‘ಅವಧಿ’ ಬೆಸ್ಟ್ ಬ್ಲಾಗ್ ಲೇಖನಗಳು

‘ಅವಧಿ’ ಬೆಸ್ಟ್ ಬ್ಲಾಗ್: ಇಟ್ಟಿಗೆ ಸಿಮೆಂಟು

‘ಅವಧಿ’ ಬೆಸ್ಟ್ ಬ್ಲಾಗ್: ಇಟ್ಟಿಗೆ ಸಿಮೆಂಟು

ಇವತ್ತಿನ ಆಯ್ಕೆ: ಇಟ್ಟಿಗೆ ಸಿಮೆಂಟು ಕೆಲವೊಂದು ಬ್ಲಾಗುಗಳನ್ನು ಪರಿಚಯಿಸುವ ಅಗತ್ಯವಿರುವುದಿಲ್ಲ. ಸಮಾರಂಭಗಳಲ್ಲಿ ಪ್ರಸಿದ್ಧ ಅತಿಥಿಗಳನ್ನು ಪರಿಚಯಿಸುವಾಗ ’ಇವರನ್ನು ಪರಿಚಯಿಸೋ ಅಗತ್ಯವಿಲ್ಲ, ಆದರೂ…’ ಅಂತಾರಲ್ಲ, ಹಾಗೆ ಇಲ್ಲೂ! ಪ್ರಕಾಶ್ ಹೆಗಡೆ ಬ್ಲಾಗಿಗರ ಮನೆಮಾತು. ಪ್ರಕಾಶಣ್ಣ, ಪಕ್ಕು ಮಾವ, ಸಜ್ಜನ ಬ್ಲಾಗಿಗ, ಇಟ್ಟಿಗೆ-ಸಿಮೆಂಟಣ್ಣ, ತುಂಬಾ ಸೆಂಟಿಮೆಂಟಣ್ಣ ಅಂತೆಲ್ಲ ಏನೇ ಅಂದರೂ ಅದು ಪ್ರಕಾಶ್ ಹೆಗಡೆಯವರ ಬಣ್ಬಬಣ್ಣದ ಬ್ಲಾಗಿಗೆ ಸಂಬಂಧಿಸಿದ್ದು. ಇವರು ಪುಸ್ತಕ ಮಾಡಿದರೆ ಅದಕ್ಕೆ ಹೆಸರೇ ಬೇಡ. ಅಥವಾ ಸುಮ್ನೆ ಇದೇ ಇದರ ಹೆಸರು ಎಂದರೂ ಸಾಕು, ಕೊಳ್ಳುವವರ ಪ್ರೀತಿ […]

ಮತ್ತಷ್ಟು ಓದಿ
‘ಅವಧಿ’ ಬೆಸ್ಟ್ ಬ್ಲಾಗ್: ಇಂದಿನ ಆಯ್ಕೆ-ಹರಿವ ಲಹರಿ

‘ಅವಧಿ’ ಬೆಸ್ಟ್ ಬ್ಲಾಗ್: ಇಂದಿನ ಆಯ್ಕೆ-ಹರಿವ ಲಹರಿ

ಇವತ್ತಿನ ಆಯ್ಕೆ: ಹರಿವ ಲಹರಿ ಅಮೆರಿಕೆಯಿಂದ ಬಂದದ್ದೇ ಜ್ಯೋತಿ ಮಹದೇವ್ ಫುಲ್ ಫ್ರೀ ಆಗಿಬಿಟ್ಟಿದ್ದಾರೆ! ಅದಕ್ಕೆ ಅವರು ಬರೆಯುತ್ತಿರುವ ನೀಳ್ಗತೆಗಳೇ ಸಾಕ್ಷಿ. ’ಹರಿಯುವುದೆಲ್ಲ ಹೊಳೆಯೆ ಅಲ್ಲ, ಪುಟ್ಟ ತೊರೆಯು ನಾನು’ ಎಂದು ಹೇಳಿಕೊಂಡು ಇವರು ಬರೆಯಲು ಶುರುವಿಟ್ಟರೆ ಅಲ್ಲಿ ಲಹರಿಯ ತೊರೆ ಜುಳುಜುಳು ಎನ್ನುತ್ತದೆ. ಕವಿತೆ, ಕತೆ, ಲೇಖನಗಳಿಂದ ಇವರು ಹೆಸರು ಮಾಡಿರುವುದು ’ಸುಪ್ತದೀಪ್ತಿ’ ಎಂಬ ಕಾವ್ಯನಾಮದಿಂದ. ಇತ್ತೀಚಿಗೆ ಅದೆಂಥದೋ ಹಿಪ್ನೋಥೆರಪಿಯ ಹುಚ್ಚು ಹತ್ತಿಸಿಕೊಂಡಿರುವುದು ಇವರ ಸುಪ್ತದೀಪ್ತಿ ಎಂಬ ಇನ್ನೊಂದು ಬ್ಲಾಗ್ ನೋಡಿದರೆ ಅನಿಸುತ್ತದೆ. ಹಾಗೆ ನೋಡಿದರೆ, […]

ಮತ್ತಷ್ಟು ಓದಿ
ಅವಧಿ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ: ಹಸಿರುಮಾತು

ಅವಧಿ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ: ಹಸಿರುಮಾತು

ಇವತ್ತಿನ ಆಯ್ಕೆ: ಹಸಿರುಮಾತು  ಪತ್ರಕರ್ತ ನಾಗೇಶ್ ಹೆಗಡೆ ಹೇಳುತ್ತಿರುತ್ತಾರೆ: ಕನ್ನಡದ ಮಹತ್ವಪೂರ್ಣ ಪತ್ರಿಕೆಗಳಲ್ಲಿ ’ಅಡಿಕೆ ಪತ್ರಿಕೆ’ ಸಹ ಒಂದು ಅಂತ. ಅದರಲ್ಲಿ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆಯವರ ಪಾತ್ರ ದೊಡ್ಡದು. ಇವರ ಬಳಿ ಹೋಗಿ ’ನೀವು ಯಾರು?’ ಅಂತ ಕೇಳಿದರೆ ಬಹುಶಃ ’ನಾ ಕಾರಂತ ಪೆರಾಜೆ’ ಎನ್ನಬಹುದು! ಇವರ ಸರೀ ಹೆಸರು ನಾರಾಯಣ ಕಾರಂತ. ಊರು ಪೆರಾಜೆ. ಬರೆಯುವಾಗ ’ನಾ. ಕಾರಂತ ಪೆರಾಜೆ.’ 🙂 ಪೆರಾಜೆಯವರ ಬ್ಲಾಗು ’ಹಸಿರುಮಾತು’. ಕನ್ನಡದ ’ಜಾಗೃತ ಬ್ಲಾಗು’ಗಳಲ್ಲಿ […]

ಮತ್ತಷ್ಟು ಓದಿ
‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ-ಮಧುವನ

‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ-ಮಧುವನ

ಇವತ್ತಿನ ಆಯ್ಕೆ: ಮಧುವನ  ಜೇನಿನ ರುಚಿ ಸವಿದವನೇ ಬಲ್ಲ. ಹಾಗಂತ ಬರೀ ಜೇನನ್ನೇ ತಿನ್ನುತ್ತಿದ್ದರೆ ಅದೂ ಬೇಗನೆ ಬೇಸರ ಬರುತ್ತದೆ. ಈ ’ಬೇಸರ ಬರುವ ಖಾಯಿಲೆ’ ಬಹುಶಃ ಮನುಷ್ಯ ಜೀವಿಯಲ್ಲಿ ಮಾತ್ರವಿರಬೇಕು. ಅದಿಲ್ಲದಿದ್ದರೆ ಮಕರಂದ ಹೀರೀ ಹೀರೀ ಬೇಸರ ಬಂದು ದುಂಬಿಗಳೆಲ್ಲ ಮತ್ತೇನಕ್ಕೋ ಲಗ್ಗೆಯಿಟ್ಟು ಹೂವುಗಳು ಬಂಜೆಯಾಗಿಬಿಡುತ್ತಿದ್ದವೇನೋ? 😉 ಆದರೆ ಜೇನು ಸಹ ಎಷ್ಟೇ ಹೀರಿದರೂ ಬೇಸರ ಬರುವುದಿಲ್ಲ ಎಂಬ ಸತ್ಯದ ಅರಿವಾಗಲು ನೀವು ಮಧುಸೂದನ್ ಹೆಗಡೆಯ ’ಮಧುವನ’ ಬ್ಲಾಗಿಗೆ ಭೇಟಿಯಿಡಬೇಕು. ಇಲ್ಲಿನ ಬರಹಗಳೆಲ್ಲ ಜೇನಿನಲ್ಲಿ ಅದ್ದಿ […]

ಮತ್ತಷ್ಟು ಓದಿ
‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ- ಚಿತ್ರಪಟ

‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ- ಚಿತ್ರಪಟ

ಇವತ್ತಿನ ಆಯ್ಕೆ: ಚಿತ್ರಪಟ   ಬ್ಲಾಗುಲೋಕದ ಹೊಸ ಟ್ರೆಂಡ್ ಎಂದರೆ ದಿಗ್ವಾಸ್ ಹೆಗಡೆ ತೆಗೆದ ಫೋಟೋಗಳಿಗೆ ಕವನ ಬರೆಯುವುದು! ಬಹಳ ಹಿಂದೆಯೇ ಶ್ರೀದೇವಿ ’ಚಿತ್ರಕವನ’ ಎಂಬ ಬ್ಲಾಗಿನಲ್ಲಿ ಈ ಪ್ರಯೋಗ ಮಾಡಿದ್ದರು. ಒಂದೇ ಚಿತ್ರವನ್ನು ಪ್ರಕಟಿಸಿ ಅದರ ಮೇಲೆ ಕವನ/ಬರಹಗಳನ್ನು ಪ್ರತಿಕ್ರಿಯೆಯ ರೂಪದಲ್ಲಿ ಆಹ್ವಾನಿಸುವುದು. ಈಗ ಇತಿಹಾಸ ಸ್ವಲ್ಪ ಬದಲಾಗಿದೆ. ದಿಗ್ವಾಸ್ ತಮ್ಮ ಫೋಟೋ ಒಂದನ್ನು ಬ್ಲಾಗಿನಲ್ಲಿ ಪೋಸ್ಟ್ ಮಾಡಿದರೆ ಸಾಕು, ಅದೆಷ್ಟೋ ಗೆಳೆಯರು ಆ ಫೋಟೋದಿಂದ ಸ್ಫೂರ್ತಿ ಪಡೆದು ತಮ್ಮ ತಮ್ಮ ಬ್ಲಾಗುಗಳಲ್ಲಿ ಕವಿತೆ ರಚಿಸುತ್ತಾರೆ. […]

ಮತ್ತಷ್ಟು ಓದಿ
‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ-ಅಲೆಮಾರಿಯ ಅನುಭವಗಳು

‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ-ಅಲೆಮಾರಿಯ ಅನುಭವಗಳು

ಇವತ್ತಿನ ಆಯ್ಕೆ: ಅಲೆಮಾರಿಯ ಅನುಭವಗಳು ಟ್ರಾವೆಲ್ ಬ್ಲಾಗುಗಳ ಪಟ್ಟಿಯಲ್ಲಿ ಬರುವ ಮೊದಮೊದಲ ಕನ್ನಡ ಬ್ಲಾಗು ರಾಜೇಶ್ ನಾಯ್ಕರ ಅಲೆಮಾರಿಯ ಅನುಭವಗಳು. ೨೦೦೬ರಲ್ಲಿ ಶುರುವಾದ ಇದು, ಹೆಚ್ಚುಕಮ್ಮಿ ಪ್ರವಾಸಿ ತಾಣಗಳ ಪರಿಚಯಕ್ಕೆಂದೇ ಮೀಸಲಾದ ಬ್ಲಾಗು. ರಾಜೇಶ್ ಅದೆಷ್ಟು ಸುತ್ತುತ್ತಾರೆ ಅಂದ್ರೆ, ಜಗತ್ತೇನಾದರೂ ಚಿಕ್ಕದಿದ್ರೆ ಅವರು ಇಷ್ಟರೊಳಗೇ ಒಂದು ರೌಂಡು ಹೋಗಿಬಂದು ಮುಗಿಸಿಬಿಡುತ್ತಿದ್ದರೇನೋ! ಆದಿತ್ಯವಾರ-ರಜಾದಿನ ಬಂತೆಂದರೆ ಸಾಕು, ಈ ಅಲೆಮಾರಿ ಬ್ಯಾಗೇರಿಸಿ ಹೊರಟೇಬಿಡುತ್ತಾರೆ: ಯಾವ ಬೆಟ್ಟವೋ, ಯಾವ ಜಲಪಾತವೋ, ಯಾರೂ ನಡೆಯದ ಕಾಡಹಾದಿಯೋ, ಸಂಗೀತ ಹಾಡುವ ಶಿಲೆಗಳ ಗುಡಿಯೋ. ನಾಯ್ಕರ ಕೆಮೆರಾದಲ್ಲಿ […]

ಮತ್ತಷ್ಟು ಓದಿ
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಹಂಸನಾದ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಹಂಸನಾದ

ಇವತ್ತಿನ ಆಯ್ಕೆ: ಹಂಸನಾದ ಕನ್ನಡ ಬ್ಲಾಗುಲೋಕದಲ್ಲಿ ಒಂದೇ ಹೆಸರಿನ ಸುಮಾರು ಬ್ಲಾಗಿಗಳು ಸೇರಿಕೊಂಡು ಬಹಳ ಸಲ ಗೊಂದಲ ಉಂಟುಮಾಡುತ್ತಾರೆ. ಶ್ರೀನಿಧಿ ಡಿ.ಎಸ್., ಶ್ರೀನಿಧಿ ಟಿ.ಜಿ., ಶ್ರೀನಿಧಿ ಹಂದೆ…. ಇವರುಗಳ ಜೊತೆಗೆ ಶ್ರೀಮಾತಾ, ಶ್ರೀದೇವಿ, ಶ್ರೀಲಕ್ಷ್ಮೀ,  ಶ್ರೀಲತಾ…. ಇವೆರಲ್ಲ ಕೆಲವೊಮ್ಮೆ ಬರೀ ’ಶ್ರೀ’ ಅಂತ ಹೆಸರಿಟ್ಟುಕೊಂಡು ಬರೆದು, ಯಾರ ಬ್ಲಾಗು ಯಾವುದು, ಯಾವ ಬ್ಲಾಗಿನ ’ಶ್ರೀ’ ಈತ/ಈಕೆ ಅಂತೆಲ್ಲ ತಲೆ ಕೆಡಿಸಿಕೊಳ್ಳುವಂತೆ ಆಗುತ್ತದೆ. ಇದೇ ಸಾಲಿಗೆ ಸೇರುವ ಮತ್ತೊಂದು ಗೊಂದಲ: ನೀಲಾಂಜನ ಮತ್ತು ನೀಲಾಂಜಲ! ಇಲ್ಲಿರುವ ಇನ್ನೂ ಒಂದು […]

ಮತ್ತಷ್ಟು ಓದಿ
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ರೂಪಾಂತರ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ರೂಪಾಂತರ

ಇವತ್ತಿನ ಆಯ್ಕೆ: ರೂಪಾಂತರ ’ರೂಪಾಂತರ’ -ವೆಂಕಟ್ರಮಣ ಭಟ್ಟರ ಬ್ಲಾಗು. ಇವರ ಬ್ಲಾಗಿಗೆ ಒಂದು ಸೊಗಸಿದೆ. ಬ್ಲಾಗಿನ ಬಾಗಿಲು ತೆರೆಯುತ್ತಿದ್ದಂತೆಯೇ ಕೆಂಬಣ್ಣದ ಮಯೂರಿ ನಿಮ್ಮನ್ನು ಸ್ವಾಗತಿಸುವಳು. ಹಾಗೆಯೇ ಕೆಳಗೆ ಬಂದರೆ, ವೆಂಕಿ ಮನದ ಮೂಲೆಯೊಳಗೆ ಬಚ್ಚಿಟ್ಟ ಹಂಬಲದ ಮಾತೆಲ್ಲ ನಿಮ್ಮ ಮುಂದೆ ಬಿಚ್ಚಿಕೊಳ್ಳುವುದು. ಈ ಬ್ಲಾಗು ವೆಂಕಟ್ರಮಣ ಭಟ್ಟರ ಬಹುಮುಖ ಪ್ರತಿಭೆಗೆ ವೇದಿಕೆ. ಅವರು ಚಂದದ ಕವಿತೆಗಳನ್ನು ಬರೆಯುತ್ತಾರೆ. ಲಲಿತ ಪ್ರಬಂಧಗಳನ್ನು ಬ್ಲಾಗಿಸುತ್ತಾರೆ. ಅವರು ಒಬ್ಬ ಚಿತ್ರಕಾರರೂ ಹೌದು. ಅವರು ಬರೆದ ಕವಿತೆ-ಕತೆಗಳಿಗೆ ಅವರೇ ಬಿಡಿಸಿದ ಬಣ್ಣಬಣ್ಣದ ಕ್ಯಾನ್‌ವಾಸುಗಳು […]

ಮತ್ತಷ್ಟು ಓದಿ
‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ-ತುಳಸೀವನ

‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ-ತುಳಸೀವನ

ಇವತ್ತಿನ ಆಯ್ಕೆ: ತುಳಸೀವನ     ಕನ್ನಡ ಬ್ಲಾಗುಲೋಕದಲ್ಲಿ ನಾವು ಇತ್ತೀಚಿಗೆ ಮಾಡುತ್ತಿರುವ ಪ್ರಯೋಗಳನೇಕವನ್ನು ಬಹಳ ಹಿಂದೆಯೇ ಮಾಡಿ ಮುಗಿಸಿದವರೊಬ್ಬರಿದ್ದಾರೆ. ಅವರೇ ತ್ರಿವೇಣಿ ಶ್ರೀನಿವಾಸರಾವ್! ಕೆಲವರಿಗೆ ಇವರು ತ್ರಿವೇಣಿ ಮೇಡಮ್ಮು, ಕೆಲವರಿಗೆ ಶ್ರೀತ್ರಿ, ಕೆಲವರಿಗೆ ತುಳಸಿಯಮ್ಮ. ಬಹುಶಃ ಇವರ ಬ್ಲಾಗು ’ತುಳಸೀವನ’, ಸ್ವಂತ ಡೊಮೈನ್ ಪಡೆದ ಮೊದಮೊದಲ ಕನ್ನಡ ಬ್ಲಾಗುಗಳಲ್ಲೊಂದು. ೨೦೦೬ರಿಂದ ಸತತವಾಗಿ ಕುಟ್ಟುತ್ತಲೇ ಇರುವ ಇವರು, ಕತೆ, ಕವನ, ಪ್ರಬಂಧಗಳಾದಿಯಾಗಿ ಎಲ್ಲ ಪ್ರಕಾರಗಳಲ್ಲೂ ಕೈಯಾಡಿಸಿದವರು. ಅಷ್ಟೇ ಅಲ್ಲ, ತ್ರಿವೇಣಿ ತಮ್ಮ ಬ್ಲಾಗಿನಲ್ಲಿ ಅದೆಷ್ಟೋ ಕವಿವರ್ಯರ ಕವಿತೆಗಳನ್ನು […]

ಮತ್ತಷ್ಟು ಓದಿ
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಮೌನ-ಮುಗುಳು-ಮಾತು

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಮೌನ-ಮುಗುಳು-ಮಾತು

ಇವತ್ತಿನ ಆಯ್ಕೆ: ಮೌನ-ಮುಗುಳು-ಮಾತು   ಲಂಡನ್ನಿನಿಂದ ಆಗೀಗ ಅಪ್‌ಡೇಟ್ ಆಗುವ ಬ್ಲಾಗು ಪೂರ್ಣಿಮ ಭಟ್ ಸಣ್ಣಕೇರಿ ಅವರ ಮೌನ-ಮುಗುಳು-ಮಾತು. ಈಗಷ್ಟೆ ಅರಳಿದ ಮುಗುಳಿನ ಮೌನದ ಮಾತುಗಳಂತೆ ಹೊಟ್ಟೆಕಿಚ್ಚಾಗುವಷ್ಟು ಚಂದದ ಭಾಷೆಯಲ್ಲಿ ಬರೆಯುತ್ತಾರೆ ಪೂರ್ಣಿಮಾ. ಇವರು ಕವನ ಬರೆಯಲಿ, ಕತೆ ಬರೆಯಲಿ ಅಥವಾ ಲಹರಿಯನ್ನೇ ಹರಿಸಲಿ, ಎಲ್ಲದರಲ್ಲೂ ತುಂಬಿ ತುಳುಕುವುದು ಆಪ್ತತೆ. ಒಂದಷ್ಟು ಕಾಲ ಅವರು ’ಬ್ರಿಟ್-ಬಿಟ್ಸ್’ ಶೀರ್ಷಿಕೆಯಡಿ ಪ್ರಕಟಿಸುತ್ತಿದ್ದ  ಲಂಡನ್ ಅನುಭವಗಳೂ (ಬಹಳ ಸಹ ಪೇಚಾಟಗಳು!) ಅವರ ಕತೆಗಳಷ್ಟೇ ಚೆನ್ನಾಗಿರುತ್ತಿದ್ದವು.  ಪೂರ್ಣಿಮಾ ಬರೆದಾಗಲೆಲ್ಲ ಅವರಿಗೆ ಬರುವ ಪ್ರತಿಕ್ರಿಯೆಗಳು […]

ಮತ್ತಷ್ಟು ಓದಿ
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಎಂ.ಎಸ್. ಶ್ರೀರಾಮ್

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಎಂ.ಎಸ್. ಶ್ರೀರಾಮ್

ಇವತ್ತಿನ ಆಯ್ಕೆ: ಎಂ.ಎಸ್. ಶ್ರೀರಾಮ್ ಬ್ಲಾಗುಗಳು  ಕತೆಗಾರ ಎಂ.ಎಸ್. ಶ್ರೀರಾಮ್ ಕನ್ನಡದ ಸೀನಿಯರ್ ಬ್ಲಾಗರುಗಳಲ್ಲೊಬ್ಬರು. ಹಾಗನ್ನಲು ಕಾರಣ ೨೦೦೭ರಿಂದಲೇ ಅವರು ಬ್ಲಾಗಿಸುತ್ತಿದ್ದಾರೆ ಎಂಬುದಷ್ಟೇ ಅಲ್ಲ; ಅವರು ಒಟ್ಟು ಹದಿನಾಲ್ಕು ಬ್ಲಾಗುಗಳನ್ನು ’ಮೇಂಟೇನ್’ ಮಾಡುತ್ತಿದ್ದಾರೆ! (ಶ್ರೀರಾಮಚಂದ್ರ ಹದಿನಾಲ್ಕು ವರ್ಷ ವನವಾಸ ಹೋಗಿದ್ದಕ್ಕೂ ಇದಕ್ಕೂ ಏನಾದ್ರೂ ಲಿಂಕಾ ಸಾರ್?) ಹೈದರಾಬಾದಿನಲ್ಲಿದ್ದುಕೊಂಡು ಆ-ಈ ಪತ್ರಿಕೆಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಶ್ರೀರಾಮ್ ಬ್ಲಾಗು ಶುರುಮಾಡಿದಾಗ ಅವರ ಅಭಿಮಾನಿಗಳೆಲ್ಲ ಖುಶಿಯಾಗಿತ್ತು: ’ಇನ್ನು ಹತ್ತಿರಾದರು’ ಅಂತ. ಮೊದಮೊದಲು ತಿಂಗಳಿಗೊಂದಾದರೂ ಪೋಸ್ಟ್ ಎಸೆಯುತ್ತ ಖುಶಿ ಕೊಟ್ಟ ಶ್ರೀರಾಮ್ ಆಮೇಲೆ […]

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

%d bloggers like this: