ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Pic by Aneek Roy
ಮಹಾಮನೆ ಅಂಕಣ – ಮುತ್ತು ರತ್ನಗಳ ಮಡಿಲಿಗೆ ಮೊಗೆಮೊಗೆದು ಸುರಿದ ಹಾಗೆ…
ಮಲ್ಲಿಕಾರ್ಜುನ ಮಹಾಮನೆ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...
ಪಾದರಸದಂತಹ ‘ಪುಕ್ಸಟ್ಟೆ ಲೈಫು’
ಎಂ ಎನ್ ಮಹಿಪಾಲರೆಡ್ಡಿ ಸೇಡಂ ʻಚಲನಶೀಲತೆʼಯನ್ನು ಬೊಗಸೆಯಿಂದ ಬಗೆದು ಬಗೆದು ಕೊಟ್ಟದ್ದು ಎಂಬುದಕ್ಕೆ ʻಪುಕ್ಸಟ್ಟೆ ಲೈಫುʼ ಸಿನಿಮಾದ ಕ್ರಿಯಾಶೀಲತೆಯೇ ಕಾರಣ. ʻಪುಕ್ಸಟ್ಟೆ ಲೈಫುʼ ಸಿನಿಮಾ ತುಂಬೆಲ್ಲಾ ʻಚಲನಶೀಲತೆʼ ತುಂಬಿಕೊಂಡಿದೆ. ಎಲ್ಲೂ ʻಪುಟ್ಟʼ ಗ್ಯಾಪುಗಳೂ ಇಲ್ಲ. ಬಿಟ್ಟೂ ಬಿಡದಂತೆ ನೋಡಬೇಕೆಂಬ ʻಭಾವʼವಂತೂ ಬರುತ್ತದೆ....
ಪಿ ಚಂದ್ರಿಕಾ ಅಂಕಣ- ಒಂದೊಂದು ಮನೆಯಲ್ಲೂ ಒಂದೊಂದು ಕತೆ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Pic by Wayne Spicer
ಗೆಳೆಯನ ಸಿನೆಮಾ ನೋಡಲು ಬಂದ ಸಂಚಾರಿ ವಿಜಯ್…
ಒಂದು ಸೀಟಿನ ಮೇಲೆ ಸಂಚಾರಿ ವಿಜಯ -'ಅವಧಿ' ಟೀಮ್ ಚಿತ್ರ: ಪ್ರೀತಿ ನಾಗರಾಜ್ ʻಆರು ತಿಂಗ್ಳು ಯಾರಿಗೂ ಕಾಣಿಸದಿರುʼ ಡೈಲಾಗ್ ಫುಲ್ ವೈರಲ್ʻಸೀಟು ಕಾಯ್ದಿರಿಸಿʼ ಸಂಚಾರಿ ವಿಜಯಗೆ ʻಗೌರವʼ ʻಕಾಯ ಅಳಿದಿದೆಕಾಯಕ ಉಳಿದಿದೆʼ ಇದು ಸಂಚಾರಿ ವಿಜಯ ಮತ್ತು ಆತನಿಲ್ಲದ ಈ ಹೊತ್ತಿನಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ.. ಈ ಕಾರಣಕ್ಕೆ ತಕ್ಷಣ...
ನನ್ನ ಪ್ರತಿರೂಪಿಗೆ ಪ್ರಾತಃವಂದನೆ!…
ಜೆ ವಿ ವಿ ಮೂರ್ತಿ ನೀನು ನನ್ನ ಭಾಗವಾಗಿ ನನ್ನೊಳಗೇ ಇದ್ಧರೂ ಎಷ್ಟು ಸಮಯವಾಗಿಹೋದವು ನಿನ್ನ ಜತೆ ಕುಶಲೋಪರಿ ವಿನಿಮಯಮಾಡಿಕೊಂಡು!....ಹುಟ್ಟಿದಾಕ್ಷಣದಿಂದ ನನ್ನ ನೆರಳಾಗಿ, ನನ್ನ ಧ್ವನಿಯಾಗಿ, ಸಾಕ್ಷಿಯಾಗಿ, ಬೀಟ್ ಪೋಲೀಸನಾಗಿ ನನಗೆ ತಡೆಯಾಗದೆ, ಅಡಚಣೆಯಾಗದೆ ಈ ಗೂಗಲ್ ಗೀಗಲ್ ಮ್ಯಾಪು, ಗೂಗಲ್ ಸಹಾಯಕ, ಫೋನು, ಮೊಬೈಲ್ ಫೋನು...ಇನ್ನೂ...
ಸತೀಶ ಕುಲಕರ್ಣಿ ಓದಿದ ‘ನಾನು ನನ್ನ ಕೇರಿ’
ಕೇರಿಯಿಂದ ಕಂಡ ಜಗತ್ತು.. ಸತೀಶ ಕುಲಕರ್ಣಿ ಬೆಳದಿಂಗಳ ಕನ್ನಡಿಯಲ್ಲಿನೆನಪಾಗಿ ಕಾಣಿಸಿಕೊಂಡಳುನನ್ನ ಬಾಲ್ಯದನೆನಪುಗಳೊಂದಿಗೆ ಅಮ್ಮಾ ‘ನಾನು ನನ್ನ ಕೇರಿ’ ಕವನ ಸಂಕಲನದ ಕಟ್ಟಕಡೆಯ ಅಮ್ಮಾ ಎಂಬ ಕವಿತೆಯ ಸಾಲುಗಳಿವು. ಬೆಳದಿಂಗಳನ್ನು ಕನ್ನಡಿಯಾಗಿಸಿದವರು ಎನ್. ಕೆ. ಇಬ್ಬನಿ, ನಡಂಪಲ್ಲಿ ಎಂಬ ಕವಿ. ಇಷ್ಟು ಹೇಳಿದರೆ ಕವಿಯ ಬಗ್ಗೆ...
ದುರ್ಗಾಪುರದ ‘ವ್ಯಾಸ’ ಪಥ
'ವ್ಯಾಸ ಎಂದರೆ ವಿಚಾರ; ವಿಚಾರ ಎಂದರೆ ವ್ಯಾಸ' ಸಂತೋಷ್ ಅನಂತಪುರ ಚಿತ್ರ : ಪ್ರತಿಮಾ ಎಸ್ ವಸ್ತು, ವಿಷಯ, ಬಂಧಗಳು ಯಾಕೆ ಇಷ್ಟವಾಗುತ್ತವೆ ಎನ್ನುವುದಕ್ಕೆ ಯಾವುದೇ ರೀತಿಯ ಖಚಿತ ಕಾರಣಗಳು ಬೇಕಾಗಿರುವುದಿಲ್ಲ. ಇಷ್ಟವಾಯಿತು ಅಷ್ಟೇ. ಅಂತರಂಗದ ಒಳ ಬೇಗುದಿಯು ಒಳಗೊಳಗೇ ಕುದಿಕುದಿದು ಸ್ಫೋಟಗೊಂಡು ವ್ಯರ್ಥವಾಗಬಾರದು. ಅಂತಹದ್ದೊಂದು...
ಜಯಶ್ರೀ ಬಿ ಕದ್ರಿ ಹೊಸ ಕವಿತೆ- ಜ್ವರ ಒಳ್ಳೆಯದು…
ಜಯಶ್ರೀ ಬಿ ಕದ್ರಿ 'ಜ್ವರ ಒಳ್ಳೆಯದು'ವೈದ್ಯರೆಂದಾಗೆಲ್ಲಅರ್ಥವಾಗಿರಲಿಲ್ಲಈಗ ಗೊತ್ತಿದೆಜ್ವರ ಒಳ್ಳೆಯದು ಜೀವಕೋಶಗಳಲ್ಲಿಪ್ರತಿರೋಧ ಹೆಚ್ಚಾಗಿಚೈತನ್ಯ ಇಷ್ಟಿಷ್ಟೆಇಂಚಿಂಚು ಹೆಚ್ಚುತ್ತಜ್ವರ ಒಳ್ಳೆಯದು ಜ್ವರವೆಂದರೆಒಳ ಕುಸಿತನಿರೀಕ್ಷೆಗಳ ಭಾರಸಾವ ನೆರಳಿನ ನಶೆಇಳಿಯುವುದೇ ಆದಲ್ಲಿಜ್ವರ ಒಳ್ಳೆಯದು ಅವಮಾನ ನಿರ್ಲಕ್ಷ್ಯನೋವಿಗದ್ದಿದ...
ಶ್ರೀನಿವಾಸ ಪ್ರಭು ಅಂಕಣ – ಎಲ್ಲರೂ ನನ್ನನ್ನೇ ನೋಡಿ ನಗುತ್ತಿರುವಂತೆ ಭ್ರಮೆ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
Pic by Jaime
ಶಿಕ್ಷಣ ಹಾಗು ಸಂಶೋಧನೆಯ ನವ ಉದಾರೀಕರಣದ ಪರಿಣಾಮಗಳು
ಪ್ರನುಷಾ ಕುಲಕರ್ಣಿ ಪಿ.ಎಚ್.ಡಿ ಪದವಿ ಪಡೆಯುವುದು ಜ್ಞಾನಾರ್ಜನೆಗಾಗಿ ಎಂದು ಚಿಕ್ಕವಳಿದ್ದಾಗಿನಿಂದಲೂ ಅಂದುಕೊಂಡಿದ್ದೆ. ಶಿಕ್ಷಕರಾಗಿ ಕೆಲಸ ಮಾಡುವುದು ಒಂದು ಉದಾತ್ತ ವೃತ್ತಿಯಲ್ಲಿ, ಸಮಾಜ ಸೇವೆಯಲ್ಲಿ ತೊಡಗುವುದು ಎಂದು ನಂಬಿದ್ದೆ. ಶಿಕ್ಷಕರನ್ನು ದೇವರ ರೂಪಗಳೆಂದು ನಂಬಿದ್ದೆ. ಈವಾಗ ಇದೆಲ್ಲ ನೆನಪಿಗೆ ಬಂದರೆ, ನಾನು...
ಹಳೆಮನೆ ರಾಜಶೇಖರ ಓದಿದ ‘ಲೋಕರೂಢಿಯ ಮೀರಿ’
ಸಮಚಿತ್ತದ ಸಂಶೋಧನೆ ಹಳೆಮನೆ ರಾಜಶೇಖರ ಎ. ಎನ್. ಮೂರ್ತಿರಾಯರು ಕನ್ನಡ ನಾಡಿನಲ್ಲಿ ವೈಚಾರಿಕ, ವೈಜ್ಞಾನಿಕ ಪ್ರಜ್ಞೆ ಮೂಡಿಸಿದ ಧೀಮಂತರು. ದೇವರ ಅಸ್ತಿತ್ವ ಕುರಿತ ಅವರ ಚಿಂತನೆ ನಾಡಿನಲ್ಲಿ ಹೊಸ ಜಿಜ್ಞಾಸೆಯನ್ನು ಹುಟ್ಟು ಹಾಕಿತು. ದೇವರ ಹೆಸರಲ್ಲಿ ದಂದೆ ಮಾಡುತ್ತಿದ್ದ ಕರ್ಮಠವಾದಿಗಳಿಗೆ ವೈಚಾರಿಕತೆಯ ಅಂಕುಶವೂ ಆಯಿತು. ಇದು...
ಜಾನಪದ ಕೃತಿಗಳ ಬಹುಮಾನಕ್ಕೆ ಆಹ್ವಾನ…
ಕರ್ನಾಟಕ ಜಾನಪದ ಅಕಾಡೆಮಿಯು ದಿನಾಂಕ 01. 01. 2020 ರಿಂದ 31. 12. 2020 ರವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡಿರುವ ಕನಿಷ್ಟ 150 ಪುಟಗಳಿಗೂ ಮೇಲ್ಪಟ್ಟ ಮಿತಿಯಲ್ಲಿರುವ1) ಜನಪದ ಗದ್ಯ2) ಜನಪದ ಪದ್ಯ3) ಜನಪದ ವಿಚಾರ-ವಿಮರ್ಶೆ- ಸಂಶೋಧನೆ4) ಜನಪದ ಸಂಕೀರ್ಣ ಈ ನಾಲ್ಕು ಪ್ರಕಾರಗಳ...
ಉದಯ ಗಾಂವಕಾರ ಹೊಸ ಕವಿತೆ- ಹಿಂತಿರುಗಿ ಬಂದಳು…
ಉದಯ ಗಾಂವಕಾರ ಮನೆಯೊಳಗೆ ಏಕೆಬರುತ್ತಿಲ್ಲ ಎಂದದ್ದಕ್ಕೆಅಪ್ಪನ ಅಡುಗೆರುಚಿಯಾಗುತ್ತಿಲ್ಲವಾ?ಅಮ್ಮನ ಪ್ರಶ್ನೆ.ಮತ್ತೂ ಹಠ ಮಾಡಿದರೆ-ಕಾಗೆ ಮುಟ್ಟಿತು ನನ್ನ,ಸುಮ್ಮನಿರು ಎಂಬ ಗದರಿಕೆ.ಅಪ್ಪನನ್ನೇಕೆ ಎಂದೂಮುಟ್ಟುವುದಿಲ್ಲಆ ಹಾಳಾದ ಕಾಗೆ!-ನನ್ನ ಗೊಣಗಾಟಕ್ಕೆಅಮ್ಮನದು ಮುಗುಳ್ನಗು. ಆಕೆ ಭೂಮಿಯಂತೆ;ಹುಟ್ಟಿನೊಂದಿಗೇಅಷ್ಟೂ...
ಅಮೃತಾ ಹೆಗಡೆ ಅಂಕಣ- ಆವತ್ತು ಅಲ್ಲಿ ಆವರಿಸಿತ್ತು.. ಭಯ ಬೆರೆತ ವಿಶೇಷ ಶಿಸ್ತು…
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
Pic by Harmeet Singh
ಪ್ರತಿಭಾ ನಂದಕುಮಾರ್ ಅಂಕಣ- ಜೀವದ ಗೆಳೆಯರು ಪರಮ ಶತ್ರುಗಳಾಗಿದ್ದು
ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...
ಮುನವ್ವರ್ ಜೋಗಿಬೆಟ್ಟು ಓದಿದ ‘ಆಡು ಜೀವನ’
ಮುನವ್ವರ್ ಜೋಗಿಬೆಟ್ಟು 'ಆಡು ಜೀವಿದಂ' ಎಂಬ ಮಲಯಾಳಂ ಪುಸ್ತಕ ಯಾವ ಪೂರ್ವಾಪರಗಳಿಲ್ಲದೆ ಡಿಸಿ ಬುಕ್ಸ್ ನಲ್ಲಿ ಮೂರು ವರ್ಷಗಳ ಹಿಂದೆ ಆರ್ಡರ್ ಮಾಡಿದ್ದೆ. ಪುಸ್ತಕ ತಲುಪಿತು, ನನ್ನ ಆಮೆ ನಡಿಗೆಯ ಮಲಯಾಳಂ ಓದಿನಿಂದಾಗಿ ಪುಸ್ತಕವನ್ನು ಸಂಪೂರ್ಣವಾಗಿ ತಬ್ಬಿ ಓದಲು ಮನಸ್ಸು ತಯ್ಯಾರಾಗಲೇ ಇಲ್ಲ. ಹಾಗೇಯೇ ಓದುಗರಿಲ್ಲದೆ...
‘ಅಕ್ಷರ ಆರೋಗ್ಯ’ಅಭಿಯಾನ…
ಕುಶ್ವಂತ್ ಕೋಳಿಬೈಲು ಪುಸ್ತಕವೆಂಬ ಕಿಂಡಿಯಿಂದ ನಾವೆಲ್ಲರೂ ಪ್ರಪಂಚವನ್ನು ನೋಡುತ್ತೇವೆ. ಓದು ನಮ್ಮ ಬದುಕನ್ನು ಮತ್ತು ವಿಚಾರಗಳನ್ನು ವಿಸ್ತರಿಸುತ್ತದೆ. ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸವಿರುವವರು ಬಹಳಷ್ಟು ಜನರಿದ್ದಾರೆ. ಕೆಲವರಂತೂ ಒಂದು ವಿಮಾನ ಪ್ರಯಾಣದಲ್ಲಿ ಅಸಕ್ತಿಯಿರುವ ಒಂದು ಸಣ್ಣ ಪುಸ್ತಕವನ್ನು ಸಲೀಸಾಗಿ...





















