ಅಣಬೆ ­ಎದ್ದವು ­ನೋಡಿ!

ಅಣಬೆ ಎಂದರೆ ಪಂಚಪ್ರಾಣ’ ಎನ್ನುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ‘ನನ್ನ ಕುಪ್ಪಳಿ’ ಅಂಕಣದಲ್ಲಿ ಮಲೆನಾಡಿನ ಅಣಬೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ತಮ್ಮ ಸಂತಾ­ನಾ­ಭಿವೃದ್ಧಿಯ ­ಈ ಕಾಲಚ­ಕ್ರದ ­ಒಳಗೆ ರಾಕ್ಷ­ಸರಂತೆ ಈ ­ಮನುಷ್ಯರು ಹಕ್ಕಿಪಕ್ಷಿಗಳು, ­ಹಾವುಗಳು ­ಮುಂತಾಗಿ ­ಅನೇಕ ­ಪರೋಪ ಜೀವಿಗಳ ­ಅಸ್ತಿತ್ವಕ್ಕೆ ­ಅಡ್ಡಿ ­ತರುತ್ತಾರೆ. ­ಅಷ್ಟೇ ­ಏಕೆ? ­ಕೊರವ, ­ಮುಗುಡು ­ಮುಂತಾದ ಮಾಂಸಾ­ಹಾರಿ ­ಮೀನುಗಳು ­ಕೂಡ ­ಸಣ್ಣ ಸಂತಾ­ನದ ಮೀನುಗಳನ್ನು ­ನುಂಗಿ ಹಾಕುತ್ತವೆ. ಜೀವಜಾ­ಲದ ಈ ನಿರಂತರ ಕ್ರಿಯೆಗಳನ್ನು ­ಮೀರಿ ­ಮೀನಿನ ­ಸಂತಾನ ­ತನ್ನನ್ನು ­ತಾನು ಉಳಿಸಿಕೊಳ್ಳುತ್ತದೆ. ­ಇದನ್ನು ­ಕಂಡಾಗ ­ಎಲ್ಲವನ್ನೂ ನಿಯಂತ್ರಿಸುವ ಭಗ­ವಂತನೊಬ್ಬ­ನಿದ್ದಾನೆ ಅನ್ನಿಸದೇ ­ಇರದು. ­

ನಮ್ಮ ಬಯಲುಸೀಮೆಗೆ ­ಈಗಿನ ವರ್ಷಗಳಲ್ಲಿ ­ಆ ­ಕಾಲದ ಮಳೆಗಾ­ಲದ ­ಭಾಗ್ಯವೇ ­ಇಲ್ಲ. ಅಪರೂಪಕ್ಕೆ ಹತ್ತುತ್ತಿದ್ದ ­ಹತ್ತು ಮೀನುಗಳೂ ­ಇಲ್ಲ. ­ನಾನು ­ಕಂಡ ­ಹಾಗೆ ­ಸಸ್ಲು, ಗಿರು‍ಲ್,  ಕೊರವ, ­ಕುಚ್ಚು, ­ಬಾಳೆ ­ಮುಂತಾದ ­ಅನೇಕ ­ಬಗೆಯ ­ಮೀನುಗಳು ಕೆರೆಗಳಲ್ಲಿಯೂ ­ಹಳ್ಳದ ಮಡುವಿ­ನಲ್ಲಿಯೂ ಸಿಗುತ್ತಿದ್ದವು. ­ಆ ­ಎಲ್ಲ ­ತಳಿಗಳನ್ನು ಸರ್ವ­ನಾಶ ­ಮಾಡಿ, ಕೇವಲ ­ ‘ಕಾಟ್ಲ’ ಮೀನುಗಳನ್ನು ­ಮಾತ್ರ ­ಬ್ರಾಯ್ಲರ್ ಕೋಳಿಗಳಂತೆ ಬೆಳೆ­ಸಲಾಗುತ್ತಿದೆ. ­ಇವು ­ಬಹಳ ­ಬೇಗ ­ಬೆಳೆದು ­ಕೆರೆಗಳನ್ನು ­ಕಂಟ್ರಾಕ್ಟ್‌ ತೆಗೆದುಕೊಂಡ ವ್ಯಾಪಾರಿಗ­ಳಿಗೆ ಅನುಕೂ­ಲ ವಾಗುತ್ತದೆ ­ಎಂಬುದಷ್ಟೇ ­ಇದರ ­ಉದ್ದೇಶ. 

ಸರ್ಕಾರದ ಮೀನುಗಾ­ರಿಕೆ ­ಇಲಾಖೆಗೆ ­ಒಳನಾಡು ಮೀನುಗಾ­ರಿ­ಕೆಯಲ್ಲಿ ­ಏನೇನು ಮಾಡ­ಬಹುದೆಂಬ ಕಲ್ಪ­ನೆಯೂ ­ಇಲ್ಲ. ನಾಡಿ­ನಾದ್ಯಂತ ­ಕಾಟ್ಲ ಮೀನುಗಳ ­ಕೊಬ್ಬು ­ತುಂಬಿದ  ಮಾಂಸವನ್ನು ವ್ಯವ­ಸ್ಥಿತ­ವಾಗಿ ಹಂಚಲಾಗುತ್ತಿದೆ. ­ತುಂಗಭದ್ರಾ, ಕೆ.ಆರ್‌.­ಎಸ್‌, ಲಿಂಗ­ನಮುಕ್ಕಿ ­ಮುಂತಾದ ­ಬೃಹತ್ ಅಣೆಕಟ್ಟೆಗಳಲ್ಲಿ ­ಕುಚ್ಚು, ­ಬಾಳೆ, ­ಕೊರವ, ­ಮುಗುಡು, ­ಗಿರು‍ಲ್  ಮುಂತಾದ ಮೀನುಗಳನ್ನು ಬೆಳೆಯಬಹುದು. ­ಆದರೆ ­ಅಲ್ಲಿಯೂ ‌ʼಕಾಟ್ಲʼ ಮೀನುಗಳದ್ದೇ ­ದರ್ಬಾರು. ಸರ್ಕಾರಕ್ಕೆ ­ಇವೆಲ್ಲವನ್ನೂ ತಿಳಿ­ಸಿಕೊಡುವ ಜನ­ನಾಯಕರಾದರೂ ­ಎಲ್ಲಿದ್ದಾರೆ?

ನಮ್ಮ ­ಅಧ್ಯಯನ ಕೇಂದ್ರ­ದಿಂದ ­ಅರ್ಧ ­ಫರ್ಲಾಂಗು ­ದೂರದಲ್ಲಿ ಭೂರ­ಹಿತರಾದ ­ಕೃಷಿ ­ಕೂಲಿ ಕಾರ್ಮಿಕರೇ ಹೆಚ್ಚಾ­ಗಿರುವ ­ಒಂದಿಷ್ಟು ಮನೆಗ­ಳಿವೆ. ­ಅದನ್ನು ‘ಬೆಳ್ಳಿ ­ಕೊಡಿಗೆ’ ಎಂದು  ಕರೆಯುತ್ತಾರೆ. ­ನಮ್ಮ ­ಗುಂಡನೂ ­ಅದೇ ಸ್ಥಳದ­ವನೇ. ­ಹಾಗೆಯೇ ­ಅಲ್ಲಿನ ಪರಿ­ಶಿಷ್ಟ ಸಮುದಾಯಕ್ಕೆ ­ಸೇರಿದ ­ಮಲ್ಲಿಕಾ ­ಎಂಬ ­ಒಬ್ಬ ­ಹೆಣ್ಣು ­ಮಗಳು ­ನಮ್ಮಲ್ಲಿ ಕೆಲ­ಸದಲ್ಲಿದ್ದಾಳೆ.  ತುಂಬ ಸುಸಂಸ್ಕೃತ ನಡ­ವ­ಳಿಕೆಯ ­ಹುಡುಗಿ. ­ದೀವರು, ಒಕ್ಕ­ಲಿಗರು, ಹರಿ­ಜನರು, ­ಹಸಲರು ­ಮುಂತಾಗಿ ­ಭೂಮಿ ಇಲ್ಲದಿರುವ ­ಜನರೇ ಅಲ್ಲಿರುವುದ­ರಿಂದ ಜಾತ್ಯಾತೀತ­ವಾಗಿ  ಮನೆ ಮಾಡಿಕೊಂ­ಡಿರುವ ­ಅವರು ‘ಬಡ­ವರ ­ಜಾತಿ’­ಯಾಗಿ ಪರಿಗ­ಣಿತರಾ­ಗಿದ್ದಾರೆ. ­

ನನಗೊಂದು ಕುತೂ­ಹಲವಿತ್ತು. ­ಇವತ್ತಿನ ­ಮೀನಿನ ­ಸಂಭ್ರಮ ­ಅವರಲ್ಲಿ ಹೇಗಿರಬಹುದು? ­ಬೆಳಿಗ್ಗೆ ­ಎದ್ದವನೆ ವಾಯುವಿ­ಹಾರದ ನೆಪದಲ್ಲಿ ­ಅತ್ತ ­ಹೊರಟೆ. ಮಳೆ ಕಡಿಮೆಯಾಗಿ  ಜಿನುಗುತ್ತಿತ್ತು. ­ರಾತ್ರಿ ­ನೋಡಿದ ­ಹಳ್ಳ ­ಈಗಲೂ ­ಮೈದುಂಬಿ ಹರಿಯುತ್ತಿತ್ತು. ­ಗದ್ದೆ ­ತೋಡಿನಿಂದ ಸಂಗ್ರ­ಹ­ವಾದ ­ನೀರೆಲ್ಲ ­ಮತ್ತೊಂದು ­ಉಪ ಹಳ್ಳ­ವಾಗಿ ­ಅಲ್ಲಿಗೆ ­ಬಂದು ಸೇರುತ್ತಿತ್ತು. ಕುವೆಂಪು ಹೇಳುವಂತೆ ­ಇಲ್ಲಿ ­ಯಾವುದೂ ಅಮುಖ್ಯ­ವಲ್ಲ ­ಎನಿಸಿತು. ­ದೊಡ್ಡ ­ಹಳ್ಳಕ್ಕೆ ­ಸಣ್ಣ ­ಝರಿ ­ಬಂದು ­ಸೇರುವ ­ಸೊಗಸನ್ನು ­ನೋಡುತ್ತಾ ­ನೀರಿನ ­ಅಂಚಿನ ­ಕಲ್ಲಿನ ­ಮೇಲೆ ­ಕುಳಿತೆ.  ಹಾಗೇ ಕಲ್ಪಿ­ಸಿಕೊಂಡಂತೆ ಭದ್ರಾ­ವತಿಯ ಕೂಡ್ಲಿಯಲ್ಲಿ ಒಟ್ಟುಗೂಡುವ ತುಂಗೆ ಮತ್ತು ಭದ್ರೆಯ ನೆನಪು ­ಬಂತು. ­ಇಲ್ಲಿಯೂ ­ಅದೇ ­ಪ್ರಕೃತಿ ­ವ್ಯಾಪಾರ ನಡೆ­ದಿತ್ತು. 

ಈ ­ಘಟನೆ ­ಕೂಡ ­ಅತ್ಯಂತ ಮಹತ್ವದ್ದಾಗಿ ­ನನಗೆ ­ಕಂಡಿತು. ­ಇಂಥ ಹನಿ­ಹನಿ ­ಹಳ್ಳ ಕೊಳ್ಳಗಳೇ ­ನದಿಯ ಮೂಲಗಳಲ್ಲವೇ ­ಎನಿಸಿ ­ಇವುಗಳ ­ಬಗ್ಗೆ ­ಜನರ ­ನಿರ್ಲಕ್ಷ್ಯ  ನೆನೆಸಿಕೊಂಡು  ಕೆಡುಕೆ­ನಿಸಿತು. ­ಈ ­ಒಂದೊಂದು ­ಹನಿಯೂ ­ಜಾರುತ್ತಾ ­ಇಳಿಯುತ್ತಾ ­ತುಂಗೆ ಮತ್ತು ­ಭದ್ರೆಯರಾಗಿ ಕೂಡ್ಲಿಯಲ್ಲಿ ­ಒಂದಾಗಿ ಹೊಸಪೇಟೆಯ ­ಡ್ಯಾಂನಲ್ಲಿ ಸಾಗರ­ವಾಗುವ ­ಪರಿ ­ಎಷ್ಟು  ಕುತೂ­ಹಲ ­ಎನಿಸಿತು. ­ಅಲ್ಲಿ ­ಒಂದು ­ಹನಿ ­ಮಳೆ ಇಲ್ಲದಿದ್ದರೂ ಲಕ್ಷಾಂತರ ­ಎಕರೆ ­ತಣ್ಣಗೆ ನೀರುಣ್ಣುವ ­ಪರಿಯನ್ನು ­ನೆನೆದು ­ಒಂದು ­ಥರಾ ಹಿತ­ವೆ­ನಿಸಿತು. ­ನನ್ನ ಆಲೋಚನಾ ­ಲಹರಿ  ಹೀಗೆ ಹರಿಯುತ್ತಿರಬೇಕಾದರೆ ನೀರೊಳ­ಗಿದ್ದ ­ನನ್ನ ­ಕಾಲಿನ ಹೆಬ್ಬೆರಳ ­ಹತ್ತಿರ ­ಏನೋ ಮುಲಮುಲ ­ಎಂಬ ­ಭಾವನೆ. ತಿಳೀನೀ­ರಿ­ನಲ್ಲಿ ಬಳ­ಕುತ್ತಾ ಮಿಂಚುತ್ತಿದ್ದ ­ಎರಡು ­ಸಸ್ಲು ­ಮೀನುಗಳು  ಹೆಬ್ಬೆಟ್ಟನ್ನು ­ಮೂಸುತ್ತಾ ಆಟ­ವಾಡುತ್ತಿದ್ದವು. 

­ಹಾಗೇ ­ಬೊಗಸೆ ­ಕೈಯಿಂದ ಹಿಡಿಯುವ ­ಪ್ರಯತ್ನ ­ಮಾಡಿದೆ. ­ಕ್ಷಣ ಮಾತ್ರದಲ್ಲಿ ಜಾರಿಕೊಂಡವು. ­ಅದೇ ­ದಾರಿಯಲ್ಲಿ ಹೋಗುತ್ತಿದ್ದ ­ಹಸ್ಲರ ­ನಾಗಪ್ಪ ಮಾತ­ನಾಡ­ದಿದ್ದರೆ ­ಹಾಗೇ  ಇನ್ನೆಷ್ಟೊತ್ತು ಕುಳಿ­ತಿರುತ್ತಿದ್ದೆನೇನೋ. ನಾಗಪ್ಪನೊಡನೆ ಮಾತ­ನಾಡುತ್ತಾ ­ಗುಂಡನ ­ಮನೆಗೆ ­ಹೊರಟೆ. ಬಲಭಾಗದಲ್ಲಿದ್ದ ­ಗದ್ದೆ ಬದುಗಳ ­ಮೇಲೆ ­ಹತ್ತಾರು ­ಬಗೆಯ ಶ್ವೇತದಾರಿಗಳಾದ  ಬೆಳಕ್ಕಿಗಳು ಹಗ­ಲಿನ ­ಮೀನು ­ಬೇಟೆ ನಡೆ­ಸಿದ್ದವು. ಕಲಾತ್ಮಕ ­ಬಣ್ಣದ ಮಿಂಚುಳ್ಳಿಗಳು ­ರೆಕ್ಕೆ ­ಅಗಲಿಸಿ ಬೇಟೆಯ ಗುರಿ­ಯಿಟ್ಟು ­ಗದ್ದೆಯ ತಿಳೀನೀರನ್ನು ನೆಟ್ಟನೋ­ಟ­ದಿಂದ ­ನೋಡುತ್ತಾ  ತಮ್ಮ ­ರೂಪ ವಿಶೇ­ಷ­ದಿಂದ ­ಗಮನ ಸೆಳೆಯುತ್ತಿದ್ದವು. ­

ಮಳೆ ­ನಿಂತ ­ನೆಲದ ­ಆ ಅಪರೂಪದ ­ಸೊಗಸು ಭಾವೋತ್ಕರ್ಷಕ್ಕೆ ಎಡೆಮಾ­ಡಿಕೊಟ್ಟಿತ್ತು. ­ಗುಂಡ ­ಒಬ್ಬನೇ ­ಕುಳಿತು ­ಎಂಥದೋ ­ಹಗ್ಗ ಸುತ್ತುತ್ತಿದ್ದ. ­ನಾನು ­ಬಂದುದನ್ನು ­ನೋಡಿ ‘­ಏನ್  ಸಾರು ­ಇಲ್ಲಿ ­ಬಂದ್ರಿ?’ ­ಎನ್ನುತ್ತಾ ­ಓಡಿ ­ಬಂದ. ‘­ಎಲ್ಲಿ ­ಮಾರಾಯ ­ಮೀನು ­ಸಾರು, ­ರೆಡಿಯೋ’ ­ಎಂದೆ. ‘­ಎಲ್ಲಿ ­ಸಾರು, ­ನಾನು ­ಇರೋದು ­ಒಬ್ನೇ, ­ನಾನು ­ಹಿಡಿದ ಮೀನುಗಳನ್ನು ­ಮಲ್ಲಿಕಾ  ಮನೆಗೆ ­ಕೊಟ್ಟೆ’ ­ಎಂದ. ­ಅವನೂ ­ನಾನೂ ನಾಗಪ್ಪನೂ ­ಸೇರಿ ­ಮಲ್ಲಿಕಾ ­ಮನೆಗೆ ­ಹೋದೆವು. ­ಅಲ್ಲಿಂದ ­ಕುವೆಂಪು ಕವಿಮನೆಯಲ್ಲಿ ­ಕೆಲಸ ­ಮಾಡುವ ಹರೀ­ಶನ ­ಮನೆಗೆ. 

­ಹೀಗೇ ­ಅಲ್ಲೆಲ್ಲ ಅಡ್ಡಾಡುವಾಗ ­ಎಲ್ಲರ ಮನೆಯಲ್ಲೂ ­ಮೀನಿನ ­ಅಡುಗೆ ­ಸಂಭ್ರಮ. ­ಮೀನಿನ ­ಕಮಟು ಪರಿಮಳ. ­ಎಲ್ಲರ ಮನೆಯಲ್ಲೂ ­ವಾಟೆ ­ಹುಳಿ ಬೆರ­ಸಿದ ­ಮೀನು ಕಾರ  ಸಿದ್ಧವಾಗುತ್ತಿತ್ತು.ಮಲೆ­ನಾ­ಡಿ­ನಲ್ಲಿ ­ಮೀನು ­ಸಾರು ­ಮಾಡಲು ­ಮಣ್ಣಿನ ­ಮಡಿಕೆ ಉಪಯೋ­ಗಿಸುತ್ತಾರೆ. ­ಅದು ­ಎಲ್ಲ ಪಾತ್ರೆಯಂತಿರದೆ ­ಅಗಲ ­ಬಾಯಿಯ ­ಪುಟ್ಟ ತಪ್ಪಲೆಯಂತೆ ­ಇರುತ್ತದೆ.  ಉಳ್ಳವರ ಮನೆಯಲ್ಲಿ ಕಲ್ಲಿ­ನಲ್ಲಿ ­ಕೊರೆದು ­ಮಾಡಿದ ಕಲ್ಲಿನ ­ತಪ್ಪಲೆ. ­ಇದರಲ್ಲಿ ­ಮಾಡುವ ­ಮೀನು ಹುಳಿ ­ಬಹಳ ­ರುಚಿ.

ಬೆಳ್ಳಿ ಕೊಡಿಗೆ­ಯಿಂದ ­ವಾಪಸ್ಸು ­ಬಂದು ­ಸ್ನಾನ ­ಮುಗಿಸಿ ಆಫೀಸಿಗೆ ­ಬಂದಾಗ ­ನನ್ನ ­ಟೇಬಲ್ ­ಮೇಲೆ ­ಸ್ಟೀಲ್ ­ಡಬ್ಬಿಯೊಂದು ­ಕಾಯುತ್ತಾ ಕುಳಿ­ತಿತ್ತು. ­ಗುಂಡನನ್ನು ­ಕರೆದು ­ಇದೇನೆಂದು  ಕೇಳಿದೆ. ­‘ಮಲ್ಲಿಕಾ ­ಮೀನು ­ಪಲ್ಯ ತಂದಿಟ್ಟಿದ್ದಾಳೆ’ ­ಅಂದ! ­ಖುಷಿಯಾಯಿತು. ­ಮಧ್ಯಾಹ್ನ ­ನನಗೂ ಮಲೆ­ನಾ­ಡಿನ ­ಹತ್ತು ­ಮೀನಿನ ­ಭರ್ಜರಿ ­ಊಟ!

­ಅಣಬೆ ­ಎದ್ದವು ­ನೋಡಿ!

ಈ ­ಅಣಬೆ ­ಪ್ರಪಂಚ ­ತುಂಬ ವೈವಿಧ್ಯಮಯವಾ­ಗಿರುತ್ತದೆ. ­ನಮ್ಮ ­ಬಯಲು ಸೀಮೆಯಲ್ಲಾದರೆ ­ಚೆನ್ನಾಗಿ ­ಮಳೆ ­ಹೊಡೆದು ­ಮಣ್ಣು ಮನ­ಸಾರೆ ­ನೆಂದು ಪುಸಿ­ಯಾದ ­ನಂತರ ಗುಡುಗಿನ  ಅಬ್ಬರಕ್ಕೆ ­ಭೂಮಿ ಕಂಪಿಸಬೇಕು. ರಾತ್ರಿಯಲ್ಲಿ ­ಗುಡುಗು ­ಸಹಿತ ­ಮಳೆ ­ಬಂದು, ­ಬೆಳಿಗ್ಗೆ ­ಎಳೆ ­ಬಿಸಿಲು ­ಬಿದ್ದು ­ಭೂಮಿ ಬೆಚ್ಚಗಾದರೆ ­ಅಣಬೆಯ ­ಹಳೇ ­ಪಳೆಯುಳಿಕೆ ­ಇರುವ ಕಡೆಯಲ್ಲೆಲ್ಲ ಅಪ್ಪಟ ­ಬಿಳಿ ­ಬಣ್ಣದ ­ಅಣಬೆಗಳು ­ಗುಪ್ಪೆ ಗುಪ್ಪೆಯಾಗಿ ನೆಲ­ದಿಂದ ಚಿಮ್ಮುತ್ತವೆ. ­ಮೊದಲು ಮೊಗ­ಟಿನ ಆಕಾರದಲ್ಲಿ ­ಮೇಲೆದ್ದು ­ನಂತರ ­ಛತ್ರಿಯ ­ರೂಪ ­ಪಡೆದು ರಾರಾ­ಜಿಸುತ್ತವೆ. ­ಅವು  ಯಾರ ­ಕಣ್ಣಿಗೆ ಬೀಳುತ್ತವೋ ­ಅವರ ­ಅದೃಷ್ಟ. ­ಕೆಲವು ಸ್ಥಳಗಳಲ್ಲಿ ­ಅಲ್ಲಲ್ಲಿ ­ಒಂದೊಂದು ­ಎದ್ದರೆ ­ಮತ್ತೆ ಕೆಲ­ವೆಡೆ ರಾಶಿರಾ­ಶಿ­ಯಾಗಿ ­ಬತ್ತದ ಬಟ್ಟ­ಲಿ­ನಂತೆ ­ಎದ್ದು ನಿಲ್ಲುತ್ತವೆ.  ಒಮ್ಮೊಮ್ಮೆ  ಗೋಣಿಚೀ­ಲದಲ್ಲಿ ­ತುಂಬಿ ­ತಂದದ್ದೂ ­ಇದೆ. ­ಆಗ ­ಕೇರಿ ಕೇರಿಗಳಲ್ಲಿ ­ಅಣಬೆ ­ಸಾರಿನ, ­ಅಣಬೆ ­ಗೊಜ್ಜಿನ ಸಂಭ್ರಮವೋ ­ಸಂಭ್ರಮ.

ಆದರೆ ­ಈ ಮಲೆ­ನಾ­ಡಿನ ­ಅಣಬೆಯ ವೈಶಿಷ್ಟ್ಯಗಳೇ ­ಬೇರೆ. ­ಹಿಂದೊಮ್ಮೆ ­ನಾನು ­ಕುಣಬಿ ಸಮುದಾಯದ ಅಧ್ಯಯನಕ್ಕಾಗಿ ­ದಾಂಡೇಲಿ ­ಮತ್ತು ­ಜೋಯಿಡಾ ­ಕಡೆ ­ಹೋಗಿದ್ದೆ. ಹದ­ವರಿತ ಮಳೆಗಾಲ ­ಅದು. ­ರಾತ್ರಿ ದಾಂಡೇಲಿಯಲ್ಲಿ ­ತಂಗಿದ್ದವನು, ­ಬೆಳಿಗ್ಗೆ ­‘ಗ್ರೀನ್ ­ಇಂಡಿಯಾ’ ಸರ್ಕಾರೇತರ ­ಸಂಸ್ಥೆಯ ­ಮಿತ್ರ ­ಬಿ.ಪಿ. ಮಹೇಂದ್ರ­ಕುಮಾರ್ ­ಅವರ ಜೀಪಿನಲ್ಲಿ ­ಜೋಯಿಡಾ  ಕಡೆ ಹೊರ­ಟಿದ್ದೆ. ­ದಾಂಡೇಲಿಯ ­ರಸ್ತೆ ರಸ್ತೆಗಳಲ್ಲಿ ­ಜನ ಬುಟ್ಟಿಗಳಲ್ಲಿ ­ಅಣಬೆ ­ತುಂಬಿಕೊಂಡು ­ಮಾರಾಟ ಮಾಡುತ್ತಿದ್ದರು. ­ಅದೂ ­ಬಣ್ಣ ­ಬಣ್ಣದ ­ಅಣಬೆಗಳು ­ನನಗೆ ಆಶ್ಚರ್ಯವಾಯಿತು. ­

ಏನಿದು ­ಮಹೇಂದ್ರ ­ಇಷ್ಟೊಂದು ­ಅಣಬೆ? ­ಅದೂ ­ಬಣ್ಣದ ­ಅಣಬೆಗಳು? ­ಎಂದು ಪ್ರಶ್ನಿ­ಸಿದೆ. ಮಹೇಂದ್ರ­ರಿಗೆ ­ಅದು ಸೋಜಿಗದ ವಿಷಯವೇನೂ ಆಗಿರ­ಲಿಲ್ಲ. ‘­ಸಾರ್ ­ಇದು ­ಅಣಬೆ ­ಏಳುವ  ಕಾಲ, ­ನಮ್ಮ ­ಕಾಡು ಲಕ್ಷಾಂತರ ಅಣಬೆಗ­ಳಿಗೆ ­ಆವಾಸ ­ಸ್ಥಾನ. ­ಏನಿಲ್ಲ ­ಎಂದರೂ ­ಹದಿನೈದು ­ಇಪ್ಪತ್ತು ­ಬಗೆಯ ­ಅಣಬೆಗಳು ಸಿಗುತ್ತವೆ. ­ನಮ್ಮ ಬುಡ­ಕಟ್ಟು ­ಜನರು ­ಅವುಗಳನ್ನು  ಸಂಗ್ರಹಿಸಿ ­ಪೇಟೆಗೆ ­ತಂದು ಮಾರುತ್ತಾರೆ. ­ಬೆಲೆಯೂ ­ಹೆಚ್ಚಲ್ಲ. ­ನೂರು ರೂಪಾಯಿಗೆ ­ಒಂದು ­ಬುಟ್ಟಿ ­ತುಂಬ ಸಿಗುತ್ತವೆ’ ­ಎಂದು ­ಅಣಬೆ ­ಬಗ್ಗೆ ­ಒಂದು ಉಪನ್ಯಾ­ಸ­ವನ್ನೇ ­ಕೊಟ್ಟಿದ್ದರು.

­ದಾಂಡೇಲಿ ­ಬಿಟ್ಟ ­ನಂತರ ಕುಂಬಾರ­ವಾಡ ­ಎಂಬ ­ಊರಿಗೆ ತಲುಪಿದೆವು. ­ಅಲ್ಲಿಯೂ ­ರಸ್ತೆ ಪಕ್ಕದಲ್ಲಿ ­ಕಣಬಿ ­ಹೆಂಗಸರು ಬುಟ್ಟಿಗಟ್ಟಲೆ ­ಅಣಬೆ ­ಇಟ್ಟುಕೊಂಡು ಕುಳಿ­ತಿದ್ದರು. ­ಅಲ್ಲಿಂದ  ಜೋಯಿಡಾ ತಲುಪಿದರೆ ­ಅಲ್ಲಿಯೂ ­ಅದೇ ­ದೃಶ್ಯ. ­ನನಗೆ ­ಇನ್ನು ತಡೆಯಲಾಗ­ಲಿಲ್ಲ. ­ನಮ್ಮ ­ಬಯಲು ಸೀಮೆಯಲ್ಲಿ ­ಅಣಬೆಗೆ ಬಣ್ಣ­ವಿದ್ದರೆ ­ಅದನ್ನು ‘­ಹುಚ್ಚು ­ಅಣಬೆ’  ಎಂದು  ಬಿಸಾಡುತ್ತಾರೆ. ವಾಸ್ತ­ವ­ವಾಗಿ ­ಅದು ­ವಿಷದ ­ಅಣಬೆ. ­ಆದರೆ ­ಈ ಮಲೆ­ನಾ­ಡಿ­ನಲ್ಲಿ ­ಕಣ್ಣು ಕೋರೈಸುವ ­ಬಣ್ಣದ ­ಅಣಬೆ! ­ಹುಚ್ಚು, ­ಬೆಪ್ಪು, ­ವಿಷ ­ಏನೂ ­ಇಲ್ಲದ ­ತಿನ್ನುವ ­ಅಣಬೆ! ಹೇಳಿದೆನಲ್ಲ,  ನನಗೆ ತಡೆಯಲಾಗ­ಲಿಲ್ಲ.

ಜೀಪ್ ನಿಲ್ಲಿಸುವಂತೆ ­ಹೇಳಿದೆ. ­ಸೀದಾ ­ಹೋಗಿ ­­ನೂರು ­ರೂಪಾಯಿ ­ಕೊಟ್ಟು ­ಒಂದು ­ಬುಟ್ಟಿ ಖರೀ­ದಿ­ಸಿದೆ. ­ಅವುಗಳನ್ನು ­ಒಂದು ­ಪ್ಲಾಸ್ಟಿಕ್ ­ಚೀಲಕ್ಕೆ ಸುರಿದುಕೊಂಡು ­ಜೀಪು  ಹತ್ತಿದೆ. ಮಹೇಂದ್ರ­ರಿಗೆ ಆಶ್ಚರ್ಯವಾ­ಯಿತೋ ­ಇಲ್ಲಾ ­ಇವನು ‘­ಬಾಯಿ ­ಚಪಲ ­ಚೆನ್ನಿಗ’ ­ಎಂದು ಅಸಹ್ಯ­ವಾ­ಯಿತೋ ­ಗೊತ್ತಿಲ್ಲ. ­ಅವರು ‘­ಸಾರ್ ­ನಾವು ಹೊರ­ಟಿರುವುದು ­ಕ್ಷೇತ್ರ  ಕಾರ್ಯಕ್ಕೆ, ಅಣಬೆಗಳನ್ನು ಮಧ್ಯಾಹ್ನದ ­ಒಳಗೆ ­ಅಡುಗೆ ಮಾಡ­ದಿದ್ದರೆ ಹಾಳಾಗುತ್ತವೆ. ­ನಾವು ­ಜೈನರು. ­ನಾನು ತಿನ್ನುತ್ತೇ­ನಾದರೂ ­ನಮ್ಮ ಮನೆಯಲ್ಲಿ ­ಅಣಬೆ ಬೇಯಿಸುವು­ದಿಲ್ಲ.  ಹಾಗಾಗಿ ­ವಾಪಸ್ ­ದಾಂಡೇಲಿಗೆ ­ಹೋದರೂ ಪ್ರಯೋ­ಜ­ನ­ವಿಲ್ಲ, 

­ಈಗೇನು ­ಮಾಡುವುದು?’ ­ಎಂದು ಹಲ­ವತ್ತುಕೊಂಡರು. ­ಆದರೆ ­ನನ್ನ ಯೋಚ­ನೆಯೇ ­ಬೇರೆ ­ಇತ್ತು. ­ನನ್ನ ­ಹತ್ತಾರು ವರ್ಷಗಳ ಕ್ಷೇತ್ರಕಾರ್ಯದಲ್ಲಿ ಬುಡ­ಕಟ್ಟುಗಳ ಮನೆಯಲ್ಲಿಯೇ  ವಾಸ್ತವ್ಯ ಹೂಡಿದವನು, ­ಅವರು ­ಮಾಡಿದ ಅಡುಗೆಯನ್ನೇ ­ಬಯಸಿ ­ತಿಂದವನು. ಯಾರಾದರೂ ­ಒಬ್ಬ ಕುಣ­ಬಿಯರ ಮನೆಗೆ ­ಕೊಟ್ಟರೆ ­ಅಡುಗೆ ಮಾಡ­ದಿರುತ್ತಾರೆಯೇ ­ಎಂಬುದು  ನನ್ನ ಆಲೋಚನೆ. ­ಈ ವಿಷಯವನ್ನು ­ಅವರಿಗೆ ಹೇಳುತ್ತಿದ್ದಂತೆ ­ಇನ್ನೊಂದು ­ತಕರಾರು ­ತೆಗೆದರು. ‘­ಸಾರ್ ­ನಾವು ­ಇವತ್ತು ­ಮಧ್ಯಾಹ್ನ ­ಒಂದು ­ಕುಣಬಿ ­ಮದುವೆ ­ಕಾರ್ಯ ನೋಡಲು  ಹೋಗುತ್ತಿದ್ದೇವೆ.

­ಮದುವೆ ­ಮನೆಗೆ ­ಹೋಗಿ ­ಊಟ ಮಾಡ­ದಿದ್ದರೆ ­ಆದೀತೇ?’ ­ಎಂದು ­ನನ್ನ ­ಅಣಬೆ ­ಆಸೆಗೆ ­ತಣ್ಣೀರು ­ಎರಚಿದರು. ­ಬಣ್ಣದ ಅಣಬೆಗಳನ್ನು ­ನೋಡುತ್ತಾ ­ನೋಡುತ್ತಾ ­ಮದುವೆ ನೋಡಲು  ಹೋಗುತ್ತಿದ್ದೇವೆ ­ಎಂಬುದನ್ನು ­ಸಂಪೂರ್ಣ ­ಮರೆತು ­ಹೋಗಿದ್ದೆ. ­ನಮ್ಮ ­ಜೀಪು ­ಜೋಯಿಡಾ ­ತಾಲ್ಲೂಕಿನ ­ಕಾಡಿನ ­ಮಧ್ಯದ ­ಒಳ ರಸ್ತೆಯಲ್ಲಿ ಮಂಬ­ರಿಯುತ್ತಿತ್ತು. ಮಳೆಗಾ­ಲದ ­ಮಣ್ಣು  ರಸ್ತೆ ­ಬೇರೆ. ­ಮಹೇಂದ್ರ ಪ್ರಯಾ­ಸ­ದಿಂದಲೇ ­ಗಾಡಿ ಓಡಿಸುತ್ತಿದ್ದರು. ­ಆತ ­ಬಹಳ ­ಸುಂದರ ­ಮನುಷ್ಯ, ­ಆದರೆ ­ಈಗ ಪ್ರಸನ್ನ­ವದ­ನರಾಗಿ ­ಏನೂ ಕಾಣಲಿಲ್ಲ.

ಏನು ­ಮಾಡುವುದು? ಅಣಬೆಗಳ ­ಆ ­ಮಣ್ಣ ­ವಾಸನೆ ­ಬೇರೆ ಮೂಗಿಗೆ ಠಳಾ­ಯಿಸುತ್ತಿದೆ. ಏನಾದರಾಗಲಿ ­ಇವತ್ತು ­ಅಣಬೆ ತಿನ್ನಲೇಬೇ­ಕೆಂಬ ­ಶಪಥ ­ಮಾಡಿದೆ. ‘­ನಿಮಗೆ ­ತೀರಾ ­ಕ್ಲೋಸ್  ಇರುವ ­ಕುಟುಂಬ ­ಯಾವುದು ­ಮಹೇಂದ್ರ’ ­ಎಂದೆ. ­ಸಾರ್ ­ಇಲ್ಲಿರುವ ಹುಡುಗರೆಲ್ಲ ­ನಮ್ಮ ­ಸಂಸ್ಥೆಗೆ ಹತ್ತಿರದ­ವರೇ ­ಎಂದವರೇ ­‘ಅಣಬೆ ­ಅಡುಗೆ ­ಮಾಡಿಸೋಣ ­ಬಿಡಿ ­ಸಾರ್’ ­ಎಂದು ಹುಸಿ ನಕ್ಕರು. ­ನನ್ನ ­ಈ ರಂಕಲಾಟ ­ನೋಡಿ ಕನಿ­ಕರ­ದಿಂದ ­ಆ ತೀರ್ಮಾ­ನಕ್ಕೆ ­ಅವರೇ ­ಬಂದಿದ್ದರು. ­

ದಾರಿ ಮಧ್ಯದಲ್ಲಿಯೇ ­ಇದ್ದ ­ಕುಣಬಿ ಗುಡಿ­ಸಲೊಂದರಲ್ಲಿ ­ಅವರ ­ಶಿಷ್ಯನನ್ನು ­ಭೇಟಿ ­ಮಾಡಿ, ­ಮಧ್ಯಾಹ್ನ ­ಮದುವೆ ­ಕಾರ್ಯಕ್ರಮ ­ನೋಡಿಕೊಂಡು ­ಮೂರು ­ನಾಲ್ಕು ­ಗಂಟೆಗೆ ವಾಪಸ್ಸು  ಬರುತ್ತೇವೆಂದು ­ತಿಳಿಸಿ, ­ಅಷ್ಟರಲ್ಲಿ ­ಅಣಬೆ ­ಗೊಜ್ಜು ಮಾಡಿಡುವಂತೆ ­ತಿಳಿಸಿ ­ಮುಂದೆ ಹೊರಟೆವು. ­ಪ್ರಕೃತಿಯ ­ನಡುವೆ ­ಹಸಿರು ಚಪ್ಪರದ ­ಅಡಿಯಲ್ಲಿ ­ನಡೆದ ­ಅತ್ಯಂತ ಸರಳ ಸ್ವರೂಪದ ಮದುವೆಯಲ್ಲಿ ­ಅವರ ‘­ಗುಳ್ಳಾಣಿ ­ಪಾಯಸ’ ­ಕುಡಿದು ­ಉಂಡ ­ಶಾಸ್ತ್ರ ­ಮಾಡಿ ಹಿಂತಿರುಗಿದೆವು. ­ದಾರಿಯಲ್ಲಿ ರಸಪಾಕವನ್ನು ಮೀರಿಸುವ ­ಅಣಬೆ ­ಗೊಜ್ಜು ನಮಗಾಗಿ ­ಕಾಯ್ದಿತ್ತು. ­ಅಂದು  ದೆವ್ವ ಹಿಡಿದ­ವ­ನಂತೆ ­ನಾನು ­ತಿಂದಿದ್ದೆ. ­ಮಹೇಂದ್ರ ­ಬಿಟ್ಟ ­ಕಣ್ಣು ­ಬಿಟ್ಟಂತೆ ­ನನ್ನನ್ನು ­ನೋಡುತ್ತಾ ಕುಳಿ­ತಿದ್ದರು!

। ಮುಂದಿನ ವಾರಕ್ಕೆ ।

September 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: