ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಶ್ರೀನಿವಾಸ ಪ್ರಭು ಅಂಕಣ- ದೆಹಲಿಯಲ್ಲಿ ನನ್ನನ್ನು ಕಲಕಿದ ಆ ಅನುಭವ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
Art by Gillian Gamble
ಜೀವಪ್ರಜ್ಞೆಯ ನಿವೇದನೆ…
ನಾಗೇಶ ಹೆಗಡೆ ಆಚಿನ ಲೋಕದೊಂದಿಗೆ ನಿರಂತರ ಸಂಭಾಷಿಸಲೆಂದು ಭೂಮಿ ರೂಪಿಸಿಕೊಂಡ ಸಾಧನವೇ ವೃಕ್ಷ ಎಂಬರ್ಥದಲ್ಲಿ ಗುರುದೇವ ರವೀಂದ್ರನಾಥ್ ಟಾಗೋರ್ ಹೇಳಿದ್ದರು. ಅದು ತತ್ವಜಿಜ್ಞಾಸೆಯ, ಕವಿಸಮಯದ ಮಾತಷ್ಟೇ ಅಲ್ಲ; ಅದರ ಹಿಂದೆ ವೈಜ್ಞಾನಿಕ ಸತ್ಯವೂ ಇದೆ. ಸೌರಮಂಡಲದ ಏಕೈಕ ಜೀವಂತ ಗ್ರಹವೆನಿಸಿದ ಭೂಮಿ ತನ್ನೊಳಗಿನ ಖನಿಜ, ನೀರು, ಗಾಳಿ,...
ಕನ್ನಡಿಗ ನೋಡಲೇಬೇಕಾದ ‘ಕನ್ನಡಿಗ’
ಜೋಗಿ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ.ಯಾರೂ ಗುಲಾಮನಾಗದಂತೆ ಮಾಡುವವನೇ ಗುರು! ಬಿಎಂ ಗಿರಿರಾಜ್ ನಿರ್ದೇಶಿಸಿದ ಕನ್ನಡಿಗ ಚಿತ್ರದಲ್ಲಿ ಬರುವ ಸಂಭಾಷಣೆ ಇದು. ಇಂಥ ಹತ್ತಾರು ಮಾತುಗಳು ಅಲ್ಲಲ್ಲಿ ಬರುತ್ತವೆ. ಒಬ್ಬ ನಿರ್ದೇಶಕ ಸೆನ್ಸಿಬಲ್ ಆಗಿದ್ದಾಗ, ಕತೆ ಹೇಳುವಾಗಲೂ ತನ್ನ ಜವಾಬ್ದಾರಿಯನ್ನು ಮರೆಯದೇ ಇದ್ದಾಗ ಮಾತ್ರ...
ನಂದಿನಿ ಹೆದ್ದುರ್ಗ ಹೊಸ ಕವಿತೆ- ಮಾತು ಸತ್ತ ಹೊತ್ತಿನಲ್ಲಿ…
ನಂದಿನಿ ಹೆದ್ದುರ್ಗ ಮಾತು ಸತ್ತ ಹೊತ್ತಿನಲ್ಲಿನಾನುಗರಿಕೆಯನ್ನೋನೀಲಿಕೊಕ್ಕಿನಪುಟ್ಟ ಹಕ್ಕಿಯನ್ನೋಜೇಡವನ್ನೋನೋಡುತ್ತೇನೆ ಸೊರಗಿದ್ದ ಝರಿಯೊಂದುಮೆಲ್ಲಗೆಹರಿಯುತ್ತದೆ ಹಿಡಿ ತೇವ ಜಿನುಗದಷ್ಟುನವೆದ ಕ್ಯಾನ್ವಾಸಿನಲ್ಲಿಮಳೆ ಸುರಿವ ಚಿತ್ರಬಿಡಿಸಿದ್ದೇನೆಎಂದೋ ಉಡುಗೊರೆಗೆಸಿಕ್ಕಿದ್ದಹೂಬೀಜ ಹುಡುಕಿಚಿತ್ರದಲ್ಲಿ ಬಿತ್ತುವಹುಚ್ಚು ವಿಧಿ...
ಸತೀಶ್ ಹುಳಿಯಾರ್ ಹೊಸ ಕವಿತೆ- ಬಲು ದೂರ…
ಸತೀಶ್ ಹುಳಿಯಾರ್ ಬಲು ದೂರ ಇದೆ ನಮ್ಮೀ ಪಯಣಸೋಲನು ಮರೆತು ಮುಂದೆ ಸಾಗೋಣ, ಹುಡುಕುತ ಜೀವನ ಈ ಬಾಳ ಹಾದಿಲಿ ನೋವನು ಮರೆತುಜೊತೆಯಲಿ ನಗುತಾ ಸಾಗುವ ಪ್ರತಿದಿನ ಯಾರೋ ಬಂದು ಬಳಿ ನಿಂದು ನೋಡಿದ ಹಾಗೆಕಣ್ಣ ಮುಚ್ಚಿ ಮನಸ ತೆರೆದು ಕೂಗಿದ ಹಾಗೆಸವಿ ನುಡಿದಂತೆ ಮೌನ ಮುರಿದಂತೆಕೈಯ ಹಿಡಿದು ದಾರಿ ತೋರಿ ಮುಂದೆ ಸಾಗಿದಂತೆ ಬೀಸೋ ಗಾಳಿ ತನ್ನ...
Pic by Moises Levy
ಅಮೃತಾ ಹೆಗಡೆ ಅಂಕಣ- ಅಂತೂ ಆತ ‘ವಿಶೇಷ’ನಿಂದ ‘ಸಾಮಾನ್ಯ’ನಾದ…
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಅಮರೇಂದ್ರ ಹೊಲ್ಲಂಬಳ್ಳಿ ಅನುವಾದಿತ ಕವಿತೆ- ಭಯ…
ಮೂಲ: ಖಲೀಲ್ ಗಿಬ್ರಾನ್ ಕನ್ನಡಕ್ಕೆ : ಡಾ ಅಮರೇಂದ್ರ ಹೊಲ್ಲಂಬಳ್ಳಿ ಕಡಲನ್ನು ಪ್ರವೇಶಿಸುವ ಮೊದಲುನದಿ ಭಯದಿಂದ ನಡುಗಿತುಎನ್ನುವ ಮಾತಿದೆ. ಪರ್ವತ ಶಿಖರಗಳಿಂದ ಬಂದವಳು ಆಕೆ.ಉದ್ದನೆಯ ಅಂಕುಡೊಂಕಾದ ರಸ್ತೆ ತಿರುವುಗಳನ್ನು,ಕಾಡುಗಳನ್ನು, ಹಳ್ಳಿಗಳನ್ನು ಹಾದು ಬಂದವಳು ಆಕೆ.ತಾನು ಪಯಣಿಸಿದ ದಾರಿಯೆಡೆಗೆ ಒಮ್ಮೆಹಿಂದಿರುಗಿ...
ಬಿದಲೋಟಿ ರಂಗನಾಥ್ ಹೊಸ ಕವಿತೆ- ಬೆತ್ತಲ ರಾತ್ರಿ…
ಬಿದಲೋಟಿ ರಂಗನಾಥ್ ನೋಡ ಬೇಕೆನಿಸಿತುಆ ಬೆತ್ತಲ ರಾತ್ರಿಕನಸಿಗೆ ಬಂದು ಕನವರಿಸಿಹುತ್ತವಾದವಳನ್ನು ಸೋಲ ಬೇಕೆನಿಸಿತುತೊಳ್ತೆಕ್ಕೆಯಲಿ ಬಂಧಿಯಾಗಿಕಡೆದ ಚಂದ್ರ ಚಿತ್ರಕೆಬಣ್ಣ ಹಚ್ಚದೇ ಹೋದವಳಿಗೆ ಕವಿಯಬೇಕೆನ್ನಿಸಿತುಕಣ್ಣರೆಪ್ಪೆಯ ಗೂಡೊಳಗೆಮಂಪರು ತುಂಬಿಅರೆ ನಿದ್ದೆ ಮಾಡಿ ಹೋದವಳನ್ನು ಕೆನ್ನೆ ಸವರ ಬೇಕೆನಿಸಿತುಕಸಿದ ಮುತ್ತುಗಳ ರಾಶಿ...
ಎಚ್ ಎಸ್ ಪಾರ್ವತಿ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ
ಖ್ಯಾತ ಲೇಖಕಿ ಎಚ್ ಎಸ್ ಪಾರ್ವತಿ ಅವರ ನೆನಪಿನಲ್ಲಿ ಸ್ಥಾಪಿಸಲಾಗಿರುವ ಪ್ರಶಸ್ತಿಯನ್ನು ಡಾ.ಎಸ್.ವಿ.ಪ್ರಭಾವತಿ ಮತ್ತು ಡಾ.ವೈ.ಸಿ.ಭಾನುಮತಿ ಅವರಿಗೆ ವಿತರಿಸಲಾಯಿತು. ಕರ್ನಾಟಕ ಲೇಖಕಿಯರ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಲೇಖಕಿ ಡಾ. ವಿಜಯಾ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕವಯತ್ರಿ ಡಾ ಎಚ್ ಎಲ್...
ನಾಮದೇವ ಕಾಗದಗಾರ ಓದಿದ ‘ಹಾವೇರಿಯಾಂವ್’
ದ್ವೇಷ, ಅಸೂಯೆಗಳಿಲ್ಲದೆ ಜೀವನ ಪ್ರೀತಿ ತೋರಿಸುವ 'ಹಾವೇರಿಯಾಂವ್' ನಾಮದೇವ ಕಾಗದಗಾರ ವನ್ಯಜೀವಿ ಛಾಯಾಗ್ರಾಹಕ, ಕವಿಯೂ ಆಗಿರುವ ಹಾವೇರಿಯ ಮಾಲತೇಶ ಅಂಗೂರ ಮೂರು ದಶಕಗಳಿಂದ ಹಾವೇರಿಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಇತ್ತೀಚಿಗೆ ತಮ್ಮ ಅಂಕಣ ಬರಹಗಳ 'ಹಾವೇರಿಯಾಂವ್' ಪುಸ್ತಕ ಹೊರ ತಂದಿದ್ದಾರೆ....
ಚಿ ಸು ಕೃಷ್ಣಸೆಟ್ಟಿ ಕಲಾಪ್ರದರ್ಶನ ಫೋಟೋ ಆಲ್ಬಂ…
ಖ್ಯಾತ ಕಲಾವಿದ ಚಿ ಸು ಕೃಷ್ಣ ಸೆಟ್ಟಿ ಅವರ ಹೊಸ ಕಲಾಕೃತಿಗಳ ಪ್ರದರ್ಶನವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಚಿತ್ರಕಲಾ ಪರಿಷತ್ತಿನ ನೂತನ ಕ್ಯಾಂಪಸ್ ನಲ್ಲಿ ಜರುಗಿದ ಈ ಪ್ರದರ್ಶನದ ಉದ್ಘಾಟನಾ ಸಮಾರಂಭದ ಫೋಟೋ ಆಲ್ಬಮ್ ಇಲ್ಲಿದೆ- ಜನವರಿ 4 ರವರೆಗೆ ಈ...
ಮೈಸೂರಿನಲ್ಲಿ ʼಮಹಾಭಾರತ ಪದ್ಮವ್ಯೂಹ’
`ವೀರ ಅಭಿಮನ್ಯು’ ಆಧಾರಿತ ‘ಮಹಾಭಾರತ ಪದ್ಮವ್ಯೂಹ’ ನಾಟಕ ಪ್ರದರ್ಶನವನ್ನು ಮೈಸೂರಿನ ಕಲಾಮಂದಿರದ ಆವರಣದಲ್ಲಿರುವ ಕಿರುರಂಗ ಮಂದಿರದಲ್ಲಿ ಆಯೋಜಿಸಲಾಗಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಸಮುರಾಯ್ ಥಿಯೇಟರ್ ಈ ನಾಟಕವನ್ನು ರಂಗಕ್ಕೇರಿಸಿದ್ದು ವಾಮನ ಮಾಸ್ತರರ ಕೃತಿಯನ್ನು ಆಧರಿಸಿದೆ. ಡಿಸೆಂಬರ್ 23 ರಂದು ಸಂಜೆ 7 ಗಂಟೆಗೆ ಈ...
Pic by Arpit Mehrothra
ವೀರಣ್ಣ ಮಡಿವಾಳರ ಹೊಸ ಕವಿತೆ- ಬಿಳಿರಾತ್ರಿಯ ಬಣ್ಣದ ಕನಸು…
ವೀರಣ್ಣ ಮಡಿವಾಳರ ನಟ್ಟನಡುರಾತ್ರಿಗೆ ನಿನ್ನ ನೆನಪು ಬಿಳಿಯ ಬಣ್ಣ ಬಳಿದಿವೆರಕ್ತಹೆಪ್ಪುಗಟ್ಟಿಸುವ ಈ ಮಾಗಿಯ ಚಳಿಯಲಿನಿನ್ನ ಚೇತನ ನನ್ನಲ್ಲಿನನ್ನ ಚೇತನ ನಿನ್ನಲ್ಲಿತಣ್ಣಗೆ ಉರಿಯುತ್ತಿವೆ ನೀನು ಕೇಳುವುದಾದರೂ ಏನುಒಂದು ನವಿಲು ಗರಿಎರಡು ಮುದ್ದು ಮೊಲಬೊಗಸೆ ತುಂಬಾ ನಗುವ ನಕ್ಷತ್ರ ಈ ಗಾಢ ರಾತ್ರಿಯಲಿ ನನಗೆ ಕಳ್ಳನಪಟ್ಟ ಕೊಟ್ಟರೂ...
ಎಚ್ ಆರ್ ರಮೇಶ ಹೊಸ ಕವಿತೆ- ಭಾವ ಭಾಷೆ ಮೂಡಿ…
ಎಚ್ ಆರ್ ರಮೇಶ ಅರಿಯಲಾರದ ಕಾಲ ಅನುಭವಕ್ಕೆಮನದ ಭಾವ ಭಾಷೆಯಲ್ಲಿಅಸ್ತಿತ್ವವ್ಯಕ್ತವಾಗಿದ್ದದ್ದು ಘಟಿಸಲಿಲ್ಲಮಂಜುಗಡ್ಡೆ ಕರಗದೆ ಕೊರೆಯುವುದುಅಂದಿನದ್ದು ಇಂದು ಇರಬೇಕಿತ್ತುಎನ್ನುವ ಕಾಲದ ವಿರುದ್ಧಭಾವಸನ್ನಿವೇಶ ಮಾಡುವುದು ವಕ್ರತಪ್ಪಿಸಿ ಆಗಬೇಕಾಗಿದ್ದದ್ದನ್ನು ಆಗಿಕಾಲವನ್ನೇ ತನ್ನ ಸುಳಿಯೊಳಗೆಎಳೆದು...
ವಿಜಯಲಕ್ಷ್ಮಿ ಸತ್ಯಮೂರ್ತಿ ಕಾದಂಬರಿ ʼವ್ಯೂಹʼದ ಸುತ್ತ…
ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಕಾದಂಬರಿ 'ವ್ಯೂಹʼ ಈ ವಾರ ಬಿಡುಗಡೆಯಾಗುತ್ತಿದೆ. ಕೊರೋನಾ ಕಾಲದ ತಲ್ಲಣಗಳ ಮಧ್ಯೆ ಉಸಿರುಗಟ್ಟಿದಂತಾದ ಸ್ಥಿತಿಯಲ್ಲಿ ಬರೆದ ಕೃತಿ ಇದು. ಈ ಕೃತಿಗೆ ಲೇಖಕಿ ಬರೆದ ಮಾತುಗಳು ಇಲ್ಲಿವೆ- ವಿಜಯಲಕ್ಷ್ಮಿ ಸತ್ಯಮೂರ್ತಿ ಅದು 2020ರ ಆಗಸ್ಟ್ ತಿಂಗಳು ಅದೇಕೋ ಇದ್ದಕ್ಕಿದ್ದಂತೆ ಅನಾರೋಗ್ಯ ಕಾಡಿತ್ತು...
ಪ್ರಸಾದ ರಕ್ಷಿದಿ ಓದಿದ ʼವೈದ್ಯನ ವಗೈರೆಗಳುʼ
ಪ್ರಸಾದ ರಕ್ಷಿದಿ ಹೆಸರೇ ಹೇಳುವಂತೆ ವೈದ್ಯರೊಬ್ಬರ ಅನುಭವ ಬರಹಗಳು. ಡಾ.ಎ.ಪಿ.ಭಟ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮಅನುಭವಗಳನ್ನು ಹಂಚಿಕೊಳ್ಳುತ್ತಿರುವವರು. ಆದ್ದರಿಂದ ಅವರು ಪರಿಚಿತರ ನಡುವೆ ಹೇಗೋ ಹಾಗೆಯೇ ನೆಟ್ಟಿಗರ ನಡುವೆಯೂ ಸ್ನೇಹಮಯಿ. ವೃತ್ತಿಯಿಂದ ವೈದ್ಯರಾಗಿದ್ದರೂ, ಡಾ.ಭಟ್ ಅವರ ಆಸಕ್ತಿಗಳು ಬಹುಮುಖಿ. ಅವರು...
ಜಯರಾಮಚಾರಿ ಹೊಸ ಕಥೆ- ಭವಿಷ್ಯ…
ಜಯರಾಮಚಾರಿ ಸಾಹೇಬರು ಆಫೀಸಲ್ಲಿದ್ದರು. ಸಾಹೇಬರು ಬೇರಾರು ಅಲ್ಲ ಹೊಳೆನರಸಿಪುರದ ಸಿದ್ದಯ್ಯ. ಸಿದ್ದಯ್ಯ ಸಾಹೇಬರಾಗಿ ಎಷ್ಟೊ ವರುಷಗಳಾಗಿವೆ, ಈ ಪಿ ಡಬ್ಲ್ಯೂ ಡಿ ಇಲಾಖೆಗೆ ಟ್ರಾನ್ಸ್ಫರ್ ಆಗಿ ಆರೇಳು ವರುಷವಾಗಿವೆ. ಈ ಆರೇಳು ವರುಷಗಳಲ್ಲಿ ಸಾಹೇಬರು ಆಫೀಸಲ್ಲಿದ್ದುದು ಕಮ್ಮಿ. ಇವತ್ತು ಆಫೀಸಲ್ಲಿದ್ದರು, ಅವರು ಈ ಹೊತ್ತಲ್ಲೂ...
Pic by surit dutta





















