-ನಂದಿನಿ ಹೆದ್ದುರ್ಗ
ಕವಿ,
ಅತೀತ ಅನನ್ಯ ಕಿರಿಯ ವಿಧೇಯ
ತಾಯಿ ಉತ್ಸಾಹಿ ಯೋಗಿ ಭೈರಾಗಿ
ಕಾಮಿ ಹರಾಮಿ ಕೊರಮ ಕುತ್ಸಿತ
ಉದ್ಧಟ ಉನ್ಮತ್ತ ಉಪೇಕ್ಷಿತ ಉಲ್ಲಂಘಿತ
ಹಸನ್ಮುಖಿ ಹರಿಕಾರ ಹಸುಕಂದ
ಕವಿ,
ಅಹಂಕಾರಿ ಅಯೋಗ್ಯ ಅನ್ಯ ಇನಿಯ
ಧೂಷಿತ ಧಮನಿತ ಧೂರ್ತ ದುಷ್ಟ
ಪುಳಕಿತ ಸೋಂಕಿತ ಶಂಕಿತ ಶೋಷಿತ
ವಿಕ್ಷಿಪ್ತ ವಿಧ್ವಂಸಕ ತಲೆಹಿಡುಕ ತಲೆ ತಿರುಕ
ವ್ಯಭಿಚಾರಿ ವಿದೂಷಕ ಭಂಜಕ ನಿಂದಕ
“ನಾನು” ಆಚೆ ನಿಂತಿದ್ದೇನೆ.
ಕದ… ತೆರೆಯಬಹುದೇ?
ಬೆದೆ… ನೆಡೆಯಬಹುದೇ??






0 Comments