ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಮೃತಾ ಹೆಗಡೆ ಅಂಕಣ- ನೆನಪಾಯ್ತು ‘ಮೂರನೇ ಕಿವಿ’
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
‘ಗೀತಾಂಜಲಿ’ಯ ಎರಡು ಕವನಗಳು
ಸುಧಾ ಆಡುಕಳ ಗೀತ -೧ನಿನ್ನ ಕರುಣೆಗೆಣೆಯಿಲ್ಲ ಪ್ರಭುವೆನೀನೆನ್ನ ಅನಂತವಾಗಿಸಿರುವೆದೇಹವೆಂಬ ಒಡೆವ ಮಡಿಕೆಯನುಮತ್ತೆ, ಮತ್ತೆ ನಿರ್ವಾತಗೊಳಿಸಿಹೊಸ ಜೀವವ ತುಂಬಿರುವೆ ಬರಿದೆ ಬಿದ್ದ ಕೊಳಲು ನಾನುಗಿರಿ ಗಹ್ವರಕೆ ಕೊಂಡೊಯ್ವೆ ನೀನುಹೊಸಗಾಳಿಯ ಉಸಿರ ತುಂಬಿಜೀವರಾಗವ ನೀ ನುಡಿಸುತಿರುವೆ ನಿನ್ನ ಅಮರ ಕರವು ಸೋಕಿನನ್ನೆದೆಯ ಹರ್ಷ ಎಲ್ಲೆ...
Art by Jane Massey
‘ಸಪ್ನ’ದಲ್ಲಿ ನಾಗತಿಹಳ್ಳಿ ಚಂದ್ರಶೇಖರ…
‘ಅವಧಿ’ ಕ್ಲಬ್ ಹೌಸ್ ನಲ್ಲಿ ಮೈಸೂರು ಅನಂತಸ್ವಾಮಿ ಮ್ಯೂಸಿಕ್ ಜಾಮ್
ಇಂದು ಸಂಜೆ 7 30ಕ್ಕೆ ಈ ಲಿಂಕ್ ಮೂಲಕ ಬನ್ನಿ https://www.clubhouse.com/join/avadhi-mag/otuv9fMR/mgaWgqpB
ಸ್ನೂಪಿ
ಡಾ ಸತ್ಯವತಿ ಮೂರ್ತಿ ಆಫೀಸಿನಲ್ಲಿ ಎಂದಿನಂತೆ ಫೈಲುಗಳ ಸಮುದ್ರದಲ್ಲಿ ಮುಳುಗಿದ್ದೆ. ಕೂಡುವ ಕಳೆಯುವ ಲೆಕ್ಕದಲ್ಲಿ ತಲೆ ಬಿಸಿಯಾಗಿತ್ತು. ಹೊರಗಿನ ಪ್ರಪಂಚದ ಅರಿವೂ ಇರಲಿಲ್ಲ. ಸ್ವಾಭಾವಿಕವಾಗಿಯೇ ನಾನು ಯಾವುದೇ ಕೆಲಸ ಮಾಡಹೊರಟರೆ ಸುತ್ತಲಿನ ಪರಿವೆ ಇರುವುದಿಲ್ಲ. ಅಂತಹುದರಲ್ಲಿ ಅಂಕೆ ಸಂಖ್ಯೆಗಳ ನಡುವೆ ಮುಳುಗಿದ್ದೆನೆಂದರೆ...
ಅಭಿರಾಮ್ ಕಥೆ- ತೇಪೆ
ಅಭಿರಾಮ್ ಎಸ್ ಬಸ್ಸು ಬಸ್ ನಿಲ್ದಾಣವನ್ನ ಬಿಟ್ಟು ಆಚೆ ಬಂದು ನಿಂತಿತ್ತು. ಕಂಡಕ್ಟರ್ ಬಸ್ಸಿನ ಹೊರಗೆ ನಿಂತು 'ತೀರ್ಥಳ್ಳಿ ತೀರ್ಥಳ್ಳಿ...' ಎಂದು ಬೊಬ್ಬೆ ಇಡುತ್ತಿದ್ದ. ಯಾರೊಬ್ಬರೂ ಬರುವ ಲಕ್ಷಣಗಳು ಕಾಣಿಸುತ್ತಿರಲಿಲ್ಲ. ಬಸ್ಸಿನಲ್ಲಿದ್ದವರಿಗೆಲ್ಲ ರೋಸಿ ಹೋಗಿ ಕಿಡಕಿ ಆಚೆ ಕಂಡಕ್ಟರ್ ನನ್ನ ನೋಡಿ ಮನಸಿನಲ್ಲೇ ಹಿಡಿ ಶಾಪ...
Art by Martina Heiduczek
ಕೊಟ್ರಗೌಡ ತೂಲಹಳ್ಳಿ ಕವಿತೆ- ಏಕಾಂತ!
ಕೆ ಜೆ ಕೊಟ್ರಗೌಡ ತೂಲಹಳ್ಳಿ ಹೀಗೆಒಬ್ಬಂಟಿ ಕತ್ತಲಿಗೆರಸ್ತೆ ಪಕ್ಕದ ಬಿರಿಯಾನಿಭಾಷಾನ ಬೀಡಾನಿಗಿ ನಿಗಿ ಕೆಂಡದ ಸಿಗರೇಟುಒಟ್ಟು ಮಾಡಿದ ಏಕಾಂತವೇನನ್ನ ಒಂಟಿತನ ಆಗತಾನೇಸುಧಾರಿಸಿಕೊಳ್ಳುವ ಕರಿ ಡಾಂಬಾರುವಿರಹ ಎಚ್ಚರಿಸುವ ತಂಗಾಳಿಬದುಕ ಮರೆಸುವಮಿನುಗು ನಕ್ಷತ್ರಗಳುಆಗೊಮ್ಮೆ ಹೀಗೋಮ್ಮೆವಾಸ್ತವಕ್ಕೆ ಎಳೆದು ತರುವಫ್ಯಾಕ್ಟರಿ ಸೈರನ್ನುಗಳು...
ಅಂಜನಾ ಗಾಂವ್ಕರ್ ಕವಿತೆ- ಬಾ ಗೆಳೆಯ
ಅಂಜನಾ ಗಾಂವ್ಕರ್ ನೀಲಿಯಾಗೋಣ ಬಾ ಗೆಳೆಯ,ಮುಸ್ಸಂಜೆಯ ಬಾನಂತೆ,ತಿಳಿಯಾಗೋಣ ಬಾ ಗೆಳೆಯ,ಹರಿವ ತೊರೆ ನೀರಂತೆ,ಸಂಭ್ರಮಿಸೋಣ ಬಾ ಗೆಳೆಯ,ಈ ದಿನ ನಮ್ಮದೆಂಬಂತೆ, ಮುಗಿಲ ಬಣ್ಣ ಕೆಂಪಾಗಬಹುದು,ಸಿಡಿಲಿನ ಆರ್ಭಟದಿ ಕಪ್ಪಾಗಬಹುದುಮಿಂಚಿನ ಸಂಚಲನದಿ ಹೊನ್ನಂತೆಹೊಳೆಯಬಹುದು, ಇಲ್ಲಾಮಳೆಯಾಗಿ ಭೋರ್ಗರೆಯಬಹುದು. ಹಸಿರಾಗೋಣ ಬಾ ಗೆಳೆಯ,ಬತ್ತಿದ ಬಯಕೆ...
ಉಸಿರು ನಿಂತು ಹೋಗುವ ಮುನ್ನ
ಸರ್ದಾರ್ ಎಂ ತನಾಝ್ ಒಮ್ಮೆ ಉಸಿರು ನಿಂತ ಮೇಲೆಹೂವು ಹಾರ ಹಾಕಿಹೂಣುವರು ಇಲ್ಲ ದಹಿಸುವರಯ್ಯಮುಂದೆ ಮತ್ತೇನೂ ನಡೆಯದಯ್ಯ! ಒಮ್ಮೆ ಉಸಿರು ನಿಂತ ಮೇಲೆಒಂದೆರಡು ದಿನ ಮಾತಾಡುವರಯ್ಯನಮ್ಮ ಬಗ್ಗೆ ಹಾಗೆ ಹೀಗೆಮುಂದೆ ಮತ್ತೇನೂ ನಡೆಯದಯ್ಯ! ಒಮ್ಮೆ ಉಸಿರು ನಿಂತ ಮೇಲೆತಿಥಿ-ಶ್ರಾದ್ಧಗಳ ದಿನ ದುಃಖದಿಸಿಹಿ ತಿಂಡಿ ಭಕ್ಷ್ಯ ಭೋಜನಗಳ...
ಕಾರ್ತಿಕ್ ಆರ್ ಓದಿದ ‘ದೀಪವಿರದ ದಾರಿಯಲ್ಲಿ’
ದೀಪವಿರದ ದಾರಿಯಲ್ಲೊಂದು ಚೆಂದದ ಹಣತೆ ಕಾರ್ತಿಕ್ ಆರ್ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಕುರಿತು, ಸಮುದಾಯದ ಹೊರಗಿನವರು (ಅದು ಯಾವುದೇ ಭಾಷೆ/ಪ್ರಕಾರವಿರಲಿ) ಏನನ್ನೂ ಬರೆದರೂ/ ರಚಿಸಿದರೂ, ಅದನ್ನು ಸಮುದಾಯದವರು ಒಂದು ರೀತಿಯ ಆತಂಕ ಮತ್ತು ಅನುಮಾನದಿಂದಲೇ ನೋಡುವುದು ಸಾಮಾನ್ಯ, ಮತ್ತು ಅದಕ್ಕೆ ಕಾರಣಗಳು ಹಲವು. ಭಿನ್ನ ಲೈಂಗಿಕತೆಯ...
ಭುವನೇಶ್ವರಿ ಹೆಗಡೆ ಅಂಕಣ ಆರಂಭ: ನಿಮ್ಮ ಭಂಡಾರದ ‘ಅವಧಿ’ ಮುಗಿದಿಲ್ಲ..
ರವಿ ಬೆಳಗೆರೆ ಒದಗಿಸಿದ ನೆನಪಿನ ಭಂಡಾರ ಎಂಭತ್ತರ ದಶಕದ ಕೊನೆಯ ಭಾಗ. ನಾನಾಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಎಂ ಎ. ಓದಲು ಬಂದವಳು. ಉತ್ತರ ಕನ್ನಡದ ಅನೇಕ ಹುಡುಗಿಯರು ನನ್ನಂತೆ ಹಾಸ್ಟೆಲಿನಲ್ಲಿ ಇದ್ದುದು ನಮ್ಮದೊಂದು ಗುಂಪು ರೆಡಿಯಾಗಿತ್ತು. ಶಿರಸಿಯ ನಮ್ಮ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು...
ಪ್ರತಿಭಾ ನಂದಕುಮಾರ್ ಅಂಕಣ- ಹೈದರನ ಸಾಕುಮಗ ಇಯಾಜ್ ಖಾನ್
ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...
ಸದಾ ಎಚ್ಚರಿರುವ ಕಷ್ಟಗಳು..
ಇಮ್ತಿಯಾಜ್ ಶಿರಸಂಗಿ ನನ್ನೊಂದಿಗೆನನ್ನ ಎಲ್ಲಾಕಷ್ಟಗಳು ಒಪ್ಪಂದಒಂದಕ್ಕೆ ಸಹಿಹಾಕಿವೆ. ಆಗಾಗಅವು ಗಾಢನಿದ್ರೆಗೆ ಜಾರುವುದಾಗಿ…ಮತ್ತುಮನವಿಯೊಂದನ್ನುಪುರಸ್ಕರಿಸಿವೆ,ಎಂದಾದರೊಮ್ಮೆಬಳಿಗೆ ಸುಳಿವಸುಖಕ್ಕೆ ದಾರಿಮಾಡಿಕೊಡುವುದಾಗಿ.. ಚಂಚಲ ಮನಸುದೂರದ ದುರಾಸೆಯ ಬೆಟ್ಟಕ್ಕೆಗುರಿ ಇಡುವುದಿಲ್ಲವೆಂದು ಆಣೆ ಮಾಡಿದೆ… ಆದರೆ, ಒಪ್ಪಂದ...
ಸ್ತ್ರೀ ವಿರೋಧಿ ಜೋಕುಗಳೂ ಆಧುನಿಕ ತಂತ್ರಜ್ಞಾನವೂ…
ಪ್ರತಿಕ್ರಿಯೆಗೆ ಸ್ವಾಗತ ನಿಮ್ಮ ಪ್ರತಿಕ್ರಿಯೆಗಳನ್ನು avadhimag@gmail.com ಗೆ ಕಳಿಸಿಕೊಡಿ ಗಿರಿಜಾ ಶಾಸ್ತ್ರಿ ಮೊನ್ನೆ ಗೆಳತಿ ಭಾಗ್ಯ ಫೋನಿನಲ್ಲಿ ಮಾತನಾಡುವಾಗ 'ಓಡಿ ಹೋಗುವವಳು ಹಾಲಿಗೆ ಹೆಪ್ಪುಹಾಕಿ ಹೋಗ್ತಾಳಾ?' ಎನ್ನುವ ಗಾದೆಯನ್ನು ಹೇಳಿದ್ದರು. ನಾವು ಆ ಕ್ಷಣಕ್ಕೆ ಹೊಟ್ಟೆ ತುಂಬಾ ನಕ್ಕಿದ್ದೆವು. ಈಗ ಎನಿಸುತ್ತದೆ ಇಂತಹ...
ವಿಜಯಕ್ಕ ಅಜ್ಜಿಮನೆ ಕೇಳ್ತಾರೆ- ಏನೆಂದು ಹೆಸರಿಡಲಿ…
ವಿಜಯಕ್ಕ ಅಜ್ಜಿಮನೆ ಸಂಜೆ ದಿನದ ವಹಿವಾಟಿನ ಲೆಕ್ಕ ಮುಗಿಸಿ, ಕ್ಯಾಶ್ ಚೆಕ್ ಮಾಡಿ ತಲೆ ಯೆತ್ತಿದವಳಿಗೆ ಕಾಣಿಸಿದ್ದು ಮರದ ಕೆಳಗೆ ಬೈಕು ನಿಲ್ಲಿಸಿನಿಂತ… ಪ್ರೈವೇಟ್ ಬಸ್ಸಿನ ಮಾಲೀಕ.. ಕೃಷ್ಣ ಪೂಜಾರಿ.. ಉಡುಪಿ ಪರ್ಕಳ ಬಸ್ರುಟಿನಲ್ಲಿ ಹೋಗುತಿದ್ದ ಬಸ್ಸಿನಲ್ಲೂ ಆತನನ್ನು ಬಹಳಸಲ ನೋಡಿದ್ದಿದೆ.. ಆಗಾಗ ಚೆಕ್ಕಿಂಗ್ಗೆ ಅಂತ ಬಸ್ಸು...
ಜೋಗಿಗೆ ಪ್ರತಿಕ್ರಿಯೆ: ನಾನೇಕೆ ಓದುತ್ತೇನೆ ಎಂದು ಯೋಚಿಸಿದ್ದಿದೆ…
ಭಾನುವಾರ ಪ್ರಕಟವಾದ ಜೋಗಿ ಅವರ ಅಂಕಣ - ಬರಹದ ಹಣೆಬರಹ ಅದು ಇಲ್ಲಿದೆ https://bit.ly/3Aoqm5b ಇದನ್ನು ಓದಿ ಆಕಾಶವಾಣಿಯ ಬಿ ಕೆ ಸುಮತಿ ಅವರು ಪ್ರತಿಕ್ರಿಯಿಸಿದ್ದು ಹೀಗೆ- ಬಿ ಕೆ ಸುಮತಿ ಜೋಗಿ ಅವರಿಗೆ ನಮಸ್ಕಾರ...ಎಷ್ಟೋ ಬಾರಿ ನಾನೇಕೆ ಓದುತ್ತೇನೆ ಎಂದು ಯೋಚಿಸಿದ್ದಿದೆ. ಕಾರ್ಯಕ್ರಮಗಳಲ್ಲಿ ನೀವೇಕೆ ಓದುತ್ತೀರಿ ಎಂಬ bites...
‘ಕಾರಣ’ ಕೃತಿಗಳ ಬಿಡುಗಡೆ..
ಕುವೆಂಪು ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದಲ್ಲಿ…
ಸತೀಶ ಕುಲಕರ್ಣಿ ಓದಿದ ‘ದೇವರಿಗೂ ಬೀಗ’
ಸತೀಶ ಕುಲಕರ್ಣಿ ಒಂದೊಂದು ಕಡೆ ಒಂದೊಂದು ರೀತಿಯ ಭಕ್ತಿ ಬೇಡಿಕೆಯ ನಿವೇದನೆಗಳಿರುತ್ತವೆ. ಮುಗ್ಧತೆಯಲ್ಲಿ ಮನೋಸಂಕಲ್ಪಗಳನ್ನು ಈಡೇರಿಸಿಕೊಳ್ಳುವ ಜನಸಮುದಾಯವೂ ಇರುತ್ತವೆ. ಹೀಗೆಲ್ಲದರ ನಡುವೆ ನಮ್ಮ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ನಾಕೂರು ಕತ್ರಿ (ನಾಲ್ಕು ಊರುಗಳ ಕತ್ರಿ) ಭೂತಪ್ಪ ದೇವರು ಒಂದು. ಭೂತಪ್ಪ,...




















