ಕೀ.ರಂ ಸಾರ್ ನೀವು ಇಲ್ಲದೇ ಹೋದಿರಲ್ಲಾ…..

ಮಂಜು ನಾರಾಯಣ್ (ವಸಂತಸೇನೆ)

ಸುಮಾರು ಐದು ವರ್ಷಗಳ ಹಿಂದೆಯೇ ನಾನು ಕಷ್ಟಪಟ್ಟು ಓದಿದ ಕುವೆಂಪುರವರ ಕಾದಂಬರಿಗಳಲ್ಲೊಂದಾದ ‘ಮಲೆಗಳಲ್ಲಿ ಮದುಮಗಳು’ ಅರ್ಥವಾಗದಷ್ಟು ಅರ್ಥವಾಗಿ, ಕಾದಂಬರಿಯ ಕಥಾಹಂದರದ ಒಳಗೇ.. ದಕ್ಷಿಣ ಭಾರತವನ್ನು ಮೂಲವಾಗಿಟ್ಟುಕೊಂಡೇ ಸಮಗ್ರ ಭಾರತದ ಎಲ್ಲ ವಲಯಗಳಿಗೂ ಅನ್ವಯಿಸುವಂತೆ ಕಂಡುಬರುವ ‘ಅವಸರವೂ ಸಾವಧಾನದ ಬೆನ್ನೇರಿರುವ’ ಹಿನ್ನೆಲೆಯಲ್ಲಿ, ವೈರುಧ್ಯಗಳನ್ನು ಕಾಯ್ದುಕೊಂಡೇ ಬದಲಾಗುತ್ತಿದ್ದ ಮತ್ತು ಬದಲಾಗುತ್ತಿರುವ ಭಾ-ಸಮಾಜಗಳ ಬಗೆಗಿನ ವಿಶ್ಲೇಷಣೆ, ಓದುವಾಗ ನನ್ನಲ್ಲಿ ಕಲ್ಪನಾಲೋಕದೊಳಗೇ ಜಿಜ್ಞಾಸೆಯ ಘರ್ಷಣೆಗಳಾಗಿದ್ದುದು ಈಗಲೂ ಆಗಾಗ ನೆನಪಿಗೆ ಬರುವುದುಂಟು. ಇದನ್ನು ಈಗ್ಯಾಕೆ ಕೊಚ್ಚುಕೊಂತಿದ್ದೀಯಾ ಅಂತ ಕೇಳ್ತೀರಾ…? ಕಾರಣ ಇದೆ. ಯಾಕೆಂದರೆ ಈಗ ನಮಗನಿಸಿದ್ದನ್ನು ಅಭಿಪ್ರಾಯಿಸದೇ ಹೋದಲ್ಲಿ ಅಭಿಪ್ರಾಯಗಳೂ ಕೂಡ ‘ಜೋಳದ ಪಾಳಿಗೋಸುಮೆಯಂತೆಯೋ..’ ‘ಸ್ನೇಹಪಾಸೋಮೆಯಂತಲೋ’, ‘ಗುರುಪಾಸೋಮೆಯಂತಲೋ..’ ಪ್ರೇರಿತವಾಗಿ ಕೊನೆಗೆ “ಅರ್ಹ” ಮತ್ತು ಒಪ್ಪಿತವಾಗುವ ವಿಷಯಗಳನ್ನಷ್ಟೇ ‘ಅಭಿಪ್ರಾಯಗಳೆಂದು ಮೌಲ್ಯೀಕರಿಸಲಾಗುತ್ತದೆ. ಇಷ್ಟೊತ್ತಿಗೆ ನಿಮಗೆ ತಿಳಿದರಬೇಕೆನಿಸುತ್ತದೆ. ತಿಳಿದರೆ ಈ ಬರವಣಿಗೆಯ ಓದು ಮುಂದುವರೆಸಿ ಇಲ್ಲದಿದ್ದರೆ ನಿಮ್ಮ ಓದುವಿಕೆಯನ್ನು ತಿಳಿಯಾಗಿಸಿ.
ಕೆಲಸ ಮಾಡಿದ ವ್ಯಕ್ತಿಗಿಂತ ಮಾಡಿಸಿದ ಮಾಲೀಕನೇ ಜನಪ್ರಿಯವೆಂಬ ನಾಣ್ಣುಡಿಯಂತೆ ಜನಪ್ರಿಯತೆಯ ಭರಾಟೆಯಲ್ಲಿ ಮಹಾನಗರಿಯಲ್ಲಿ ಕಲೆ ಇಲ್ಲದೆ ಬಳಲುತ್ತಿದ್ದ ಕಲಾಗ್ರಾಮದಲ್ಲಾದ ಜನಪ್ರಿಯ ಒಂಭತ್ತು ಘಂಟೆ ನಾಟಕ “ಮಲೆಗಳಲ್ಲಿ ಮದುಮಗಳಿಗೂ” ಈಗ ಇಂತ ದುಸ್ಥಿತಿಯೊದಗಿ ನಿರ್ದೇಶಕ,ಆಯೋಜಕರ ನಡುವೆ ಮಾತುಮಿಶ್ರಿತ ಮೌನಯುದ್ದಗಳಾಗಿ ಸದ್ಯ ಅಲ್ಲಿ ಕುವೆಂಪುರ ಹೆಸರು ಸಿಕ್ಕಿಹಾಕಿಳ್ಳದಿರುವುದೇ ಆ ಸರಳ ವ್ಯಕ್ತಿತ್ವಕ್ಕೆ ಸಂದ ಸಂತೋಷ.

ಪ್ರಯೋಗ – ಈ ಹಿಂದೆ ಮೈಸೂರಿನಲ್ಲಿ ಇದು ಪ್ರಯೋಗವಾಗಿ ಕನ್ನಡ ರಂಗಭೂಮಿಯನ್ನೊಳಗೊಂಡಂತೆ ಕನ್ನಡದ ಅದೆಷ್ಟೋ, ಹಾಗೂ ಗಡಿಯಾಚೆಗಿನ ಕಲಾರಾದನಾ ಮನಸ್ಸುಗಳು ಆ ಕಾರ್ಯಕ್ಕೆ ಕಾರಣಕರ್ತರಾದ ಎಲ್ಲರನ್ನೂ ಶ್ಲಾಘಿಸುವುದರೊಂದಿಗೆ ಸಂತೋಷಗೊಂಡಿತ್ತು. ಇನ್ನು ನನ್ನ ಅನುಭವದ ಮಿತಿಯಲ್ಲಿ ಹೇಳುವುದಾದರೆ ಬೆಂಗಳೂರಿನ ಪ್ರದರ್ಶನಕ್ಕಿಂತ ಮೈಸೂರಿನದ್ದೇ ಮುದನೀಡಿತ್ತು. ಹಾ.. ಒಂದಂತೂ ನಾನು ಹೇಳಲೇ ಬೇಕು, ಬೆಂಗಳೂರಿನಲ್ಲಾದ ಪ್ರದರ್ಶನವಂತೂ ನನ್ನನ್ನೂ ಒಳಗೊಂಡಂತೆ ನನ್ನ ಅದೆಷ್ಟೋ ಸ್ನೇಹಿತರಿಗೆ ನೋವನ್ನುಂಟು ಮಾಡಿದ್ದುದು ಕಟು ಸತ್ಯ. ಬೆಂಗಳೂರಿಗರನ್ನು ಆಕರ್ಷಿಸಲೆಂದು, ಚಪ್ಪಾಳೆ ಗಿಟ್ಟಿಸಲೆಂದೇ ಟೊಂಕ ಕಟ್ಟಿ ನಿಂತಿರುವರೇನೋ ಎಂಬಂತೆ ಕಲಾವಿದರು ಭಾಸವಾಗಿ, ಕಾದಂಬರಿಯ ಸಾರ, ಸತ್ವ, ಭಾಷೆಯೂ ಗೌಣವಾಗಿದ್ದದ್ದು, ಜನಪ್ರಿಯತೆಯ ಗುಂಗಿನಲ್ಲಿ ನಿರ್ದೇಶಕರು ಮೈಮರೆತದ್ದು ಬಟಾಬಯಲಿನಲ್ಲಿ ಬಯಲಾಗಿತ್ತು. ಅವುಗಳಲ್ಲಿ ನನಗೆ ತುಂಬಾ ಇಷ್ಟವಾದದ್ದು ಪ್ರದರ್ಶನದ ಅಂತ್ಯದಲ್ಲಿ ಆಗಾಗ ಮಾಡುತ್ತಿದ್ದ ನಿರ್ದೇಶಕರ ನಟನೆ. ಅವರ ಮಾತುಗಳಲ್ಲಿ ಸರಕು ಸವಕಲಾಗಿದ್ದರೂ ಅವರ ಆತ್ಮರತಿಗೆ ಈ ಮಾತು ಅನ್ವಯವಾಗುತ್ತಿರಲಿಲ್ಲ. ಇನ್ನು ನಟವರ್ಗದವರ ಪಾಡನ್ನು ಮಾತ್ರ ಕೇಳಹೋಗಬೇಡಿ ‘ನಟರಿಗೆ ಮಾತು ಕೊಡಬ್ಯಾಡೋ ಶಿವಾ… ಅವರಿಗೆ ಪ್ರದರ್ಶನ ಸಂಧರ್ಭದಲ್ಲಿ ಮಾತ್ರ ಮಾತು”, ಎಂಬಂತಾಗಿದೆ. ಅರ್ಥವಾಗಬೇಕೆಂದರೆ ಅವರನ್ನೇ ಭೇಟಿಮಾಡಿ.
ಕ್ಯಾತೆಗಳು –
ರಂಗಭೂಮಿಗಳಲ್ಲಿ ನೆರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ಕನ್ನಡ ರಂಗಭೂಮಿ ಕ್ರಿಯಾಶೀಲವಾಗಿರುವುದಕ್ಕೆ ಸಂತಸಗೊಂಡರೂ ಗೌಪ್ಯ ಸಂಗತಿಗಳನ್ನು ಗಮನಿಸಿದಾಗ ವಿಧಿಇಲ್ಲದೇ ಮೌನತಾಳಲೇ ಬೇಕಾಗುತ್ತದೆ.
ಇಂತಹ ದಾಖಲೆಯಂತಹ ಪ್ರದರ್ಶನಗಳು ಕೈಗೊಳ್ಳಬೇಕಾದರೆ ಆಯವ್ಯಯದ ಹಣಕಾಸನ್ನೂ ಕೈಗೂಡಿಸಬೇಕಾಗುತ್ತದೆ. ಗರಿಷ್ಟಮಟ್ಟದ ಹಣ ಸಂದಾಯವಾಗುವುದು ಸರ್ಕಾರದಿಂದವೆಂಬುದು ಸರಿಯಷ್ಟೇ. ಜನರ ಜೀವನ ಕ್ರಮಗಳ, ಅಳಲುಗಳನ್ನೊಳಗೊಂಡ ಸೊಗಡು ಅವರ ಸಂಸ್ಕೃತಿಯೇ ಹೊರತು ಸಂಸ್ಕೃತಿಯನ್ನು ಬಿಂಬಿಸಲೆಂಬ ಅತ್ಯುತ್ಸಾಹದಲ್ಲಿ ಹಣದ ಹೊಳೆ ಹರಿಸಿದರೆ ಒಮ್ಮೊಮ್ಮೆ ಕಣ್ಣೀರೂ.. ಹೋದೀತೆಂಬ ಎಚ್ಚರವಿರಬೇಕಲ್ಲವೇ..?
ಕನ್ನಡ ಸಂಸ್ಕೃತಿ ಇಲಾಖೆಯ ಹೆಮ್ಮೆಯ ಕೊಡುಗೆಯಾದ “ಮಮಮ” ಬಗ್ಗೆ ಪ್ರಶಂಶಿಸಲೇಬೇಕಾಗಿದ್ದು, ಹೆಮ್ಮೆಯಾಗಿ ಉಳಿಯಬೇಕೋ ಅಳಿಯಬೇಕೋ ಎಂಬುದು ಅದರ ಕೈಯಲ್ಲೇ ಇದೆ.
ಮೈಸೂರು ನಂತರ ಬೆಂಗಳೂರು ತದನಂತರ ಶಿವಮೊಗ್ಗ, ಆ ಊರು ಈ ಊರು ಹೀಗೆ ಮುಂದುವರಿಯುತ್ತಾ ಹೋದರೆ ಹೇಗೆ? ಹೊಸ ಪ್ರಯೋಗಗಳು ನಡೆಯಬಾರದೆಂಬ ಮೂಲಭೂತವಾದಿತನವಲ್ಲ ನಾ ಹೇಳುತ್ತಿರುವುದು ಬದಲಿಗೆ ಮುರಿದು ಕಟ್ಟುವುದರ ಬಗ್ಗೆ ನನಗೆ ಸಂತಾಪವಿಲ್ಲ ಬದಲಿಗೆ ನಾವೇ ಕಟ್ಟಿ ಮುರಿದದ್ದರ ಬಗ್ಗೆ…
ಕಲೆಗೆ ಯಾರೂ ವಾರಸೂದಾರರಲ್ಲದಿದ್ದರೂ ಕೆಲವರು ಮಾತ್ರ ತಮ್ಮಿಂದಲೇ ಬೆಳಕಾಯ್ತು, ಗ್ರೀ ನಾಗರೀಕತೆ ಬೆಳೆಯಿತು, ಬಟ್ಟೆ ಹಾಕಲು ಶುರು ಮಾಡಿದರು, ಅದು ನನ್ನ ಅನುಕರಣೆಯಷ್ಟೇ… ಎಂಬ ಮಾತುಗಳನ್ನು ಅದೆಷ್ಟೋ ಮನಸ್ಸುಗಳು ಪ್ರೀತಿಯಿಂದಲೇ ಸಹಿಸಿಕೊಳ್ಳುತ್ತಿರುವುದು ಪರಕಾಯ ಪ್ರವೇಶವೇನೋ…?
ಈ ಪ್ರಯೋಗದ ನಂತರ ಜನ ಬಂದರು ರಂಗಭೂಮಿಗೆ ಎಂದು ಬೊಬ್ಬೆ ಇಟ್ಟವರಿಗೆ ಬಂದಹಾಗೇ ಅವರು ಹೋದದ್ದು ತಿಳಿಯಲೇ ಇಲ್ಲ.
ನನ್ನ ಸ್ನೇಹಿತನೊಬ್ಬ ಈ ಹಿಂದೆ ನಮ್ಮ ಪ್ರೀತಿಯ ಬಸು ಸಾರ್ಗೆ ಫ್ಯಾನು, ಏಸಿ ಇನ್ನು ಏನೇನೋ ಆಗಿದ್ದ. ಮೊನ್ನೆ ಅವ ಕೇಳುತ್ತಿದ್ದ. ಆ ಸಂಭಾಷಣೆಯನ್ನು ನೀವೇ ನೋಡಿ
ಸ್ನೇಹಿ : ಬಸು ಸಾರ್ ಯಾಕೆ ಯಾವಾಗಲೂ ಸರ್ಕಾರೀ ಯೋಜನೆಗಳಿಗೆ ಅಂಟಿಕೊಂಡಿರ್ತಾರೇ?
ನಾನು: ಹಂಗೇನಿಲ್ಲ.. ಯೋಜನೆಗಳೇ ಕಬ್ಬಿಣದ್ ಚೂರ್ಗಳಂಗೆ ಬಂದು ಇರ್ವಗಂಟ್ಕೊಂತಾವೆ.
ಸ್ನೇಹಿ: ಬೇರೆಯರ್ವಗೆ ಯಾಕ್ ಅಂಟ್ಕೊಳಾಕಿಲ್ಲ…?
ನಾನು: ನನಿಗ್ಗೊತ್ತಿಲ್ಲ…
ಸ್ನೇಹಿ: ಆನುದೇವಾ ಹೊರಗಣವನು, ಕೈರ್ಲಾಂಜಿ, ಅಸ್ಪುರ್ಶ್ಯವಸಂತ, ರೈತರ ಆತ್ಮಹತ್ಯನಂಹ ಇಶ್ಯೂಸ್ನ ತೊಗೋಬಹುದಾಗಿತ್ತಲ್ಲ,
ನಾನು: ಮಹಿಳೆ ಮೇಲಿನ ಅತ್ಯಾಚಾರ ಇಶ್ಯು ಇತ್ತಲ್ಲ ನಾಟಕದ್ಲ್ಲಿ
ಸ್ನೇಹಿ: ಏನೇ ಆಗ್ಲಿ ನಮ್ ಬಸು ಸಾರ್ ಮೊದ್ಲಂಗಿಲ್ಲ…
ನಾನು: ನೀನೂ ಅಷ್ಟೇ, ನಾನೂ ಅಷ್ಟೇ ಈ ಕಾಲ್ವೇ ಅಂತದ್ದು
ಸ್ನೇಹಿ: ಏನೇ ಅಗ್ಲಿ ನಮ್ಗಾಗಾ ಬೀದಿನಾಟ್ಕ ಮಾಡಿಸ್ತಿದ್ದ ನಮ್ ಬಸು ಸರ್ರೇ ಬೆಸ್ಟು
ನಾನು: ಈಗ್ಲೂ ಅದ್ನ ಬೀದೀಲೇನಪ್ಪಾ ಮಾಡ್ಸಿರೋದು..
ಸ್ನೇಹಿ: ಅಷ್ಟೋಂದು ಹಣನ ಒಂದೇ ಕಡೆ ಸುರಿಯೋಕ್ಕಿಂತ ಚಿಕ್ ಚಿಕ್ಕದಾಗಿ ಬೇರ್ಬೇರೆ ಪ್ರಕಾರಗಳನ್ನ ಈ ಬ್ರಾಡ್ವೇ ವೇ, ಆಫ್ ಆಫ್ ಬ್ರಾಡ್ವೇ ಥರ ಮಾಡ್ಬೋದಾಗಿತ್ ಲ್ವಾ….
ನಾನು: ನಮ್ದೆಲ್ಲಾ.. ನೋ.. ಆಫ್ ವೇ, ಓನ್ಲೀ ಹೈವೇನೇ…..
ಸ್ನೇಹಿ:————-
ನಾನು: ಅದೆಲ್ಲ ಬೇಡ ಸಾರ್, ನಾವಿನ್ನೂ ಚಿಕ್ಕವರು…..
ಆತ್ಮೀಯರೇ, ನಾನು ಇಷ್ಟಪಡುವ ಬಸು ಸಾರ್ರವರ ರಂಗಕೃತಿಗಳಲ್ಲಿ ಸಾಮಾಜಿಕ ನ್ಯಾಯದ ಕೂಗು, ವೈಚಾರಿಕತೆಯ ಪ್ರಖರತೆಯನ್ನು ಈ ಹಿಂದೆ ನೋಡಿದ್ದೇನೆ, ಅನುಭವಿಸಿದ್ದೇನೆ, ಮತ್ತು ಅದಕ್ಕೆ ಕೃತಜ್ಞನಾಗಿದ್ದೇನೆ. ಘನವೆತ್ತ ಭಾರತೀಯ ರಂಗಭೂಮಿಯ ನಿರ್ದೇಶಕರಾಗಿ ಅವರ ಕೊಡುಗೆ ಸ್ಮರಣೀಯವಾದುದು, ಅವರರ ಬಗೆಗಿನ ಗೌರವ ಪ್ರೀತಿ ಶಾಶ್ವತವಾದದ್ದು, ಆದರೆ ರಂಗಭೂಮಿಯಲ್ಲಿ ಈ ನಂ 1 ಛಾಳಿ ಬಂದಿರುವುದೋ ಅಥವಾ ಭಟ್ಟಂಗಿಗಳು ಹೊನ್ನಶೂಲಕ್ಕೇರಿಸಿರುವುದೋ… ಕಾಣದಾಗಿದೆ. ಈ ಹಿಂದೆ ಮೈಸೂರಿನ ಪ್ರಯೋಗದ ನಂತರ ಬೆಂಗಳೂರಿನಲ್ಲಿ ನಡೆದ ಸಭೆಯೊಂದರಲ್ಲಿ ಜನಪ್ರಿಯತೆಯ ಪರಾಕಾಷ್ಟೆಗೆ ಬಸು ಸಾರ್ನ ಒಳಗೊಂಡಂತೆ ಕೆವೈನ್ , ಹಂಸಲೇಖರಿಗೆ ಕಿ.ರಂ ಬೀಸಿದ್ದ ಚಾಟಿ ಏಟು ಅದೇಕೋ ನೆನಪಾಗುತ್ತಿದೆ. ಕೀ.ರಂ ಸಾರ್ ನೀವು ಇಲ್ಲದೇ ಹೋದಿರಲ್ಲಾ…..


(ಇಲ್ಲಿ ನನ್ನ ಅಭಿಪ್ರಾಯಗಳನ್ನಷ್ಟೇ ಹೇಳಬಯಸಿದ್ದೇನೆ, ಅಭಿಪ್ರಾಯ ತಿಳಿಸುವ ಹಕ್ಕು ಇದೆ ಎಂದು ಸಂವಿಧಾನದಲ್ಲಿ ಓದಿದ್ದ ನೆನಪು, ಅನ್ಯತಾ ತಪ್ಪು ತಿಳಿಯಬೇಡಿ)
 
 

‍ಲೇಖಕರು G

June 6, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Aravind

    Tappu thiliyoaden banthu idralli? iddaddanna idda haage bardideera. Adakke khushi padbeku.

    ಪ್ರತಿಕ್ರಿಯೆ
  2. N.Narayanaswamy

    G.N.Mohan ravarige
    sanivarada ratriyalli
    neevu sikkidde adbutha
    adarallu nimma avadhi yalli baruva kathe kavithe
    prasangagalanthu
    adbuthavo adbutha
    ondu dina avadhi nodadiddare
    butadanthe kaduttiruttade
    adara nenupu
    nimaganthu namma anatha namaskaragalu
    sir

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: