ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬಸವರಾಜ ಬೀಳಗಿ ಕವಿತೆ- ನನ್ನೂರಿನ ಗೋರಿ…
ಬಸವರಾಜ ಬೀಳಗಿ ನನ್ನೂರಿನ ಗೋರಿಗಳಿಗೂ ಗಾಯದ ಗುರುತುಗಳಿವೆ.ಸುಣ್ಣ ಬಳಿದ ಗೋಡೆಗಳ ಮೇಲೆ ಹಸಿ ರಕ್ತದ ಕಲೆಗಳಿವೆ. ಅದೋ ಅವನು;ಗರಿಗರಿ ಪಿತಾಂಬರ ತೊಟ್ಟು ಮೀಸೆ ತಿರುವಿನ್ಯಾಯ ಹೇಳಿದ ಕಚ್ಚೆ ಹರುಕನೊಬ್ಬಗೋರಿಯೊಳಗಿನಿಂದ ಇಣುಕುತ್ತಿದ್ದಾನೆ. ಇಲ್ಲೊಬ್ಬಳು ಕನ್ಯೆ;ಯಾರದೋ ತೊಡೆಯ ಸಂಧಿಯವಾಂಛೆಗೆ ಸವೆದುತನ್ನ ಸೌಂದರ್ಯ ಶಪಿಸುತ್ತಾರಕ್ತದ...
ಸರೋಜಿನಿ ಪಡಸಲಗಿ ಅಂಕಣ- ಬಿಸಿಲಿನ ಝಳಾ ಇಣಕಲಿಕ್ಕೆ ಸಂದs ಬಿಟ್ಟಿಲ್ಲ…
ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...
ಗೀತಾ ಎನ್ ಸ್ವಾಮಿ ಕವಿತೆ – ಅನುಗಾಲದ ಗುಟುಕು…
ಗೀತಾ ಎನ್ ಸ್ವಾಮಿ ನೆನಪುಗಳೆ ಸಾಕುಬೆಚ್ಚಗಿರಲುನಿನ್ನೆದೆಯ ಗೂಡೇ ಬೇಕಿಲ್ಲ ಸದ್ದಾಗಲೇ ಬೇಕಿಲ್ಲಮನಸೊಳಗೆ ಮಿಸುಕಾಡದೆಇರುವುದಷ್ಟೆ ಸಾಕು ಹಾಸಿಗೆ ತುಂಬಾ ನಿನ್ನಬೆನ್ನ ಬೆವರ ಘಮಲೆ ಇರುವಾಗಹೂ ಗಳ ಪರಿಮಳ ಬಯಸಲಾರೆ ಕಾವುಗಟ್ಟಿದ ಅಪ್ಪುಗೆಯಧ್ಯಾನದಲಿಇಬ್ಬನಿಗೇನು ಕೆಲಸ ಚಳಿಯಾಗಲಿ ಬಿಡು;ಬೆಚ್ಚಾಗಾಗುವ ಬಯಕೆಗಳು ಹುಟ್ಟಲು ಪಿಸು...
Art by Ramesh Gujar
ಚಳಿಯ ಹಾಡು ಪಾಡು…
ಕಂ ಕ ಮೂರ್ತಿ ಪಾರಿಜಾತದ ಗಿಡದಲ್ಲಿ ಹೂ ಕಡಿಮೆ ಆಗಿದೆ. ಹಾಲು ಚೆಲ್ಲಿದಂತೆ ಕರಿ ಡಾಂಬರು ರಸ್ತೆಯನ್ನು ತುಂಬಿ ಬೀಳುತ್ತಿಲ್ಲ, ಅಲ್ಲಲ್ಲಿ ರಸ್ತೆ ಅಂಚಿನಲ್ಲಿ ಒಂದೊಂದು ಹೂವುಗಳು. ಅದನ್ನು ಸಂಗ್ರಹಿಸಲು ಬರುವವರೂ ಕಡಿಮೆ ಆಗಿದ್ದಾರೆ. ಮೊದಲೆಲ್ಲ ಬೆಳಿಗ್ಗೆ ಆರಕ್ಕೆ ಬರುತ್ತಿದ್ದವರು ಈಗ ಏಳಾದರೂ ಬರುವುದಿಲ್ಲ. ಚಳಿ ಹಾಗೆ ತಣ್ಣಗೆ...
ತಮ್ಮಣ್ಣ ಬೀಗಾರ ಕಂಡಂತೆ ‘ಒಳ್ಳೆಯ ದೆವ್ವ’
ಗ್ರಾಮೀಣ ಸೊಗಡಿನ 'ಒಳ್ಳೆಯ ದೆವ್ವ' ತಮ್ಮಣ್ಣ ಬೀಗಾರ ಕತ್ತಲು ತುಂಬಿದ ಕಾಳರಾತ್ರಿಯಲ್ಲಿ ಕಾಡಿನ ದಾರಿಯಲ್ಲಿ ನಾವು ಯಕ್ಷಗಾನ ನೋಡುವುದಕ್ಕಾಗಿ ನಡೆಯುತ್ತಿದ್ದೆವು. ಅಂತಹ ರಾತ್ರಿಯಲ್ಲಿ ನಡೆಯುತ್ತಿದ್ದಾಗ ಆಗ ಊರ ತುಂಬೆಲ್ಲ ಮಾತಾಡಿಕೊಳ್ಳುತ್ತಿದ್ದ ದೆವ್ವದ ನೆನಪು ತಾನೇ ತಾನಾಗಿ ಬರುವುದೂ ಇತ್ತು. ಆಗ ಕಾಡಿನ ದಾರಿಯು ಒಂದು...
ತೇಜಸ್ವಿ ಮಾಯಾಲೋಕದಲ್ಲಿ ಹೀಗೊಂದು ಸುತ್ತಾಟ…
ಹರೀಶ ಕೋಳ್ಗುಂದ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅನ್ನೋದು ನಾನು ಬಾಲ್ಯದಿಂದ ಅಂಟಿಸಿಕೊಂಡು ಬಂದ ಒಂದು ಗೀಳು. ವ್ಯಕ್ತಿಯಾಗಿಯೂ, ವ್ಯಕ್ತಿತ್ವವಾಗಿಯೂ ಅತ್ಯಾಕರ್ಷಕವೆನಿಸುವ ಇವರ ಬರವಣಿಗೆ ಯಾರಲ್ಲಾದರೂ ಓದಿನ ಹುಚ್ಚು ಹಿಡಿಸಲಿಲ್ಲ ಅಂದರೆ ಅವರು ಖಂಡಿತ ಮನೋವಿಕಲರೇ ಸರಿ. ಇವರನ್ನು ಕಣ್ಣಾರೆ ಕಾಣಲಾಗದ್ದು ನನ್ನ ಒಂದು ದೌರ್ಭಾಗ್ಯವೇ...
ಸತ್ಯಪ್ರಕಾಶ್ ಎಂ ಆರ್ ಕವಿತೆ- ಬೆರಗುಗಣ್ಣಿನಲೊಂದು ಕಳೇಬರ…
ಸತ್ಯಪ್ರಕಾಶ್ ಎಂ ಆರ್ ನಿತ್ಯಹರಿದ್ವರ್ಣದ ಕಾಡುಕಾಡಿನ ನಡುವೆ ಒಂದು ಸುಟ್ಟ ಮರಬೆರಗುಗಣ್ಣಿನಲೊಂದು ಕಳೇಬರನೀರವ ಆಕಾಶದಲಿ ಸತ್ತ ಚಂದಿರಗರಬಡಿದ ಚಿತ್ತದೊಳಗೆ ಸ್ಮೃತಿ ಸಂಚಾರ ವಿಚ್ಚಿದ್ರಗೊಂಡ ಹೊಂಗನಸುದಿಗಿಲು ಹುಟ್ಟಿಸುವ ದಾಹಮಹಾಸಾಗರದ ತೀರದಲಿದಿಕ್ಕು ಕಾಣದೆ ನಿಂತ ಒಂಟಿ ದೇಹಶೂನ್ಯದಂಚಿನಲ್ಲೆಲ್ಲೋ ಸೂರ್ಯಕಿರಣ ಗೆದ್ದಲು ಹಿಡಿದ...
ಯಮುನಾ ಗಾಂವ್ಕರ್ ಕವಿತೆ – ಇತಿಹಾಸವೆಂದರೆ…
ಯಮುನಾ ಗಾಂವ್ಕರ್ ಇತಿಹಾಸವೆಂದರೆಶಿಲೆಯ ಶಿಲ್ಪದೊಳಗೆದ್ದ ಕಲೆ,ತಾಳೆ ಪತ್ರಾಗಾರದೊಳು ಮೂಡಿದ ಅಕ್ಷರ,ರಾಜನೂ ವೈರಿ ರಾಜನೂ ಮಾಡಿ ಮಡಿದ ಕಾಳಗಇಷ್ಟೇ ಅಲ್ಲ! ಇತಿಹಾಸವೆಂದರೆ…ದಮನಿತರ ನೋವಿನ ಖಜಾನೆಒಣಗಿದ ಕಣ್ಣೀರ ಉಪ್ಪುಗಲ್ಲುಜೈಲು ಕಂಬಿಗಳ ತೊಳೆದ ಕಣ್ಣೀರುಇಷ್ಟೇ ಅಲ್ಲ! ಇತಿಹಾಸ ಎಂದರೆ,ದಾಳಿಕೋರರ ತುಕ್ಕುಹಿಡಿದ ಶಸ್ತ್ರಾಗಾರಕತ್ತಿಗೆ...
Pic by Koushik Patra
ಶಶಿಧರ ಹಾಲಾಡಿ ಓದಿದ ‘ನಮ್ಮಲ್ಲೆ ಮೊದಲು’
ಶಶಿಧರ ಹಾಲಾಡಿ ಈ ಸಂಕಲನದಲ್ಲಿರುವ, ಸುಲಭವಾಗಿ ಓದಿಸಿಕೊಳ್ಳುವ ಬರಹಗಳನ್ನು ಓದಿ ನಾನು ನಿಜಕ್ಕೂ ವಿಸ್ಮಯಪಟ್ಟಿದ್ದೇನೆ. ಈ ವಿಸ್ಮಯಕ್ಕೆ ಕಾರಣಗಳು ಹಲವು. ಮೊದಲನೆಯ ಮತ್ತು ಪ್ರಮುಖ ಕಾರಣವೆಂದರೆ, ದಿನನಿತ್ಯದ, ಮೇಲ್ನೋಟಕ್ಕೆ ಕ್ಷುಲ್ಲಕ ಎನಿಸುವ ಘಟನೆಗಳನ್ನು, ವಿದ್ಯಮಾನಗಳನ್ನು ಆಯ್ದುಕೊಳ್ಳುವ ಲೇಖಕರು, ಅದಕ್ಕೆ ಅಂದವಾದ ರೆಕ್ಕೆ...
ನಲ್ಲೆ ಮುಡಿದ ಮಲ್ಲಿಗೆ…
ವಿಜಯಕುಮಾರ ನೇರ್ವೆಕರ ನಲ್ಲೆಯು ಮುಡಿದ ಮಲ್ಲಿಗೆ ಹೂವುಸೂಸಿರೆ ಪರಿಮಳವಹೇಳುವುದೇಗೆ ಅಲ್ಲಿಯೇ ಕುಳಿತನಲ್ಲನ ತಳಮಳವನಲ್ಲನಿಗೇನೋ ನಲ್ಲೆಯ ಗಲ್ಲವಚುಂಬಿಸುವ ತವಕಏನು ಮಾಡುವುದು ಕಾಯಲೇ ಬೇಕಿದೆಒಪ್ಪಿಗೆ ಸಿಗುವ ತನಕ ಹೂದೋಟದ ತೂಗು ಮಂಚದ ಮೇಲೆಒಂದಂಚಲಿ ಅವಳುಇನ್ನೊಂದಂಚಲಿ ಇವ ಕುಳಿತಿರುವನೋಡುತ ಮುಗಿಲುಇಳೆಯನು ಚುಂಬಿಸಿ...
ಹಾಡ್ಹಾಕು ಬಾ ಅಲೆಕ್ಸಾ..
ಹೇಮಾ ಹೆಬ್ಬಗೋಡಿ ಅಮೆಜಾನಿನ ಮಗಳಾದ ಈ ಅಲೆಲೆ ಅಲೆಕ್ಸಾ ಅಂತೂ ಇಂತೂ ನಂ ಅಪಾರ್ಟ್ಮೆಂಟಿನ ಮುಕ್ಕಾಲುವಾಸಿ ಮನೆ ಹೊಸ್ತಿಲು ತುಳಿದಳು. ಅದು ಕ್ರಿಶ ಸನ್ ಅಂತೇನೂ ಕತೆ ಶುರುಮಾಡಲ್ಲ ಬಿಡಿ. ಅವಳು ಇಲ್ಲಿ ಅಡಿಯಿಟ್ಟಿದ್ದು ಲಾಕ್ಡೌನಿನಲ್ಲಿ ಎಲ್ಲರೂ ಮಾಡೋದೇನು ಮಾಡೋದೇನು ಅಂತ ಕೂತು online ಲೋಕದಲ್ಲಿ sick ಆಗೋಮಟ್ಟಿಗೆ ಲೀನವಾಗಿದ್ದ...
ಸಪ್ನ ‘ಅವಧಿ’ ಟಾಪ್ ಟೆನ್
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಆರೋಗ್ಯಕ್ಕಾಗಿಯೋ ಹಕ್ಕಿಗಳಿಗಾಗಿಯೋ..
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಜೋಧಪುರದಲ್ಲಿ ಕಂಡ ಶೀಶ್ಮಹಲ್, ಗಣಿಯಲ್ಲಿ ಕಂಡ ಹೆಣ್ಣುಮಕ್ಕಳು…
ನಯನ ಅದು ಕೋವಿಡ್ ಎರಡನೇ ಲಾಕ್ಡೌನ್ ಸಮಯ. ಕೆಲವು ಕಂಪನಿಗಳು ಮಾತ್ರ ತೆರೆದಿದ್ದವು. ನಾವು ಮೆಕ್ಯಾನಿಕಲ್ ಎಂಜಿನಿಯರ್ಗಳು. ನಮಗೆ work from home ಅನ್ನೋ ಕಾನ್ಸೆಪ್ಟ್ ವರ್ಕ್ ಆಗಲ್ಲ. ಮನೆಯಲ್ಲೇ ಕೂತು ನಮ್ಮ ಮೆಶೀನ್ನುಗಳ ಸರ್ವೀಸ್ ಮಾಡಲು ಆಗುವುದಿಲ್ಲ. ಇನ್ನು ಆ ಮಟ್ಟದ ಯಾವ ಸಂಶೋಧನೆಯೂ ಆಗಿಲ್ಲದಿರುವುದೊಂದು ಪುಣ್ಯ....
ಮಕ್ಕಳ ಪ್ರೀತಿಗೆ ದಕ್ಕಿದ ಕೇಂದ್ರ ಸಾಹಿತ್ಯ ಅಕಾಡೆಮಿಯ ʼಬಾಲ ಸಾಹಿತ್ಯ ಪುರಸ್ಕಾರʼ
ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಬಾಲ ಸಾಹಿತ್ಯ ಪುರಸ್ಕಾರ ಮಕ್ಕಳ ದಿನಾಚರಣೆಯಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರಿಂದ ನವದೆಹಲಿಯಲ್ಲಿ ಸ್ವೀಕರಿಸಿದ ಅತ್ಯಂತ ಖುಷಿಯ ಸಂದರ್ಭ. ತಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಹಾಗೂ ಮಕ್ಕಳ ಪ್ರೀತಿ ಇದನ್ನು ಆಗುಮಾಡಿದೆ ಅಂದುಕೊಂಡಿದ್ದೇನೆ. ಕೇಂದ್ರ ಸಾಹಿತ್ಯ ಅಕಾಡೆಮಿಗೆ...
ಸರೋಜಿನಿ ಪಡಸಲಗಿ ಕವಿತೆ- ಓ ಕನಸೇ…
ಸರೋಜಿನಿ ಪಡಸಲಗಿ ಮುಂಜಾವಿನ ಮಂಜಿನಲಿಮುಸ್ಸಂಜೆಯ ರಂಗಿನಲಿಕಳೆದು ತೇಲಿ ಹೋಗುವಾಗಬಾರದಿರು ಕನಸೇ ಓ ಕನಸೇ ನೀನರಿಯದ ಗುಂಗಿನಲಿಮಧುಮಧುರ ರಂಗಿನಲಿನೆನಪುಗಳು ಸುಳೀವಾಗಬಾರದಿರು ಕನಸೇ ಓ ಕನಸೇ ಕಣ್ಣ ಎವೆಯ ತುಂಬಾಹತ್ತು ಹಲವು ಸುಳಿದು ಓಡಿಸೆಳೆದು ಹೆಣೆಯುವಾಗಬಾರದಿರು ಕನಸೇ ಓ ಕನಸೇ ಹರಿದಾಡುವ ಸೌಗಂಧತುಳುಕಿ ಕುಲುಕಿ...
ಕನ್ನಡಕ್ಕೆ ಮತ್ತೊಂದು ಗರಿ ʻಹದಿನೇಳೆಂಟುʼ
ಕುಮಾರ ಬೇಂದ್ರೆ ಕನ್ನಡದ ಪ್ರಯೋಗಾತ್ಮಕ ಚಲನಚಿತ್ರಗಳು ಇಂದು ಇತರ ಎಲ್ಲ ಭಾಷೆಯ ಚಿತ್ರಗಳನ್ನು ಮೀರಿ ಎಷ್ಟೊಂದು ಸಶಕ್ತವಾಗಿ ರೂಪುಗೊಳ್ಳುತ್ತಿವೆ ಎಂಬುದಕ್ಕೆ ಪ್ರಸಕ್ತ ಸಾಲಿನ ಭಾರತೀಯ ಪನೋರಮಾ ಸ್ಪರ್ಧೆಗೆ ಆಯ್ಕೆಯಾಗಿರುವ ಕನ್ನಡದ ʻಹದಿನೇಳೆಂಟುʼ ಚಿತ್ರ ನಿದರ್ಶನವಾಗಿದೆ! ಗೋವಾದ ಪಣಜಿಯಲ್ಲಿ ನವೆಂಬರ್ ೨೦ರಿಂದ ೨೮ರ ವರೆಗೆ...
ಜಿ ಎನ್ ನಾಗರಾಜ್ ಅಂಕಣ- ಕ್ರಿಸ್ಮಸ್ ಎಂಬ ಸಂಕ್ರಾಂತಿ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸದಾಶಿವ್ ಸೊರಟೂರು ಕಥಾ ಅಂಕಣ- ಅವಳ ಮಚ್ಚೆ ಮತ್ತು ಅವನು ಸುಟ್ಟು ಕೊಟ್ಟ ಮೀನು..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...




















