ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ನಾಳೆ ನೀ ಸತ್ತರ ಯಾರು ಬರಂಗಿಲ್ಲಾ…..' – ಪ್ರಶಾಂತ್ ಆಡೂರ್
ಪ್ರಶಾಂತ್ ಆಡೂರ್ ನಾ ಹಿಂಗ ಆಫೀಸಿಗೆ ಬಂದ ಇನ್ನೇನ ಸಿಸ್ಟಿಮ್ ಆನ್ ಮಾಡಬೇಕು ಅನ್ನೋದರಾಗ ನಮ್ಮ ಸುಬ್ಯಾಂದ ಫೋನ ಬಂತ. ನಂಗ ಅವಂದ ಫೋನ ಬಂದರ ಸಾಕ ಹೆದರಕಿನ ಬರತದ. ಯಾಕಂದರ ಅಂವಾ ೯೦% ಫೋನ ಮಾಡೋದ ಯಾರರ ಸತ್ತದ್ದ ಸುದ್ದಿ ಹೇಳಲಿಕ್ಕೆನ. ಆ ಸತ್ತೋರ ನಮಗ ಪರಿಚಯ ಇರಲಿ ಬಿಡಲಿ ಒಟ್ಟ ಅವರ ಹೆಸರ ನಾವ ಕೇಳೇವಿ ಅಂದರ ಸಾಕ ನಮಗ...
ಆಂಕಿತಾ, ಜೋಗಿ, ಸೂರಿ ಮತ್ತು ಯೋಗರಾಜ್ ಭಟ್
ನಾಳೆ 'ಅಂಕಿತಾ ಪುಸ್ತಕ'ದಿಂದ ಪುಸ್ತಕ ಸಂಭ್ರಮ. ಪುಸ್ತಕದ ಆಹ್ವಾನ ಪತ್ರಿಕೆ, ಮುಖಪುಟ ಮತ್ತು ಜೋಗಿ ಪುಸ್ತಕಕ್ಕೆ ಯೋಗರಾಜ್ ಭಟ್ ಬರೆದ ಮುನ್ನುಡಿ ’ಅವಧಿ’ ಓದುಗರಿಗಾಗಿ. ಯೋಗರಾಜ್ ಭಟ್ ಬರೆದಿದ್ದಾರೆ : ಹಸಿವು-ದುಡಿಮೆ-ಬೊಜ್ಜು-ವ್ಯಾಯಾಮ-ಅಹಂಕಾರ-ಆರೋಗ್ಯ-ಅನಾರೋಗ್ಯ ಹಾಗೂ ಸಾವು ನಮ್ಮ ದೇಹದ ಜೊತೆ ಸದಾ ಇರುವ...
ಲಕ್ಷ್ಮಿಕಾಂತ್ ಇಟ್ನಾಳ್ ಅನುವಾದಿಸಿದ ಗುಲ್ಜಾರ್ ಕವನ
ಅನುವಾದ : ಲಕ್ಷ್ಮೀಕಾಂತ ಇಟ್ನಾಳ ಮೂಲ : ಗುಲ್ಜಾರ ಸಾಹಬ್ ಈ ಜಂಗಲೀ ಗಿಡಗಳ ರೆಂಬೆಗಳ ಮೇಲೆ ಕೆಲ ಶಬ್ದಗಳು ಚಿಗಿಯುವವು, ಕೆಲವೊಮ್ಮೆ, ಆದರೆ, ಹಾಡಾಗುವುದಿಲ್ಲ ಯಾವುದೂ.......! ಈ ಗಿಡಗಳಿಗೆ ಹೊಟ್ಟೆತುಂಬ ಎಂದೂ ಸಿಗದು ಬೇರುಗಳಿಂದ ಮಣ್ಣನ್ನು ಗಟ್ಟಿಯಾಗಿ ಹಿಡಿವಷ್ಟು ಕೂಳು, ಬೇರುಗಳನ್ನು ಪೋಷಿಸಲು ಇವುಗಳಿಗೆ ಸಿಗುವುದಿಲ್ಲ...
ಎಸ್ ಬಿ ಜೋಗೂರ ಪುಸ್ತಕ ’ನೀನ್ಯಾಕೊ ನಿನ್ನ ಹಂಗ್ಯಾಕೊ’
ದೇರಾಜೆ ನೆನಪಿನಲ್ಲಿ..
ಸಂಧ್ಯಾರಾಣಿ ಕಾಲಂ : ಪಿ ಸಾಯಿನಾಥ್ ಲೋಕದಲ್ಲಿ ನನ್ನ ಪಯಣ
ಅಲ್ಲಿ ಮೂರು ಕಲ್ಲುಗಳನ್ನು ಒಂದರ ಮೇಲೊಂದರಂತೆ ಜೋಡಿಸಲಾಗಿತ್ತು, ಅದರ ಮೇಲೊಂದು ಮರದ ತುಂಡು. ಅದರ ಮೇಲೆ ಕಸರತ್ತು ಮಾಡುವಂತೆ ಆಕೆ ನಿಂತಿದ್ದಳು. ಆ ಕಲ್ಲುಗಳ ಆಕಾರ ಓರೆಕೋರೆ, ಗಾತ್ರ ಸಹ ಬೇರೆ ಬೇರೆ. ಆ ಮರದ ತುಂಡು ಮಾತ್ರ ಆಕೆಗೆ ನಿಲ್ಲಲು ಒಂದು ಸಪಾಟು ನೆಲೆ ಒದಗಿಸಿತ್ತು. ಆಕೆ ಮಹಾರಾಷ್ಟ್ರದ ಯವಾತ್ಮಲ್ ಜಿಲ್ಲೆಯ ಹೆಣ್ಣು. ಆ...
'ನಿನ್ನ ಕೋವಿಗೆ, ಕಲಿಸಿದ್ದು ಅದಾವ ಭಾಷೆ?' – ಎಂ ಎಂ ಶೇಕ್
೧೬/೧೨... ಎಂ ಎಂ ಶೇಕ್ ಅಮ್ಮೀ ಈ ಬೂಟು ಕಿತ್ತು ಹೋಗಿದೆ .. 'ನಾಳೆ' ನನಗೆ ಹೊಸ ಬೂಟು ಕೊಡಿಸು .. ಸರಿ ಬೇಟಾ ಹೊತ್ತಾಯಿತು ಈ 'ಕೊನೆ' ತುತ್ತು ತಿನ್ನು .. ಬೇಗ ನಡೆ ಅಬ್ಬು ಮಿಸ್ ಬೈತಾರೆ .. ಧಾವಂತದಲ್ಲಿ ಹಾಕಿದ ಆ ಹೆಜ್ಜೆಗಳು .. ಮರಳಿ ಬರಲಿಲ್ಲ ...... ಕಾದ ಕಣ್ಣುಗಳು ದಿಗಂತಕ್ಕೆ ಬೆನ್ನಟ್ಟಿದ್ದವು .....
ಪಾಲಹಳ್ಳಿ ವಿಶ್ವನಾಥ್ ಬರೆದ ಸಣ್ಣ ಕಥೆ
(ವಾ) ನರ ಪಾಲಹಳ್ಳಿ ವಿಶ್ವನಾಥ್ ಹನುಮಯ್ಯ ಬೆ೦ಗಳೂರಿನ ವಿಧಾನ ಸೌಧದಲ್ಲಿ ಕ್ಲರ್ಕ್ ಕೆಲಸ ಮಾಡುತ್ತಿದ್ದ. ಅವನಿದ್ದ ವಿಭಾಗದಲ್ಲಿ ಎರಡು ದಿನಗಳಿ೦ದ ಯಾವುದೋ ಸೆಮಿನಾರ್ ನಡೆಯುತ್ತಿದ್ದು ಶುಕ್ರವಾರ ಮಧ್ಯಾನ್ಹದ ವೇಳೆಗೆ ಮುಗಿಯಿತು. ಅವನ ಮೇಲಧಿಕಾರಿ ರಾಮಚ೦ದ್ರ ರಾವ್ ಖುಷಿಯಿ೦ದ ಎಲ್ಲರೂ ಮನೆಗೆ ಹೋಗಿ ಎ೦ದಿದ್ದರು. ಅದಲ್ಲದೆ ಎಲ್ಲರಿಗೂ...
'ಬಂಟ ಮಲೆಯೆಂಬ ಬದುಕ ತಾಣ…' – ಸ್ಮಿತಾ ಅಮೃತರಾಜ್
ಬಂಟ ಮಲೆಯೆಂಬ ಬದುಕ ತಾಣ... ಸ್ಮಿತಾ ಅಮೃತರಾಜ್ ಜನ ನಿಬಿಡ ಪ್ರದೇಶದಲ್ಲಿ, ಉಸಿರುಕಟ್ಟಿಸುವ ಪ್ಲಾಟ್ ಗಳಲ್ಲಿ ವೇಗದ ಬದುಕಿಗಂಟಿದ ಜನ ಅಷ್ಟೇ ಏದುಸಿರು ಬಿಟ್ಟುಕೊಂಡು ಓಡುತ್ತಿದ್ದಾರೆ.ಎಲ್ಲರೂ ಅವರವರ ಬದುಕಿಗಷ್ಟೇ ಸೀಮಿತವಾಗುತ್ತಿರುವ ಈ ಸಂಕುಚಿತ ಕಾಲಗಟ್ಟದಲ್ಲಿ ಎಲ್ಲರೂ ತಳಕು ಬಳುಕಿನ ಮೋಹಕ್ಕೊಳಗಾಗಿ...
ಅಂಜಲಿ ರಾಮಣ್ಣ ’ಜೀನ್ಸ್ ಟಾಕ್’ ಈಗ ಪುಸ್ತಕವಾಗಿ
ಡಾ ಶಿವಾನಂದ ಕುಬಸದ ’ನೆನಪಿನ ಪೆಟ್ಟಿಗೆಯಿಂದ’ : ಎಂದೂ ಮರೆಯದ ಎರಡು ಪಾಠಗಳು
ನನ್ನ ಮೂರು ದಶಕಗಳಿಗಿಂತ ಹೆಚ್ಚಿನ ಅವಧಿಯ ವೈದ್ಯಕೀಯ ಜೀವನದಲ್ಲಿ, ರೋಗಿ, ಅವರ ಸಂಬಂಧಿಕರು ಹಾಗೂ ನಮ್ಮ ನಡುವೆ ನಡೆದ ಹಲವು ಸಂತೋಷದ , ತೃಪ್ತಿದಾಯಕ ಘಟನೆಗಳನ್ನೂ, ಮತ್ತೆ ಮನಸ್ಸನ್ನು ಘಾಸಿಗೊಳಿಸುವ ಕೆಲವು ವಿದ್ಯಮಾನಗಳನ್ನೂ ಕಂಡಿದ್ದೇನೆ. ಜೊತೆಗೆ ಕೆಲವೊಮ್ಮೆ ಏನೂ ಅರಿಯದ ಮುಗ್ಧರೆಂದು ನಾನು ಭಾವಿಸಿಕೊಂಡ ರೋಗಿಗಳು, ಮತ್ತವರ...
ಬಾಲ್ಯದ ಆಟ, ಆ ಹುಡುಗಾಟ…
ಮತ್ತೆ ಬಾರದ ಬಾಲ್ಯ ಮಂಜುನಾಥ ಅಮರಗೋಳ ಆವತ್ತೊಂದಿನ ಗಂಟೆ ಎಂಟಾದರೂ ಕುಂಭಕರ್ಣನಂತೆ ಮಲಗಿಕೊಂಡೇ ಇದ್ದೆ. ಬಾಗಿಲಲ್ಲಿ ಯಾರೋ ಅವ್ವನೊಂದಿಗೆ ಮಾತಿಗಿಳಿದಿದ್ದರು. ‘ಮಕ್ಳು ಚಿಕ್ಕವರಿದ್ದಾಗ ಶ್ಯಾನೆ ಕಾಡ್ತಾವೆ ಕಣ್ರೀ’ ಅಂತಾ ಪಕ್ಕದ್ಮನೆ ಆಂಟಿ ಅವರ ಚಿಕ್ಕ ಮಗನ್ನಾ ನಾಲ್ಕೇಟು ಹಾಕಿ ಬೈಯ್ತಿದ್ರು. ವಿಶ್ವಾಮಿತ್ರನ ತಪಸ್ಸಿಗೆ...
ಸಂಕ್ರ ಒಟೆಲ್ಗೆ ಒಗಲ್ಲ ಅಂತಾನ, ಒಸಿ ಏಳಿ…
ಸಂಕ್ರನ್ನ ಕದ್ದರು ವಿನತೆ ಶರ್ಮ "ಬೇಡ ಕಣವ್ವೋ..." ನಿದ್ದೆ ಸುಂದರಿಯೆದೆ ಸೀಳಿದಾ ದನಿ. ಎಲ್ಲಿಯದು? ಯಾರಿಗೇನಾಯಿತು? ಮೃದು ನಿದ್ದೆಗೆ ಅಸಮಾಧಾನ. ಕನಸಿನ ಪಯಣಕ್ಕೆ ಕೊಕ್ಕೆ. ಗಾಯಗಳ ಮೈ. ಕೈಗಳ ಬೊಬ್ಬೆ, ಕೀವು. ಒಡೆದ ರಕ್ತ ಹೆಪ್ಪುಗಟ್ಟಿದ ಹಿಮ್ಮಡಿ. ಆಗಾಗ ಬಿಕ್ಕಿದ ಮುಖ. ಶಂಕ್ರನಿಗೇನಾಯಿತು? ಬೇಡಕಣವ್ವೋ... “ತುಂಬಾ...
’ಉಘೇ ಉಘೇ’ ಫೋಟೋ ಆಲ್ಬಂ
’ಗೋಮತಿ ಪ್ರಕಾಶನ’ದಿಂದ ಗುಬ್ಬಚ್ಚಿ ಸತೀಶ್ ಅವರ ಪುಸ್ತಕ ’ಉಘೇ ಉಘೇ’ ಪುಸ್ತಕದ ಬಿಡುಗಡೆ ಸಮಾರಂಭದ ಚಿತ್ರಗಳು ಪುಸ್ತಕ ಬಿಡುಗಡೆಯ ಚಿತ್ರಗಳು ನಿಮಗಾಗಿ [gallery link="file" columns="4"...
ಶಿವಮೊಗ್ಗೆಯಲ್ಲಿ ವಿಜಯನಗರ ಬಿಂಬ ನಾಟಕಗಳು
’ಕಾನೂರು ಹೆಗ್ಗಡಿತಿ ಕಾದಂಬರಿಯ ಪಾತ್ರಪ್ರಪಂಚ’ – ಬಿ ಆರ್ ಸತ್ಯನಾರಾಯಣ
ಬಿ ಆರ್ ಸತ್ಯನಾರಾಯಣ ಕಾನೂರು ಹೆಗ್ಗಡತಿ ಕಾದಂಬರಿ ರಚಿತವಾಗಿ, ಇದೇ ಡಿಸೆಂಬರ್ ೧೬ನೆಯ ತಾರೀಖಿಗೆ (ಕುವೆಂಪು ಮುನ್ನುಡಿಯ ದಿನಾಂಕ) ಸಾರ್ಥಕ ೭೮ ವರ್ಷಗಳು ತುಂಬುತ್ತವೆ. ನೆನಪಿನ ದೋಣಿಯಲ್ಲಿ ದಾಖಲಾಗಿರುವ ೧೭.೯.೧೯೩೩ರ ದಿನಚರಿಯಲ್ಲಿ ಹೀಗೆ ಹೇಳಿದೆ: ನಾನೊಂದು ಕಾದಂಬರಿಗೆ ವಸ್ತು ಸಂವಿಧಾನ ಪ್ರಾರಂಭಿಸಿದ್ದೇನೆ. ಹಗಲೆಲ್ಲ ಅದನ್ನೇ...
ಬ್ಯಾರಿ ಪೋರರ ನೆನಪುಗಳು
ಗುರು ಬಾಳಿಗಾ ಪಾಣೆಮಂಗಳೂರು ಎಂದರೆ ಕೊಂಕಣಿ ಸಾರಸ್ವತರು ೧೭-೧೮ನೇ ಶತಮಾನದಲ್ಲಿ ಕಟ್ಟಿದ ಒಂದಂಗುಲ ರಸ್ತೆಯ ಒಂದು ಪುಟ್ಟ ಪೇಟೆ. ಒಂದು ದೇವಸ್ಥಾನ, ಮೂರು ಮತ್ತೊಂದು ಶಾಲೆ, ಹದಿನೆಂಟು ಅಂಗಡಿಗಳು, ಆ ಪುಟ್ಟಪೇಟೆಗೆ ಹೆಚ್ಚಾಯ್ತು ಎಂಬಂತೆ ನಾಲ್ಕು ಬ್ಯಾಂಕು ಶಾಖೆಗಳು ಹೀಗೆ, ದಕ್ಷಿಣ ಕನ್ನಡದ ಇತರ ಪೇಟೆಗಳಂತೇ ಪಾಣೆಮಂಗಳೂರು....
ನನ್ನ ನಿನ್ನ ನಡುವೆ ಮಾತು ಮತ್ತು ಮೌನ
ಮೌನ - ಹೇಮಾ ಕಳ್ಳಂಬೆಳ್ಳ ನೀನು ಮಾತನಾಡಿ ನಾನೂ ಮಾತಾಡಿ ಇಬ್ಬರಿಗೂ ಜಗಳವಾಯ್ತು ನೀನು ಮೌನವಾಗಿ ನಾನು ಮಾತಾಗಿ ನನ್ನ ಮನಸು ಹಗುರಾಯ್ತು ನಾನು ಮೌನವಾಗಿ ನೀನು ಮಾತಾಡಿ ನನ್ನ ಮನಸು ಭಾರವಾಯ್ತು ಕೊನೆಗೆ ನೀನು ಮೌನವಾಗಿ ನಾನೂ ಮೌನವಾಗಿ ನಿನ್ನ ಮೌನದ ತೀರಕೆ ನನ್ನ ಮೌನದ ಅಲೆಗಳು ಅಪ್ಪಳಿಸಿ...
ನಾಟಕ ಬೆಂಗಳೂರಿನಲ್ಲಿ ಇಂದು ’ಇಲ್ಲ… ಅಂದ್ರೆ ಇದೆ!!’
ಕಲಾಭವನ ಕಲಾಗ್ರಾಮ ಸಂಜೆ : ೭ ಕ್ಕೆ
ರಾಜ್ಯಮಟ್ಟದ ಯುಗಾದಿ ಕಾವ್ಯ ಸ್ಪರ್ಧೆ
ಜೀವನ್ ಪ್ರಕಾಶನ, ಚಿಕ್ಕಬಳ್ಳಾಪುರ ಇವರಿಂದ ಕರ್ನಾಟಕದ ಉದಯನ್ಮೋಖ ಹಾಗೂ ಎಲೆಮರೆಯ ಕವಿಗಳನ್ನು ಬೆಳಕಿಗೆ ತರುವ ಸದುದ್ದೇಶದಿಂದ " ರಾಜ್ಯಮಟ್ಟದ ಯುಗಾದಿ ಕಾವ್ಯ ಸ್ಪರ್ಧೆ - 2015" ಹಮ್ಮಿಕೊಳ್ಳಲಾಗಿದೆ. ಆಸಕ್ತಿಯುಳ್ಳವರು ತಮ್ಮ ಕವನಗಳನ್ನು ಕಳುಹಿಸಬಹುದಾಗಿದೆ. ಸೂಚನೆಗಳು 01. ಕವಿತೆಗಳು 30 ಸಾಲುಗಳು ಮೀರಿರಬಾರದು. 02. ಕವಿಗಳು...
ನಿರ್ಭಯಾ ನೆನಪಿನಲ್ಲಿ ಒಂದು ಕಥೆ
"ನಾನು ಗಂಡಾಗಿ ಹುಟ್ಟುತ್ತಿದ್ದೇನೆ" ಚೈತ್ರಾ ಭವಾನಿ ನೀರಿಗೆ ಎಲ್ಲವನ್ನು ಮೆದುವಾಗಿಸೋ, ಮೃದುವಾಗಿಸೋ ಚೈತನ್ಯವಿದೆ. ದೇಹಕ್ಕಂಟಿದ ಎಷ್ಟೋ ಕಲ್ಮಶಗಳನ್ನು ತೊಳೆದುಬಿಡುತ್ತದಂತೆ! ಆದರೆ ನನ್ನ ಮನಸನ್ನು ತೊಳೆಯಲು ಯಾವ ಗಂಗೆಯಿಂದ ಸಾಧ್ಯ! ಹೆತ್ತಮ್ಮನಿಗೂ, ಹೊತ್ತ ಸಮಾಜಕ್ಕು!? ಸ್ನಾನದ ನಂತರ ಕನ್ನಡಿಯಲ್ಲೂ ನನ್ನ ತೊಗಲನ್ನು ಕಾಣಲು...
