ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಪ್ರತಿ ಕ್ಷಣ ನೀನಿಲ್ಲದೆ ಶಬ್ದಗಳು ಮಾತಾಗವು…’ – ಒಂದು ಗಜ಼ಲ್

ಗಝಲ್ ಎಂ ಎಂ ಶೇಕ್ ಯಾದಗಿರಿ ಹೊಲಕ್ಕೆ ಬಿದ್ದ ಹನಿಗಳು ತೆನೆ ಕಟ್ಟುತ್ತವೆ ನಿಜ ಉಡಿಗೆ ಬಿದ್ದ ಮಾತುಗಳು ಕೆನೆ ಕಟ್ಟುತ್ತವೆ ನಿಜ   ನೆರಳು ಕಾಣದ ಕ್ಷಣಗಳಿವೆ ದಿನಗಳಲ್ಲಿ ಆದರೂ ಬದುಕುಗಳು ಗೊನೆ ಕಟ್ಟುತ್ತವೆ ನಿಜ   ಯಾರದೋ ಹಾದಿಯಲ್ಲಿ ಕುಳಿತು ಅಳುತ್ತವೆ ಆರ್ದ್ರ ಸಂಜೆಗಳು ಕೊನೆ ಕಟ್ಟುತ್ತವೆ ನಿಜ .   ಕಣ್ಣಿಗೆ...

read more
ಸುಗತ ಬರೆಯುತ್ತಾರೆ: ರುಶ್ದಿಯ ಲೇಖನ ಮತ್ತು ಚುನಾವಣೆ ಪಾಠಗಳು

ಸುಗತ ಶ್ರೀನಿವಾಸರಾಜು 'ವಿಜಯ ಕರ್ನಾಟಕ'ದಲ್ಲಿ ಪ್ರಕಟಿತ ನಾವು ದೇಹವನ್ನು ದಂಡಿಸಿ ಪ್ರದರ್ಶಿಸುವ ಶೌರ್ಯಕ್ಕೆ (physical bravery) ಕೊಡುವ ಮಹತ್ವವನ್ನು ಈಚಿನ ದಿನಗಳಲ್ಲಿ ನೈತಿಕ ಧೈರ್ಯಕ್ಕೆ (moral courage) ನೀಡುತ್ತಿಲ್ಲ ಎಂಬ ಮಾತನ್ನು ಲೇಖಕ ಸಲ್ಮಾನ್ ರುಶ್ದಿ, ಕಳೆದ ವಾರ 'ನ್ಯೂಯಾರ್ಕ್ ಟೈಮ್ಸ್'ನಲ್ಲಿ ಬರೆದ ಲೇಖನದಲ್ಲಿ...

read more
ಜೀವನವೆಂಬ ಪ್ರಯಾಣದಲ್ಲಿ…

ಹಾಡ್ಲಹಳ್ಳಿ ನಾಗರಾಜು ಎಂದರೆ.. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಾಡ್ಲಹಳ್ಳಿಯ ಕಡು ಬಡತನದ ರೈತಾಪಿ ಕುಟುಂಬದ ಹಾಡ್ಲಹಳ್ಳಿ ನಾಗರಾಜ್ ಬಿ.ಎಸ್ಸಿ ಪಧವೀಧರರು. ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಸೇವೆ ಸಲ್ಲಿಸಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿರುವ ಶ್ರೀಯುತರು ಅದೇ ಇಲಾಖೆಯಲ್ಲಿ ಗೆಜೆಟೆಡ್ ಅಧಿಕಾರಿಯಾಗಿ...

read more
ಮಂಡ್ಯ ರಮೇಶ್ ಕಾಲಂ : ಎಡವಟ್ ಡೈರೆಕ್ಟ್ರು, ಅಡ್ಕಸ್ಬಿ ಆಕ್ಟ್ರು!

ಆಗಿನ್ನೂ ಚಿತ್ರರಂಗಕ್ಕೆ ಬಂದ ಹೊಸತು. ಬಯಾಸ್ಕೋಪಿನೋರ ಬಗ್ಗೆ ಇನ್ನೂ ಭಯಗ್ರಸ್ತನಾಗಿಯೇ ಇದ್ದೆ. ಕಾಸಿದ್ದಾಗಲೂ ಇಲ್ಲದಿದ್ದಾಗಲೂ ಕಟ್ಟಬಹುದಾದದ್ದು ಒಂದೇ: ಕನಸುಗಳು ಮಾತ್ರ! ನಾನೂ ಕನಸಿನ ಬೆನ್ನುಹತ್ತಿದ್ದೆ. ಹೀಗೊಂದು ಸುಂದರ ಸಾಯಂಕಾಲ ನಾಯ್ಡು ಸ್ಟೂಡಿಯೋ ಮೆಟ್ಟಿಲ ಮೇಲೆ ಧುತ್ ಅಂತಾ ಭೆಟ್ಟಿಯಾದ ಒಬ್ಬ ಗೆಳೆಯ ನಿರ್ದೇಶಕ ’ರಮೇಶಾ,...

read more
ಸಂಚಾರಿ ಥಿಯೇಟರ್‌ನಲ್ಲಿ ಸಿಕ್ಕ ಬಾಲ!

ಮನುಷ್ಯನ ಮೂಲ ಕೋತಿ ಅಂತ ಗೊತ್ತಾ ತಿಮ್ಮಪ್ಪಾ… ಶಿವು ಮೋರಿಗೇರಿ ಒಂದು ದಿಢೀರ್ ಆರ್ಡರ್. ಸಂಜೆ ನೀನು ಹನುಮಂತ ನಗರದಲ್ಲಿರೋ ಕೆ ಹೆಚ್ ಕಲಾಸೌಧದಲ್ಲಿ ಒಂದು ನಾಟಕ ನಡೆಯುತ್ತೆ. ಕರೆಕ್ಟಾಗಿ ಆರು ಘಂಟೆಗಿರಬೇಕು, ಹೋಗು ರೆಡಿಯಾಗು. ಜಿ ಎನ್ ಸಾರ್ ಹೀಗೆ ಹೇಳುತ್ತಿದ್ದರೆ ನಂಗೊಂದು ಸುತ್ತು ಗಿರ್ರಗಿಟ್ಲೆ. ಬೆಂಗಳೂರಿಗೆ ಬಂದು ಎರೆಡು...

read more
ಹೇಳತೇವ ಕೇಳ: 'ಅವಧಿ'ಗೆ ವಂದನೆಗಳು.

ರಾಧಿಕಾ ಗಂಗಣ್ಣ ’ಹೇಳತೇವ ಕೇಳ. . .’ ಅವಧಿ ಹಾಗೂಅಭಿನವ ಪ್ರಕಾಶನದ ವತಿಯಿಂದ ಬಿಡುಗಡೆಗೊಂಡ, ನೊಂದ ಮನಗಳ ಪ್ರತಿಭಟನೆಯ ದನಿಯ ಲೇಖನಗಳ ಗುಚ್ಛ. ಮಹಿಳೆಯರು, ಮಕ್ಕಳು ಕಂಡ, ಅನುಭವಿಸಿದ ದುಃಖ-ದುಮ್ಮಾನ, ಕ್ರೌರ್ಯವನ್ನು ಅಕ್ಷರ ರೂಪಕ್ಕೆ ಇಳಿಸಲು ಪ್ರೇರೇಪಿಸಿದ್ದು ಜಯಲಕ್ಷ್ಮಿ ಪಾಟೀಲ್ ಅವರ ನೇತೃತ್ವದಲ್ಲಿ ರೂಪುಗೊಂಡ ಅವಧಿಯ ವಿಶೇಷ...

read more
ಮಲೆಗಳಲ್ಲಿ ಮದುಮಗಳು: ಅಧ್ಯಯನಗಳ ಸಮೀಕ್ಷೆ

ಅರುಣ್ ಜೋಳದಕೂಡ್ಲಿಗಿ 1 ಪ್ರಸಿದ್ಧ ರಂಗಕರ್ಮಿ ಪಿ. ಬಸವಲಿಂಗಯ್ಯ ಅವರ ನಿರ್ದೇಶನದಲ್ಲಿ ಮೈಸೂರಿನ `ರಂಗಾಯಣ'ವು (ಏಪ್ರಿಲ್23-ಮೇ21, 2010) `ಮದುಮಗಳು' ಕಾದಂಬರಿಯನ್ನು ಆಧರಿಸಿ ರಂಗಪ್ರಯೋಗವನ್ನು ಮಾಡಿತು. ಇದು ಕನ್ನಡ ರಂಗ ಇತಿಹಾಸದಲ್ಲಿ ಒಂದು ಮುಖ್ಯ ಘಟನೆಯಾಯಿತು. ಅಲ್ಲಿಯ ತನಕ `ಮದುಮಗಳು' ಕಾದಂಬರಿ ಓದಿದವರು ತಮ್ಮ ಕಲ್ಪನೆಯ...

read more
ಹೆಣ್ಣು ದೇವರುಗಳೇ ಕಾಣಿಸುತ್ತವೆ ಧೂಪದ ನಡುವೆ

ಪ್ರವರ ಕೊಟ್ಟೂರು ಇಂಡಿಯಾದ ಜನಗಳೇ ಎದೆಯನ್ನು ಕಲ್ಲು ಮಾಡಿಕೊಳ್ಳಿ, ಭಾರತವನ್ನು ತೋರಿಸಲಿದ್ದೇನೆ ಅಸಲಿ, ಭಾರತವನ್ನು ತೋರಿಸಲಿದ್ದೇನೆ.   ಹೆಣ್ಣು ಹುಟ್ಟಿದರೆ ಮನೆಯಲ್ಲಿ ಸೂತಕ ಕಟ್ಟಿಕೊಳ್ಳುತ್ತದೆಯಂತೆ ಮೂಲೆ ಮೂಲೆಯಲ್ಲಿನ ಗಾಢ ಜೇಡದಂತೆ, ಹಸಿ ಬಾಣಂತಿಯ ಮೂತಿಗೆ ನಾಲ್ಕು ತಿವಿಯದೆಲೆ ಸೂತಕ ಕಳೆಯುವುದಿಲ್ಲ,   ಹೆಣ್ಣು...

read more
ಚಂದ್ರಕೀರ್ತಿಯ ಬಾಲ: ಇಲ್ಲಿದೆ ಫೋಟೋ ಅಲ್ಬಂ

ಸಂಚಾರಿ  ಥಿಯೇಟರ್ ನಲ್ಲಿ  ಮಕ್ಕಳ ಕಲರವ. ರಂಗದ ತುಂಬೆಲ್ಲಾ ಚಿಣ್ಣರ ಚಿಲಿಪಿಲಿ. ಚಂದ್ರ ಕೀರ್ತಿ ನಿರ್ದೇಶನದಲ್ಲಿ ಮೂಡಿಬಂದ 'ಬಾಲವೊಂದಿದ್ದರೆ ?' ನಾಟಕ ಪ್ರದರ್ಶನದಲ್ಲಿ ಮಕ್ಕಳು ತೋರಿದ ಪ್ರತಿಭೆಗೆ ನೆರೆದವರೆಲ್ಲರ ಮುಗಿಲು ಮುಟ್ಟಿದ ಚಪ್ಪಾಳೆ. ಅದ್ಭುತ ಪ್ರದರ್ಶನಕ್ಕೆ ಕಳೆದ ಇಪ್ಪತ್ತು ದಿನಗಳ ಶ್ರಮ ಸಾರ್ಥಕವಾದ ಘಳಿಗೆ....

read more
ಪ್ರಶಾಂತ ಆಡೂರ ನಗಸಾಕ ನಿಂತಾರ.. ಬರ್ರೀ

ನಗು ನಗುತಾ ನಲಿ...ಏನೇ ಆಗಲಿ.... ಪ್ರಶಾಂತ ಆಡೂರ ಇವತ್ತ ಮೇ ತಿಂಗಳ ಮೊದಲನೇ ರವಿವಾರ. ಅದರಾಗ ಏನ ವಿಶೇಷ ಅಂತೀರಾ? ಮೇ ತಿಂಗಳ ಮೊದಲನೇ ರವಿವಾರವನ್ನ 'ವಿಶ್ವ ನಗೆ ದಿವಸ' world laughter day ಅಂತ ಆಚರಸ್ತಾರ. ಹಂಗ almost all, ಎಲ್ಲಾ world days ಪಾಶ್ಚ್ಯಾತ್ಯ ಸಂಸ್ಕೃತಿವು ಮತ್ತ ಅವು ವಿದೇಶಿಯರೇ ಹುಟ್ಟ ಹಾಕಿದ್ದ...

read more
poem- ಐದು ದಾಟಿದವರಿಗೆ

ಡಾ.ಹೆಚ್.ವಿ.ವೇಣುಗೋಪಾಲ್ ಎಂಟನೆಯ ತರಗತಿಯ ಇಂಗ್ಲೀಷ್ ಪಠ್ಯಪುಸ್ತಕದಲ್ಲಿ ಕಾಣಿಸಿದ ಒಂದು ಪದ್ಯ ನನಗೆ ತುಂಬ ಇಷ್ಟವಾಯಿತು. ಅದನ್ನು ಕನ್ನಡಕ್ಕೆ ಅನುವಾದ ಮಾಡಿದೆ. ಆಸಕ್ತಿ ಇದ್ದವರು ಓದಲೆಂದು ಇಲ್ಲಿ ಕೊಟ್ಟಿದ್ದೇನೆ. ಮಳೆ ಬಿದ್ದ ಮರುದಿನ, ಕಿಟಕಿ ಕೆಳಗಿಳಿದ ನಿನ್ನ ಕೋಣೆಯ ಒಳಗೆ ಸುಳಿದ ಬಸವನಹುಳುವನ್ನು ನೋಡಲೆಂದು ನನ್ನ ಕೂಗಿ...

read more
ಸೋಕಿದ ಕೈಗಳ ಸುಖವ ನೆನೆದು

ರಾಗಂ "ನೀನಿರಬೇಕಮ್ಮ ಬಾಗಿಲೊಳಗೆಶಾಲೆ ಜೈಲಿಂದ ಹೊರ ಬಂದಹೈದಗೆ ರೆಕ್ಕೆ ಮೂಡಿ, ಹಾತೊರೆದು ಬರುವವನೆಎದೆಯೊಳಗೆ ಇಂಗಿಸಿಕೊಳ್ಳಲುನೀನಿರಬೇಕಮ್ಮ ಬಾಗಿಲೊಳಗೆಮರೆತು ಹೋಗುವ ಸೂರ್ಯಚಂದ್ರ, ನಕ್ಷತ್ರ, ಮಿಂಚು ಹುಳುಗಳ ಕರೆದುಮನೆಯ ಮೊಮ್ಮಗಳೊಡನೆ ಮಾತಾಡ ಹೇಳಲು" ಇದು ಅವ್ವನನ್ನು ಕುರಿತು ನಾನೇ ಬರೆದ ದೀರ್ಘ ಕವಿತೆಯ ಆಯ್ದ ಎರಡು...

read more
ಡಾ ಕಕ್ಕಿಲ್ಲಾಯ ಬರೆಯುತ್ತಾರೆ: ಹೊಸ ಕಾಯಕಗಳ ಹೊಸ ಕಾಯಿಲೆಗಳು

ಡಾ| ಶ್ರೀನಿವಾಸ ಕಕ್ಕಿಲ್ಲಾಯ ಮೇ ದಿನದ ಬಲಿದಾನವನ್ನು ಮರೆತಿರುವುದು ಇಂದಿನವರಿಗೆ ಕುತ್ತಾಗುತ್ತಿದೆ ಇಂದು ಕಾರ್ಮಿಕರ ದಿನ. ಎಂಟು ಗಂಟೆ ದುಡಿಮೆ, ಎಂಟು ಗಂಟೆ ವಿಶ್ರಾಂತಿ-ವಿನೋದ ಹಾಗೂ ಎಂಟು ಗಂಟೆ ನಿದ್ದೆಯ ಹಕ್ಕಿಗಾಗಿ ದುಡಿಯುವ ಜನರು ನಡೆಸಿದ್ದ ಧೀರೋದಾತ್ತ ಹೋರಾಟಗಳನ್ನು ಸ್ಮರಿಸುವ ದಿನ. ಹೊಸ ಆರ್ಥಿಕತೆ, ಹೊಸ ತಂತ್ರಜ್ಞಾನ,...

read more
ಎಚ್ ಎಲ್ ನಾಗೇಗೌಡರು ಕಂಡಂತೆ ಕುವೆಂಪು ಮತ್ತು ’ಮಲೆಗಳಲ್ಲಿ ಮದುಮಗಳು’

ಎಚ್.ಎಲ್.ನಾಗೇಗೌಡರು ಕೃಪೆ : ಕುವೆಂಪು.ಕಾಂ ಕುವೆಂಪುರವರು ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಬರಬೇಕಾದರೆ ಕೊಂಚ ಹೊತ್ತು ಮೌನ ತಾಳಿ ಆಮೇಲೆ ಶುರುಮಾಡುತ್ತಾರೆ. ಹಾಗೆ ಮಾಡಿ "ಮೊನ್ನೆ ಪುಟ್ಟಯ್ಯ ನಾಯ್ಕರು ಬಂದಿದ್ರು. ನಿಮ್ಮ ಶಿವಮೊಗ್ಗ ಮ್ಯೂಸಿಯಂನಲ್ಲಿ ಕೆಲವು ವಿಷಯಗಳು ದೊರೆಯಬಹುದು ಎಂದರು" ಎಂದು ಹೇಳಿದಾಗ, ನಾನು "ಯಾವ...

read more
ಬಿಂಬ ಚಿಣ್ಣರ ನಾಟಕ ಹಬ್ಬ – ಫೋಟೋ ಆಲ್ಬಂ

ವಿಜಯನಗರ ಬಿಂಬದ ’ನಾಟಕ ಹಬ್ಬ’ - ಎನ್ ಸಂಧ್ಯಾರಾಣಿ ಬೇಸಿಗೆ ಬಂತೆಂದರೆ ಸಾಕು ಮಕ್ಕಳಿಗೆ ಸಧ್ಯ ಸ್ಕೂಲಿನ ಸಹವಾಸವೇ ಮೇಲು ಅನ್ನುವಷ್ಟು ಸಮ್ಮರ್ ಕ್ಯಾಂಪುಗಳು ಬೆಂಗಳೂರಿನಲ್ಲಿ ತಲೆ ಎತ್ತುತ್ತವೆ. ಬೇಸಿಗೆ ರಜೆ ಮುಗಿಯುವುದರಲ್ಲಿ ನಿಮ್ಮ ಮಗು ಐನ್ ಸ್ಟಿನ್ ಆಗಬೇಕೆ, ಶಕುಂತಲಾ ದೇವಿ ಆಗಬೇಕೆ, ಸಿದ್ದಾರ್ಥ ಬಸು ಆಗಬೇಕೆ, ಏನಾಗ ಬೇಕು...

read more
ನಟನದ ಅಗ್ನಿಪಥ, ಇಲ್ಲಿದೆ ಫೋಟೋಗಳು

ಸ್ತ್ರೀ ಸಂವೇದನೆ, ತಲ್ಲಣಗಳನ್ನು ಪುರಾಣ ಪ್ರಸಂಗಗಳಿಂದ ಹೆಕ್ಕಿ, ಆಧುನಿಕ ಪ್ರಜ್ಞೆಯಲ್ಲಿ ಕಟ್ಟಲಾದ 'ಅಗ್ನಿಪಥ' ವನ್ನು ಮೈಸೂರಿನ 'ನಟನ' ತಂಡ ರಂಗಕ್ಕೇರಿಸಿತು. ಬಿ ಜಯಶ್ರೀ ನಿರ್ದೇಶಿಸಿದ ಈ ಪ್ರಯೋಗ ನೋಡುಗರ ಮನಸೂರೆಗೊಂಡಿತು. ಗೊಂದಲಿಗರ ಮೇಳದ ಸಂಬಾಳದ ಗತ್ತಿಗೆ ಯಕ್ಷಗಾನದ ಹೆಜ್ಜೆಯ ಗೈರತ್ತು, ಕಳರಿ... ಕಲಾವಿದರು ರಂಗದಲ್ಲಿ...

read more

Pin It on Pinterest

Share This