ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಅನ್ನಭಾಗ್ಯ, ಭೈರಪ್ಪ ನಿಲುವು, ವಸ್ತುನಿಷ್ಠ ಚರ್ಚೆ’ – ಸತೀಶ್ ಚಪ್ಪರಿಕೆ

ಅನ್ನಭಾಗ್ಯ ಮತ್ತು ಅದರ ಬಗ್ಗೆ ಭೈರಪ್ಪ ಅವರ ಹೇಳಿಕೆಯ ಬಗ್ಗೆ ಸತೀಶ್ ಚಪ್ಪರಿಕೆ ತಮ್ಮ ಲೇಖನದಲ್ಲಿ ಬರೆದಿದ್ದಾರೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ. *** - ಸತೀಶ್ ಚಪ್ಪರಿಕೆ ಕನ್ನಡದ ಶ್ರೇಷ್ಠ ಕಾದಂಬರಿಕಾರರ ಪೈಕಿ ಒಬ್ಬರು ಹಾಗೂ ಹಿರಿಯರು ಆಗಿರುವ ಎಸ್. ಎಲ್. ಭೈರಪ್ಪಅವರು ಮುಖ್ಯಮಂತ್ರಿ ಸಿದ್ದಾರಾಮಯ್ಯ ನೇತೃತ್ವದ ಕರ್ನಾಟಕ...

read more
ಇದು ಇನ್ನೊಂದು ನದಿಯ ನೆನಪಿನ ಹಂಗು…

- ಗುರುರಾಜ್ ಕೆ ಕುಲಕರ್ಣಿ ಮಲ್ಲನಗೌಡನ ಸೊಸಿ ಮಲ್ಲವ್ವನ ಬಲಿದಾನದಿಂದ ಹರಿದಿದ್ದೇ ಈ ನದಿ ಎಂಬುದುಕತೆ. ಅದಕ್ಕಾಗಿಯೇ ಇವಳಿಗೆ ‘ಮಲ್ಲವ್ವನ ಹೊಳಿ’ ಎನ್ನುವುದು ರೂಢಿ. ತಾನು ಹರಿದಲ್ಲಿ ಕೊಳೆ ತೊಳೆದು ಹಸನುಮಾಡುತ್ತಾಳೆ ಎನ್ನುವ ಕಾರಣಕ್ಕೆ ಇವಳಿಗೆ ‘ಮಲಾಪಹಾರಿ’ ಎಂದೂ ಹೆಸರು. ದೂರದ ನವಿಲು ಕೊಳ್ಳದ ಹತ್ತಿರ ಇವಳು ಬೆಟ್ಟವನ್ನು ಬಳಸಿ...

read more
’ಇಗೋ ಹರಿಯಬಿಟ್ಟೆ, ನಾನು ಖಾಲಿಯಾಗುತ್ತಿದ್ದೇನೆ…’ – ಸ್ಮಿತಾ ಅಮೃತರಾಜ್

ಸುರಿದು ಬಿಡು ಮಳೆಯೇ.. - ಸ್ಮಿತಾ ಅಮೃತರಾಜ್ ಧೋ! ಸುರಿಯುವ ಮಳೆ ಎಲ್ಲವನ್ನೂ ತೇಲಿಬಿಟ್ಟೆ ಹುಚ್ಚುಗಟ್ಟಿ ಕೆನೆಯುವ ಆಸೆಗಳನ್ನು ಹುಚ್ಚುಚ್ಚು ನೂರು ಕನಸುಗಳನ್ನು..   ಹರಳುಗಟ್ಟಿ ಬಿಮ್ಮನೆ ಕಲ್ಲಾಗಿ ಕುಳಿತಿದೆ ಮನದ ಬಯಕೆಗಳು ನಿರ್ದಾಕ್ಷಿಣ್ಯವಾಗಿ ಕಿತ್ತು ಜಿಟಿಗುಟ್ಟಿ ಸುರಿಯುವ ಮಳೆಯೆದುರಿಗೇ ಚೆಲ್ಲಿಬಿಟ್ಟೆ  ...

read more
ಪುಸ್ತಕ ಬಿಡುಗಡೆಗಳು ಮತ್ತು ಲೋಕಾರ್ಪಣೆಗಳು – ಎಸ್ ದಿವಾಕರ್

ಲೋಕಾರ್ಪಣೆ - ಹಾಗೆಂದರೇನು? ಎಸ್ ದಿವಾಕರ್ ಕನ್ನಡದಲ್ಲಿ ವರ್ಷಕ್ಕೆ ಇನ್ನೂರೋ ಮುನ್ನೂರೋ ಪುಸ್ತಕ ಪ್ರಕಟವಾದರೆ ಹೆಚ್ಚೆಂಬ ಕಾಲವೊಂದಿತ್ತು. ಈಗ ವರ್ಷಕ್ಕೆ ಎಷ್ಟು ಪುಸ್ತಕಗಳು ಹೊರಬರುತ್ತಿವೆಯೆಂದರೆ ಪಟ್ಟಿಮಾಡಲಾಗದಷ್ಟು, ಲೆಕ್ಕಕ್ಕೆ ಸಿಕ್ಕದಷ್ಟು. ಪ್ರಕಟವಾಗುವ ಎಲ್ಲ ಪುಸ್ತಕಗಳನ್ನೂ ದಾಖಲಿಸಿಡುವ ವ್ಯವಸ್ಥೆ ನಮ್ಮಲ್ಲಿಲ್ಲ....

read more
ರಂಗಿತರಂಗ: ಅನಿರೀಕ್ಷಿತಗಳ ಮುಖಾಮುಖಿ!

ಬಿ ಎಂ ಬಶೀರ್ ನಿಮ್ಮನ್ನು ಎದುರುಗೊಳ್ಳುವ ಅನಿರೀಕ್ಷಿತಗಳೇ ‘ರಂಗಿತರಂಗ’ದ ಹೆಗ್ಗಳಿಕೆ ‘ರಂಗಿತರಂಗ’ ಎಂಬ ಹೆಸರು ಕಮರ್ಶಿಯಲ್ ಚಿತ್ರ ಲೋಕಕ್ಕೆ ಒಂದಿಷ್ಟು ನೀರಸ ಅನ್ನಿಸುವಂತಿದೆ. ಮತ್ತು ಒಂದಿಷ್ಟು ಅಸಹಜವಾದ ಹೆಸರೂ ಹೌದು. ಆದರೆ ಚಿತ್ರದೊಳಗಿನ ಮನುಷ್ಯ ಭಾವನೆಗಳ ಹೊಯ್ದಾಟಗಳನ್ನು ಬಣ್ಣದ ವೇಷಗಳ ಮೂಲಕ ತೆರೆದಿಡುವ ಪ್ರಯತ್ನಕ್ಕೆ ಈ...

read more
ನೀನೊಮ್ಮೆ ಚಾಂದ ರಾತ್ರಿಯ ಬೆಳಕಾಗಿ ಬಾ..

ಗಜಲ್ ರಮೇಶ ಗಬ್ಬೂರು ಗಂಗಾವತಿ ಎಳು ಗೆಳತಿ ರಂಜಾನಿನ ಸೂರ್ಯ ಕರೆಯುತ್ತಿದ್ದಾನೆ. ನಿನ್ನವನಿಗಾಗಿ ದುವಾ ಕೇಳಲು..... ಎಲ್ಲಾ ತ್ಯಾಗ ಬಲಿದಾನಗಳ ನೆನೆದು ಮನಸ ಗೌರವಿಸುವ ಮೊಹಬ್ಬತ್ತಿನ ದುವಾ ಕೇಳಲು...   ಪಾದದ ಧೂಳನು ಪವಿತ್ರ ಎಂದು ಮುಟ್ಟಿ ಶುಕ್ರ ಹೇಳುವ ಸಲಾಮು ಅವನಿಗೆ ಬೇಕಿಲ್ಲ..... ದೇಹ ಸಾಯಿಸುವ ಮಾತು ಬಿಟ್ಟು ಬಾ ಮನದ...

read more
'ಕತ್ತಲೆಯ ತೊಟ್ಟಿಲಲ್ಲಿ ಬೆಳಕಿನ ಕೂಸು…' – ಹೇಮಾ ಸದಾನಂದ ಅಮೀನ್

ಹೇಮಾ ಸದಾನಂದ ಅಮೀನ್ ಆಶ್ರಯ ಕೊಡುವ ಸೂರೆ ನೆರಳಗಳೂ ಒಪ್ಪದಿದ್ದಾಗ, ಹಸಿವ ನೀಗಿಸುವ ಅನ್ನವೇ ಮುನಿಸಿ ಕೊಂಡಾಗ, ಪ್ರೀತಿಸುವ ಸಂಬಂಧ ಮುಳ್ಳು ಕಂಟಿಯಾದಾಗ...? ಅಂತಹ ಬಾಳು ಖಂಡಿತ ಬಾಳಾಗದು. ಅದು ಬರೇ ಗೋಳು. ಜನ್ಮಕ್ಕೆ ಬಂದ ಪ್ರತಿಯೊಂದು ಜೀವಿಗೂ ನೆಮ್ಮದಿಯ ಬದುಕು ಬಾಳುವ ಆಸೆ ಇದ್ದೇ ಇದೆ. ಅದರಲ್ಲಿ ದೇವರ ದಯೇವೋ, ಹಿಂದಿನ ಜನ್ಮದ...

read more
ಕಾಲಕಾಂತನಿಗೊಂದೋಲೆ ಬರೆದಿದ್ದಾರೆ ಸ್ವರ್ಣಾ

ಸ್ವರ್ಣಾ ಎನ್ ಪಿ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲವನ್ನು ಸರಳ ರೇಖೆಯಲ್ಲಿ ಬರೆಯಬಹುದೇ ? ಸೂಪರ್ ಮಾರ್ಕೆಟ್ ನಲ್ಲಿ ಕೊಳ್ಳೋದು ಕಡಿಮೆ, ತಿರುಗಾಡೋಕೆ ಹೋಗೋದು ಜಾಸ್ತಿ . ಅಂಥಾ ತಿರುಗಾಟದಲ್ಲಿ ಮಿಂಚಿ ಮಾಯವಾಗಿದ್ದು ಮೇಲಿನ ಪ್ರಶ್ನೆ . ಸಾಮಾನ್ಯವಾಗಿ ಗೋಡೆಗೆ ತೂಗು ಹಾಕುವ ಗಡಿಯಾರಗಳು ವೃತ್ತಾಕಾರದಲ್ಲಿ ಮಾತ್ರ ಬರುತ್ತಿದ್ದ...

read more
”ಒಡೆದ ಕನ್ನಡಿಯ ಬಗ್ಗೆ ಕವಿತೆ ಬರೆಯಲು ಹೇಳಿದಾಗ’ – ಹೇಮಾ ಕಳ್ಳಂಬೆಳ್ಳ

ಮಕರಂದ ಹೇಮಾ ಕಳ್ಳಂಬೆಳ್ಳ ಕೊಲ್ಲುವುದರ ಕುರಿತು ಕವಿತೆ ಬರೆಯಲು ಹೇಳಿದೆ, ಅವನು ಅರ್ಧ ಕವಿತೆಯನ್ನಷ್ಟೇ ಬರೆದ.   ಒಡೆದ ಕನ್ನಡಿಯ ಬಗ್ಗೆ ಕವಿತೆ ಬರೆಯಲು ಹೇಳಿದಾಗ, ಪೂರ್ತಿ ಕವಿತೆಯನ್ನು ಬರೆದವನು ಹಾಳೆಯನ್ನು ತುಂಡು ತುಂಡಾಗಿ ಹರಿದ.   ಹಸಿವಿನ ಕುರಿತು ಕವಿತೆ ಬರೆಯಲು ಹೇಳಿದಾಗ ಏನನ್ನೂ ಬರೆಯಲಿಲ್ಲ!  ...

read more
ಮೈಕಲ್ ಜಾಕ್ಸನ್‌ ನೆನಪಿನಲ್ಲಿ

ಮೈಕಲ್ಲನ ನೆನಪಿನಲ್ಲಿ ಎಸ್  ಪಿ  ವಿಜಯಲಕ್ಷ್ಮಿ ಕಲೆ : ಹಾದಿಮನಿ ನಿನ್ನ ಕಾಲ್ಕುಣಿತಕ್ಕೆ ಕೀಲಿಸುತ್ತಿದ್ದವು ನನ್ನ ಕಾಲ್ಗಳು ನೆಲದಿಂದ ಬೇರಾಗದಂತೆ, ನಿಂತಲ್ಲೆ ಮರಗಟ್ಟಿದಂತೆ. ನೀ ಕೈಯ್ಯ ಚಾಚಿ, ಬಾಚಿ ಅತ್ತಿತ್ತ ಡೊಂಕಿಸುವಾಗ ಭಾಸವಾಗುತ್ತಿತ್ತೆನಗೆ ಅದೊಂದು ಮಂತ್ರದಂಡದಂತೆ, ನೀನೊಬ್ಬ ಜಾದೂಗಾರನಂತೆ.... ನಾ, ನಾಚಿದ್ದುಂಟು...

read more
ರಾಜಸ್ಥಾನವೆಂಬ ಸ್ವರ್ಗದ ತುಣುಕು – ರಾಣಾ ಪ್ರತಾಪನ ನೆಲದಲ್ಲಿ

(ಇಲ್ಲಿಯವರೆಗೆ...) ರಾಣಕ್ಪುರದಿಂದ ಅರಾವಳಿ ಬೆಟ್ಟ ಕಾಡುಗಳ ಮಡಿಕೆಗಳಲ್ಲಿ, ಪದರುಗಳಲಿ, ತಿರುವುಗಳಲ್ಲಿ ತಂಪನೆಯ ಹವೆಯನ್ನು ಮೊದಲ ಬಾರಿ ಅನುಭವಿಸಿದೆವು. ಕಾರಿನ ಏಸಿ ಬಂದ್ ಮಾಡಿ, ಗ್ಲಾಸುಗಳನ್ನು ಓಪನ್ ಮಾಡಿ ಆ ತಂಪನ್ನು ಮೈಮನಗಳಿಗೆಲ್ಲಾ ಮೆತ್ತಿಕೊಂಡೆವು. ಹೀಗೆ ಬೆಟ್ಟಗಳನ್ನು ಏರಿಳಿಯುತ್ತ ಸಾಗುತ್ತಿದ್ದಾಗ ತಿರುವಿನಲ್ಲಿ ಸಣ್ಣ...

read more
ಚಿತ್ರಕಲೆ, ಫೋಟೋಗ್ರಫಿ ಮತ್ತು ಕೆ ಟಿ ಶಿವಪ್ರಸಾದ್

ಚಿತ್ರಕಲೆಯಷ್ಟೇ ಫೋಟೋಗ್ರಪಿ ಕೂಡ ನನ್ನ ಜೀವಾಳ ಇದು ಒಂದು ಕ್ರಿಯೇಟಿವ್ ಆರ್ಟ್ ’ ಸುವರ್ಣ ಸಿ ಮೊನ್ನೆ ನಾನು ಮತ್ತು ಕೆ.ಟಿ.ಶಿವಪ್ರಸಾದ್ ಇಬ್ಬರು ಫೋಟೋಗ್ರಪಿ ಮಾಡುವ ಸಲುವಾಗಿ ತುಮಕೂರು ಹೊರವಲಯದ ಸುತ್ತಮುತ್ತ ಕೆಲವು ಸ್ಥಳಕ್ಕೆ ಕ್ಯಾಮರ ಹಿಡಿದು ಹೊರಟೆವು ಹೀಗೆ ಕಾರಿನಲ್ಲಿ ಹೋಗುತ್ತಿದ್ದಾಗ ಫೋಟೋಗ್ರಪಿ ಕುರಿತು ಒಂದಿಷ್ಟು ಮಾಹಿತಿ...

read more
’ಅಸೂರ್ಯಸ್ಪರ್ಶಿತ ಹೆಣ್ಣಿನ ತುಮುಲಗಳು’ – ಅನಿಲ್ ತಾಳೀಕೋಟೆ

(ನಾಟಕ - 'ಸೂರ್ಯಾಸ್ತದಿಂದ ಸುರ್ಯೋದಯದವರೆಗೆ' -ಜುಲೈ ೫, ೨೦೧೫ , ಕಲಾಗ್ರಾಮ ಬೆಂಗಳೂರಿನಲ್ಲಿ ನೋಡಿದಾಗ ಅನಿಸಿದ್ದು) ಅನಿಲ್ ತಾಳೀಕೋಟೆ ಸರಿಸುಮಾರು ಮೂವತ್ತು ವರುಷಗಳ ಹಿಂದೆ ದೊಡ್ಡ ಬ್ಯಾನರಿನಲ್ಲಿ ನನಗೊಂದು ಸಣ್ಣ ನಿರ್ಜೀವ ಪಾತ್ರ. ಅದರ ಕಥೆ ಮತ್ತೆ ಧುತ್ತೆಂದು ಇಂದು ಎದುರು ಬಂದು ನಿಂತಿತು. ಸ್ವಲ್ಪ ವಿವರಣೆಯ ಅಗತ್ಯವಿದೆಯೇನೋ....

read more
ಅದೇ ಅನ್ವೇಷಣೆ ಅದೇ ದಿಗಿಲಿನ ಸಾಂಗತ್ಯ…

ನಾನು ವಿಕ್ರಮಾದಿತ್ಯನಲ್ಲ ರೋಹಿಣಿ ಸತ್ಯ ನೋವು ಹೆಗಲೇರಿ ಮನ ಭಾರವಾಗಿದೆ ಹಗುರವಾಗಿಸುವ ತವಕವಾದರೂ ಆಸರೆ ಕಾಣದೇ - ಅನ್ಯಥಾಶರಣಂನಾಸ್ತಿ ಎಂದು ಅದು ದಿಗಿಲಿನೊಂದಿಗೆ ಜೊತೆಗೂಡಿದೆ ನೋವು ದಿಗಿಲು ಒಟ್ಟಾದ ಹೆಜ್ಜೆಗುರುತುಗಳು ಅಲ್ಲೆಲ್ಲೋ ಪಾತಾಳದಲ್ಲಿ ಊರುತ್ತಿರಲು ನನ್ನದಲ್ಲದ ಲೋಕದಲ್ಲಿ ನನ್ನ ನಡಿಗೆ ನನಗೇ ಮುಜುಗರವನ್ನುಂಟುಮಾಡಿದಾಗ...

read more

Pin It on Pinterest

Share This