ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಗದು ಚಹರೆ ನಮ್ಮಲ್ಲಿ ಮಾತ್ರ

ಬಸವಣ್ಣೆಪ್ಪ.ಕಂಬಾರ

ನಗದು ಚಹರೆ

ಯಾಕೋ ವಾಕರಿಕೆ
ನಿನ್ನ ಭಾವಚಿತ್ರ, ಕುಣಿತ
ಮೊಬೈಲ್ ಕಂಡ್ಯಾಳದಾಗ ನೋಡಿ ನೋಡಿ
ಬ್ಯಾಸರಕಿ
ಒಮ್ಮೇ ಊರಿಗೆ ಬಾ ಹುಡುಗಾ
ಹಣುಮಪ್ಪನ ಗುಡಿ ನಗಾರಿ ಕ್ವಾಣೆದಾಗ ಕುಂತ
ಪಾಡ ಹುಂಚಿಕಾಯಿಗಿ ಉಪ್ಪ ಖಾರ ಹಚ್ಚಿಕೊಡತಿನಿ
ಮುಟಿಗಿ ರೊಟ್ಟಿ ಮುದ್ದ ಮಾಡಿ ತಿನ್ನಿಸತಿನಿ
ನಾ ನಿನ್ನ ಚಿಗರ ಮೀಸಿ ಎಣಿಸತಿನಿ
ನೀ ನನ್ನ ಮುಗಳ ನಗಿ ಕಲ್ತಕೋ..
ಮುಂಗುರುಳು ಗಲ್ಲದಮ್ಯಾಲ ಉಳ್ಳಾಡುವಾಗ
ಗುಲಗುಚ್ಚಿ ಆದುವಂತೆ ಮೈಮ್ಯಾಲ ಬಿದ್ದರ
ಗುಟ್ಟಾಗಿರಲಿ ಅಸಲಿಯತ್ತು,
ಒಬ್ಬರಿಗೊಬ್ಬರ ತಿನ್ನಿಸಕೊಂತ
ಹೊಳಿಮ್ಯಾಲ ಹಾರಾಡುವ ಹಕ್ಕಿ ಎಣಿಸೊನ
ಎಂಟೆತ್ತಿನ ಕಣದಾಗ ಅಂಗಾತ ಮಲಗಿ ಚುಕ್ಕಿ ಎಣಿಸೋನ
ಹಳ್ಳಾಗ ಏನೈತಿ ಅನಬ್ಯಾಡ
ನಿನ್ನ ಮಳ್ಳ ಹುಡಿಗಾದ್ರು ಅದಾಳಿಲ್ಲ…?
ಬಾ ಹುಡುಗಾ ಒಮ್ಮಿ ಊರಿಗೆ
ಯಾವ ದೇವರು ಬದಲಾಗಿಲ್ಲ ಕಟ್ಟಡ ಬಿಟ್ಟು
ಮಂತ್ರ ಹೇಳುವ ನಿನ್ನ ತುಟಿಯೊಳಗ ಸಿಗರೇಟ ಸಿಕ್ಕೋಂಡೈತಿ
ಅಮೆಜಾನ್ ಸ್ವಿಗ್ಗಿ ತಲಿಯೇರಿದ ಮುಳ್ಳಿನ ಕಿರೀಟಗಳು
ಓಣಿ ತಿರುವು, ನಾಗರ ಹಾವೂ, ಪಾತರಗಿತ್ತಿ ಕಣಕಪ್ಪಲಿ
ಗುಬ್ಬಿ ಕಾಗಿ ಯಾರು ವೈರ ಕಟಕೊಂಡಿಲ್ಲ,
ಮಾತು ಬಿಟ್ಟಿಲ್ಲ
ಅದಕ ಒಮ್ಮ ಊರಿಗಿ ಬಾ ಹುಡುಗ
ಅಗದಿ ನಗದು ಚಹರೆ ನಮ್ಮಲ್ಲಿ ಮಾತ್ರ….
ನಿನ್ನ ಏಐ ಮೂಲಕ ಚೆಕ್ ಮಾಡಿಕೊಳ್ಳಬಹುದು…

‍ಲೇಖಕರು Admin

2 June, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading