ಪಬ್ಲಿಕ್ ಡೊಮೇನ್ ಡೇ ಅಂದರೆ..!

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು.

ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ.

ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ ಮಾಡುತ್ತಿದ್ದಾರೆ.

ಸಂಚಯ, ಸಂಚಿ, ಕಿಂದರಿಜೋಗಿ ಹೀಗೆ ನಾನಾ ಮುಖಗಳಲ್ಲಿ ಅವರ ಪ್ರತಿಭೆ ಪ್ರಕಟವಾಗಿದೆ.

|ಕಳೆದ ಸಂಚಿಕೆಯಿಂದ|

ಪುಸ್ತಕ ಪ್ರಿಯರಿಗೆ, ಮುಕ್ತ ಜ್ಞಾನದ ಹೋರಾಟಗಾರರಿಗೆ ಹೊಸ ವರ್ಷದ ಹರ್ಷಾಚರಣೆ ಜನವರಿ ೧ಕ್ಕೆ ಹೆಚ್ಚುವುದು ಇದೊಂದು ಕಾರಣಕ್ಕೆ.  – ಇಂಟರ್ನ್ಯಾಷನಲ್ ಪಬ್ಲಿಕ್ ಡೊಮೇನ್ ಡೇ! ‍

ಪಬ್ಲಿಕ್ ಡೊಮೇನ್ ಡೇ – ಅವಧಿ ಮೀರಿ ಸಾರ್ವಜನಿಕ ಪರಧಿಗೆ ಹರಿದು ಬಂದ ಕೃತಿಗಳನ್ನು ‍ಆಚರಿಸುವ ದಿನವಾಗಿದೆ. ಆಯಾ ದೇಶದ ಕಾಪಿರೈಟ್ ಕಾನೂನಿಗೆ ಅನ್ವಯವಾಗುವಂತೆ ಈ ದಿನವನ್ನು ಆಚರಿಸಲಾಗುತ್ತದೆ. 

ಅನೌಪಚಾರಿಕವಾಗಿ ಆರಂಭವಾದ ಪಬ್ಲಿಕ್ ಡೊಮೇನ್ ಡೇ ಯನ್ನು ಮೊದಲಿಗೆ ಆಚರಿಸಿದ ಉಲ್ಲೇಖ ೨೦೦೪ರಲ್ಲಿ ಕೆನಡಾದ ಪಬ್ಲಿಕ್ ಡೊಮೇನ್ ಕಾರ್ಯಕರ್ತ ವ್ಯಾಲೇಸ್ ಮೆಕ್ಲೀನ್, ಲಾರೆನ್ಸ್ ಲೆಸಿಗ್ ಅವರ ‍ಕಲ್ಪನೆಯನ್ನು ಬೆಂಬಲಿಸುವಲ್ಲಿಂದ ದೊರೆಯುತ್ತದೆ. ಸಾರ್ವಜನಿಕ ವಲಯಕ್ಕೆ ಪ್ರವೇಶಿಸುವ ಲೇಖಕರು, ಕೃತಿಗಳ ಪಟ್ಟಿಯನ್ನು ಹಲವಾರು ವೆಬ್‌ಸೈಟ್‌ಗಳು ಪ್ರಕಟಿಸುವುದು ಈ ಆಚರಣೆಯ ಮುಖ್ಯ ಅಂಶ. ಜೊತೆಗೆ ವಿಶ್ವದಾದ್ಯಂತ ವಿವಿಧ ಸಂಸ್ಥೆಗಳು ಈ ದಿನ ವಿಶೇಷ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತವೆ. 

Logo PDD 2021.svgA logo of the 2021 Public Domain Day

ಒಂದು ಕೃತಿಯ ಕಾಪಿರೈಟ್‌ಗೆ ಕಾನೂನಿನ ಅನ್ವಯ ತನ್ನ ಸೃಷ್ಟಿಕರ್ತ ಹಾಗೂ ‍ಮಾಲೀಕನಿಗೆ ತನ್ನ ಮೌಲ್ಯವನ್ನು ಸಂಪಾದಿಸಿದ ನಂತರ, ಅಂದರೆ ಕಾಪಿರೈಟ್‌ ಮಾಲಿಕ ತೀರಿಕೊಂಡ ೬೦ ವರ್ಷದ ನಂತರ (ಭಾರತದಲ್ಲಿ) ಅಥವಾ ೭೫ ವರ್ಷಗಳ ನಂತರ (ಅಮೆರಿಕದಲ್ಲಿ) ‍ಸಾರ್ವಜನಿಕ ಸ್ವತ್ತಾಗುತ್ತದೆ. ‍ಈ ದಿನದಿಂದ ಇಂಟರ್ನೆಟ್ ಆರ್ಕೈವ್, ಹಾಥಿ ಟ್ರಸ್ಟ್, ಗೂಗಲ್ ಬುಕ್ಸ್ – ಪಬ್ಲಿಕ್ ಡೊಮೇನ್ ಪುಸ್ತಕಗಳ ಪೂರ್ಣ ಪಠ್ಯವನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ದೊರೆಯುವಂತೆ ಮಾಡುತ್ತವೆ. 

ಈ ವರ್ಷದ ಕೆಲವು ಪ್ರಮುಖ ಪುಸ್ತಕಗಳು, ಚಲನಚಿತ್ರಗಳು, ಸಂಗೀತದ ಪಟ್ಟಿ ಇಂತಿದೆ. 

‌ಪುಸ್ತಕಗಳು'The New Negro' by Alain Locke book cover

‌ಚಿತ್ರಗಳು

'Go West' movie poster

(Yes, there was a film called Lovers in Quarantine, though it was a comedy, and they only had to quarantine for a week.)

ಸಂಗೀತ

Sidney Bechet
Fletcher Henderson
  • Always, by Irving Berlin
  • Sweet Georgia Brown, by Ben Bernie, Maceo Pinkard & Kenneth Casey
  • Works by Gertrude ‘Ma’ Rainey, the “Mother of the Blues,” including Army Camp Harmony Blues (with Hooks Tilford) and Shave ’Em Dry (with William Jackson)
  • Looking for a Boy, by George & Ira Gershwin (from the musical Tip-Toes)
  • Manhattan, by Lorenz Hart & Richard Rodgers
  • Ukulele Lady, by Gus Kahn & Richard Whiting
  • Yes Sir, That’s My Baby, by Gus Kahn & Walter Donaldson
  • Works by ‘Jelly Roll’ Morton, including Shreveport Stomps and Milenberg Joys (with Paul Mares, Walter Melrose, & Leon Roppolo)
  • Works by W.C. Handy, including Friendless Blues (with Mercedes Gilbert), Bright Star of Hope (with Lillian A. Thorsten), and When the Black Man Has a Nation of His Own (with J.M. Miller)
  • Works by Duke Ellington, including Jig Walk and With You (both with Joseph “Jo” Trent)
  • Works by ‘Fats’ Waller, including Anybody Here Want To Try My Cabbage (with Andrea “Andy” Razaf), Ball and Chain Blues (with Andrea “Andy” Razaf), and Campmeetin’ Stomp
  • Works by Bessie Smith, the “Empress of the Blues,” including Dixie Flyer Blues, Tired of Voting Blues, and Telephone Blues
  • Works by Lovie Austin, including Back Biting Woman’s Blues, Southern Woman’s Blues, and Tennessee Blues
  • Works by Sidney Bechet, including Waltz of Love (with Spencer Williams), Naggin’ at Me (with Rousseau Simmons), and Dreams of To-morrow (with Rousseau Simmons)
  • Works by Fletcher Henderson, including Screaming the Blues (with Fay Barnes)
  • Works by Sippie Wallace, including Can Anybody Take Sweet Mama’s Place (with Clarence Williams)
  • Works by Mrs. H.H.A. (Amy) Beach, including Lord of the Worlds Above, Op. 109 (words by Isaac Watts, 1674–1748), The Greenwood, Op. 110 (words by William Lisle Bowles, 1762–1850), The Singer, Op. 117 (words by Muna Lee, 1895–1965), and Song in the Hills, Op. 117, No. 3 (words by Muna Lee, 1895–1965)

ಕಾಪಿರೈಟ್‌ನಿಂದ ಹೊರಬಂದ ಈ ಕೃತಿಗಳನ್ನು ತಂತ್ರಜ್ಞಾನ ಇತ್ಯಾದಿಗಳ ಮೂಲಕ ಹೊಸ ರೂಪದಲ್ಲಿ ನಾವು ನೋಡಲು, ಅದರ ಸುತ್ತ ಮುಕ್ತ ಸಂಶೋಧನೆ ಮಾಡಲು ಸಾಧ್ಯ. ಈ ಕೃತಿಗಳನ್ನು ಮುಂದುವರಿಸುವ, ಅಥವಾ ಅವುಗಳನ್ನು ಈಗಿನ ಕಾಲಕ್ಕೆ ತಕ್ಕಂತೆ‍ ಅಳವಡಿಸಿಕೊಳ್ಳುವ ಸಾಧ್ಯತೆಗಳೂ ಅನೇಕ. ಹಳೆಯ ಕೃತಿಗಳು ಹೊಸದಕ್ಕೆ ಹೊಸ ಪ್ರೇರಣೆ ನೀಡಬಹುದು ಎಂಬುದಕ್ಕೆ ಇಂಟರ್ನೆಟ್‌ನಲ್ಲಿ ಬಹಳಷ್ಟು ಸಾಧ್ಯತೆಗಳನ್ನು ಈಗಾಗಲೇ ನೀವು ಕಾಣಬಹುದು. 

ಇಂಟರ್ನೆಟ್ ಮೂಲಕ ಇನ್ನೂ ಕಾಪಿರೈಟ್‌ನಲ್ಲಿರುವ ಕೃತಿಗಳನ್ನು ಕೃತಿಚೌರ್ಯದ ಮೂಲಕ ಹಂಚಿ, ಅದರ ಮೂಲ ಕರ್ತೃವಿಗೆ ಬರುವ ಮೌಲ್ಯದ ನಷ್ಟಕ್ಕೆ ಕಾರಣ – ತಂತ್ರಜ್ಞಾನವೂ, ಕಾನೂನನ್ನು ಕಂಡೂ ಕಾಣದಂತೆ ಕೃತಿಚೌರ್ಯಕ್ಕೆ ಇಂಬುಕೊಡುವ ವಿದ್ಯಾವಂತ ಬಳಕೆದಾದರೂ ಆಗಿದ್ದಾರೆ. ಇದರ ಜೊತೆಗೆ, ಕಾನೂನನ್ನು ಸರಿಯಾಗಿ ತಮ್ಮ ಸೃಜನಶೀಲ ಸೃಷ್ಟಿಯ ಹಕ್ಕನ್ನು ಉಳಿಸಿಕೊಳ್ಳುವಲ್ಲಿ ಬಳಸಿಕೊಳ್ಳಲಾಗದಿರುವ ಅಸಹಾಯಕತೆಯೂ, ಮಾಹಿತಿ ಕೊರತೆಯೂ ಆಗಿರಬಹುದು. ಇದರ ಚರ್ಚೆಯೇ ಒಂದು ಪೂರ್ಣ ಅಧ್ಯಾಯ ಕೂಡ ಆಗಬಹುದು. 

ಕೊನೆಯ ಹನಿ: ಇಲ್ಲಿ ಕನ್ನಡ ಮತ್ತು ಭಾರತೀಯ ಪುಸ್ತಕಗಳ ಪಟ್ಟಿ ಇಲ್ಲ. ಇದನ್ನು ನಾನು ನೀವು ಸೇರಿ ನೆರವೇರಿಸಬೇಕಿದೆ. ಪ್ರತಿಕ್ರಿಯೆ ಸಹಕಾರ ಹೇಗೇ ಇರಲಿ, ಇಂತಹ ಕನ್ನಡ ಪುಸ್ತಕಗಳ ಹುಡುಕಾಟ ನನ್ನಿಂದ ಈಗಾಗಲೇ ನೆಡೆದಿದೆ. 

|ಮುಂದಿನ ಸಂಚಿಕೆಯಲ್ಲಿ|

‍ಲೇಖಕರು ಓಂಶಿವಪ್ರಕಾಶ್

January 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: