ಇಂದು ಅವಧಿಯಲ್ಲಿ...
ಹೊತ್ತಲ್ಲದ ಹೊತ್ತಲ್ಲಿ ಹೋಗಿ ಬಿಟ್ರಾ ಮೇಸ್ಟ್ರೆ…
ರವಿಕುಮಾರ್ ಟೆಲೆಕ್ಸ್ 2016 ಬಿ.ಎಸ್ ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿ. 73 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶಿವಮೊಗ್ಗ ಅದ್ಧೂರಿಯಾಗಿ ಸಜ್ಜುಗೊಂಡಿತ್ತು. ಸಮ್ಮೇಳನದ ಗೋಷ್ಟಿಗಳಲ್ಲಿ ಮಲೆನಾಡಿನ ಸಮಸ್ಯೆಗಳು ಮತ್ತು ನಾಡಿನ ಸೌಹಾರ್ದತೆ ವಿಷಯಗಳೂ ಇದ್ದು ಪ್ರಗತಿಪರ ಹೋರಾಟಗಾರ ಕಲ್ಕುಳಿ ವಿಠಲಹೆಗಡೆ, ಪತ್ರಕರ್ತೆ ಗೌರಿ ಲಂಕೇಶ್...
ಚಂಪಾ ಇನ್ನಿಲ್ಲ…
ಕನ್ನಡದ ಖ್ಯಾತ ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಇನ್ನಿಲ್ಲ.
ಹಿಟ್ಟಿನ ಸತ್ವ ಹೀರುವ ಗಿರಣಿಗಳು…
ಶ್ರೀಪಾದ ಹೆಗಡೆ ಇದು ಸುಮಾರು ನಲವತೈದು ವರುಷಗಳ ಹಿಂದಿನ ಮಾತು. ನನ್ನ ಸಹೋದ್ಯೋಗಿಯೊಬ್ಬನನ್ನು ನಾವು ಕೆಲವರು ಸದಾ ಗೋಳು ಹೊಯ್ದುಕೊಳ್ಳುತ್ತಿದ್ದೆವು, ಕಾರಣ ಅವನು ಯಾವಾಗಲೂ ಒಂದಲ್ಲಾ ಒಂದು ತುಂಬ ತಮಾಶೆ ಎನಿಸುವ ಯೋಜನೆಯನ್ನು ಸೂಚಿಸುತ್ತಿರುತ್ತಿದ್ದ. ಉದಾಹರಣೆಗೆ ಹೆಚ್ಚು ಶ್ರಮ ಪಡದೆ ಮತ್ತು ಖಾತ್ರಿಯಾಗಿ ನೆಲದಡಿಯಲ್ಲಿ ನೀರಿರುವ...
ಬಸಲಿಂಗಯ್ಯ ಹಿರೇಮಠ ಇನ್ನಿಲ್ಲ…
ಡಿ ಎಸ್ ಚೌಗಲೆ ಖ್ಯಾತ ಜಾನಪದ ಗಾಯಕ, ಆಪ್ತ ಮಿತ್ರ ಬಸಲಿಂಗಯ್ಯ ಹಿರೇಮಠ ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರೆಂಬ ಸುದ್ದಿ ಬರಸಿಡಿಲಂತೆ ಎರಗಿದೆ. ಶ್ರೀಕೃಷ್ಣ ಪಾರಿಜಾತ, ಸಂಗ್ಯಾ ಬಾಳ್ಯಾ,ರಾಧಾನಾಟ ಸಣ್ಣಾಟಗಳ ಹಾಡುಗಾರಿಕೆ, ಅಭಿನಯ ಮತ್ತು ಸಂಪಾದನೆ ಮಾಡಿದ ಒಬ್ಬ ಶ್ರೇಷ್ಠ ಗಾಯಕ. ಬಸವರಾಜ ಮಲಶೆಟ್ಟಿ ಅವರ ನಂತರ...
ಗೆಳೆಯಾ, ಎಲ್ಲಿಗೆ ತೆರಳಿದೆ ಹಾಡುಗಳ ಇಲ್ಲಿಟ್ಟು…!
ಪುರುಷೋತ್ತಮ ಬಿಳಿಮಲೆ ಬೆಳಗ್ಗೇಳುತ್ತಲೇ ಧಾರವಾಡದ ಗೆಳೆಯ, ಜಾನಪದ ಗಾರುಡಿಗ ಬಸವಲಿಂಗಯ್ಯ ತೀರಿಕೊಂಡ ಸುದ್ದಿ ಕಿವಿಗೆ ಅಪ್ಪಳಿಸಿತು. ಅದೊಂದು ನಂಬಲಾಗದ ವಿಷಯವಾಗಿತ್ತು. ಅವರಿಗೆ ಆರೋಗ್ಯ ಚೆನ್ನಾಗಿರಲಿಲ್ಲ ಎಂದು ತಿಳಿದಿತ್ತು. ಆದರೆ ಅದುವೇ ಕಾರಣವಾಗಿ ಎಲ್ಲ ಬಂಧನಗಳನ್ನು ಬಿಡಿಸಿಕೊಂಡು ಇಷ್ಟು ಅವಸರದಲ್ಲಿ ಹೊರಟು ಬಿಡುತ್ತಾರೆ...
‘ಮೊಗವೀರ’ಮಾಸಿಕ ಕಥಾ ಸ್ಪರ್ಧೆ ಫಲಿತಾಂಶ ಪ್ರಕಟ..
Latest
ಬಾ ಕವಿತಾ
ಲಿಂಗರಾಜ್ ಸೊಟ್ಟಪ್ಪನವರ್ ಕವಿತೆ – ಎವೆಗೆ ದಕ್ಕದ ಪಟ…
ಲಿಂಗರಾಜ್ ಸೊಟ್ಟಪ್ಪನವರ್ ಒಂದು ತಪ್ಪಾದ ಅಂದಾಜಿಗೆಎದೆಯ ಆಳ ಸಿಕ್ಕಿತುಒಂದು ಅಪ್ಪಿ ತಪ್ಪಿ ನೋಟಕ್ಕೆನೀನು ಕಂಡಿದ್ದುಒಂದು ಸುಮ್ಮನೆ ಮಾತಿಗೆಇಷ್ಟು ದೂರ ಸಾಗಿ ಬಂದೆಒಂದು...
ಪೂರ್ಣಿಮಾ ಮಾಳಗಿಮನಿ ಕವಿತೆ – ಮಂಜು ಬಿದ್ದದ್ದು…
ಪೂರ್ಣಿಮಾ ಮಾಳಗಿಮನಿ ಮಂಜು ಮಂಜಾದ ದಾರಿಯಲ್ಲಿಇದಿರಾಗುವವರಮುಖಗಳು ರಂಗೋಲಿ ಹೊದ್ದುಗುರುತಿಸಿದೆನೆಂದು ಮೆರೆಯುವಷ್ಟುಗುರುತಿಸಲಾಗದೆ ಮರುಗುವಷ್ಟುಬೆಳಕು ಎಲ್ಲಿದೆ? ಕೇಳಬೇಡ ನನ್ನ...
ಪುಸ್ತಕದ ಪರಿಚಯ
Book Shelf
ಸಂಗೀತಾ ಚಚಾಡಿ ಕಂಡಂತೆ ʼಜೋತಯ್ಯನ ಬಿದಿರು ಬುಟ್ಟಿಯʼ
ಸಂಗೀತಾ ಚಚಾಡಿ ಪಿ ಯು ಸಿ ದಿನಗಳು. ಎರಡನೇ ವರ್ಷದ ಹೊತ್ತಿಗೋ ಅಥವಾ ಮೊದಲ ವರ್ಷದ ಉತ್ತರಾರ್ಧವೋ ಸರಿಯಾಗಿ ನೆನಪಿಲ್ಲ. ಉತ್ತರ ಕನ್ನಡದಿಂದ ಬಂದ ಆ ಇಬ್ಬರು ಹುಡುಗಿಯರು ಹೊಸದಾಗಿ ಕ್ಲಾಸ್ ಜಾಯಿನ್ ಆಗಿದ್ದರು. ಅದೇನೋ ಅಂತಾರಲ್ಲ, 'ನಾನು ಬಂದ ಮೇಲೆ ನಂದೇ ಹವಾ' ಹಾಗೆ, ಈ ಇಬ್ಬರು ಹುಡುಗಿಯರು ಬಂದ ತಕ್ಷಣದಿಂದಲೇ ಚಟ ಪಟ ಉತ್ತರಗಳನ್ನು...
’ಬಾಡಿಹೋಗದ ಬಾಳ ಕಂಬ’ – ಶ್ರೀದೇವಿ ಕೆರೆಮನೆ
ಶ್ರೀದೇವಿ ಕೆರೆಮನೆ ಅದಮ್ಯ ಉತ್ಸಾಹದ ಬಸು ಬೇವಿನಗಿಡದ ಅವರ ಕಥೆಗಳನ್ನು ಓದುವುದೆಂದರೆ ನಮ್ಮೊಳಗೆ ಜೀವನೋತ್ಸಾಹವನ್ನು ತುಂಬಿಕೊಳ್ಳುವುದೆಂದೇ ಅರ್ಥ. ಅದೆಷ್ಟು ಉತ್ಸಾಹ, ಅದೆಂತಹ ಉಮ್ಮೇದಿ, ಅದ್ಯಾವ ಪರಿಯ ಜೀವನ ಪ್ರೀತಿಯನ್ನು ಕಥೆಗಳಲ್ಲಿ ತುಂಬುತ್ತಾರೆಂದರೆ ಓದುಗ ತಾನೇ ತಾನಾಗಿ ಕಥೆಗಳಲ್ಲಿ ಬೆರೆತು ಹೊಗಬೇಕು, ತಾನೆ ಆ ಕಥೆಯ...
ಕೈವಾರದಲ್ಲಿ ’ನೆಲ ಮುಗಿಲಿನ ನಡುವೆ’ ಪುಸ್ತಕ ಬಿಡುಗಡೆ
ಅಕ್ಕಿಮಂಗಲ ಮಂಜುನಾಥರವರ ಹೊಸ ಕವನ ಸಂಕಲನ "ನೆಲ ಮುಗಿಲಿನ ನಡುವೆ" ಇಂದು ಕೈವಾರಲ್ಲಿ ಬಿಡುಗಡೆಯಾಗುತ್ತಿದೆ ಅವದಿಯ ಓದುಗರಿಗಾಗಿ ಈ ಸಂಕಲನದ ಎರಡು ಪದ್ಯಗಳು ಕಿಡಿ ತುಂಬು ಕತ್ತಲಿನ ನೀರವ ರಾತ್ರಿ ಗಡ ಗಡ ನಡುಗುವ ಚಳಿಯಲ್ಲಿ ಹೊಲಗಳ ನಡುವೆ ಅಬ್ಬರಿಸುತ್ತಿದೆ ಬೆಂಕಿಯ ನಾಲಗೆ ಮೆದೆಗಳಲಿ ದುಡಿದರೂ ಕೂಡ ಸಿಕ್ಕದೆ ಹೋಯಿತು ತಮ್ಮ...
ಶ್ರೀದೇವಿ ಮತ್ತು ’ಹೆಣ್ತನದ ಆಚೆ-ಈಚೆ’ – ಆನಂದ್ ಋಗ್ವೇದಿ
ಡಾ ಆನಂದ್ ಋಗ್ವೇದಿ 'ನಾನು ಗೆದ್ದೇ ಗೆಲ್ಲುವೆ' ಎಂಬ ಕವನ ಸಂಕಲನದ ಮೂಲಕ ಅಪಾರ ಆತ್ಮ ವಿಶ್ವಾಸದ ಕವಯತ್ರಿಯಾಗಿ ಪರಿಚಿತರಾದ ಶ್ರೀದೇವಿ ಕೆರೆಮನೆಯವರಲ್ಲಿ ಒಂದು ಸುಸಂಪನ್ನ ಮನಸ್ಥಿತಿ, ಭಾವಲಹರಿ ಮತ್ತು ಮಾತುಗಾರಿಕೆ ಅಡಗಿಕೊಂಡಿವೆ. ಈ ವಾಚಾಳಿತನ; ಮೌನದ ಮೊಗ್ಗೊಡೆಸಿ ಗಂಧ ಪಸರಿಸುವ ಕಾವ್ಯ ಕ್ರಿಯೆಗಿಂತ, ಮಾತಿನ ಅರಳು ಸಿಡಿಸಿ ಮತಾಪ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











