‘ನಮ್ಮಮ್ಮ ಅಂದ್ರೆ ನಂಗಿಷ್ಟ’ ತೆಲುಗಿನಲ್ಲಿ

ವಸುಧೇಂದ್ರ

ನನ್ನ ಪ್ರಬಂಧ ಸಂಕಲನ ’ನಮ್ಮಮ್ಮ ಅಂದ್ರೆ ನಂಗಿಷ್ಟ’ ಈಗ ತೆಲುಗಿನಲ್ಲಿ ಪ್ರಕಟವಾಗುತ್ತಿದೆ. ಬಳ್ಳಾರಿಯವಳಾದ ನನ್ನಮ್ಮ, ಯಾವತ್ತೂ ತೆಲುಗು ಪುಸ್ತಕಗಳನ್ನು ಇಷ್ಟ ಪಟ್ಟು ಓದುತ್ತಿದ್ದಳು. ಆ ಕಾರಣದಿಂದಾಗಿ ಇದು ನನಗೆ ಸಂಭ್ರಮದ ಸಂಗತಿಯಾಗಿದೆ.

ನನ್ನ ’ಮೋಹನಸ್ವಾಮಿ’ ಕೃತಿಯನ್ನು ತೆಲುಗು ಓದುಗರು ತುಂಬು ಹೃದಯದಿಂದ ತಮ್ಮದಾಗಿಸಿಕೊಂಡಿದ್ದಾರೆ. ಆದ್ದರಿಂದ ಈ ಹೊಸ ಕೃತಿಯ ಅನುವಾದ ನನ್ನಲ್ಲಿ ಹಲವು ನಿರೀಕ್ಷೆಗಳನ್ನು ಮೂಡಿಸಿವೆ. ಕನ್ನಡದ ಮುಖಪುಟವನ್ನೇ ತೆಲುಗಿನಲ್ಲಿಯೂ ಬಳಿಸಿದ್ದಾರೆ. ಆದ್ದರಿಂದ ಇದು ಕನ್ನಡ ಮುಖಪುಟ ಅನುವಾದವೂ ಹೌದು! ಅದರ ಕಲಾವಿದೆ ಸೌಮ್ಯ ಕಲ್ಯಾಣಕರ್‌ ಗೆ ಧನ್ಯವಾದಗಳು.

ಈ ಪುಸ್ತಕವನ್ನು ರಂಗನಾಥ ರಾಮಚಂದ್ರ ರಾವ್ ಅನುವಾದಿಸಿದ್ದಾರೆ. ಅವರಿಗೆ ಈ ಹಿಂದೆ ಕುವೆಂಪು ಭಾಷಾ ಭಾರತಿಯ ಬಹುಮಾನವೂ, ಸಾಹಿತ್ಯ ಸಮ್ಮೇಳನದ ಗೌರವವೂ ದಕ್ಕಿವೆ. ಅವರ ಕನ್ನಡ ಪ್ರೀತಿ ಅನನ್ಯವಾದದ್ದು. ಗೆಳೆಯರಾದ ಮೋಹನ್‌ ಬಾಬು ಅವರು ಈ ಕೃತಿಯನ್ನು ತಮ್ಮ ಛಾಯಾ ಪಬ್ಲಿಕೇಷನ್ಸ್‌ ಮೂಲಕ ಪ್ರಕಟಿಸುತ್ತಿದ್ದಾರೆ. ಎಲ್ಲರಿಗೂ ನಾನು ಆಭಾರಿ.

‍ಲೇಖಕರು Avadhi

January 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: