ವಿಜಯನಗರ ಬಿಂಬದಲ್ಲಿ 'ಧಾಂ ಧೂಂ'

Update

DSC_8920

ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರದ 20ನೇ ವಷಾದ ಸಂಭ್ರಮಾಚರಣೆಯಲ್ಲಿ ತಿಂಗಳಿಗೊಂದು ಕಾಯ೯ಕ್ರಮವನ್ನು ಹಮ್ಮಿಕೊಂಡು ಬಂದಿದೆ. ಸೆಪ್ಟೆಂಬರ್ 27ರಂದು ಬೆಂಗಳೂರಿನ ಕಲಾ ಗ್ರಾಮದಲ್ಲಿ “ಮಕ್ಕಳ ರಂಗಭೂಮಿ ಇಂದು ಮುಂದು” ಎನ್ನುವ ಬಗ್ಗೆ ವಿಚಾರ ಸಂಕಿರಣವನ್ನು ಏಪ೯ಡಿಸಲಾಗಿತ್ತು.

ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ವಿಮ೯ಶಕರಾದ ಡಾ.ವಿಜಯಾ ಅವರು ರಂಗಶಿಕ್ಷಣದ ಪಠ್ಯಕ್ರಮದಲ್ಲಿ ಏಕರೂಪತೆಯ ಅವಶ್ಯಕತೆ ಇದೆ ಎಂದರು,  ಜಾಗತೀಕರಣದ ಈ ದಿನಗಳಲ್ಲಿ ಹಿಂಸೆ ಮತ್ತು ಮೂಲಭೂತವಾದಕ್ಕೆ ಜಾರುವ ಅಪಾಯವಿದ್ದೇ ಇರುತ್ತದೆ. ಆದರೆ ಈ ಎಲ್ಲ ಪಿಡುಗುಗಳಿಗೆ ಮಕ್ಕಳ ರಂಗಭೂಮಿ ಉತ್ತರವಾಗಬಲ್ಲದು ಎಂದು ಅಭಿಪ್ರಾಯಪಟ್ಟರು.

ರಂಗ ತಜ್ಞ  ಐ, ಕೆ.ಬೋಳುವಾರು ‘ಮಕ್ಕಳ ರಂಗಭೂಮಿ ಕೌಶಲ ವೃದ್ಧಿಸುವ ಮಾಧ್ಯಮವಾಗಿ ಎಲ್ಲ ಮಕ್ಕಳಿಗೂ ದಕ್ಕುವಂತಾಗಬೇಕು ಮತ್ತು ಶಿಕ್ಷಣದಲ್ಲಿ ರಂಗಭೂಮಿಗೆ ತನ್ನದೇ ಆದ ಪಾತ್ರವಿದೆ ಅದು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಬಲ್ಲದು’ ಎಂದು ಅಭಿಪ್ರಾಯಪಟ್ಟರು. ರಂಗ ನಿದೇ೯ಶಕ ಡಾ ಬಿ.ವಿ.ರಾಜಾರಾಂ ಮಾತನಾಡಿ ಮಕ್ಕಳ ಪ್ರತಿಭೆಯನ್ನು ಗುರುತಿಸುವಲ್ಲಿ ಶಾಲಾ ಅಧ್ಯಾಪಕರ ಪಾತ್ರ ದೊಡ್ಡದು. ಅಧ್ಯಾಪಕರಿಗೂ ರಂಗ ಶಿಕ್ಷಣದ ಅವಶ್ಯಕತೆಯಿದೆ ಇದರಿಂದ ಅಧ್ಯಾಪಕರ ಕಾರ್ಯ ಕ್ಷೇತ್ರದಲ್ಲಿ ಸುಧಾರಣೆ ತರಬಹುದು ಎಂದು ಮಾತನಾಡಿದರು.

DSC_8993

ಖ್ಯಾತ ನಟ ನಿದೇ೯ಶಕ  ಮಂಡ್ಯ ರಮೇಶ್ ಮಾತನಾಡಿ ಮಕ್ಕಳ ರಂಗಭೂಮಿ ತಾಯಿಯ ಎದೆ ಹಾಲಿದ್ದಂತೆ,ಈ ನೆಲದ ಸೊಗಡು ಸಂಸ್ಕೃತಿಗಳು ಮಕ್ಕಳ ಜೀವನದಿಂದ ಮರೆಯಾಗದಂತೆ  ಕಾಪಾಡಬೇಕಾದ ಅಗತ್ಯವಿದೆ ಅದಕ್ಕೆ ಮಕ್ಕಳ ರಂಗಭೂಮಿಯೇ ರಹದಾರಿ ಎಂದು ಅಭಿಪ್ರಾಯಪಟ್ಟರು. ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ  ಪ್ರೊ.ಎಚ್.ಎಸ್.ಉಮೇಶ್ ‘ಶಿಕ್ಷಣ ಕ್ಷೇತ್ರದಲ್ಲಿ ರಂಗಭೂಮಿಯ ಮಹತ್ವ ಅರಿತು ನಡೆಯಬೇಕಿದೆ. ಅದಕ್ಕೆ ರಂಗಕಮಿ೯ಗಳೂ ಸಹ ಒಗ್ಗೂಡಿ ರಂಗ ಕೌಶಲವನ್ನು ಶಿಕ್ಷಣದಲ್ಲಿ ಹೇಗೆ ಬಳಸಬೇಕು ಎಂಬುದರ ಬಗ್ಗೆ ಸಮಾಲೋಚಿಸಿ, ಆ ನಿಟ್ಟಿನಲ್ಲಿ ತಯಾರಾಗುವ ಅವಶ್ಯಕತೆ ಇದೆ’.

‘ಜ್ಞಾನ ಭಾವನೆ ಮತ್ತು ಕೌಶಲಗಳನ್ನು ಮಕ್ಕಳಲ್ಲಿ ವೃದ್ಧಿಸುವಲ್ಲಿ ಶಿಕ್ಷಣ ಕ್ಷೇತ್ರ ಮತ್ತು ಮಕ್ಕಳ ರಂಗಭೂಮಿ ಕ್ಷೇತ್ರ ಎರಡೂ ಹೆಚ್ಚಿನ ಸಮನ್ವಯತೆಯನ್ನು ಸಾಧಿಸಬೇಕಾಗಿದೆ, ಅದಕ್ಕೆ ಏಕರೂಪದ ಚೌಕಟ್ಟಿನೊಳಗೆ ಬಹುರೂಪತೆಯನ್ನು ಬಿಂಬಿಸುವಂಥ ರಂಗ ಪಠ್ಯಕ್ರಮದ ಅವಶ್ಯಕತೆ ತುತಾ೯ಗಿ ಇದೆ’ ಎಂದು ಅಭಿಪ್ರಾಯಪಟ್ಟರು.

DSC_8860

ಇದೇ ಸಂದಭ೯ದಲ್ಲಿ ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರದ ಡಿಪ್ಲೊಮಾ ವಿದ್ಯಾಥಿ೯ಗಳಿಗೆ ಅಂಕಪಟ್ಟಿಯನ್ನು ವಿತರಿಸಲಾಯ್ತು. ಸಂಜೆ ಅವಿರತ ಪುಸ್ತಕ ಸಾಂಸ್ಕೃತಿಕ ಸಂಘಟನೆಯ  ಸಹಯೋಗದಲ್ಲಿ ಮೈಸೂರಿನ ನಟನ ತಂಡದಿಂದ “ಧಾಂ ಧೂಂ ಸುಂಟರಗಾಳಿ” ನಾಟಕವನ್ನು ಏಪ೯ಡಿಸಲಾಗಿತ್ತು.

‍ಲೇಖಕರು G

October 2, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: