆಸರು, ಪ್ರಕಾಶಕರ ಹೆಸರು, ಪ್ರಿಂಟ್ ಆದ ವರ್ಷ/ದಿನಾಂಕ ಇರಬೇಕು – ಇವುಗಳನ್ನು ಹುಡುಕಿ ನೋಡಲು ಸಾಧ್ಯವಿರಬೇಕು. ಇದು ಓದುಗನಿಗೆ, ಓದ ಬಯಸುವವನಿಗೆ ದೊರೆಯಬೇಕು. ಇಂತಹದ್ದೊಂದು ಸುಲಭ ಸಾಧನ ಕನ್ನಡಕ್ಕೆ ಲಭ್ಯವಾಗಬೇಕು. ಈ ಕನಸುಗಳನ್ನು ಹೊತ್ತು ಬಂದದ್ದು ನನ್ನ ಪುಸ್ತಕ ಸಂಚಯದ ಯೋಜನೆ (https://pustaka.sanchaya.net) –  ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಮೂಲಕ ‍ಲಭ್ಯವಾದ ಪುಸ್ತಕಗಳಿಂದ ಪ್ರಾರಂಭವಾದ ಯೋಜನೆ, ಸಮಗ್ರ ಕನ್ನಡ ಪುಸ್ತಕ ಪರಿವಿಡಿ ಏಕೆ ಲಭ್ಯವಿಲ್ಲ ಎಂದು ಚಿಂತಿಸುವಂತೆ ಮಾಡಿತು. ‍

ಈ ಯೋಜನೆಗೆ ಸಹಕರಿಸಿ ಪುಸ್ತಕಗಳ ಹೆಸರು ಇತ್ಯಾದಿಗಳನ್ನು ಸಹಭಾಗಿತ್ವ ಯೋಜನೆಯ ಮೂಲಕ (https://samooha.sanchaya.net) ಕನ್ನಡೀಕರಿಸಲು ಸಹಕರಿಸಿದ ಮಂದಿ ಅನೇಕ. ಸಧ್ಯಕ್ಕೆ ಪುಸ್ತಕ ಸಂಚಯ ಡಿಎಲ್‌ಐ, ಓಯುಡಿಅಲ್ ಜೊತೆಗೆ ಕುವೆಂಪು ಭಾಷಾ ಭಾರತಿಯ ಪುಸ್ತಕಗಳ ಹೆಸರು, ಸಾಹಿತ್ಯ ಪರಿಷತ್ ಪುಸ್ತಕಗಳ ಹೆಸರು ಇತ್ಯಾದಿಗಳನ್ನು ಹುಡುಕಲು ಸಹಕರಿಸುತ್ತದೆ.

ಇದಕ್ಕೆ ನಮ್ಮ ಪುಸ್ತಕ ಪ್ರಾಧಿಕಾರ, ಪ್ರಕಾಶಕರ ಸಂಘಗಳು, ಪ್ರಕಾಶಕರು, ಲೇಖಕರು ತಮ್ಮ ಪುಸ್ತಕಗಳ ಹೆಸರು ಇತ್ಯಾದಿಗಳು – ಜೊತೆಗೆ ಅವುಗಳು ದೊರೆಯುವ ಕೊಂಡಿ ನೀಡಿದಲ್ಲಿ ಕನ್ನಡದ ಪುಸ್ತಕಗಳ ಸಮಗ್ರ ಪರಿವಿಡಿ ಸಿಗುವಂತೆ ಮಾಡಲು ಬಹಳ ಸಮಯ ಬೇಕಿಲ್ಲ. ಓದುಗನಿಗೆ ಕೊಳ್ಳುವ ಮಾಹಿತಿ ನೀಡಲೂ ಇದು ಸಹಕರಿಸುತ್ತದೆ. ಗುಡ್‌ರೀಡ್ಸ್‌ನಂತೆ ಕನ್ನಡಕ್ಕೂ ತಂತ್ರಜ್ಞಾನ ಸಾಧ್ಯತೆಗಳನ್ನು ಒದಗಿಸಿಕೊಡಲು ಪ್ರಾರಂಭಿಸಿದ ಒಂದು ಯೋಜನೆ ಇದು ಸಾಧ್ಯತೆಗಳು ಸಾವಿರ. 

ಇದೆಲ್ಲಕ್ಕೂ ಮೊದಲು ನಾನು ಪ್ರಶ್ನಿಸಲು ಪ್ರಾರಂಭಿಸಿದ್ದು ಕನ್ನಡಕ್ಕೆ ಐಎಸ್‌ಬಿಎನ್ ನಂಬರ್ ‍‍International Standard Book Number (ISBN) ಯಾಕೆ ಹಾಕುತ್ತಿಲ್ಲ ಎಂದು. ಇದು ದೊಡ್ಡ ವಿಷಯ ಎನಿಸಿರಲೇ ಇಲ್ಲ. ಏಕೆಂದರೆ ಮೊದಲ ದಿನಗಳಲ್ಲಿ ಪೋತಿ (pothi.com) ಐಎಸ್‌ಬಿಎನ್ ನಂಬರ್ ಕೊಡುತ್ತಿತ್ತು. ನಂತರ ಇದನ್ನು Department of Higher Education, MHRD, Government of India –  ‍Raja Rammohun Roy National Agency for ISBN ಮೂಲಕ ಕೊಡಲು ಶುರು ಮಾಡಿತು.

ಯಾವುದೇ ಶುಲ್ಕವಿಲ್ಲದೇ ಪಡೆಯಬಹುದಾದ ಈ ನಂಬರ್ ನಮ್ಮ ಪುಸ್ತಕಗಳನ್ನು ಯಾವುದೇ ಸೂಪರ್ ಮಾರ್ಕೆಟ್, ಇಕಾಮರ್ಸ್ ಪೋರ್ಟಲ್‌ಗಳಲ್ಲೂ ಕನ್ನಡದ ಪುಸ್ತಕಗಳನ್ನು ಮಾರುವ ಸಾಧ್ಯತೆಯನ್ನು ಒದಗಿಸಿಕೊಡುತ್ತದೆ. ಸರ್ಕಾರೀ ವೆಬ್‌ಸೈಟ್ ಆದ್ದರಿಂದ ಈ ವೆಬ್‌ಸೈಟ್ ಕೂಡ ವಾರಗಟ್ಟಲೆ ತೊಂದರೆ ಕೊಡುವುದು ಇತ್ತೀಚೆಗೂ ಸಾಮಾನ್ಯ ಎನಿಸಿದೆ. ೧೯೭೦ರಿಂದ ಇಲ್ಲಿಯವರೆಗೆ ಕನ್ನಡದ ಎಷ್ಟು

ಮತ್ತಷ್ಟು ಕನ್ನಡ ಪುಸ್ತಕ ಯೋಜನೆಗಳೊಂದಿಗೆ ಮುಂದಿನವಾರ ಸಿಗೋಣ. ಐಎಸ್‌ಬಿಎನ್ ನಂಬರ್‌ಗಳನ್ನು ತೆಗೆದುಕೊಳ್ಳಲಾಗಿದೆ ಎಂದು ನೋಡ ಹೊರಟರೆ ಅಲ್ಲೊಂದು ಹೊಸ ನಿರಾಸೆ ಕಾದಿತ್ತು. ‌ಈ ಕೆಳಗಿನ ಅಂಕಿಅಂಶ ಗಮನಿಸಿ. 

ಸರ್ಕಾರದ ಎಂ.ಎಚ್.‌ಆರ್.‌ಡಿ ಅಡಿ ಬರುವ ಐಎಸ್‌ಬಿ‌ಎನ್ ರೆಜಿಸ್ಟ್ರಿ (Raja Rammohun Roy ISBN Agency) ಇದುವರೆಗೆ ಲಭ್ಯವಾಗಿಸಿರುವ ಐಎಸ್‌ಬಿ‌ಎನ್ ಸಂಖ್ಯೆಗಳು 680069 ‍- ಇದರಲ್ಲಿ ಬಳಕೆದಾರರು (ಪ್ರಕಾಶಕರು) ಬಳಸಿಕೊಂಡಿರುವ ಐಎಸ್‌ಬಿ‌ಎನ್ ಸಂಖ್ಯೆಗಳು ‍489346. ನನ್ನ ಸಂಶೋಧನೆಯ ಪ್ರಕಾರ ‍ಪ್ರಕಾಶಕರು ಕನ್ನಡ ಪುಸ್ತಕಗಳಿಗೆ ಬಳಸಿಕೊಂಡಿರುವ ಸಂಖ್ಯೆಗಳು 8265! ಇಷ್ಟು ಪುಸ್ತಕಗಳ ಮಾಹಿತಿ ಇಂಗ್ಲೀಷ್‌ನಲ್ಲಿದೆ. ಕನ್ನಡ ಪುಸ್ತಕಗಳ ಮಾಹಿತಿ ಎನ್ನುವ ಸಾಲು ಕೂಡ ಕನ್ನಡದಲ್ಲಿಲ್ಲ. 

‍ಇದನ್ನು ಸರಿಪಡಿಸುತ್ತಾರೆ ಎನ್ನುವ ನಂಬಿಕೆ ಇಲ್ಲ. ಆದ್ದರಿಂದ ಮತ್ತೊಂದು ಯೋಜನೆ ಹುಟ್ಟಿಕೊಂಡಿದೆ – https://isbn.sanchaya.net ‌- ‌ಹೌದು ಕನ್ನಡಕ್ಕೆ ಕನ್ನಡದ್ದೇ ಐಎಸ್‌ಬಿಎನ್ ಸರ್ಚ್. ಕೆಲಸ ರಾಶಿ ಇದೆ. ಮೊದಲು ೮೨೬೫ ಪುಸ್ತಕಗಳ ಹೆಸರು ಇತ್ಯಾದಿ ಕನ್ನಡಕ್ಕೆ ಬರಬೇಕು. ಇದಕ್ಕೆ ನೀವೂ ಮೊದಲಿನಂತೆ ಕೈ ಜೋಡಿಸಬಹುದು. ಮಾಹಿತಿ ಕೆಲವೇ ದಿನಗಳಲ್ಲಿ. ಒಂದಷ್ಟು ಜನ ಸೇರಿದರೆ ಕೆಲವು ವಾರ/ಘಂಟೆ/ನಿಮಿಷಗಳ ಕೆಲಸ. ಮುಂದೆ ಇದರ ಮಾಹಿತಿ ಕನ್ನಡದಲ್ಲೇ ನೀಡಿ ಎನ್ನುವ ಕೂಗು ಹಾಕುವುದು. 

ನೀವು ನಿಮ್ಮ ಮನೆಯಲ್ಲಿನ ಪುಸ್ತಕಗಳನ್ನು ಪಟ್ಟಿ ಮಾಡಿದ್ದೀರಾ? ಆ ಪಟ್ಟಿ ಯುನಿಕೋಡ್‌ನಲ್ಲಿದೆಯೇ? ಅದನ್ನು ಇತರೆ ಕನ್ನಡಿಗರೊಂದಿಗೆ ಹಂಚಿಕೊಳ್ಳುವ ಮುಕ್ತ ಮನಸ್ಸಿದೆಯೇ? ಸಂಪರ್ಕಿಸಿ – ಅದಕ್ಕೆ ನಿಮ್ಮ ಕಂಪ್ಯೂಟರಿನಿಂದ ಮುಕ್ತಗೊಳಿಸೋಣ.  

ಈ ರೀತಿಯ ಪಟ್ಟಿ ಮಾಡಲು ಇಚ್ಚಿಸುವವರಿಗೆ Dante – Book Tracker, Libi App  https://www.libib.com/  ಎನ್ನುವ ತಂತ್ರಾಂಶಗಳು ಬಹಳ ಸಹಕಾರಿ. ಇಡೀ ಪಟ್ಟಿಯನ್ನು ನಿಮ್ಮ ಬಳಕೆಗೆ ಎಕ್ಸ್‌ಪೋರ್ಟ್ ಮಾಡಿಕೊಳ್ಳಬಹುದು. 

‍‍

‍ಲೇಖಕರು ಓಂಶಿವಪ್ರಕಾಶ್

November 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: