ಡಾ. ಪ್ರಹ್ಲಾದ ಡಿ.ಎಂ
ಚಿಮಣಿ ಬುಡ್ಡಿ
ಎಲ್ಲರೂ ಎದ್ದಾಗ ನಾ ಸತ್ತಿದ್ದು
ಎಲ್ಲರೂ ಬಿದ್ದಾಗ ನಾ ಎದ್ದಿದ್ದು
ಬತ್ತಿಯೇ ನನ್ನ ಹೃದಯದ ನಾಡಿ
ನಾ ಮಾತ್ರ ಉಸಿರಾಡದ ಕೂರ್ಮೆ
ಮಳೆ ಬಂದರು ಬೀಸಿಲೇರಿದರು
ಸುಡುವ ಜ್ವಾಲೆಯನ್ನು ಉದರದಲ್ಲಿರಿಸಿ
ಬೆಳಕನ್ನು ಸೂಸುವ ನಾನು, ಕಂಡಿದ್ದು,
ನನ್ನ ಕತ್ತಲೆಗೂ ಟಂಕಕಟ್ಟಿ ಸುಂಕದ ವಸೂಲಿ ನಡೆದಿದ್ದಾಗ.
ನಮ್ಮೂರ ದರ್ಗಾದಲ್ಲಿ ಬೆಳಕ ಹರಸಿ
ಮೌಲನ್‌ಗಳ ಕುರಾನ್ ಪಠಟನೆಗೆ ಆಸರೆಯಾಗಿದ್ದು.
ದೇವಾಲಯದಲ್ಲಿ ಪುರಾಣ ಪಠಟನೆಗೆ
ಜಗಲಿಯೇರಿ ಅಂಧಕಾರ ದೂರಮಾಡಿದ್ದು ನೀನೆ,
ರಾಮ ಮಂದಿರದಲ್ಲಿ ಲೂಟಿ ಕೋರರಿಗೆ
ಆವರಿಸಿದ ಕತ್ತಲೆಯ ನಳಿಕೆ ಕಟ್ಟಿದ್ದು ನಿನ್ನಿಂದಲೆ.
ಬುದ್ಧನ ಕಾಲುದಾರಿಗೆ ಬೆಳಕಾದೆ
ಅಲ್ಲನ ಹಜ್‌ಯಾತ್ರೆಗೆ ದಾರಿ ತೋರಿದೆ
ರಾಮ ರಹೀಮರ ಪ್ರಾರ್ಥನೆಗೆ ನಿಷ್ಕಲ್ಮಶನಾದೆ
ಬೆಳಕು ಹರಿಸಿದ್ದು ಚಿಮಣಿ ಬುಡ್ಡಿಯೇ ಆದರೇ
ಆಂಧಕಾರ ಆಜ್ಞಾನ ಸುಟ್ಟು ಬೆಳಕಿನ ಬಾಗಿಲು ತೆರೆದಿರುವೇ.
ನಮ್ಮೂರ ಹನುಮನ ಮದುವೆಯಲ್ಲಿ.
ಆರಮನೆಯ ರಾಜನ ವಿಲಾಸದ ಕೋಣೆಯಲ್ಲಿ
ಘಮಿಸಿದ್ದು ನೀನಾಲ್ಲವೆ.
ಮಹಾತ್ಮರಾದವರೆಲ್ಲರೂ ನಿನ್ನೊಂದಿಗೆ
ಕಾಲ ಕಳೆದದ್ದಕ್ಕೆ ಅಲ್ಲವೇ ಜ್ಞಾನವಂತರಾಗಿದ್ದು.
ನೀ ಮಾತ್ರ ಸುಟ್ಟು ಮಸಿಯಾದೆ
ನೊಂದವರ ಬಾಳಿಗೆ ಬೆಳಕಾದೆ.
ನನ್ನಜ್ಜಿ ತಾಸು ಗಟ್ಟಲೆ ಜಗಲಿ ಮ್ಯಾಲೆ ಕುಳಿತು.
ತನ್ನ ಬಾಳಿನ ಕಥೆಯನ್ನು ಹೇಳಿದ್ದು ಈ ಚಿಮಿನಿ ಬೆಳಕಲ್ಲೇ
ಪಾರವ್ವನ ಹೆರಿಗೆ ಬ್ಯಾನೆ ದೂರ ಮಾಡಿ
ಕೂಸಿಗೆ ಉಸಿರಿಟ್ಟು ಖುಷಿ ಕಂಡಿದ್ದು ನಿನ್ನಲ್ಲೇ.
ಗೌಡರ ಬಡ್ಡಿ ಚಕ್ರ ಬಡ್ಡಿಗೆ ಅಂತ್ಯವಾಡಿ
ಕರಿಯನ ಜೀತದ ಕತ್ತಲೆಗೆ
ಮುಕ್ತಿಯ ನಗು ನೋಡಿದ್ದು ನಿನ್ನ ಬೆಳಕಲ್ಲೇ.
ಅಂದು ನೀ ಸುಟ್ಟು ಬೆಳಕು ನೀಡಿದ್ದಕ್ಕೆ
ಇಂದು ಚೋಮನ ಮನೆಯಲ್ಲಿ
ಬಣ್ಣ ಬಣ್ಣ ದೀಪಗಳು ಬೆಳಗುತ್ತಿವೆ.
ನೀ ಮಾತ್ರ ನೊಂದವರ ಬಾಳಿನ
ಬೆಳಕಾಗಿ ಸದಾ ಉರಿದು ಉರಿದು ಬೂದಿಯಾಗುವೆ||






0 Comments