ತೆಲುಗು ಮೂಲ: ಕಂಚರಾನ ಭುಜಂಗರಾವು
ಕನ್ನಡಕ್ಕೆ: ಮೋದೂರು ತೇಜ
ದೊಡ್ಡ ಬೆರಳು ಯಾರದು?
ದೇಶದ ಕೊರಳ ಮೇಲೆ
ಕತ್ತಿ ಇಟ್ಟು ಕುಳಿತಿದೆ
ವೇಷ ಭಕ್ತಿ
ಜಾತಿ ಕುತ್ತಿಗೆಯ ಸುತ್ತಾ
ನೇಣು ಹಗ್ಗದಂತೆ ಬಿಗಿದುಕೊಂಡಿದೆ
ಮುಸುಕಿನ ಶಕ್ತಿ
ಪ್ರಶ್ನೆಯನ್ನು ಹೂತುಹಾಕುವಂಥ
ಸುಡುಗಾಡಾಗಿದೆ
ಜೈಲು
ಸಹಜ ವನಸಿರಿಯನು ಗುಡಿಸಿ
ಚಟ್ಟಕ್ಕೆ ಕಟ್ಟುವ ಕಟ್ಟಿಗೆಗಳಾಗಿವೆ
ಪ್ರಾಜೆಕ್ಟ್ ಗಳು
ಮನುಷ್ಯ ಮನುಷ್ಯರ ಮಧ್ಯೆ
ಮಹಾ ಸಮುದ್ರಗಳಾಗಿವೆ
ವಿಶ್ವಾಸಗಳು
ಯಾವುದಕ್ಕೂ ಒಳ್ಳೆಯದೆಂದು
ಯಾವಾಗ ಅಗತ್ಯ ಬೀಳುತ್ತದೊ ಎಂದು
ಗೇಟುಗಳನ್ನು
ತೆರೆದುಕೊಂಡೇ ಇದೆ
ಸ್ಮಶಾನ
ಮತದಾರನೆ! ಎಷ್ಟು ದೊಡ್ಡ ಕುತಂತ್ರ
ಎಲ್ಲವೂ ನಿನ್ನಿಂದಲೇ
ನಿನ್ನ ಬೆನ್ನಿನಲ್ಲಿ
ಇಳಿದ ಕತ್ತಿ ಯಾರದೊ
ಹಿಡಿ ಮೇಲೆ ಕೈ ಮಾತ್ರ ನಿನ್ನದೇ
ನಿನಗೆ ತಿಳಿಯದಂತೆ ನಿನ್ನನ್ನೇ
ದೋಷಿಯಾಗಿ, ಸಂತ್ರಸ್ತನನ್ನಾಗಿ
ಮಾಡಿದ
ಕಾಣದ ದೊಡ್ಡ ಬೆರಳು
ಯಾರದು?






0 Comments