'ಹಾಡು ಎಂದ ಕೂಡಲೇ ಹಾಡದು ಯಾವ ಕೋಗಿಲೆ …' – ಹೇಮಲತಾ

ಹೇಮಲತಾ

ಅಂವ ಅಂತಾನೆ ಒಮ್ಮೆ ಅಲ್ಲ ಹಲವು ಬಾರಿ ಪ್ರೀತಿ ಕ್ರಶ್ ಎಲ್ಲ ಆಗಿಹೋಗಿದೆ,ಮತ್ತೆಮತ್ತೆ ಆಗುತ್ತಲೇ ಇರುತ್ತದೆ.
ಮತ್ಯಾಕೆ ಪ್ರತಿದಿನ ಹೀಗೆ matrimonial siteನಲ್ಲಿ ಜಾಲಾಡುತ್ತಾ, ಪೆಚ್ಚಾಗುತ್ತ ,ಹುಚ್ಚಾಗೋದು?ತಿಂಗಳ ಪ್ರೀಮಿಯಂ ಬೇರೆ ದಂಡ .ನೀ ಸುವ್ವಿ ಅಂದಿದ್ದರೆ ಒಲ್ಲೆ ಅನ್ನೋಕೆ ಹುಡುಗಿಯರಿಗೆ ನೆಪವೂ ಇರಲಿಲ್ಲ.
ಗಟ್ಸ್ ಇಲ್ಲಾ ಅಂದ
ಹಾಂಮ್?
25ರ ಆಸುಪಾಸಿನ ಹರೆಯದಲ್ಲಿ ಎಲ್ಲ ಹುಡುಗರಿಗೂ ಪ್ರೀತಿ ಆದ್ದದ್ದೆ. ಹೇಳಿ, ಒಲಿಸಿಕೊಂಡು ಅವಳ ಮಾಯೆಯಲ್ಲಿ ಸಿಕ್ಕಿಹಾಕಿಕೊಂಡು ರಗಳರೋತೆಯಲ್ಲಿ ದಿನದಿನಾ ಮನಶಾಂತಿ ಕಳಕೊಂಡು , ಬ್ರಹ್ಮಚರ್ಯದ ಸರ್ವಸ್ವಾತಂತ್ರ್ಯ ಸುಖವನ್ನೆಲ್ಲ ಕಳಕೊಂಡು ಜೀವನದ ಮುಖ್ಯಕಾಲಘಟ್ಟವನ್ನ ವ್ಯರ್ಥಮಾಡಿಕೊಳ್ಳುತ್ತಿರುವ ಸಂಗಡದ ಹುಡುಗರ ನೋಡಿ ಅದರ ಸಹವಾಸವೇ ಬೇಡ ಅಂತ ಸುಮ್ಮನಾದೆ ಅಂದ
ನಿರಾಕರಣೆಯ ಭಯವೆ ಭಯ ಅಂದುಕೊಂಡಿದ್ದೆ , ಅದಕ್ಕಿಂತ ದೊಡ್ಡದು ಸ್ವಾತಂತ್ರ್ಯಹರಣದ ಭಯ!
ಕಡೆಗೊಮ್ಮೆ, ಮದುವೆಯಾದವಳನ್ನೇ ಪ್ರೀತಿಸುತ್ತೇನೆ ಎನ್ನುವ ಬುದ್ದಿವಂತ ನೀನು , ಸೇಫ್ ಗೇಮ್ ಪ್ಲೇಯರ್ ಅಂದೆ.
ಇಲ್ಲಾ ,ಮದುವೆಯಾದವರಲ್ಲಿ ತಿರುಗಿಬಂದು ನೆಮ್ಮದಿಯ ಲೆಕ್ಕ ಒಪ್ಪಿಸಿದ ಆದರ್ಶದಂಪತಿ , ಅನ್ಯೋನ್ಯ ಪ್ರೇಮಿಗಳು ಎಲ್ಲಿದ್ದಾರೆ ಅಂತ ನನ್ನೇ ತಿರುಗಿಕೇಳಿದ
ಮತ್ತೆ ಮದುವೆಯಲ್ಲಿ ನಂಬಿಕೆ ಇಲ್ಲವ ಕೇಳಿದೆ ..
ಮದುವೆ ಸಾಮಾಜಿಕ ಅನಿವಾರ್ಯ ,ಶೇಕಡವಾರು ನಂಬಿಕೆಯಿಲ್ಲ ಅಷ್ಟಕ್ಕೂ ಪ್ರೀತಿಗೂ ಮದುವೆಗೂ ಸಂಭಂದವೇ ಇಲ್ಲ ಭರವಸೆಯಷ್ಟೇ ಬದುಕು ಅಂತ ಉಳ್ಳಗೆ ನಕ್ಕ …ಆದರೂ ಅಂತ ನಂಬಿಕೆ ಸುಳ್ಳುಮಾಡಿ , ಜೀವನಸಂಗಾತಿಯಾಗುವವಳಿಗೆ ಕಾದಿದ್ದೇನೆ , ಕನವರಿಸುತ್ತಿದ್ದೇನೆ ಅಂತಂದು ಹಗಲುಗನಸು ಕಂಡ . …

ಇದನೆಲ್ಲ ಯಾರಾದರು ಉಡಾಫೆಯ ಬೇಜವಬ್ದಾರಿ ಸ್ವಭಾವದವನು ಹೇಳಿದ್ದರೆ ನಾನು ನಕ್ಕಿಬಿಟ್ಟಿರುತ್ತಿದ್ದೆ .ಟೀಂ ಲೀಡ್ ಅವನು , ಮೃದುಸ್ವಾಭಾವಿ,ವಿಪರೀತ ಬುದ್ಧಿವಂತ .
ಪ್ರೀತಿ ಆಗುತ್ತೆ, ಆದರೆ ಹೇಳಿ ಕಮಿಟ್ ಆಗಕ್ಕೆ ತಯಾರಿಲ್ಲ , ಮದುವೆ ಆಗುತ್ತೆ ಆದರೆ ನಂಬಿಕೆ ಇಲ್ಲ, ಸ್ವಾತಂತ್ರ್ಯವನ್ನಂತು ಕಳಕೊಳ್ಳಲು ಮನಸಿಲ್ಲ ..
ಒಂದು ಹಂತಕ್ಕೆ ಅರ್ಥವಾಯಿತು ಹುಡುಗರ ತಪತಪನೆ . ಈ ತರದ್ದೇ ಇನ್ನೊಂದಷ್ಟು ಸ್ನೇಹಿತರಿದ್ದರು , ನಮ್ಮ ಅಮ್ಮನ ವಿಷಯ ನಿನಗೆ ಗೊತ್ತಿಲ್ವೆ , ಯಾಕೆ ಬೇಕು ಆಮೇಲೆ, ಆರಿಸಿಕೊಂಡು ಹೋದವಳ ಮೇಲೆ ಯುದ್ಧಗಳು .. ನಾವು ಹುಡುಗರು ಸಾಯೋವರೆಗೂ ದುಡಿಯಬೇಕು , ಮನೆಯ ಕಾಳಗ ಕಚೇರಿವರೆಗೂ ಹೊತ್ತು ಸುಸ್ತುಮಾಡಿಕೊಳ್ಳೋಕೆ ಆಗಲ್ಲ ಅಂದವರು ..
ಪಾಪ ನಿರುಪದ್ರವಿಗಳು, ಮನೆ ಹೆಂಗಸರ ಮನಸು ಮೆದುಳಿಗೆ ಕೆಲಸ ಕಡಿಮೆ ಇರಬೇಕು , ನಾವೇನೋ ಅಡ್ಜಸ್ಟ್ ಮಾಡ್ಕೊತಿವಿ, ಮದುವೆ ಆದಮೇಲೆ ಎಲ್ಲ ಹುಡುಗಿಯರು ಒಂದೇ , ಎಲ್ಲರು ಮಾಡೋದು ಒಂದೇ ಅನ್ನುತ್ತಿದ್ದರು .
ಹುಡುಗರದ್ದು ಒಂದು ನಮೊನೆಯಾದರೆ, ಹುಡುಗಿಯರದ್ದು ಮತ್ತೊಂದು . ಅಂತು ಮದುವೆಗಳಂತು ಪಕ್ಷಪಕ್ಷದಲ್ಲಿ ಸಾಲುಸಾಲು ನಡೆಯುತ್ತಲೇ ಇರುತ್ತವೆ….
ಹಾಗೆ ಎಲ್ಲ ಒಂದೇ ಅಡ್ಜಸ್ಟ್ ಮಾಡ್ಕೊಂಡ್ರೆ ಆಯಿತು ಅಂದುಕೊಂಡಿದ್ದಳು ಅವಳು.
ಬೆಟ್ಟ ಬ್ಯಾಣ , ಚಿಟ್ಟೆ ನವಿಲು , ಮೋಡ ಪ್ರೇಮಿ ಅಂತೆಲ್ಲ ಕಲ್ಪಿಸಿಕೊಂಡು ಕವಿತೆ, ಹಾಡು ಅಂತಿದ್ದವಳಿಗೆ ಅವನೊಬ್ಬ ಗಂಟುಬಿದ್ದ. ಅವಳ ಕವನ ಅವನಿಗೆ ಬೇಕಿರಲಿಲ್ಲ , ಅವಳ ಹಾಡೆಂದರೆ ಮೈಯೆಲ್ಲಾ ಕೆಂಡ .. ಅವನದ್ದೇನ್ನಿದ್ದರು branded ಪ್ರಪಂಚ , ದುಡ್ಡು, ವ್ಯವಹಾರ, ವ್ಯಾಪಾರ ಮತ್ತು ಕೇವಲ ಅವನೊಬ್ಬನೇ … ಎಲ್ಲೆಲ್ಲು ಅವನೊಬ್ಬನೇ …. ಪಕ್ಕ ಅವಳಿದ್ದರೆ ಏನೋ ಅಳುಕು , ಏನೋ ಅನುಮಾನ , ಹಿಂಸೆ ನೀಡೆ ಪರೀಕ್ಷೆ … ತನ್ನ ಗಂಡಸುತನದ್ದು, ಅವಳ ಹೆಣ್ತನದ್ದು , ಮತ್ತು ಪ್ರೀತಿಯದ್ದು , ಅದಕ್ಕಿಂತ ಹೆಚ್ಚು ವ್ಯವಹಾರದ್ದು … ಹಿಂಸೆಯ ನೊಗಕ್ಕೆ ಕಟ್ಟಿದ ಗೋವಿನಹಾಡು ಸಂಸಾರ …
ಅವಳ ಕಣ್ಣಲ್ಲಿ ದಯನೀಯ ನೋಟವಿತ್ತು , ಶೂನ್ಯ ಖಾಲಿತನವಿತ್ತು , ಪಾಪದ ಕರ್ಮ ಬೆನ್ನುಹತ್ತಿ ಕೂತ್ತಿತ್ತು .. ಆಘಾತದಿಂದ ಇನ್ನು ಆಚೆ ಬಂದಿರಲಿಲ್ಲ . ಅಂತಕರಣದ ಕಣ್ಣಲ್ಲಿ ನೋಡಿದವನೊಬ್ಬ ಗಾಡಿ ನಿಲ್ಲಿಸಿದ , ನಾಲ್ಕು ಹೆಜ್ಜೆ ನಡೆದ…ಆಗುಂತಕರ ಮಧ್ಯೆ ಅನುಕಂಪದಾಚೆಗು ಸಮಾನ ನೆಲೆಯಿತ್ತು . ಹೆಚ್ಚೇನೂ ಪ್ರಯಾಸವಿಲ್ಲದ ಸರಾಗ ನಡಿಗೆಯಲ್ಲಿ ಆಡಂಬರವಿರದ ನಗು, ಮಾತು ಮೌನಗಳಲ್ಲಿ ಒಂದು ಮಾರ್ದನಿಸುವ ಮಿಡಿತವಿತ್ತು .ಹೇಳಿದರೆ ದೂರಾಗುವ ಭಯವೂ ಇತ್ತು .
ಮನೆಯ ಮಗು ಪಕ್ಕದ ಮನೆಯ ಗೆಳತಿಯೊಂದಿಗೆ ಆಡುತ್ತಿತ್ತು . ಅವರಿಬ್ಬರದೆ ಆಟದಲ್ಲಿ ಅವರಿಗಷ್ಟೇ ಸರಿಹೊಂದುವ , ಅವರಿಗಷ್ಟೇ ಅರ್ಥವಾಗುವ ಪ್ರಪಂಚ . ಅವಳ ಹೊರತು ಬೇರೆ ಪ್ರಪಂಚ ಅದಕ್ಕೆ ಬೇಡವಾಗಿತ್ತು . ಛೇಡಿಸಲು ಆಟ ಕೆಡಿಸುವಂತೆ ನಟಿಸುವವರು ನಾವು … ಮಕ್ಕಳಲ್ಲಿ ಪ್ರಾಮಾಣಿಕತೆ ಮತ್ತು ಹುಂಬ ಧೈರ್ಯವಿರುತ್ತದೆ. ತಮ್ಮ ಖುಷಿ ಕುರಿತ ಕಾಳಜಿ , ಮತ್ತದನ್ನು ಹಾಳುಮಾಡಿಕೊಳ್ಲದ ಭಂಡ ಹೋರಾಟ …
ಹೆಸರಿಡದ ಆನಂದದಲ್ಲಿ ಆತ್ಮಗಳು ಮೀಯುವಾಗ ಹೆಸರಿಸದ ಸಂಬಂಧಗಳ ಗೊಡವೆ ಹೊತ್ತುಕೊಳ್ಳದೆ ಗೆಳತಿಗೆ “ನೀನೆ ಬೇಕು ” ಅಂದು ಖುಷಿಯ ಉಳಿಸಿಕೊಂಡಿತು ಮಗು .
ನಾವು ಬೆಳೆದೆವು .. ಭಾಷೆ ಕಲಿತೆವು .. ಪ್ರಪಂಚದ ಸೂತ್ರಗಳಿಗೆ ಒಗ್ಗಿಸಿಕೊಂಡೆವು ….. ಸಂಬಂಧಗಳಿಗೆ ಹೆಸರು ಕೊಟ್ಟು, ಖುಷಿಗಳ ತರ್ಪಣ ಬಿಟ್ಟೆವು.. ಅದನ್ನೇ ನವ ನಾಗರೀಕತೆ ಎಂದೆವು
ಧೈರ್ಯ ಕಳಕೊಂಡು ಬೇರೆಬೇರೆಯಾದೆವು .. ವಿರಹದಲ್ಲೇ, ಕನಸಿನಲ್ಲೇ, ದೂರದಲ್ಲೇ , ಭ್ರಮೆಯಲ್ಲೇ ,ಕನಸಲ್ಲೇ ಬದುಕ ಮುಗಿಸಿ ಎಂದೂ ಪ್ರೀತಿ ಹೇಳದೆ , ಪಟ್ಟು ಹಿಡಿಯದೆ , ಸಂಗಾತ ಪಡೆಯದೇ ವಂಚಿಸಿಕೊಂಡೆವು …
ಯಾವ ಕೋಗಿಲೆಗೆ ಯಾವ ಮಾಮರದ ಸೊಗಸೋ… ಅಂವ ಅಂತಾನೆ ಹಾಡು ಎಂದ ಕೂಡಲೇ ಹಾಡದು ಯಾವ ಕೋಗಿಲೆ …
 

‍ಲೇಖಕರು G

February 17, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. D.Ravivarma

    ಮನೆಯ ಮಗು ಪಕ್ಕದ ಮನೆಯ ಗೆಳತಿಯೊಂದಿಗೆ ಆಡುತ್ತಿತ್ತು . ಅವರಿಬ್ಬರದೆ ಆಟದಲ್ಲಿ ಅವರಿಗಷ್ಟೇ ಸರಿಹೊಂದುವ , ಅವರಿಗಷ್ಟೇ ಅರ್ಥವಾಗುವ ಪ್ರಪಂಚ . ಅವಳ ಹೊರತು ಬೇರೆ ಪ್ರಪಂಚ ಅದಕ್ಕೆ ಬೇಡವಾಗಿತ್ತು . ಛೇಡಿಸಲು ಆಟ ಕೆಡಿಸುವಂತೆ ನಟಿಸುವವರು ನಾವು … ಮಕ್ಕಳಲ್ಲಿ ಪ್ರಾಮಾಣಿಕತೆ ಮತ್ತು ಹುಂಬ ಧೈರ್ಯವಿರುತ್ತದೆ. ತಮ್ಮ ಖುಷಿ ಕುರಿತ ಕಾಳಜಿ , ಮತ್ತದನ್ನು ಹಾಳುಮಾಡಿಕೊಳ್ಲದ ಭಂಡ ಹೋರಾಟ …
    ಹೆಸರಿಡದ ಆನಂದದಲ್ಲಿ ಆತ್ಮಗಳು ಮೀಯುವಾಗ ಹೆಸರಿಸದ ಸಂಬಂಧಗಳ ಗೊಡವೆ ಹೊತ್ತುಕೊಳ್ಳದೆ ಗೆಳತಿಗೆ “ನೀನೆ ಬೇಕು ” ಅಂದು ಖುಷಿಯ ಉಳಿಸಿಕೊಂಡಿತು ಮಗು .
    ನಾವು ಬೆಳೆದೆವು .. ಭಾಷೆ ಕಲಿತೆವು .. ಪ್ರಪಂಚದ ಸೂತ್ರಗಳಿಗೆ ಒಗ್ಗಿಸಿಕೊಂಡೆವು ….. ಸಂಬಂಧಗಳಿಗೆ ಹೆಸರು ಕೊಟ್ಟು, ಖುಷಿಗಳ ತರ್ಪಣ ಬಿಟ್ಟೆವು.. ಅದನ್ನೇ ನವ ನಾಗರೀಕತೆ ಎಂದೆವು
    ಧೈರ್ಯ ಕಳಕೊಂಡು ಬೇರೆಬೇರೆಯಾದೆವು .. ವಿರಹದಲ್ಲೇ, ಕನಸಿನಲ್ಲೇ, ದೂರದಲ್ಲೇ , ಭ್ರಮೆಯಲ್ಲೇ ,ಕನಸಲ್ಲೇ ಬದುಕ ಮುಗಿಸಿ ಎಂದೂ ಪ್ರೀತಿ ಹೇಳದೆ , ಪಟ್ಟು ಹಿಡಿಯದೆ , ಸಂಗಾತ ಪಡೆಯದೇ ವಂಚಿಸಿಕೊಂಡೆವು …
    ಯಾವ ಕೋಗಿಲೆಗೆ ಯಾವ ಮಾಮರದ ಸೊಗಸೋ… ಅಂವ ಅಂತಾನೆ ಹಾಡು ಎಂದ ಕೂಡಲೇ ಹಾಡದು ಯಾವ ಕೋಗಿಲೆ …
    claassi

    ಪ್ರತಿಕ್ರಿಯೆ
  2. ಪ್ರಮೋದ್

    ಮನಸ್ಸಿನ ತುಮುಲಗಳು ಜೀವನದ ಜೋಕಾಲಿಯಲ್ಲಿ ಸುಳಿ ಗಾಳಿಯ ಜೊತೆ ಗುದ್ದಾಡುತ್ತಿವೆ. ತು೦ಬಾ ಮಾರ್ಮಿಕವಾಗಿದೆ ಲೇಖನ.

    ಪ್ರತಿಕ್ರಿಯೆ
  3. Anonymous

    Vageesha mattu ravivarma avare mecchidakke dhanyavaadha …
    kusuma bale: 🙂 neevu mecchuddu nanna punya 🙂
    pramod : nimagu heege anside ataaytu 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: