ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಕತಿಯಲ್ಲಿ ಇಲ್ಲ ಗೌಪ್ಯತೆ

ಬೆತ್ತಲು 

–ಬಾಗೂರು ಮಾರ್ಕಾಂಡೇಯ

ತೆರೆದ ಹೃದಯಿ ಪ್ರಕತಿಯಲ್ಲಿ ಇಲ್ಲ ಗೌಪ್ಯತೆ
ಬೆರೆಯುತ್ತಿದೆ ಗಾಳಿಬೆಳಕು ಇಲ್ಲಿ ಎಲ್ಲ ಶುಭ್ರತೆ
ಕರೆದಂತಿದೆ ಒಲವೆ ಸನಿಹ ನಿಬ್ಬೆರಗ ಗಮ್ಯತೆ

ತಿಳಿ ನೀರಿನ ನಿಷ್ಕಲ್ಮಷ ಕೊಳ ಕಂಗಳಾಯಿತೆ
ಬಳಿಗೆಳೆವ ಸೂಜಿಗಲ್ಲ ಬಣ್ಣ ಸಂಜೆ ಎನಿಸಿತೆ
ನಳಿದೋಳನೆ ತೆರೆದ ಮರ ಬಳ್ಳಿ ಹೂ ನಕ್ಕಿತೆ

ಮುತ್ತಿಡುತಿರೆ ದುಂಬಿ ಹೂವ ಚೆಂದ ಹೆಚ್ಚಿತೆ
ಮತ್ತೇರಿಸದೆ ಬಿಡಲುಂಟೇನು ಚಿತ್ತ ತುಂಬಿತೆ
ಸುತ್ತೆತ್ತಲು ಕಮ್ಮಿನುತ್ಸವ ಹೂಬನವ ತಬ್ಬಿತೆ

ನಿರಾಭರಣ ಸುಂದರಿ ಪ್ರಕೃತಿ ಏನೊ ಧನ್ಯತೆ
ತಾರಾಲಯ ಇಳೆಯಾಗಿ ಸೋಜಿಗ ನಕ್ಕೆಂತೆ
ಹಾರಾಡಿವೆ ಆಸೆ ಹಕ್ಕಿ ಬಾನಲಿ ಹೊಸ ಕವಿತೆ

ಬೆತ್ತಲಿನ ಚೈತ್ರಚೆಲುವು ಋತುಗೀತೆ ಹಾಡಿತೆ
ಚಿತ್ತವೀಗ ಸೌಂದರ್ಯ ಖನಿ ಚಿತ್ರವಾಯಿತೆ
ಮತ್ತೆಮತ್ತೆ ನೋಡಲಿನ್ನು ಕುತೂಹಲ ಹೆಚ್ಚಿತೆ

ಎನಿತು ವಿಸ್ಮಯವೆ ಚಿತ್ರರೂಪು ನನಗೆ ದಕ್ಕಿತೆ
ಕನಿಕರದ ಮಡಿಲ ಜತನ ಸಗ್ಗವಿಯೆ ಆಯಿತೆ
ತನಿವೆಳಕೆ ಮಿಂದ ಸೊಗ ಮೌನಲಿಸಳನಿಸಿತೆ

‍ಲೇಖಕರು Admin

25 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading