ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೆರೆದಷ್ಟೇ ಬಾಗಿಲು!

-ವೀರೇಂದ್ರ ರಾವಿಹಾಳ್

ಬಾಗಿಲುಗಳು

ಮೊದಮೊದಲಿಗೆ
ಈ ಬಾಗಿಲುಗಳಾದರೂ
ಎಲ್ಲಿದ್ದವು?

ಎಲ್ಲೆಡೆಯೂ ಬರೀ
ಬಯಲೇ
ಕೇವಲ
ಬಯಲೆಂದರೆ ಬಯಲು ಮಾತ್ರವೇ!

ಆಗೆಲ್ಲಾ
ಹೊರಗೂ ಬೆಳಕು
ಒಳಗೂ ಬೆಳಕು

ಮತ್ತೊಮ್ಮೆ
ತೆರೆದಷ್ಟೇ ಬಾಗಿಲು!

ಮಗದೊಮ್ಮೆ
ಬೇಕೆನಿಸಿದಷ್ಟು ಕಾಲ ಮಾತ್ರ
ತೆರೆದಿರುತ್ತಿದ್ದ ಬಾಗಿಲುಗಳು

ಸದಾ ಕಾಲ
ಕೆಲವು
ಬಿಮ್ಮನೆ
ಕದವಿಕ್ಕಿಕೊಂಡೇ ಇರುತ್ತಿದ್ದ
ಬಾಗಿಲುಗಳು!

ವಿಚಿತ್ರವೆಂದರೆ
ಇನ್ನೂ ಕೆಲವು
ತಮ್ಮಿಚ್ಛೆಯಂತೆ
ಬೇಕೆಂದಾಗ ತೆರೆದುಕೊಂಡು
ಬೇಡವಾದಾಗ
ರಪ್ಪೆಂದು ಮುಖದ ಮೇಲೆ ಹೊಡೆದಂತೆ
ಮುಚ್ಚಿಕೊಂಡುಬಿಡುತ್ತಿದ್ದವು!

ಇಂತಿಪ್ಪ
ಬಾಗಿಲುಗಳು
ತೆರೆದುಕೊಂಡಾಗ ಒಂದು ಕಥೆ
ಮುಚ್ಚಿಕೊಂಡಾಗ ನೂರಾರು ಕಥೆಗಳು!

ಬಯಲೀಗ
ಕೇವಲ ಬಯಲಲ್ಲ
ಬಯಲ ತುಂಬಾ ಕಥೆಗಳೇ ಕಥೆಗಳು…

‍ಲೇಖಕರು Admin

2 June, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading