‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ- ಚಿತ್ರಪಟ

ಇವತ್ತಿನ ಆಯ್ಕೆ: ಚಿತ್ರಪಟ  

ಬ್ಲಾಗುಲೋಕದ ಹೊಸ ಟ್ರೆಂಡ್ ಎಂದರೆ ದಿಗ್ವಾಸ್ ಹೆಗಡೆ ತೆಗೆದ ಫೋಟೋಗಳಿಗೆ ಕವನ ಬರೆಯುವುದು! ಬಹಳ ಹಿಂದೆಯೇ ಶ್ರೀದೇವಿ ’ಚಿತ್ರಕವನ’ ಎಂಬ ಬ್ಲಾಗಿನಲ್ಲಿ ಈ ಪ್ರಯೋಗ ಮಾಡಿದ್ದರು. ಒಂದೇ ಚಿತ್ರವನ್ನು ಪ್ರಕಟಿಸಿ ಅದರ ಮೇಲೆ ಕವನ/ಬರಹಗಳನ್ನು ಪ್ರತಿಕ್ರಿಯೆಯ ರೂಪದಲ್ಲಿ ಆಹ್ವಾನಿಸುವುದು. ಈಗ ಇತಿಹಾಸ ಸ್ವಲ್ಪ ಬದಲಾಗಿದೆ. ದಿಗ್ವಾಸ್ ತಮ್ಮ ಫೋಟೋ ಒಂದನ್ನು ಬ್ಲಾಗಿನಲ್ಲಿ ಪೋಸ್ಟ್ ಮಾಡಿದರೆ ಸಾಕು, ಅದೆಷ್ಟೋ ಗೆಳೆಯರು ಆ ಫೋಟೋದಿಂದ ಸ್ಫೂರ್ತಿ ಪಡೆದು ತಮ್ಮ ತಮ್ಮ ಬ್ಲಾಗುಗಳಲ್ಲಿ ಕವಿತೆ ರಚಿಸುತ್ತಾರೆ.

ದಿಗ್ವಾಸ್ ಫೋಟೋಗಳ ಹೊಳಪೇ ಅಂಥದು. ಅವರು ಕೆಮೆರಾ ಹಿಡಿದರೆಂದರೆ ಹೊಂಗಿರಣಗಳು ಹೊದರಿನ ಮೇಲೆ ಲಾಸ್ಯವಾಡುತ್ತವೆ, ಕೆಂಪು ದಿಗಂತದ ಮುನ್ನೆಲೆಯಲ್ಲಿ ಒಂಟಿಕಾಲ ಮುದುಕ ಕಡಲ ತೀರದಗುಂಟ ಕುಂಟುತ್ತಾನೆ, ಅಳಿಲ ಮರಿಯೊಂದು ಕೈಮುಗಿದು ನಿಲ್ಲುತ್ತದೆ, ಮಕರಂದ ಹೀರುತ್ತಿರುವ ಚಿಟ್ಟೆಗೆ ರೋಮಾಂಚನವಾಗುತ್ತದೆ, ಸೇಫ್ಟಿ ಪಿನ್ನುಗಳು ಅಕ್ಕಪಕ್ಕ ನಿಂತು ಮದುವೆಯಾಗುತ್ತವೆ, ಅನಾಮಿಕ ಹಕ್ಕಿಯ ಗರಿ ಇವರ ಕ್ಲಿಕ್ಕಿಗಾಗಿಯೇ ಕಾದು ಕೆಳಬೀಳುತ್ತದೆ. ಹರಡಿದ ಮುತ್ತಿನ ಮಣಿಗಳು, ಆರು ಕಾಲಿನ ಕೀಟಗಳು, ಕಡುಗೆಂಪು ಗುಲಾಬಿಯ ಪಕಳೆಗಳು, ಸುಂದರ ಹುಡುಗಿಯ ಕಣ್ಣುಗಳು, ಕಾರಂಜಿಯ ಬಣ್ಣದ ಹನಿಗಳು -ಇವರ ಫೋಟೋಗ್ರಫಿಯಲ್ಲಿ ಜೂಮ್ ಆಗುತ್ತವೆ.

ದಿಗ್ವಾಸ್ ಪಟದ ಚಿತ್ರಗಳನ್ನು ನೋಡುತ್ತಾ ನೀವೂ ಮೈಮರೆಯಿರಿ, ಕವಿತೆಯೇನಾದರೂ ಮೂಡಿದರೆ ಬ್ಲಾಗಿಸಿರಿ!

-’ಅವಧಿ’ಗಾಗಿ ಸುಶ್ರುತ ದೊಡ್ಡೇರಿ

* * *

ದಿಗ್ವಾಸ್ ಹೆಗಡೆ :

 

Born in Sirsi.living in Bangalore.I am a Service Personal for Consumer Electronics. I have always been fascinated by nature, travel, exploration. I got my first SLR Nikon D40 Digital camera at 2008 January. Initially photography wasn’t my passion.I took  camera just to “record” my daughter’s (Abja Hegde) pictures.but with time I have got more and more involved into photography,that now has become my great passion…Then switched to Canon. now i take photos with Canon Digital Rebel xti,50m prime,55-250,70-300,18-55,Tripod and Available light. And I don’t ve any expectation in Photography.I love the Photography.I do.

* * *

ದಿಗ್ವಾಸ್ ಕೆಮೆರಾದ ಕೆಲ ಫೋಟೋಸ್:

‍ಲೇಖಕರು G

May 11, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಧಿ….

11 ಪ್ರತಿಕ್ರಿಯೆಗಳು

  1. malathi S

    Time and again I have enjoyed Digwas Hegde’s photographs. Many bloggers have been inspired to pen poems on it!!
    🙂
    malathi S

    ಪ್ರತಿಕ್ರಿಯೆ
  2. Arvind Subbanna

    Digwas humbly says he doesn’t have any expectation in photography. But, if continues with his passion, unexpected good things will definitely happen to him.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: