ಸೂರ್ಯಕೀರ್ತಿ ಅನುವಾದಿಸಿದ ತಾರೆಕ್ ಸಮೀನ್ ಕವಿತೆಗಳು

ಮೂಲ: ತಾರೆಕ್ ಸಮೀನ್ 

ಕನ್ನಡಕ್ಕೆ: ಸೂರ್ಯಕೀರ್ತಿ

ತಾರೆಕ್ ಸಮೀನ್ ಬಾಂಗ್ಲಾದೇಶದ ದ್ವಿಭಾಷಾ ಕವಿ, ಕಥೆಗಾರ ಮತ್ತು ಸಾಹಿತೊ‌ ಪತ್ರಿಕೆಯ ಸಂಪಾದಕರು. ಐದು ಕವನ ಸಂಕಲನಗಳು, ಎರಡು  ಸಣ್ಣ ಕಥೆಗಳ ಸಂಗ್ರಹಗಳು ಮತ್ತು ಕಾದಂಬರಿಗಳು ಸೇರಿ ಎಂಟು ಕೃತಿಗಳನ್ನು ರಚಿಸಿದ್ದಾರೆ. ಹಲವಾರು ದೇಶದ ಕವಿತೆಗಳನ್ನು ಬೆಂಗಾಲಿ ಭಾಷೆಗೆ ಅನುವಾದಿಸಿದ್ದಾರೆ.

ಇವರ  ಕೆಲವು ಕವನಗಳನ್ನು ಇಂಗ್ಲಿಷ್, ಸ್ಪ್ಯಾನಿಷ್, ಚೈನೀಸ್, ಜರ್ಮನ್, ಫ್ರೆಂಚ್, ಗ್ರೀಕ್, ಇಟಾಲಿಯನ್, ರಷ್ಯನ್, ಟರ್ಕಿಶ್, ಸ್ವೀಡಿಷ್, ಫಿನ್ನಿಷ್, ಹೀಬ್ರೂ, ಅರೇಬಿಕ್, ವಿಯೆಟ್ನಾಮೀಸ್, ಹಿಂದಿ, ನೇಪಾಳಿ, ಪೋರ್ಚುಗೀಸ್,ಎಸ್ಟೋನಿಯನ್, ಸ್ಲೋವಾಕ್, ರೊಮೇನಿಯನ್, ಮೆಸಿಡೋನಿಯನ್ ಮತ್ತು ಹಂಗೇರಿಯನ್ ಭಾಷೆಗಳಿಗೆ ಅನುವಾದಗೊಂಡಿವೆ. ಅವರ ಕವನಗಳು, ಸಣ್ಣ ಕಥೆಗಳು ಮತ್ತು ಲೇಖನಗಳನ್ನು 25 ಕ್ಕೂ ಹೆಚ್ಚು ವಿದೇಶಗಳಲ್ಲಿ ಪ್ರಕಟಿಸಲಾಗಿದೆ. ತಾರೆಕ್ ಸಮೀನ್ ಅವರಿಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

1. ಪಯಣದ ಹಾದಿ!

ನಾನು ನನ್ನ ಹಾದಿಗಳನ್ನೆ ಕಳೆದುಕೊಂಡೆ,
ಹೌದು, ಕಳೆದುಕೊಂಡೆ!
ಸುಂದರವಾದ ಗುಲಾಬಿಗಳನ್ನು
ರೋಮಾಂಚಕ ನದಿಗಳನ್ನು
ಅಪರಿಚಿತ ಪಕ್ಷಿಗಳ ಸುಮಧುರ ಗಾಯನವನ್ನು;
ಕಳೆದುಕೊಂಡೆ!

ಕಳೆದುಕೊಂಡ ಸ್ನೇಹಿತರನ್ನು ನಾನು
ಕಂಡುಕೊಂಡೆ ಅವರು; ನಾನು ಮೊದಲು ಭೇಟಿ ಮಾಡಿರಲಿಲ್ಲ‌ ನಿಜ!
ಆದರೆ
ವಾಸ್ತವವಾಗಿ, ಇದು ನನ್ನ ಹುಡುಕುವ
ಮಾರ್ಗವಾಗಿತ್ತು ನಾನು ಅದನ್ನು ಹುಡುಕುತ್ತಿದ್ದೆ.

ಬಿದ್ದ ಹೂವುಗಳನ್ನು ಪ್ರೀತಿಸಲು
ತಿಳಿ ಹೇಳುತ್ತಿದ್ದೆ;
ಹೌದು, ಪ್ರಯಾಣವು ಕಠಿಣ ಕಹಿಯಾಗಿತ್ತು,
ಜೊತೆಗೆ ನಿಗೂಢ ಕಾಡಾಗಿತ್ತು.
ಕಷ್ಟ, ಸಂಕಟ, ಕಣ್ಣೀರಾಗಿತ್ತು;
ಆದರೂ, ನಾನು ಭಾವಿಸುತ್ತೇನೆ,
ಈ ಮಾನವ ಜೀವನದ ವೈಭವ
ನಮ್ಮ ಹಾದಿಯನ್ನು ಕಳೆದುಕೊಂಡಿದ್ದನ್ನು
ಕಂಡು ಹಿಡಿಯಲು ಏನಾದರೂ ಕಂಡುಹಿಡಿಯಬೇಕೆಂದು!.

2. ಪ್ರೀತಿ ಮತ್ತು ದ್ವೇಷ!

ದ್ವೇಷವು ಪುರುಷರಲ್ಲಿ ಹತ್ತಿಕ್ಕುವ
ಬೆಂಕಿಯನ್ನು ಹರಡಿದಾಗ,
ತರ್ಕ ಮತ್ತು ಬುದ್ಧಿ ತನ್ನ ದಾರಿಯನ್ನು ಕಳೆದುಕೊಳ್ಳುತ್ತದೆ;
ನಂತರ; ಮನಸ್ಸು ಕೂಡಾ
ಓ! ವಂಚಿತ ಮಾನವ ಜೀವನ
ಪ್ರೀತಿಯ ಕೊಳದಲ್ಲಿ ಸ್ನಾನ ಮಾಡುತ್ತದೆ!

ಪ್ರೀತಿಯು ಪ್ರೀತಿ ಮಾತ್ರ ಮಾಡಬಹುದು
ದ್ವೇಷದ ದೈತ್ಯ ಶಕ್ತಿಯನ್ನು ನಾಶಮಾಡುತ್ತದೆ,
ಮಾಡುತ್ತಲೇ ಇರುತ್ತದೆ;
ಆದ್ದರಿಂದ ಇಂದಾದರೂ ಬನ್ನಿ
ಪರಸ್ಪರ ಪ್ರೀತಿಸಲು ಮತ್ತು ಗೌರವಿಸಲು.
ಇಂದು,
ಮಾನವಕುಲದ ನಡುವೆ ಪ್ರೀತಿಯ ತೀವ್ರ ಅವಶ್ಯಕತೆಯಿದೆ.

3. ನೀವು ನನ್ನನ್ನು ಕರೆಯುವುದಾದರೆ?

ಅತಿ ದೂರವು ಕಣ್ಮರೆಗೆ ಕಾರಣವಾಗುತ್ತದೆ,
ಸಮಯವು ನೆನಪುಗಳನ್ನು ಕೊಲ್ಲುತ್ತದೆ.
ಜಗತ್ತು ಒಂದು ಸಣ್ಣ ಹಳ್ಳಿ
ಆದರೆ ನಾವು ಎರಡು ದೇಶಗಳಿಂದ ಬಂದವರು.
ಎರಡು ವಿಭಿನ್ನ ಜನಾಂಗ, ಧರ್ಮ
ಮತ್ತು ಜನಾಂಗೀಯಂತೆ,
ಹಾಗಿದರೆ,
ನೀವು ನನ್ನನ್ನು ಕರೆಯುವುದಾದರೆ
ನಾನು ಹದ್ದಿನಂತೆ ಹಾರುತ್ತೇನೆ,
ನೀವು ನನ್ನನ್ನು ಕರೆಯುವುದಾದರೆ
ನಾನು ಇರುವೆಗಳಂತೆ ಸಾಲುಗಟ್ಟುತ್ತೇನೆ!
ನೀವು ನನ್ನನ್ನು ಕರೆಯುವುದಾದರೆ
ನಾನು ನಿನ್ನನ್ನು ಮನುಷ್ಯನಂತೆ ಪ್ರೀತಿಸುತ್ತೇನೆ!

ಈ ಗೀಳಗಳನ್ನು ಬಿಟ್ಟು
ನೀವು ನನ್ನನ್ನು ಕರೆಯುವುದಾದರೆ
ನಾನು ಪ್ರೀತಿಯ ಮನೆ ಕಟ್ಟುತ್ತೇನೆ;
ನಮ್ಮ ಎರಡು ದೇಹ
ಒಂದಾಗುತ್ತದೆ ದೈವಿಕ ಪ್ರೀತಿಯಿಂದ!
ಆದ್ದರಿಂದ,
ದಯವಿಟ್ಟು ನನಗೆ ಕರೆಯುವುದಾದರೆ
ನನ್ನನ್ನು ಮರಳಿ ಕರೆಯಿರಿ
ನೀವು ನನ್ನವರಾಗಿರಲಿ
ನಾನು ನಿಮ್ಮವನಾಗುವೆ
ಹೀಗೆ ಮಾನವ ಜೀವನವನ್ನು ದೂಕೋಣ!

‍ಲೇಖಕರು Avadhi

June 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Jayasrinivasa Rao

    Lovely poems and translations … thank you for bringing Tarek Sameen to Kannada …

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: