ಚರಿತಾ ಮೈಸೂರು ಕಂಡಂತೆ ‘ಕ್ಲಬ್‌ ಹೌಸ್’

ಚರಿತಾ ಮೈಸೂರು

Clubhouse ಬಗ್ಗೆ fb ಯಲ್ಲಿ ಭಾರಿ ಚರ್ಚೆ ಶುರುವಾಗಿದೆ! ಈಗ ಎರಡ್ಮೂರು ದಿನಗಳಿಂದ ಎಫ್ಬಿಯ ತಲೆಗಳೆಲ್ಲ ಹೋಲ್ಸೇಲಾಗಿ ಕ್ಲಬ್ ಹೌಸಿಗೆ ದಾಳಿ ಇಡ್ತಿರೋದು ಗಮನಿಸ್ತಿದೀನಿ. ನಾನು ಕೂಡ ಅಲ್ಲಿಗೆ ವಾರದ ಹಿಂದೆ ಹೊಕ್ಕಿದ್ದು.

ಈಗ clubhouse ಬಗ್ಗೆ ಸಿನಿಕಲ್ ಕಮೆಂಟ್ ಮಾಡ್ತಿರೋರಲ್ಲಿ ಬಹುಶಃ ಬಹುತೇಕರಿಗೆ ಇನ್ನೂ ಸರಿಯಾದ ಚರ್ಚೆಗಳಲ್ಲಿ ಭಾಗವಹಿಸುವ/ಕೇಳುವ ಅವಕಾಶ ಸಿಕ್ಕಿಲ್ಲ ಅನಿಸುತ್ತೆ. ಮೊದಮೊದಲಿಗೆ ನನಗೂ ಹೀಗನಿಸಿತ್ತು. ನಂತರ ಒಂದಷ್ಟು ಸೆನ್ಸಿಬಲ್ ಚರ್ಚೆಗಳನ್ನು ಗಮನಿಸಿದ ಮೇಲೆ, ಕ್ಲಬ್ ಹೌಸ್ ಇಷ್ಟವಾಗತೊಡಗಿದೆ.

ಫೇಸ್ಬುಕ್ ಥರವೇ ಕ್ಲಬ್ಹೌಸ್ ಕೂಡ ಒಂದು ಸೋಷಿಯಲ್ ನೆಟ್ ವರ್ಕ್. ಆದರೆ ಅಲ್ಲಿ ಟೆಕ್ಸ್ಟ್ ಮೆಸೇಜ್ ಮಾಡುವ ಅಥವಾ ಉದ್ದುದ್ದ ಬರೆಯುವ ಅವಕಾಶ ಇಲ್ಲ. ಹಾಗೇ ಅದು ಕೇವಲ ಲೈವ್ ಚರ್ಚೆಗಳನ್ನು ಮಾತ್ರ ಬಿತ್ತರಿಸುವ ಮಾಧ್ಯಮ. ಅಲ್ಲಿ ವಾಯ್ಸ್ ರೆಕಾರ್ಡ್ ಮಾಡುವ ಅಥವಾ ಆರ್ಕೈವ್ ಮಾಡುವ ವ್ಯವಸ್ಥೆ ಕೂಡ ಇಲ್ಲ. ಹಾಗಾಗಿ ಜನರನ್ನು ಹೆಚ್ಚು ಎಂಗೇಜ್ ಮಾಡಬಲ್ಲದು ಮತ್ತು ಹಳೆ ಸರಕುಗಳು ಯಾವುದೂ ಕಾಣದೆ/ಕೇಳದೆ ಇರೋದ್ರಿಂದ ತಕ್ಕಮಟ್ಟಿಗೆ ‘ಕ್ಲೀನ್’ ಅನಿಸುತ್ತೆ ಕೂಡ! ಇಂಥ platform ಗಳನ್ನು ನಾವು ಎಷ್ಟು ಪಾಸಿಟಿವ್ ಆಗಿ ಬಳಸಿಕೊಳ್ತೀವಿ ಅನ್ನೋದರ ಮೇಲೆ ಅವುಗಳ ಪ್ರಾಮುಖ್ಯತೆ ಅವಲಂಬಿಸಿದೆಯಷ್ಟೆ.

ನಾನು ಗಮನಿಸಿದಂತೆ, ಕ್ಲಬ್ಹೌಸ್ ಅನ್ನು ತುಂಬಾ ಬುದ್ಧಿವಂತಿಕೆಯಿಂದ, ಅದರ ಸಾಧ್ಯತೆಗಳನ್ನೆಲ್ಲ ಬಳಸಿಕೊಳ್ಳುತ್ತಿರೋರು ಮಲಯಾಳಿಗಳು. ಅಲ್ಲಿ ಅವರು ಕ್ರಿಯೇಟ್ ಮಾಡುವ room ಗಳ ವಿಷಯ-ವೈವಿಧ್ಯ ‘ವಾವ್’ ಅನಿಸುವಷ್ಟು ವಿಸ್ತೃತವಾಗಿದೆ. ಇತ್ತೀಚೆಗೆ ಮಲಯಾಳಿ ಸ್ಕಾಲರ್ ಒಬ್ಬರು ತಮ್ಮ ಕಾದಂಬರಿಯ ಬಗ್ಗೆ ಚರ್ಚೆ ಏರ್ಪಡಿಸಿದ್ದರು. ಆ ಕಾದಂಬರಿಯಲ್ಲಿ ಕನ್ನಡದ ವಚನಕಾರ್ತಿ ‘ದುಗ್ಗವ್ವೆ’ ಬಗ್ಗೆ ಪ್ರಸ್ತಾಪವಿದೆ. ಅವರ ಪ್ರಕಾರ ಆಕೆ ಕೇರಳ ಮೂಲದವಳು! ವಚನಕಾರರ ಬಗ್ಗೆ ಕನ್ನಡದವರೇ ಇಷ್ಟು ಗಂಭೀರವಾಗಿ ಚರ್ಚಿಸಿದ್ದನ್ನು ನಾನು ಕೇಳಿಲ್ಲ! ಆ ಚರ್ಚೆಯಲ್ಲಿ ಪಿ.ಲಂಕೇಶ್, ಗೌರಿ ಲಂಕೇಶ್ ಬಗ್ಗೆ ಕೂಡ ಪ್ರಸ್ತಾಪವಾಯಿತು.

ನನಗೆ ಮಲಯಾಳಂ ಪೂರ್ತಿಯಾಗಿ ಅರ್ಥವಾಗದ್ದರಿಂದ, ಒಂದಷ್ಟು ಅಂದಾಜಿನ ಮೇಲೆ ಗ್ರಹಿಸಿದೆ. ಇವರ ಇಂಥ ಚರ್ಚೆಗಳನ್ನೆಲ್ಲ ಗ್ರಹಿಸೋದಕ್ಕಾದರೂ ಮಲಯಾಳಂ ಕಲಿಯಬೇಕು ಅನಿಸಿಬಿಟ್ಟಿದೆ ನನಗೆ! ಅಷ್ಟೇ ಅಲ್ಲ, ಮಲಯಾಳಿ ಸ್ನೇಹಿತರು ಈಗಾಗಲೇ clubhouse ನಲ್ಲಿ ನಾಟಕಗಳನ್ನು ಓದುವ ಮೂಲಕ audio performance ಕೂಡ ಆರಂಭಿಸಿದ್ದಾರೆ. ಅವರ ಹಲವು ‘ಆರ್ಟ್ ಕಲೆಕ್ಟಿವ್ಸ್’ ಕೂಡ ಚಟುವಟಿಕೆಯಿಂದಿವೆ. ಅವರ ಪ್ರತಿಯೊಂದು ರೂಮ್ ಕನಿಷ್ಠ ನೂರು ಕೇಳುಗರನ್ನು ಹೊಂದಿರುತ್ತೆ, ಮತ್ತು ಗರಿಷ್ಠ ಐನೂರರಿಂದ ಆರುನೂರು!

ಹಾಗೇ ‘ಚೆನ್ನೈ ಪ್ರೈಡ್’ ಎಂಬ ಚೆನ್ನೈ ಮೂಲದ ಯುವಕರ ಗುಂಪೊಂದು ಇತ್ತೀಚೆಗೆ LGBTQ ವಿಷಯಕ್ಕೆ ಸಂಬಂಧಿಸಿದ ಸಿನಿಮಾಗಳ ಬಗ್ಗೆ ಚರ್ಚೆ ಏರ್ಪಡಿಸಿತ್ತು. ಸಾಕಷ್ಟು ಗಂಭೀರ, ಆರ್ದ್ರ ಮತ್ತು ಸೆನ್ಸಿಬಲ್ ಚರ್ಚೆ ಅದು. ಇನ್ನು ಕೆಲವು ಹಿಂದಿ ಭಾಷಿಕರು ಸೂಫಿ ಸಂಗೀತಕ್ಕೆಂದೇ ಕೆಲವು ಗ್ರೂಪ್ ಮಾಡಿಕೊಂಡು, ಹಾಡುಗಳನ್ನು ಗುನುಗುವ ‘ರೂಮ್’ ಗಳನ್ನು ನಡೆಸುತ್ತಿದ್ದಾರೆ. ಧರ್ಮ, ಆಧ್ಯಾತ್ಮ, ಫಿಲಾಸಫಿ ಕುರಿತಂತೆ ಕೆಲವು ಇಂಗ್ಲಿಷ್ ಭಾಷಿಗರ ಗಂಭೀರ ಚರ್ಚೆಗಳೂ ನಡೆದಿವೆ.

ಇತ್ತೀಚೆಗೆ ‘ಕಾಳಿ’ ಕುರಿತಂತೆ ಅದ್ಭುತ ವಿಶ್ಲೇಷಣೆಯ ಪಾಂಡಿತ್ಯಪೂರ್ಣ ಚರ್ಚೆಗಳಿದ್ದವು. ಹಾಗೇ ರಾಜಕೀಯ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಕೂಡ ಸಾಕಷ್ಟು ಗಂಭೀರ ಚರ್ಚೆಗಳಾಗುತ್ತಿವೆ ಅಲ್ಲಿ. ನಾವು ಸರಿಯಾದ ನೆಟ್ವರ್ಕ್ ಮಾಡಿಕೊಳ್ಳಬೇಕಷ್ಟೆ. ಮತ್ತೆ ಕೆಲವು ಒಣ ಹರಟೆಯ ರೂಮ್ಗಳೂ ಇವೆ. ನಾವು ಯಾವುದನ್ನು ಆಯ್ಕೆ ಮಾಡಿಕೊಳ್ತೀವಿ ಅನ್ನೋದು ನಮಗೇ ಬಿಟ್ಟದ್ದು.

ಕನ್ನಡದ ಗ್ರೂಪ್ಗಳಲ್ಲಿ ಗಮನ ಸೆಳೆಯುತ್ತಿರುವುದು ‘ಅವಧಿ’ ಏರ್ಪಡಿಸುತ್ತಿರುವ ‘ಮೀಟ್ ದ ಆಥರ್’ ಸರಣಿ ಚರ್ಚೆಗಳು. ಮೊನ್ನೆ ಬಿಳಿಮಲೆ ಸರ್ ಅವರ ‘ಕಾಗೆ ಮುಟ್ಟಿದ ನೀರು’ ಕುರಿತ ಚರ್ಚೆ ವಿಶೇಷವೆನಿಸಿತು. ಇನ್ನು ಕೆಲವು ಕನ್ನಡ ಸಿನಿಮಾ ಕೇಂದ್ರಿತ ಗ್ರೂಪ್ಗಳಲ್ಲಿ ಇದುವರೆಗೆ ನನಗಂತೂ ಆಸಕ್ತಿಕರ ಚರ್ಚೆಗಳು ಕಂಡುಬಂದಿಲ್ಲ. ಮುಂದಿನ ದಿನಗಳಲ್ಲಿ ಅಂಥವೇನಾದರೂ ನಡೆಯಬಹುದೇನೊ ಕಾದು ನೋಡಬೇಕು.

ನನಗಂತೂ ‘clubhouse’ ದೇಶ-ಭಾಷೆಗಳ ಗಡಿಗಳನ್ನು ಮೀರಿ, ವಿಚಾರ ವಿನಿಮಯ ಮಾಡಿಕೊಳ್ಳಬಹುದಾದ ಒಂದು ಅದ್ಭುತ ವೇದಿಕೆಯಂತೆ ಕಂಡಿದೆ. ನಾವು ಏನನ್ನು ಕೇಳಬೇಕು, ಏನನ್ನು ಅವಗಣಿಸಬೇಕು, ಎಷ್ಟು ಮಾತಾಡಬೇಕು ಅಥವಾ ಎಷ್ಟು ಮೌನವಹಿಸಬೇಕು ಇತ್ಯಾದಿ ವಿಷಯಗಳು ನಮ್ಮದೇ ಆಯ್ಕೆಗೆ ಬಿಟ್ಟದ್ದು. ನಮ್ಮ ಕಿವಿ, ಬಾಯಿ, ತಲೆ, ಟೈಮ್ ಮತ್ತು ಮೌನ…ಇವೆಲ್ಲದರ ಅರ್ಥವನ್ನು ಮತ್ತು ಬೆಲೆಯನ್ನು ಮನನ ಮಾಡಿಸಬಲ್ಲ ವೇದಿಕೆ ‘clubhouse’.

‍ಲೇಖಕರು Avadhi

June 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: