ಮೀನಾಕ್ಷಿ ಭಟ್ಟ ಅವರ ‘ಹರಿವ ನದಿ’ ಫೋಟೋ ಆಲ್ಬಂ

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಅಂದು ವಿಶೇಷ ಸಂಭ್ರಮ. ಶಂಕರಮಠ ಸಭಾಂಗಣದಲ್ಲಿ ಸೇರಿದ್ದ ಎಲ್ಲರಿಗೂ ಮೀನಾಕ್ಷಿ ಭಟ್ ಆತ್ಮಕಥೆ ಬರೆದಿದ್ದಾರಂತೆ ಎಂದೇ ಸುದ್ದಿ. ಅಂದಿನವರೆಗೂ ಮೀನಾಕ್ಷಿ ಮಾತ್ರ ಆಗಿ ಇದ್ದ ವ್ಯಕ್ತಿ ಒಂದು ಪುಸ್ತಕದ ಕಾರಣದಿಂದಾಗಿ ಮೀನಾಕ್ಷಿ ಭಟ್ ಆಗಿ ಎಲ್ಲರ ಕುತೂಹಲದ ಕೇಂದ್ರವಾಗಿದ್ದರು.

ಮೀನಾಕ್ಷಿ ಭಟ್ಟ ಅವರ ಕುಟುಂಬ- ವಿಜಯಾ, ರವೀಂದ್ರ ಹಾಗೂ ಭಾರತಿ ಒಗ್ಗೂಡಿ ಸಂಘಟಿಸಿದ್ದ ಕಾರ್ಯಕ್ರಮ ಅದು.

ಭಾರತಿ ಹೆಗಡೆ ಹಲವು ವರ್ಷಗಳಿಂದ ಅಮ್ಮನ ಬಾಯಲ್ಲೇ ಅಮ್ಮನ ಕಥೆ ಕೇಳುವ ಕನಸು ಕಂಡಿದ್ದರು. ಇದಕ್ಕೆ ಅಮ್ಮನನ್ನು ಒಪ್ಪಿಸಲು ಹಿಡಿದ ಕಾಲವೇ ದೊಡ್ಡದು. ಆನಂತರ ಅವರು ಹೇಳಿದ್ದು- ಇವರು ಬರೆದುಕೊಂಡದ್ದು ಎಂದು ಇನ್ನಷ್ಟು ಕಾಲ ಕಳೆಯಿತು. ಅಮ್ಮ ನಂತರ ‘ಇನ್ನು ನಂದೇನಿಲ್ಲ ಕಣೆ..’ ಎಂದು ನಿಲ್ಲಿಸದಾಗ ಪುಸ್ತಕದ ಕನಸು ನನಸಾಗಿ ಕಾಣತೊಡಗಿತ್ತು.

ಬೆಂಗಳೂರಿನ ಆರ್ ಪೂರ್ಣಿಮಾ ನೇತೃತ್ವದ ‘ವಿಕಾಸ ಪ್ರಕಾಶನ’ ಈ ಗಾಥೆಯನ್ನು ಪುಸ್ತಕವಾಗಿಸಲು ಮುಂದೆ ಬಂದಿತು. ಎಲ್ಲವೂ ಸೇರಿ ಹೊರಬಂದದ್ದೇ- ಹರಿವ ನದಿ. ಮೀನಾಕ್ಷಿ ಭಟ್ಟರ ಆತ್ಮ ಕಥನ.

ಬೆಳಗ್ಗೆಯಿಂದ ಸಂಜೆಯವರೆಗೆ ಅಮ್ಮನ ಹೆಸರಿನಲ್ಲಿ ಸಂಭ್ರಮವೋ ಸಂಭ್ರಮ.ಹವ್ಯಕ ಸಂಪ್ರದಾಯದ ಹಾಡುಗಳು, ಶಿವಮೊಗ್ಗದ ಸುರೇಖಾ ಹೆಗಡೆ ಮತ್ತು ತಂಡದಿಂದ ‘ಅಮ್ಮನ ಹಾಡು’ಗಳು. ನಂತರ ‘ಐರಾವತ’ ತಾಳಮದ್ದಳೆ.

ಆನಂತರ ನಡೆದದ್ದೇ ಕೃತಿ ಬಿಡುಗಡೆ. ಖ್ಯಾತ ಗಾಯಕಿ ಎಚ್.ಆರ್.ಲೀಲಾವತಿ ಕೃತಿ ಬಿಡುಗಡೆ ಮಾಡಿದರು.ವಿಮರ್ಶಕಿ ವಿನಯಾ ವಕ್ಕುಂದ, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಲೇಖಕಿ ಭಾರತಿ ಹೆಗಡೆ ಉಪಸ್ಥಿತರಿದ್ದರು.

ಇನ್ನುಳಿದಂತೆ ಇಲ್ಲಿನ ಫೋಟೋಗಳಷ್ಟೇ ಅಂದಿನ ಸಂಭ್ರಮದ ಕಥೆಯನ್ನು ಹೇಳುತ್ತದೆ-

ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ.

‍ಲೇಖಕರು Admin

December 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: