ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.
ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.
ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಿಂದ ಎಂಡಿ (ಆಯುರ್ವೇದ) ಪದವಿ ಪಡೆದರು.
ಬೆಂಗಳೂರಿನ ಅತ್ಯಂತ ಯಶಸ್ವಿ ಆಯುರ್ವೇದ ಅಂಗಡಿಗಳ ಸರಪಳಿಯಾದ ಆಯುರ್ ಸೆಂಟ್ರಲ್ ಅನ್ನು ಸಹ-ಸ್ಥಾಪಿಸಿದರು.
ಇದೀಗ ‘ಅವಧಿ’ಯಲ್ಲಿ ‘ಕಾಂಗರೂ ನಾಡಿನಲ್ಲಿ’ ಶೀರ್ಷಿಕೆಯ ಹೊಸ ಸರಣಿಯೊಂದಿಗೆ ಬರುತ್ತಿದ್ದಾರೆ.
ಸರಣಿ – 12
ಫೋಟೋ ಕೃಪೆ : ಪ್ರವೀಣ್ ಮೂರ್ತಿ
ಮೆಲ್ಬೋರ್ನ್ ಚಳಿಗಾಲವನ್ನು ಥರ್ಮಾಮೀಟರ್‌ನಲ್ಲಿ ಅಳೆಯಲು ಸಾಧ್ಯವಿಲ್ಲ. ಅದು ಬೆಳಿಗ್ಗೆ ಏಳು ಗಂಟೆಯಾದರೂ ಕಿಟಕಿಯ ಹೊರಗೆ ಇನ್ನೂ ಅರ್ಧರಾತ್ರಿ ಉಳಿದಿರುವಂತೆ ಕಾಣುವ ಬೆಳಕು. ಅದು ಸೂರ್ಯ ಬಂದು ನಿಂತರೂ, “ನಾನು ಇಂದು moral support ಮಾತ್ರ ಕೊಡುತ್ತೇನೆ” ಎಂದು ಹೇಳುವ ದಿನ.
ಚಳಿಗಾಲದಲ್ಲಿ ಹಗಲು ಬೇಗ ಮುಗಿಯುತ್ತದೆ. ಸಂಜೆ ಐದು ಗಂಟೆಗೆ ನಗರ ಬಸವಳಿದಂತೆ ಕಾಣಿಸುತ್ತದೆ . ಜನರು ತಮ್ಮ winter uniforms ಧರಿಸುತ್ತಾರೆ. ಕೋಟುಗಳು. ಮಫ್ಲರ್‌ಗಳು. ಬೂಟುಗಳು. ಉದ್ದವಾದ ಕೋಟ್ ಗಳು . ಅರ್ಧ ನಗರ Scandinavian crime series auditionಗೆ ಹೋಗುತ್ತಿರುವಂತೆ ಕಾಣುತ್ತದೆ.
ಇಲ್ಲಿನ ಚಳಿ ಒಂದೇ ಸಾರಿ ಆವರಿಸುವುದಿಲ್ಲ . ಅದು ಕಳ್ಳನಂತೆ ಬರುತ್ತದೆ. ಮೊದಲು ಕಿವಿಗೆ. ನಂತರ ಮೂಗಿನ ತುದಿಗೆ. ನಂತರ ಬೆರಳ ತುದಿಗೆ. ಕೊನೆಯಲ್ಲಿ ಆತ್ಮಕ್ಕೆ. Port Phillip Bay ಕಡೆಯಿಂದ ಬರುವ ಗಾಳಿ ನಿಮ್ಮ ಕುತ್ತಿಗೆಯೊಳಗೆ ತನ್ನ visiting card ಹಾಕಿಬಿಡುತ್ತದೆ. ಇಲ್ಲಿ ಕೊಡೆ ಮಳೆಯಿಂದ ರಕ್ಷಿಸಬಹುದು. ಗಾಳಿಯಿಂದ ಅಲ್ಲ. Melbourne ಗಾಳಿಗೆ personal space ಅನ್ನುವ concept ಇಲ್ಲ. ಆದರೆ ಈ ಚಳಿಯಲ್ಲೇ ನಗರದ ನಿಜವಾದ ಮುಖ ಕಾಣಿಸುತ್ತದೆ.

ಮಳೆ ಬಿದ್ದ ನಂತರ Melbourneನ lanewayಗಳು ಹೊಳೆಯಲು ಆರಂಭಿಸುತ್ತವೆ. ಒದ್ದೆಯಾದ bluestone ರಸ್ತೆಗಳ ಮೇಲೆ tram ಬೆಳಕುಗಳು ಪ್ರತಿಬಿಂಬಿಸುತ್ತವೆ. ಕೆಲವು ರಸ್ತೆಗಳನ್ನು ನೋಡಿದರೆ ಹಳೆಯ cinema set ತರ ಕಾಣುತ್ತವೆ. ಒಮ್ಮೆ molten lava ಆಗಿದ್ದ basalt ಈಗ ಸಾವಿರಾರು ಕಾಲುಗಳ ನೆನಪು ಹೊತ್ತು ಮೌನವಾಗಿ ಮಲಗಿದೆ. ಮಳೆ ಬಿದ್ದ bluestone ರಸ್ತೆ ಮೇಲೆ ನಿಂತರೆ ಅದು ಕಲ್ಲಿನ ಮೇಲೆ ನಿಂತಂತೆ ಅನ್ನಿಸುವುದಿಲ್ಲ. ನಗರದ memory ಮೇಲೆ ನಿಂತಂತೆ ಅನ್ನಿಸುತ್ತದೆ.
ಒಂದು ಸಂಜೆ ಮಳೆಯಲ್ಲೇ ಒಂದು ಚಿಕ್ಕ bakery window ಹತ್ತಿರ ನಿಂತೆ. ಒಳಗೆ ಒಬ್ಬ ವಯಸ್ಸಾದ ವ್ಯಕ್ತಿ soup bowl ಹಿಡಿದು ಕುಳಿತಿದ್ದರು. ಹೊರಗೆ ಗಾಜಿನ ಮೇಲೆ ಮಂಜು. ಒಳಗಿಂದ bread ಬೇಯುವ ವಾಸನೆ. ಕೆಲವೊಮ್ಮೆ winter cityಗಳು architecture ಮೂಲಕ ಅಲ್ಲ, ಕಿಟಕಿ ಗಳ ಮೂಲಕ ನೆನಪಿನಲ್ಲಿ ಉಳಿಯುತ್ತವೆ.
ಚಳಿಗಾಲದಲ್ಲಿ ಕಿಟಕಿಯ ಪಕ್ಕದ ಆಸನಗಳು suddenly premium real estate ಆಗುತ್ತವೆ. Tram ಕಿಟಕಿಗಳ ಮೇಲೆ ಮಂಜು ಜಮೆಯಾಗುತ್ತದೆ . ಒಳಗೆ ಕುಳಿತವರು ತಮ್ಮ reflection ಜೊತೆಗೆ ಪ್ರಯಾಣಿಸುತ್ತಾರೆ. ಯಾರೋ ಪುಸ್ತಕ ಓದುತ್ತಾರೆ. ಯಾರೋ ಕಣ್ಣು ಮುಚ್ಚಿಕೊಂಡು ಕುಳಿತಿರುತ್ತಾರೆ. ಯಾರೋ ಹೊರಗೆ ನೋಡುತ್ತಿರುತ್ತಾರೆ. Tram ಕಿಟಕಿಯ ಮೇಲಿನ ಮಂಜು ಒಳಗಿರುವ ಎಲ್ಲರ ಉಸಿರಿನಿಂದ ಮಾಡಿದ್ದು. ನೀವು ನೋಡುತ್ತಿರುವ reflection ನಿಮ್ಮ ಸುತ್ತಲ ಅಪರಿಚಿತರ ಉಸಿರಿನಲ್ಲಿ ಮುಳುಗಿದೆ.
ರಸ್ತೆ ಪಕ್ಕದ ಮರಗಳು ಎಲೆ ಕಳೆದುಕೊಂಡು ನಿಂತಿರುತ್ತವೆ. ಮೊದಲ ನೋಟಕ್ಕೆ ಅವು ಬತ್ತಿದಂತೆ ಕಾಣುತ್ತವೆ. ಸ್ವಲ್ಪ ಹೆಚ್ಚು ನೋಡಿದರೆ ಬೇರೆ ಕಾಣುತ್ತವೆ. ಎಲೆಗಳಿಲ್ಲದೆ ಮರಗಳ architecture ಕಾಣುತ್ತದೆ. Comfort ಕಡಿಮೆಯಾದಾಗ character ಕಾಣಬಹುದು ಅನ್ನುವ ಅನುಮಾನ ಅಲ್ಲಿ ಹುಟ್ಟುತ್ತದೆ.

ಒಂದು ಸಂಜೆ tram stop ಹತ್ತಿರ ಮಳೆ ಬರುತ್ತಿತ್ತು. ಗಾಳಿ suddenly ಬದಲಾಯಿತು. ಚಳಿ ಕ್ಷಣಾರ್ಧದಲ್ಲಿ ಕಡಿಮೆ ಆಯ್ತು. ಕೆಲವು software engineers ಜೊತೆ ಮಾತನಾಡುತ್ತಿದ್ದೆ. ಒಬ್ಬನು ನಕ್ಕು ಹೇಳಿದ: “Winter ಇಲ್ಲಿ weather ಅಲ್ಲ doctor. Project.”
ಇನ್ನೊಬ್ಬನು ಹೇಳಿದ: “ಬೆಳಿಗ್ಗೆ officeಗೆ ಹೋಗುವಾಗ dark. ಸಂಜೆ ಹೊರಬರುವಾಗ ಮತ್ತೆ dark.”
ಅವರ ಮಾತು ಕೇಳುತ್ತಾ physician brain ಕೆಲಸ ಮಾಡಲು ಶುರುಮಾಡಿತು.
ಮಾನವ ದೇಹ ವಿಚಿತ್ರ. ಲಕ್ಷಾಂತರ ವರ್ಷಗಳಿಂದ ಬೆಳಕಿನ ಜೊತೆ ಒಪ್ಪಂದ ಮಾಡಿಕೊಂಡು ವಿಕಾಸವಾಗಿದೆ. ಬೆಳಕು ಕಡಿಮೆಯಾದರೆ ಹೊರಗೆ ಹೋಗುವ ಆಸೆ ಕಡಿಮೆಯಾಗುತ್ತದೆ. Social interaction ಕಡಿಮೆಯಾಗುತ್ತದೆ. ದೇಹದ ಒಳಗಿನ ಗಡಿಯಾರ ತನ್ನ rhythm ಬದಲಾಯಿಸುತ್ತದೆ. ಕೆಲವರಿಗೆ ಕಾರಣವಿಲ್ಲದ ಆಯಾಸ ಶುರುವಾಗುತ್ತದೆ. ಕೆಲವರಿಗೆ ವಿವರಿಸಲಾಗದ ಭಾರ .
ವೈದ್ಯನಾಗಿ ಖಿನ್ನತೆ, ಆತಂಕ, ಆಯಾಸ ಇರುವ ಅನೇಕ ರೋಗಿಗಳನ್ನು ನೋಡಿದ್ದೇನೆ. ಆದರೆ ಇಲ್ಲಿ ಮೊದಲ ಬಾರಿ ವಿಚಿತ್ರ ಅನುಭವವಾಯಿತು. ಕೆಲವು ದಿನಗಳ ನಂತರ ಹವಾಮಾನವೇ ಸಮಾಲೋಚನಾ ಕೊಠಡಿಯೊಳಗೆ ಬಂದು ಕುಳಿತಿರುವಂತೆ ಅನ್ನಿಸಿತು. ಬೆಳಕು ಕಡಿಮೆಯಾದಾಗ, ಜನ ಹೊರಗೆ ಕಡಿಮೆ ಹೋಗುವಾಗ, ದಿನಗಳು ಸಣ್ಣದಾಗುವಾಗ ಮತ್ತು ಸಂಜೆಗಳು ಉದ್ದವಾಗುವಾಗ ಮನಸ್ಸಿನ ಮೇಲೂ ಅದರ ನೆರಳು ಬೀಳುತ್ತದೆ. ಬಹುಶಃ ಅದಕ್ಕೇ ಇಲ್ಲಿ seasonal depression ಬಗ್ಗೆ ಜನ ಇಷ್ಟು ಸಹಜವಾಗಿ ಮಾತನಾಡುತ್ತಾರೆ.
ಆದರೆ Melbourne winterನಲ್ಲಿರುವ ವಿಚಿತ್ರ ಸಂಗತಿ ಬೇರೆ. ಜನರು ಒಂಟಿತನದ ಜೊತೆ ಹೋರಾಡುವ ವಿಧಾನ. ಯಾರೋ ಬಿಸಿ soup ಹುಡುಕುತ್ತಾರೆ. ಯಾರೋ ಉದ್ದನೆಯ ನಡಿಗೆಗೆ ಹೋಗುತ್ತಾರೆ. ಕೆಲವರು gym ಸೇರಿಕೊಳ್ಳುತ್ತಾರೆ. ಕೆಲವರು ಮನೆಯೊಳಗೆ ಸಣ್ಣ ಗಿಡಗಳನ್ನು ಬೆಳೆಸುತ್ತಾರೆ. ಕೆಲವರು ನಾಯಿಗಳ ಜೊತೆ ಹೊರಗೆ ಬರುತ್ತಾರೆ. Reading rooms ತುಂಬುತ್ತವೆ. Board games ಹೊರಬರುತ್ತವೆ. Shared meals ಹೆಚ್ಚಾಗುತ್ತವೆ.

ಈ ನಗರದಲ್ಲಿ ಕೆಲವೊಮ್ಮೆ ಪ್ರತಿಯೊಬ್ಬರೂ ತಮ್ಮ ತಮ್ಮ ಸಣ್ಣ ದ್ವೀಪಗಳಾಗುತ್ತಿರುವಂತೆ ಕಾಣುತ್ತದೆ. ಆದರೆ interesting ವಿಷಯ ಏನೆಂದರೆ — ಅವರು ಸೇತುವೆ ಕಟ್ಟುವುದನ್ನು ನಿಲ್ಲಿಸುವುದಿಲ್ಲ. ಚಳಿಗಾಲ ಹೆಚ್ಚಾದಂತೆ ಕೆಲವೊಮ್ಮೆ conversations ಕೂಡ ಹೆಚ್ಚಾಗುತ್ತವೆ. ಬಹುಶಃ ಅದಕ್ಕೇ ಈ ನಗರದ ಚಳಿ ನಿಮ್ಮನ್ನು ಒಂಟಿಯಾಗಿಸುವುದಿಲ್ಲ. ಅದು ನಿಧಾನವಾಗಿ ನಿಮ್ಮನ್ನು ನಿಮ್ಮ ಹತ್ತಿರ ಕರೆದೊಯ್ಯುತ್ತದೆ.
ಇಲ್ಲಿನ ಮನೆಗಳೂ ವಿಚಿತ್ರ. ಹೊರಗಿನಿಂದ ನೋಡಿದರೆ postcard ತರ ಕಾಣುತ್ತವೆ. ಒಳಗೆ ಹೋದರೆ experiment ತರ ಅನ್ನಿಸುತ್ತವೆ. Australia ಜಗತ್ತಿಗೆ sunshine ಮಾರುತ್ತದೆ. ಆದರೆ ಅದರ ಅನೇಕ ಹಳೆಯ ಮನೆಗಳು ಚಳಿಯ ಜೊತೆ ಇನ್ನೂ ಒಪ್ಪಂದಕ್ಕೆ ಬರಲು ಪ್ರಯತ್ನಿಸುತ್ತಿವೆ. Melbourne ಚಳಿಗಾಲದಲ್ಲಿ ಬದುಕುವುದು ದೊಡ್ಡ ಸಾಹಸವಲ್ಲ. ಆದರೆ ಪ್ರತಿದಿನ ದೇಹವನ್ನು, ಮನಸ್ಸನ್ನು ಮತ್ತು ಮನೆಯನ್ನು ಬಿಸಿ ಇಟ್ಟುಕೊಳ್ಳುವುದು ಒಂದು ರೀತಿಯ routine maintenance.
ಚಳಿಯಲ್ಲಿ colours ಹೆಚ್ಚು ಜೀವಂತವಾಗುತ್ತವೆ. Grey ಆಕಾಶದ ಕೆಳಗೆ ಒಂದು red coat suddenly poem ಆಗುತ್ತದೆ. Yellow tram ಮಂಜಿನೊಳಗೆ ಹಾದುಹೋದರೆ ಅದು transport ಅಲ್ಲ, moving lantern. Tram window ಹತ್ತಿರ ಕುಳಿತಿರುವ ಮಗುವಿನ ಉಸಿರು ಸಣ್ಣ ಬಿಳಿ ಮೋಡಗಳಾಗಿ ಕಾಣಿಸಿಕೊಂಡು ಮಾಯವಾಗುತ್ತದೆ. ಆ ಕ್ಷಣದಲ್ಲಿ entire city black-and-white photo ಆಗಿದ್ದರೂ, ಜೀವನ colourನಲ್ಲಿ ನಡೆಯುತ್ತಿದೆ ಅನ್ನಿಸುತ್ತದೆ.
Melbourne ಚಳಿ ನಿಮ್ಮ ನಡಿಗೆಯನ್ನು ನಿಧಾನಗೊಳಿಸುತ್ತದೆ. ಆದರೆ ನಿಮ್ಮ ಮನಸ್ಸು ಇನ್ನೂ ಓಡುತ್ತಲೇ ಇದ್ದರೆ, ಬಹುಶಃ ನೀವು ಈ ನಗರವನ್ನು ಇನ್ನೂ ಸರಿಯಾಗಿ ನೋಡಿಲ್ಲ. Melbourne ಚಳಿಗಾಲ ನೆನಪಿನಲ್ಲಿ ಉಳಿಯುವುದು postcard ತರಹದ ಸೌಂದರ್ಯದಿಂದ ಅಲ್ಲ. ಅದು ನಿಧಾನವಾಗಿ ಒಂದು ಮನಸ್ಥಿತಿಯಾಗಿ ಒಳಗೆ ಇಳಿಯುತ್ತದೆ. ಅದು ಸಿನಿಮಾ ಅಲ್ಲ. ಹಿನ್ನೆಲೆ ಸಂಗೀತದಂತೆ ಜೊತೆಗಿರುತ್ತದೆ. ಅದು ಪ್ರವಾಸಿ ಆಕರ್ಷಣೆ ಅಲ್ಲ. ನಿಧಾನವಾಗಿ ಅರ್ಥವಾಗುವ ಅನುಭವ.
ನಗರವೆಂದರೆ ಕಟ್ಟಡಗಳ ಗುಂಪಲ್ಲ; ಒಂದೇ ಚಳಿಯನ್ನು ಸಹಿಸುವ ಅನೇಕ ಅಪರಿಚಿತರ ನಡುವಿನ ಮೌನ ಒಪ್ಪಂದ.
। ನಾಳೆಗೆ ।






0 Comments