ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳಿಗದು ಸೊಬಗು…ಮೆರಗು…

ಸುರೇಶ ತಂಗೋಡ

ಸೆರಗು…

ಬಿಚ್ಚಿ ಬಿತ್ತರಿಸಿದಾಗ
ಆಗಸದಷ್ಟು ವಿಶಾಲವಾದ
ಚುಕ್ಕೆ-ಚಿತ್ತಾರಗಳ
ರಂಗು
ಅವಳಿಗದು ಸೊಬಗು…ಮೆರಗು…

ಕಷ್ಟವೆಂದಾಗ
ಬಂದ
ಕಂಬನಿಯ ಒರೆಸಿದ್ದು,
ಉಡಿ ತುಂಬುವಾಗ ಕೈ ಮುಂದ
ಮಾಡಿದ್ದು
ಅದೇ ದಡಿ ಸೀರಿಯ ಸೆರಗು.

ತಂಡಿ ತಡೆದದ್ದು
ಜಮಖಾನ ಆದದ್ದು
ಸಾವಿರ ಕನಸುಗಳ
ಕoಡದ್ದು
ಅವ್ವನ ಆ ಹರಿದ ಸೆರಗು.

ಅವಳ ಸೆರಗಿನ ಚುಂಗಿನಲ್ಲಿ
ನೂರೆಂಟು ಕನಸುಗಳು
ಟಿಸಿಲೋಡೆದಿವೆ
ನನಸು ಆಗುವುದೋ ಇಲ್ಲವೋ
ಎಂಬುದೊಂದೇ ಅವಳ ಕೊರಗು.

‍ಲೇಖಕರು Admin

2 June, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading