ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.
ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.
ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಿಂದ ಎಂಡಿ (ಆಯುರ್ವೇದ) ಪದವಿ ಪಡೆದರು.
ಬೆಂಗಳೂರಿನ ಅತ್ಯಂತ ಯಶಸ್ವಿ ಆಯುರ್ವೇದ ಅಂಗಡಿಗಳ ಸರಪಳಿಯಾದ ಆಯುರ್ ಸೆಂಟ್ರಲ್ ಅನ್ನು ಸಹ-ಸ್ಥಾಪಿಸಿದರು.
ಇದೀಗ ‘ಅವಧಿ’ಯಲ್ಲಿ ‘ಕಾಂಗರೂ ನಾಡಿನಲ್ಲಿ’ ಶೀರ್ಷಿಕೆಯ ಹೊಸ ಸರಣಿಯೊಂದಿಗೆ ಬರುತ್ತಿದ್ದಾರೆ.
ಸರಣಿ – 9
ಫೋಟೋ ಕೃಪೆ : ಪ್ರವೀಣ್ ಮೂರ್ತಿ
ಭಾರತ ಬಿಡುವ ಮುಂಚೆಯೇ ನಾನು ಪ್ರವೀಣ್‌ಗೆ ಹೇಳಿದ್ದೆ. “ಒಂದು ಜಾಗ ಮಾತ್ರ miss ಮಾಡಬಾರದು.”
ಅವನು ನಕ್ಕ. “ಆಯಿತು.”
ಕೆಲವು ದಿನಗಳ ನಂತರ Melbourne cityನಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ, ಏಕಾಏಕಿ road ಬದಿಯಲ್ಲಿ ಕಾರು ನಿಲ್ಲಿಸಿದ. “ಬಾ.” ನಾನು ಮೇಲೆ ನೋಡಿದೆ.ದೊಡ್ಡ ಕಟ್ಟಡ.
Stone walls. Tall windows. ಹಳೆಯ authority ಇರುವ architecture. ಮೇಲೆ ಹೆಸರು.
Royal Australasian College of Surgeons.

ಕೆಲವು ಕಟ್ಟಡಗಳು ಒಳಗೆ ಹೋಗುವ ಮುಂಚೆಯೇ ನಿಮ್ಮ walking speed ನಿಧಾನ ಮಾಡಿಸುತ್ತವೆ. ಇದು ಅಂಥದ್ದು.
ಒಳಗೆ receptionist ಬಳಿ ಕೇಳಿದೆವು. “ಸುಶ್ರುತರ statue ನೋಡಬಹುದೇ?” ಅವಳು smile ಮಾಡಿದಳು.
ಆ smileನಲ್ಲಿ surprise ಇರಲಿಲ್ಲ. ಬಹುಶಃ ಇದು ಮೊದಲ ಭಾರತೀಯ visitor ಅಲ್ಲ. ಒಬ್ಬ lady ನಮ್ಮನ್ನು ಒಳಗೆ ಕರೆದುಕೊಂಡು ಹೋದರು.
ನಂತರ ವಿಚಿತ್ರ ಸಂಗತಿ ನಡೆಯಿತು.
ಸುಶ್ರುತನನ್ನು ನೋಡಲು ನಾವು ಮೇಲಕ್ಕೆ ಏರಲಿಲ್ಲ.
ಕೆಳಗೆ ಇಳಿದೆವು.
History ಕೆಲವೊಮ್ಮೆ ಹಾಗೆಯೇ ಇರಬಹುದು.
ಹುಡುಕಲು ಸ್ವಲ್ಪ ಕೆಳಗೆ ಇಳಿಯಬೇಕು.
ಕೆಲವು ಮೆಟ್ಟಿಲು ಕೆಳಗೆ ಇಳಿದ ಕೂಡಲೇ Melbourne ಸ್ವಲ್ಪ ಕಣ್ಮರೆಯಾಯಿತು.
White walls. Artificial lights. ಉದ್ದ corridor.
Polished floor. Shoe sound ಕೂಡ ನಿಧಾನವಾಗಿ ಕೇಳಿಸುತ್ತಿತ್ತು. ಒಂದು faint disinfectant smell.
Hospital ಮೌನವೂ ಅಲ್ಲ. Museum ಮೌನವೂ ಅಲ್ಲ.
ಅದು competence ಮೌನ. Corridor ಕೊನೆಯಲ್ಲಿ ಅವರು ಕುಳಿತಿದ್ದರು.
ಆಚಾರ್ಯ ಸುಶ್ರುತ.
ಬಿಳಿ marbleನಲ್ಲಿ. ಶಾಂತವಾಗಿ. ಮೊದಲ ಆಶ್ಚರ್ಯ statue ಅಲ್ಲ. ಜಾಗ. ಗಂಗಾ ತೀರದ surgeon.
Melbourne basement. ಎರಡರ ನಡುವೆ ಅಂತರ ಎರಡು ಸಾವಿರದ ಐನೂರು ವರ್ಷ.

ಈ statue ಇಲ್ಲಿ accident ಅಲ್ಲ. ಪ್ರಸಿದ್ಧ ಭಾರತೀಯ surgeon Dr K M Cherian ಇದನ್ನು donate ಮಾಡಿದ್ದಾರೆ. Surgical training area ಹತ್ತಿರ ಇದನ್ನು ಇಟ್ಟಿದ್ದಾರೆ. ಒಬ್ಬ professor ಹೇಳಿದಂತೆ, ಅನೇಕ ಭಾರತೀಯ ವೈದ್ಯರು ವಿಶೇಷವಾಗಿ ಸುಶ್ರುತನನ್ನು ನೋಡಲು ಬರುತ್ತಾರಂತೆ.
ಆ ಕ್ಷಣದಲ್ಲಿ ಒಂದು ಪ್ರಶ್ನೆ ಬಂತು.
ನಾವು ಕೆಲವೊಮ್ಮೆ ನಮ್ಮ historyಯನ್ನು textbooksಗಳಲ್ಲಿ ಇಡುತ್ತೇವೆ. ಇವರು ಅದನ್ನು corridorsಗಳಲ್ಲಿ ಇಟ್ಟಿದ್ದಾರೆ. ಪಕ್ಕದಲ್ಲೇ museum section. Glass cabinets. Old forceps. Strange looking clamps. Steel instruments. ಕೆಲವು bones. ಕೆಲವು labels. Medicine history ಸಾಮಾನ್ಯವಾಗಿ noisy ಆಗಿರುತ್ತದೆ. ಇಲ್ಲಿ ಅದು ಪಿಸುಗುಟ್ಟುತ್ತಿತ್ತು.
ಆಚಾರ್ಯ ಸುಶ್ರುತರನ್ನು ನಾವು ಸುಲಭವಾಗಿ “Father of Surgery” ಎಂದು ಹೇಳಿಬಿಡುತ್ತೇವೆ.
ಆದರೆ ಆ ಹೆಸರಿನ ಹಿಂದೆ curiosity ಇದೆ.
Blood ಇದೆ. Pain ಇದೆ. Trial and error ಇದೆ.
ಸುಮಾರು 2500 ವರ್ಷಗಳ ಹಿಂದೆ ಅವರು fractures, cataracts, stitches, bandages, instruments, dissection ಬಗ್ಗೆ ಬರೆದಿದ್ದರು.
ಆದರೆ ಅವರ ದೊಡ್ಡ idea surgery ಮಾತ್ರ ಅಲ್ಲ.
Practice.
ವಿದ್ಯಾರ್ಥಿಗಳು ಮೊದಲು practice ಮಾಡಬೇಕು.
ನಂತರ patients ಮುಟ್ಟಬೇಕು.
ಇಂದು medical students dummy models, artificial body parts, simulation labsಗಳಲ್ಲಿ ಮತ್ತೆ ಮತ್ತೆ practice ಮಾಡುತ್ತಾರೆ. ಆ idea ಹೊಸದಲ್ಲ. Location ಮಾತ್ರ ಬದಲಾಗಿದೆ.
ಅವರ ಮತ್ತೊಂದು ದೊಡ್ಡ ಆಸಕ್ತಿ ಮೂಗು.
ಹೌದು.
ಅವರು ಮೂಗಿನ ಪುನರ್ನಿರ್ಮಾಣದ ವಿಧಾನಗಳನ್ನು ವಿವರಿಸಿದ್ದರು. ಯುದ್ಧ. ಶಿಕ್ಷೆ. ಅಪಘಾತ.
ಮುಖದ ಒಂದು ಭಾಗ ಕಳೆದುಹೋದಾಗ, ಮೂಗು ಹಾನಿಯಾದಾಗ, ಹೆಚ್ಚಿನವರು “ಎಲ್ಲ ಮುಗಿಯಿತು” ಎಂದು ಯೋಚಿಸುತ್ತಾರೆ.
ಸುಶ್ರುತ ಮಾತ್ರ ಬೇರೆ ಪ್ರಶ್ನೆ ಕೇಳಿದರು.
“ಮತ್ತೆ ಕಟ್ಟಬಹುದೇ?”

1794ರಲ್ಲಿ British surgeons ಭಾರತದಲ್ಲಿ ಇದೇ techniques ನೋಡಿ publish ಮಾಡಿದರು. ನಂತರ plastic surgery historyನಲ್ಲಿ “Indian method” ಪ್ರವೇಶಿಸಿತು.
ಆ basement corridorನಲ್ಲಿ ನಿಂತಾಗ ವಿಚಿತ್ರ feeling ಬಂತು. Modern operating theatres. Simulation labs. Ancient surgeon. Marble statue. ಇವೆಲ್ಲ somehow ಒಂದೇ ಕಥೆಯ ಭಾಗಗಳಂತೆ ಕಾಣುತ್ತವೆ. ಹೊರಬರುವಾಗ ಆ ಮಹಿಳೆ ಮುಖ್ಯ ದ್ವಾರದವರೆಗೆ ನಮ್ಮ ಜೊತೆ ಬಂದರು.
Goodbye ಹೇಳಿದರು.
ಕೆಲವು ನಾಗರಿಕತೆಗಳು ಹೊಸ ಜ್ಞಾನವನ್ನು ಸೃಷ್ಟಿಸುತ್ತವೆ.
ಕೆಲವು ನಾಗರಿಕತೆಗಳು ಜ್ಞಾನವನ್ನು ಉಳಿಸಿಕೊಳ್ಳುತ್ತವೆ.
ಅಪರೂಪವಾಗಿ ಮಾತ್ರ ಕೆಲವು ನಾಗರಿಕತೆಗಳು ಎರಡನ್ನೂ ಮಾಡುತ್ತವೆ.
। ನಾಳೆಗೆ ।






0 Comments