'ಮಲೆಗಳಲ್ಲಿ ಮದುಮಗಳು' ನೋಡುವ ಮುನ್ನ ಈ ಟಿಪ್ಪಣಿ ಮಾಡಿಕೊಳ್ಳಿ

ಮಲೆಗಳಲ್ಲಿ ಮದುಮಗಳ ಪ್ರಪಂಚ

ಬಿ ಆರ್ ಸತ್ಯನಾರಾಯಣ್

ನನ್ದೊಂದ್ಮಾತು

 
’ಏನು ಕಾಫಿಗೆ ಬರುವುದಿಲ್ಲವೆ?’
’ತಾಳು ತಾಳು ಚಿನ್ನಮ್ಮ ತಪ್ಪಿಸಿಕೊಂಡು ಹೋಗಬೇಕು ಹಂಡೆ ಸದ್ದಾಗುತ್ತಿದೆ’
’ಚಿನ್ನಮ್ಮಗೆ ಏನೂ ತೊಂದರೆಯಿಲ್ಲ. ತಪ್ಪಿಸಿಕೊಂಡು ಹೋಗುವಳು ನೀವು ಬಂದು ಕಾಫಿ ಕುಡಿದು ಹೋಗಿ’
ಅರ್ಧ ಗಂಟೆಯ ನಂತರ ಕಾಪಿ ಕುಡಿಯುತ್ತಾ,
’ಚಿನ್ನಮ್ಮ ತಪ್ಪಿಸಿಕೊಂಡು ಹೋದಳೆ?’
’ಹ್ಞೂ ಅವಳು ಕ್ಷೇಮವಾಗಿ ಹುಲಿಕಲ್ಲು ನೆತ್ತಿ ಹತ್ತಿದಳು’
ಈ ಸಂಭಾಷಣೆ ಕುವೆಂಪು ದಂಪತಿಗಳದ್ದು. ಮಲೆಗಳಲ್ಲಿ ಮಧುಮಗಳು ಕಾದಂಬರಿ ರಚನೆಯಾಗುತ್ತಿದ್ದ ಕಾಲದ ಒಂದು ದಿನ ಸಂಜೆ ಕಾಫಿಯ ಸಮಯದಲ್ಲಿ ನಡೆದದ್ದು. ಇದನ್ನು ಸೊಗಸಾಗಿ ತಾರಿಣಿಯವರು ’ಮಗಳು ಕಂಡು ಕುವೆಂಪು’ ಕೃತಿಯಲ್ಲಿ ದಾಖಲಿಸಿದ್ದಾರೆ.
ಮೊದಲು ಪ್ರಾರಂಭವಾಗಿ, ಒಂದೆರಡು ಅಧ್ಯಾಯಗಳನ್ನು ಬರೆದು ಮುಗಿಸಿದ ಮೇಲೆ, ನಂತರ ಸುಮಾರು ೩೦ ವರ್ಷಗಳಾದ ಮೇಲೆ ಮೂರು ವರ್ಷಗಳ ಕಾಲ ಬರೆಯಿಸಿಕೊಂಡು ಕಾದಂಬರಿ ಇದು! ಅದು ಹೇಗೆ ಸಾಧ್ಯವಾಯಿತು? ಇದಕ್ಕೂ ಉತ್ತರ ತಾರಿಣಿಯವರ ಕೃತಿಯಲ್ಲಿ ಸಿಗುತ್ತದೆ.
ಕುವೆಂಪು ನಿವೃತ್ತರಾದ ಮೇಲೆ ಮನೆಯಲ್ಲಿ ಅರಾಮವಾಗಿದ್ದಾಗ ಒಂದು ದಿನ ಪುಸ್ತಕದ ಬೀರುವಿನಲ್ಲಿ ಏನನ್ನೋ ಹುಡುಕುತ್ತಿರುತ್ತಾರೆ. ತಾರಿಣಿ ’ಏನು?’ ಎಂದು ಕೇಳಿದಾಗ, ’ಅಕ್ಕಾ ಎಲ್ಲಾದರೂ ನನ್ನ ಪುಸ್ತಕಗಳ ಬೀರುವಿನಲ್ಲಿ ಆ ಕಾದಂಬರಿಯ ಮ್ಯಾಪ್ ಇದೆಯೇ ನೋಡುವೆಯಾ? ನಿನಗೆ ಸಮಯವಾದಾಗ ಹುಡುಕು’ ಎನ್ನುತ್ತಾರೆ. ’ಅದು ಹೇಗಿದೆ ಅಣ್ಣಾ?’ ಎನ್ನುವ ಪ್ರಶ್ನೆಗೆ, ಒಂದು ಫುಲ್ ಸ್ಕೇಪ್ ಬಿಳಿ ಹಾಳೆ, ಅದರಲ್ಲಿ ಎಲ್ಲಾ ಬರೆದಿರುವೆ’ ಎಂಬ ಉತ್ತರ ದೊರೆಯುತ್ತದೆ.

ಕೆಲ ದಿನಗಳ ನಂತರ, ಕುವೆಂಪು ತಮ್ಮ ಹಸ್ತಪ್ರತಿಗಳನ್ನು ಒಂದೊಂದೇ ತೆಗೆದು ನೋಡುತ್ತಿದ್ದಾಗ ಆ ಹಾಳೆ ಸಿಗುತ್ತದೆ. ಅವರು ಸಂತೋಷದಿಂದ ಅಲ್ಲಿಯೇ ಇದ್ದ ತಾರಿಣಿಗೆ ’ಅಕ್ಕಾ ಇಲ್ಲಿ ನೋಡು, ಅಂತೂ ಈ ಕಾದಂಬರಿ ಮ್ಯಾಪ್ ಸಿಕ್ಕಿತು’ ಎಂದು ಹರ್ಷದಿಂದ ಹೇಳುತ್ತಾರೆ.
(ತಾರಿಣಿಯವರ ಮಾತಿನಲ್ಲೇ ಹೇಳುವುದಾದರೆ) ಬಹಳ ಹಳೆಯದಾದ ಒಂದು ಕಾಗದದ ಹಾಳೆ. ಆ ಕಾಗದದ ಬಣ್ಣ ಮಾಸಿತ್ತು. ಬಿಳಿ ಬಣ್ಣ ಹೋಗಿ ಮಾಸಲು ಕೆಂಪು ಬಣ್ಣ ಬಂದಿತ್ತು. ಮಡಿಕೆಯಾದ ಜಾಗದಲ್ಲಿ ಸ್ವಲ್ಪ ಹರಿದಿತ್ತು. ಕಾಗದದಲ್ಲಿ ತಲೆಬರಹ ದೊಡ್ಡದಾಗಿ ಮಲೆಗಳಲ್ಲಿ ಮದುಮಗಳು ಎಂದು ಬರೆದಿತ್ತು. ಆ ಕಾಗದದ ತುಂಬ ಏನೇನೋ ಅತ್ತ ಇತ್ತ ಗೀರು, ಗೀರಿನ ಕೆಳಗೆ, ಮಧ್ಯೆ, ಪಕ್ಕ, ಕಾದಂಬರಿ ಪಾತ್ರಗಳ ಹೆಸರು, ಸ್ಥಳಗಳ ಹೆಸರು, ಊರಿನ ಹೆಸರು, ಬಾಣದ ಗುರುತುಗಳು, ಅಡ್ಡಗೀರು, ಉದ್ದಗೀರು, ತ್ರಿಕೋಣಗೆರೆಗಳು ಹೀಗೆ ಎಲ್ಲಾ ಕಡೆ ಚಿತ್ತಾರವಾಗಿ ನೋಡಿದವರಿಗೆ ಏನೂ ಅರ್ಥವಾಗುತ್ತಿರಲಿಲ್ಲ!
ಅದನ್ನು ನೋಡಿದ ತಾರಿಣಿಯವರು ’ಇದೇನಣ್ಣಾ ಈ ಮ್ಯಾಪ್ ಹೀಗಿದೆ? ನಾನು ಏನೋ ಬೇರೆಯೇ ತರವೇ ಊಹಿಸಿದ್ದೆ. ನನ್ನಿಂದ ಈ ಮ್ಯಾಪ್ ಹುಡುಕಲು ಆಗುತ್ತಿರಲಿಲ್ಲ’ ಎನ್ನುತ್ತಾರೆ. ಮತ್ತಿನ್ನೇನು? ಭೂಗೋಳ ಮ್ಯಾಪ್ ಹಾಗೆ ಇದರಲ್ಲಿ ಚಿತ್ರ ಬರೆದಿರುವೆ ಎಂದು ತಿಳಿದೆಯಾ? ಇಡೀ ಕಾದಂಬರಿ ಹೇಗೆ ಚಿತ್ರಿತವಾಗುವುದು ಎಂದು ಸ್ಥೂಲವಾಗಿ ಗುರುತು ಹಾಕಿದ್ದೆ. ಸಿಕ್ಕಿದ್ದು ಒಳ್ಳೆಯದಾಯಿತು. ಮತ್ತೆ ಬರೆಯಲು ಪ್ರಾರಂಭಿಸುವೆ. ಅಂತೂ ಸಧ್ಯ ಬೇಗ ಸಿಕ್ಕಿತಲ್ಲಾ. ಮೂವತ್ತು ವರ್ಷಗಳ ಹಿಂದೆ ಬರೆದಿಟ್ಟಿದ್ದು. ಹಾಳಾಗದೇ ಉಳಿದದ್ದೇ ಆಶ್ಚರ್ಯ’ ಎನ್ನುತ್ತಾರೆ.
ಆ ಕಾದಂಬರಿ ಮ್ಯಾಪ್ ಸಿಗದಿದ್ದರೆ…!?
ಮಲೆಗಳಲ್ಲಿ ಮದುಮಗಳು ಎಂಬ ಮಹಾ ಕಾದಂಬರಿ ಸೃಷ್ಟಿಯಾಗುತ್ತಿರಲೇ ಇಲ್ಲವೇನೋ! ಆದರೆ ಶ್ರೇಷ್ಠ ಸಾಹಿತ್ಯ ಕೃತಿಯೊಂದು ಜನ್ಮ ತಳೆಯುವುದು ಆ ಭುವನದ ಭಾಗ್ಯವಲ್ಲವೆ!
ತಾರಿಣಿಯವರ ಪುಸ್ತಕದಲ್ಲಿ ಈ ಘಟನೆಯನ್ನು ಓದಿದ ಮೇಲೆ, ಇಷ್ಟೊಂದು ಸಂಕೀರ್ಣ ಸಂರಚನೆಯುಳ್ಳ ಕಾದಂಬರಿ ಮೊದಲ ಬಾರಿಗೆ ಓದುಗನನ್ನು ಬೆಕ್ಕಸಬೆರಗುಗೊಳಿಸುವ ಈ ಕಾದಂಬರಿಯ ಬಗ್ಗೆ ನನಗೆ ಸಾಧ್ಯವಾದ ಹಾಗೆ ಓಂದು ಮ್ಯಾಪ್ ರಚಿಸಬೇಕೆಂದು ಕೊಂಡೆ, ವರ್ಷಗಳ ಹಿಂದೆಯೇ! ಆದರೆ ಅದನ್ನು ಮರು ಓದಿಗೆ ಒಳಪಡಿಸಿದ್ದು ತೀರಾ ಇತ್ತೀಚಿಗೆ. ಒಂದು ವಾರಗಳ ಕಾಲ ಓದುತ್ತಾ ವ್ಯಕ್ತಿನಾಮ, ಸ್ಥಳನಾಮ, ಪರಸ್ಪರ ಸಂಬಂಧಗಳನ್ನು ಗುರುತಿಸಿಕೊಳ್ಳುತ್ತಾ ಹೋದ ಹಾಗೆ ತೆರೆದುಕೊಂಡಿದ್ದೇ ಒಂದು ದೊಡ್ಡ ಪ್ರಪಂಚ!
ಒಂದು ಮಹಾ ಕಾದಂಬರಿ ಹೇಗೆ ಇರುತ್ತದೆ. ವರ್ತಮಾನದಲ್ಲಿದ್ದುಕೊಂಡೇ ಭೂತಕಾಲದಲ್ಲಿಯೂ ವಿಹರಿಸುತ್ತಾ ಭವಿಷ್ಯದತ್ತ ಸಾಗುವ ಅಚ್ಚರಿ! ಮೊದಲ ಸುಮಾರು ೨೦೦ ಪುಟಗಳ ಕಥೆ ಕೇವಲ ಒಂದು ದಿನದಲ್ಲಿ ನಡೆಯುವ ಘಟನೆಗಳು. ಇಡೀ ಕಾದಂಬರಿ ಸುಮಾರು ಒಂದು ಮಳೆಗಾಲ ಪ್ರಾರಂಭವಾಗಿ ಮುಗಿಯುವ ಮೊದಲೇ ಮುಗಿದು ಹೋಗುತ್ತದೆ. ಎಂಟನೂರಕ್ಕೂ ಅಧಿಕ ಪುಟಗಳಲ್ಲಿ ಕಾಲ ದೇಶಗಳನ್ನು ಮೀರಿ ನಡೆಯುವ ಘಟನೆಗಳು ಕಿಕ್ಕಿರಿದಿವೆ. ನೂರಾರು ಪ್ರಾಣಿ ಪಕ್ಷಿಗಳ ಹೆಸರುಗಳು ದಟ್ಟೈಸಿವೆ. ಮರಗಿಡಗಳ ಪ್ರಸ್ತಾಪವಾಗುತ್ತದೆ. ಮೇಲಿನವುಗಳಲ್ಲದೆ ಅಸಂಖ್ಯಾತ ಅನಾಮಿಕ ಪಾತ್ರಗಳು, ಜಾಗಗಳು ಪ್ರಸ್ತಾಪವಾಗುತ್ತವೆ. ಇಷ್ಟೊಂದು ಪಾತ್ರಗಳು ಅವುಗಳ ಮನೋಭಾವ, ಕಾರ್ಯವಿಧಾನ, ವೃತ್ತಿ, ಸಂಬಂಧಗಳು ಎಲ್ಲವನ್ನೂ ಕವಿ ನಿಭಾಯಿಸಿರುವುದು ಅದ್ಭುತ!
ಎಲ್ಲಿಯಾದರೂ ಸರಿ, ಹೇಗಾದರೂ ಸರಿ ಒಂದಿಷ್ಟೂ ಗೊಂದಲ ಕಾದಂಬರಿಕಾರನಿಗೆ ಬಂದಿರಬಹುದಲ್ಲ ಎನ್ನುವ ಸಹಜ(ಕೆಟ್ಟ)ಕುತೂಹಲ ಉತ್ತರವಾಗಿ ಸಿಕ್ಕಿದ್ದು ಎರಡು ಸನ್ನಿವೇಶಗಳು. ಅದರಲ್ಲು ಒಂದು ಸನ್ನಿವೇಶ ಕಾದಂಬರಿಕಾರನ ಉದ್ದೇಶಪೂರ್ವಕ ನಡೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಮತ್ತೊಂದು ಇಬ್ಬರು ವ್ಯಕ್ತಿಗಳ ಹೆಸರು ಮತ್ತು ವೃತ್ತಿಯ ಅದಲು ಬದಲು ಅಷ್ಟೆ!
ಈ ಕೆಳಗೆ ನಾನು ಪಟ್ಟಿ ಮಾಡಿರುವ ಸ್ಥಳಗಳು, ಪಾತ್ರಗಳು, ಅವುಗಳ ಪರಸ್ಪರ ಸಂಬಂಧಗಳನ್ನು ಗಮನಿಸಿದರೆ ಮಹಾಕಾದಂಬರಿಯೊಂದರ ಅರಹು ಹೇಗಿರುತ್ತದೆ ಹಾಗೂ ಹೇಗಿರಬೇಕು ಎಂದು ತಿಳಿಯುತ್ತದೆ. ಮಲೆಗಳಲ್ಲಿ ಮದುಮಗಳು ಓದುವುದಕ್ಕೆ ಪೂರ್ವಭಾವಿಯಾಗಿ ಈ ಸಿದ್ಧಟಿಪ್ಪಣಿ ಒಳ್ಳೆಯ ಪ್ರವೇಶವಾಗಬಹುದು.

ಕಾದಂಬರಿಯ ಬಿಚ್ಚಿಕೊಳ್ಳುವ ಪ್ರಮುಖ ಸ್ಥಳಗಳು
ಸಿಂಬಾವಿ (ಭರಮೈ ಹೆಗ್ಗಡೆಯ ಮನೆ)
ಸೀತೂರುಗುಡ್ಡ (ಸಿಂಬಾವಿ-ಲಕ್ಕೂಂದದ ನಡುವಿನ ಒಂದು ಗುಡ್ಡ)
ಲಕ್ಕುಂದ (ಹಳೇಪೈಕದವರ ಹಟ್ಟಿ. ಸಿಂಬಾವಿಯಿಂದ ಮೂರ‍್ನಾಲ್ಕು ಮೈಲಿ)
ಮೇಗರವಳ್ಳಿ (ತೀರ್ಥಹಳ್ಳಿ ಆಗುಂಬೆ ರಸ್ತೆಯಲ್ಲಿನ ಊರು. ಲಕ್ಕೂಮದದಿಂದ ಎರಡು ಮೈಲಿ)
ಬೆತ್ತದಸರ
ಹುಲಿಕಲ್ಲು
ಹಳೆಮನೆ (ಮೇಗರವಳ್ಳಿಯಿಂದ ಒಂದು ಹರಿದಾರಿ)
ಅರೆಕಲ್ಲು (ಹಳೆಮನೆಯಿಂದ ಬೆಟ್ಟಳ್ಳಿಗೆ ಹೋಗುವ ದಾರಿಯಲ್ಲಿ ಬೆಟ್ಟಳ್ಳಿಯ ಹೊಲಗೇರಿಗೆ ದಾರಿ ಕವಲೊಡೆಯುವ ಜಾಗ)
ಬೆಟ್ಟಳ್ಳಿ
ಬೆಟ್ಟಳ್ಳಿ ಹಕ್ಕಲು (ಬಿಸೇಕಲ್ ಸವಾರಿ ನಡೆದ ಜಾಗ)
ಬೆಟ್ಟಳ್ಳಿ ಹೊಲಗೇರಿ
ಅರೆಕಲ್ಲು ಕಾರೇಮೆಟ್ಟು (ಹೊಲಗೇರಿಯ ಹತ್ತಿರದ್ದು. ಗುತ್ತಿ ತಿಮ್ಮಿಗಾಗಿ ಕಾಯುತ್ತಾ ಕುಳಿತಿದ್ದ ಜಾಗ)
ಕಮ್ಮಾರಸಾಲೆ (ಕೋಣೂರಿಗೂ ಬೆಟ್ಟಳ್ಳಿಗೂ ಮಧ್ಯೆ, ಮೇಗರವಳ್ಳಿ ಹೂವಳ್ಳಿ ಹಳೆಮನೆಗಳಿಗೂ ಸಮದೂರದಲ್ಲಿದ್ದ ಜಾಗ. ಕಳ್ಳಂಗಡಿ, ಮೂರ‍್ನಾಲ್ಕು ಜೋಪಡಿಗಳಿದ್ದ ಜಾಗ)
ಕೋಣೂರು
ಭೂತದವನ (ಕೋಣುರು ಮನೆಗೆ ಸೇರಿದ್ದು)
ಹಾಡ್ಯದ ಮಾರಮ್ಮನ ಗುಡಿ
ಹಳೆಪೈಕದ ಯೆಂಕಯ ಮನೆ
ಹೂವಳ್ಳಿ
 
ಗುತ್ತಿ ಓಡಾಡಿದ ಮಾರ್ಗ
ಸಿಂಬಾವಿ
ಸೀತೂರುಗುಡ್ಡ
ಲಕ್ಕುಂದ
ಮೇಗರವಳ್ಳಿ
ಬೆತ್ತದಸರ
ಹುಲಿಕಲ್ಲು
ಹಳೆಮನೆ
ಅರೆಕಲ್ಲು
ಬೆಟ್ಟಳ್ಳಿ
ಬೆಟ್ಟಳ್ಳಿ ಹಕ್ಕಲು
ಬೆಟ್ಟಳ್ಳಿ ಹೊಲಗೇರಿ
ಅರೆಕಲ್ಲು ಕಾರೇಮೆಟ್ಟು
ಕಮ್ಮಾರಸಾಲೆ
ಕೋಣೂರು ದಾರಿ
ಹುಲಿಕಲ್ಲು
ಬೆತ್ತದ ಸರ
ಲಕ್ಕುಂದ
ಸೀತೂರುಗುಡ್ಡ
ಸಿಂಬಾವಿ ಹೊಲಗೇರಿ
ಸಿಂಬಾವಿ
ಮೇಗರವಳ್ಳಿ ತೀರ್ಥಹಳ್ಳಿ ರಸ್ತೆ
ಕಾಗಿನಹಳ್ಳಿ
ಹಳೆಮನೆ ಸ್ಮಶಾಣ
ಹಳೆಮನೆ ಹೊಲಗೇರಿ
ಹಳೆಮನೆ ಶಂಕರ ಹಗ್ಗಡೆ ಮನೆ
ಹುಲಿಕಲ್ಲು
ಕೋಣುರು ಮನೆ
ಕೋಣುರು ಐತನ ಬಿಡಾರ
ಹುಲಿಕಲ್ಲು
ಹೂವಳ್ಳಿ ಮನೆಯ ಹತ್ತಿರದವರೆಗೆ
ಹುಲಿಕಲ್ಲು
ತೀರ್ಥಹಳ್ಳಿ
ತುಂಗಾನದಿ ದೋಣಿ ಗಿಂಡಿ
ಕಾನೂರು
 
ಇತರೆ ಸ್ಥಳಗಳು
ದೇವಂಗಿ
ತೀರ್ಥಹಳ್ಳಿ ದೋಣಿಗಿಂಡಿ
ಮಂಡಗದ್ದೆ
ತೂದೂರು
ಸಿದ್ಧರಮಠ
ಸಿಂಧುವಳ್ಳಿ
 
ಕಾದಂಬರಿಯ ಹೊರ ವ್ಯಾಪ್ತಿಯಲ್ಲಿ ಪ್ರಸ್ತಾಪವಾಗುವ ಊರು/ನಗರ/ದೇಶಗಳು
ಮೈಸೂರು
ನಗರ
ಕೆಳದಿ
ಇಕ್ಕೇರಿ
ಕೌಲೆದುರ್ಗ
ತೀರ್ಥಹಳ್ಳಿ
ಶಿವಮೊಗ್ಗ
ಹೊನ್ನಾಳಿ
ಉಡುಪಿ
ಧರ್ಮಸ್ಥಳ
ಶೃಂಗೇರಿ
ಅಮೆರಿಕಾ
ಚಿಕಾಗೋ
ಕಲ್ಕತ್ತಾ
ವರಾಹನಗರ
ಕಾಶಿಪುರ
ಸ್ವಾಮಿವಿವೇಕಾನಂದರು ಭಾಗವಹಿಸಿದ್ದ ಸರ್ವಧರ್ಮ ಸಮ್ಮೇಳನ ೧೧-೯-೧೮೯೩
 
ಕಾದಂಬರಿಯಲ್ಲಿ ಪ್ರಸ್ತಾಪವಾಗುವ ಜಾತಿ/ಪಂಗಡಗಳು
ಗೌಡರು
ಹಸಲರು
ಬಿಲ್ಲವರು
ಸೆಟ್ಟರು
ಕರಾದಿಗರು
ಬೇಲರು
ಹೊಲೆಯರು
ದೀವರು
ಗೋಸಾಯಿಗಳು
ಹಳೆಪೈಕದವರು
 
ಕಾದಂಬರಿಯ ಮುಖ್ಯಪಾತ್ರಗಳಲ್ಲದೆ ಪ್ರಸ್ತಾಪವಾಗುವ ಜನಸಮೂಹ
ತೀರ್ಥಹಳ್ಳಿ ಆಗುಂಬೆ ಮುಖಾಂತರ ಓಡಾಡುವ ವ್ಯಾಪರಿಗಳು
ಸೇರೆಗಾರರು
ಕೂಲಿಯಾಳುಗಳು
ಗಂಧದ ಮರ ಕಡಿದು ಮಾರುವ ಗುಪ್ತ ದಳ್ಳಾಳಿಗಳು.

ಮುಖ್ಯ ಊರುಗಳು ಹಾಗೂ ವ್ಯಕ್ತಿಗಳು
ಸಿಂಬಾವಿ
ಭರಮೈ ಹೆಗ್ಗಡೆ : ಸಿಂಬಾವಿ ಮನೆಯ ಯಜಮಾನ
ದುಗ್ಗಣ್ಣಹೆಗ್ಗಡೆ : ಭರಮೈ ಹೆಗ್ಗಡೆಯ ದಿವಂಗತ ತಂದೆ
ಜಟ್ಟಮ್ಮ : ಭರಮೈ ಹೆಗ್ಗಡೆಯ ಹೆಂಡತಿ, ಹಳೇಮನೆ ಸುಬ್ಬಣ್ಣಹೆಗ್ಗಡೆಯವರ ದಿವಂಗತ ಅಣ್ಣ ದುಗ್ಗಣ್ಣಹೆಗ್ಗಡೆಯ ಮಗಳು, ಶಂಕರಹೆಗ್ಗಡೆಯವರ ತಂಗಿ
ಲಕ್ಕಮ್ಮ : ಭರಮೈ ಹೆಗ್ಗಡೆಯವರ ತಂಗಿ. ಮದುವೆಯಾಗಬೇಕಾಗಿದೆ. ಹಳೇಮನೆ ದೊಡ್ಡಹೆಗ್ಗಡೆಯವರ ಕಿರಿಯಮಗ ತಿಮ್ಮಪ್ಪಹೆಗ್ಗಡೆಗೆ ಕೊಡುವ ಮಾತಿದೆ
ಮರಾಟಿ ಮಂಜ : ಅಡುಗೆಯವನು
ದೊಳ್ಳ : ಮನೆಗೆಲಸದವನು
ಬುಲ್ಡ : ಹಳೆಪೈಕರವನು. ಭರಮೈಹೆಗ್ಗಡೆಗೆ ಹೆಂಡ ತಂದುಕೊಡುವವನು
ಗುತ್ತಿ : ಭರಮೈ ಹೆಗ್ಗಡೆಯ ನೆಚ್ಚಿನ ಆಳು. ಹೊಲೆಯರವನು
ಹುಲಿಯ : ಗುತ್ತಿಯ ನಾಯಿ
ಕರಿಸಿದ್ಧ : ಗುತ್ತಿಯ ಅಪ್ಪ
ಗಿಡ್ಡಿ : ಗುತ್ತಿಯ ಅವ್ವ, ಬೆಟ್ಟಳ್ಳಿ ದೊಡ್ಡಬೀರನ ತಂಗಿ.
? : ಹೊಲೇರ ಕುರುದೆ (ಹುಡುಗಿ)
? : ಹೊಲೇರ ಕುರುದೆ (ಹುಡುಗಿಯ ಅಣ್ಣ)
 
ಲಕ್ಕುಂದ ಹಳೇಪೈಕರ ಹಟ್ಟಿ
ಸೇಸನಾಯ್ಕ : ಲಕ್ಕುಂದದ ಹಿರಿಯ, ಸೀತೂರು ತಿಮ್ಮನಾಯ್ಕರ ನೆಂಟಭಾವ
ಹಮೀರನಾಯ್ಕ : ಸೇಸನಾಯ್ಕನ ಮಗ
ಪುಟ್ಟನಾಯ್ಕ : ಸೇಸನಾಯ್ಕನ ತಮ್ಮ
ಕಾಡಿ : ಪುಟ್ಟನಾಯ್ಕನ ಅತ್ತೆ (ಮಗಳು ಸತ್ತರೂ ಅಳಿಯನ ಮನೆಯಲ್ಲೇ ಉಳಿದಿದ್ದಾಳೆ. ಆಗ ಬಸುರಾಗಿ, ಬಸಿರು ಇಳಿಸಿಕೊಂಡ ಅಪವಾದ ಇದೆ)
ರಂಗ : ಪುಟ್ಟನಾಯ್ಕನ ನೆರೆಮನೆಯವ
ಚೌಡಿ : ರಂಗನ ಹೆಂಡತಿ
? : ರಂಗನ ತಾಯಿ
 
ಸೀತೂರು
ತಿಮ್ಮನಾಯ್ಕ : ಸೀತೂರು ಸೀಮೆಯ ಹಳೇಪೈಕರ ಮುಖಂಡ, ಲಕ್ಕುಂದದ ಸೇಸನಾಯ್ಕನ ನೆಂಟಭಾವ
? : ತಿಮ್ಮನಾಯ್ಕರ ಮಗಳು
 
ಮೇಗರವಳ್ಳಿ
ಕಣ್ಣಾಪಂಡಿತ : ಮಲೆಯಾಳಿ ನಾಟಿ ವೈದ್ಯ,
ಅಂತಕ್ಕ : ಸೆಟ್ಟಿಗಿತ್ತಿ, ಘಟ್ಟದ ಕೆಳಗಿನಿಂದ ಬಂದು ನೆಲೆನಿಂತವಳು
ಸುಬ್ಬಯ್ಯಸೆಟ್ಟಿ : ಅಂತಕಸೆಟ್ಟಿಗಿತ್ತಿಯ ದವಂಗತ ಪತಿ. ಹಳೆಮನೆಯ ವಕ್ಕಲಾಗಿದ್ದವನು
ಕಾವೇರಿ : ಅಂತಕ್ಕನ ಮಗಳು
ಕೊರಗಹುಡುಗ : ಅಂತಕಸೆಟ್ಟಿಯ ಮನೆಯ ಆಳು
ಕಿಟ್ಟಯ್ಯ : ಅಂತಕ್ಕನ ಅಳಿಯನಾಗಲು ಬಂದವನು
ಕಾಮತರು : ಮೇಗರವಳ್ಳಿಯ ಕೆಳಪೇಟೆಯಲ್ಲಿ ದಿನಸಿಮಳಿಗೆಯಿಟ್ಟುಕೊಂಡಿದ್ದವರು
ಭಟ್ಟರು : ಮೇಗರವಳ್ಳಿಯ ಕೆಳಬೀದಿಯಲ್ಲಿ ಜವಳಿ ಅಂಗಡಿಯಿಟ್ಟುಕೊಂಡಿದ್ದವರು
ಕರಿಮೀನು ಸಾಬಿ : ಮಾಪಿಳ್ಳೆ. ಮೂಲ ಹೆಸರು ಕರೀಂ ಸಾಬಿ. ಮೇಗರವಳ್ಳಿಯಲ್ಲಿ ಅಂಗಡಿ ಇಟ್ಟುಕೊಂಡಿದ್ದಾನೆ.
ಪುಡಿಸಾಬಿ : ಕರಿಮೀನು ಸಾಬಿಯ ತಮ್ಮ
ಅಜ್ಜಿಸಾಬು : ಅಜೀಜ್ ಮೂಲ ಹೆಸರು. ಚರ್ಮದ ವ್ಯಾಪಾರಿ, ಕರ‍್ಮೀನು ಸಾಬರ ಕಡೆಯವನು. ಹೊನ್ನಾಳಿ ಹೊಡ್ತ ಹೊಡೆಯುವವನು
ಲುಂಗೀಸಾಬು : ಮೂಲ ಹೆಸರು ಬುಡನ್, ಹೊನ್ನಾಳಿ ಹೊಡ್ತ ಹೊಡೆಯುವವನು
ಇಜಾರದಸಾಬು : ಹೊನ್ನಾಳಿ ಹೊಡ್ತ ಹೊಡೆಯುವವನು
 
ಹಳೆಮನೆ
ಸುಬ್ಬಣ್ಣ ಹೆಗ್ಗಡೆ : ಹಳೆಮನೆಯ ಯಜಮಾನ, ಮನೆಗೆ ಸೋಗೆ ಹೊದೆಸಿರುವುದರಿಂದ ಸೋಗೆಮನೆಯವರು ಎನ್ನುತ್ತಾರೆ
? : ಸುಬ್ಬಣ್ಣಹೆಗ್ಗಡೆಯವರ ದಿವಂಗತ ಹೆಂಡತಿ
ತಿಮ್ಮಪ್ಪಹೆಗ್ಗಡೆ : ಸುಬ್ಬಣ್ಣ ಹೆಗ್ಗಡೆಯ ಕಿರಿಮಗ
ಮಂಜಮ್ಮ : ಬುಚ್ಚಿ ಎಂಬುದು ಅವಳ ಇನ್ನೊಂದು ಹೆಸರು. ಸುಬ್ಬಣ್ಣ ಹೆಗ್ಗಡೆಯ ಮಗಳು (ಸಿಂಬಾವಿ ಭರಮೈಹೆಗ್ಗಡೆಯವರಿಗೆ ಎರಡನೇ ಹೆಂಡತಿಯಾಗಿ ಮದುವೆಯಾಗುವ ಪ್ರಸ್ತಾಪವಿದೆ)
ದೊಡ್ಡಣ್ಣಹೆಗ್ಗಡೆ : ಸುಬ್ಬಣ್ಣಹೆಗ್ಗಡೆಯವರ ಹಿರಿಯಮಗ (ತಿರುಪತಿಗೆ ಹೋದವರು ತಿರುಗಿಬಂದಿಲ್ಲ)
ರಂಗಮ್ಮ : ದೊಡ್ಡಣ್ಣಹೆಗ್ಗಡೆಯ ಹೆಂಡತಿ, ಕೋಣೂರು ಮನೆಯ ಕಾಗಿನಹಳ್ಳಿ ಅಮ್ಮನ ಮೊದಲನೇ ಮಗಳು, ರಂಗಪ್ಪಗೌಡರ ತಂಗಿ, ಮುಕುಂದಯ್ಯನ ಅಕ್ಕ (ಗಂಡ ಕಾಣೆಯಾಗಿರುವುದರಿಂದ ಮಾನಸಿಕವಾಗಿ ನೊಂದಿದ್ದಾಳೆ. ಜನ ಅವಳನ್ನು ಹುಚ್ಚುಹೆಗ್ಗಡತಿ ಎಂದೂ ಕರೆಯುತ್ತಾರೆ)
ಧರ‍್ಮು : ದೊಡ್ಡಣ್ಣಹೆಗ್ಗಡೆ ಮತ್ತು ರಂಗಮ್ಮನ ಮಗ. ಕೋಣೂರಿನ ಮಾವನ ಮನೆಯಲ್ಲಿರುವ ಐಗಳ ಶಾಲೆಯಲ್ಲಿ ಕಲಿಯುತ್ತಿದ್ದಾನೆ
ಹಳೇಪೈಕದ ಹೂವಿ : ಸುಬ್ಬಣ್ಣಹೆಗ್ಗಡೆಯ ಮನೆಗೆಲಸದವಳು
ದುಗ್ಗಣ್ಣಹೆಗ್ಗಡೆ : ಸುಬ್ಬಣ್ಣಹೆಗ್ಗಡೆಯವರ ದಿವಂಗತ ಅಣ್ಣ
ಶಂಕರಹೆಗ್ಗಡೆ : ಸುಬ್ಬಣ್ಣಹೆಗ್ಗಡೆಯವರ ದಿವಂಗತ ಅಣ್ಣ ದುಗ್ಗಣ್ಣಹೆಗ್ಗಡೆಯ ಮಗ, ಆಸ್ತಿ ಪಾಲಾಗಿ ಬೇರೆಯಿದ್ದಾನೆ. ಮನೆಗೆ ಹೆಂಚು ಹಾಕಿಸಿದ್ದರಿಂದ ಹೆಂಚಿನಮನೆಯವರು ಎನ್ನುತ್ತಾರೆ
ಸೀತಮ್ಮ : ಶಂಕರಹೆಗ್ಗಡೆಯ ಹೆಂಡತಿ
ರಾಮು : ಶಂಕರಹೆಗ್ಗಡೆಯ ಆರುವರ್ಷದ ಮಗ
? : ಶಂಕರಹೆಗ್ಗಡೆಯ ಮಗಳು ತೊಟ್ಟಿಲ ಕೂಸು
ಕೆಂಪಿ : ಬಾಲೆಯಾಡಿಸುವವಳು, ಶಂಕರಹೆಗ್ಗಡೆಯ ಮನೆಯಲ್ಲಿರುತ್ತಾಳೆ
 
ಹಳೆಮನೆ ಹೊಲಗೇರಿ
ಹಳೆಮನೆ ಪಾಲಾದ ಮೇಲೆ ಸುಬ್ಬಣ್ಣಹೆಗ್ಗಡೆಯವರ ಕಡೆಗೆ ಬಂದ ಆಳುಗಳು
ಮಂಜ
ಸಿದ್ದಿ : ಮಂಜನ ಹೆಂಡತಿ
ತಿಮ್ಮ
ಗಿಡ್ಡಿ : ತಿಮ್ಮನ ಹೆಂಡತಿ
ಸಣ್ಣ : ಹೊಲಗೇರಿಯ ಮುಖಂಡ, ಕುಳವಾಡಿ
ಪುಟ್ಟಿ : ಸಣ್ಣನ ಮಗಳು. ಮೈನೆರೆದು ನಾಲ್ಕು ವರ‍್ಷವಾದರೂ ಮದುವೆಯಾಗಿಲ್ಲ
ಗಂಗ : ಸಣ್ಣನ ರೋಗಿಷ್ಟ ಮಗ
ಬೈರ : ಹಳೆಮನೆ ದನಕಾಯುವ ಆಳು
? : ಬೈರನ ದಿವಂಗತ ಹೆಂಡತಿ
ಮಂಜ
ಸಿದ್ದ
ಕರಿಸಿದ್ದ
ಸಣ್ಣತಿಮ್ಮ
 
ಶಂಕರಹೆಗ್ಗಡೆಯವರ ಪಾಲಿಗೆ ಬಂದ ಆಳುಗಳು
ಬಚ್ಚ
ಪುಟ್ಟ
 
ಬೆಟ್ಟಳ್ಳಿ
ಕಲ್ಲಯ್ಯಗೌಡರು : ಬೆಟ್ಟಳ್ಳಿ ಮನೆಯ ಯಜಮಾನ
ದೊಡ್ಡಮ್ಮ ಹೆಗ್ಗಡತಿ : ಕಲ್ಲಯ್ಯಗೌಡರ ಹೆಂಡತಿ
ದೇವಯ್ಯಗೌಡ : ಕಲ್ಲಯ್ಯಗೌಡರ ಹಿರಿಯ ಮಗ. ಕೋಣೂರು ಮನೆಯ ಅಳಿಯ. ಕಾಗಿನಹಳ್ಳಿ ಅಮ್ಮನವರ ಎರಡನೇ ಮಗಳ ಗಂಡ. ಕೋಣೂರು ರಂಗಪ್ಪಗೌಡರು ಮತ್ತು ಮುಕುಂದಯ್ಯನ ಭಾವ
? : ದೇವಯ್ಯಗೌಡರ ಹೆಂಡತಿ, ಕೋಣೂರಿನ ಕಾಗಿನಹಳ್ಳಿ ಅಮ್ಮನವರ ಎರಡನೇ ಮಗಳು
ಕಾಡು : ಕಲ್ಲಯ್ಯಗೌಡರ ಕಿರಿಯ ಮಗ. ಕೋಣೂರಿನ ಮನೆಯ ಐಗಳ ಶಾಲೆಯಲ್ಲಿ ಓದುತ್ತಿದ್ದಾನೆ
ಸುಬ್ಬಣ್ಣಸೆಟ್ಟಿ : ಬೆಟ್ಟಳ್ಳಿ ಮನೆಯ ಸೇರೆಗಾರ
ಚೆಲುವಯ್ಯ : ದೇವಯ್ಯಗೌಡರ ಮಗ. ತೊಟ್ಟಲಕೂಸು
ಸೆಟ್ಟಿಯಾಳು : ಬೆಟ್ಟಳ್ಳಿ ಮನೆಗೆಲಸದವನು
? : ಬಾಲೆಯಾಡಿಸುವ ಹುಡುಗಿ
 
ಬೆಟ್ಟಳ್ಳಿ ಹೊಲಗೇರಿ
ದೊಡ್ಡಬೀರ : ಬೆಟ್ಟಳ್ಳಿ ಹೊಲಗೇರಿಯ ಹಿರಿಯ, ತಳವಾರ.
ಸೇಸಿ : ದೊಡ್ಡಬೀರನ ಹೆಂಡತಿ. ಗುತ್ತಿಯ ತಂದೆ ಕರಿಸಿದ್ದನ ತಂಗಿ, ಗುತ್ತಿಯ ಸೋದರತ್ತೆ
ತಿಮ್ಮಿ : ದೊಡ್ಡಬೀರ ಮತ್ತು ಸೇಸಿಯ ಮಗಳು. ಆದರೆ ಕಲ್ಲಯ್ಯಗೌಡರು ತಮ್ಮ ಹಟ್ಟಿಯ ಆಳು ಬಚ್ಚನನ್ನೇ ಮದುವೆಯಾಗಬೇಕೆಂದು ಆಜ್ಞಾಪಿಸಿದ್ದಾರೆ. ಗುತ್ತಿಯ ಮೇಲೆ ಪ್ರೀತಿ. ಕೊನೆಗೆ ಗುತ್ತಿಯ ಜೊತೆಯಲ್ಲಿ ಓಡಿ ಹೋಗುತ್ತಾಳೆ.
ಸಣ್ಣಬೀರ : ದೊಡ್ಡಬೀರನ ಹಿರಿಯ ಮಗ
ಲಕ್ಕಿ : ಸಣ್ಣಬೀರನ ಹೆಂಡತಿ
ಪುಟ್ಟಬೀರ : ದೊಡ್ಡಬೀರನ ಎರಡನೇ ಮಗ
ಚಿಕ್ಕಪುಟ್ಟಿ : ಪುಟ್ಟಬೀರನ ಹೆಂಡತಿ
ಬಚ್ಚ : ಕಲ್ಲಯ್ಯಗೌಡ ಮತ್ತು ದೇವಯ್ಯಗೌಡರ ಬಂಟ. ಹೊಲೆಯನಾದರೂ ಎತ್ತಿನಗಾಡಿ ಹೊಡೆಯುವ ಅವಕಾಶವಿರುತ್ತದೆ.
? : ಕನ್ನಡ ಜಿಲ್ಲೆಯ ಆಳು. ಸೆಟ್ಟರವನು.
 
ಕೋಣೂರು
ಕಾಗಿನಹಳ್ಳಿ ಅಮ್ಮ : ಮನೆಯ ಹಿರಿಯರು
ರಂಗಪ್ಪಗೌಡ : ಕಾಗಿನಹಳ್ಳಿ ಅಮ್ಮನ ಹಿರಿಯ ಮಗ. ಮನೆಯ ಯಜಮಾನ
? : ರಂಗಪ್ಪಗೌಡರ ಹೆಂಡತಿ, ಹಳೆಮನೆ ಸುಬ್ಬಣ್ಣಹೆಗ್ಗಡೆಯ ಹಿರಿಯ ಮಗಳು
ಮುಕುಂದಯ್ಯ : ರಂಗಪ್ಪಗೌಡರ ತಮ್ಮ. ಹೂವಳ್ಳಿ ಚಿನ್ನಮ್ಮನ ಮೇಲೆ ಪ್ರೀತಿ
ತಿಮ್ಮು : ರಂಗಪ್ಪಗೌಡರ ಮಗ. ಐಗಳ ಶಾಲೆಯಲ್ಲಿ ಓದುತ್ತಿದ್ದಾನೆ
ಅನಂತಯ್ಯ : ಐಗಳು. ಘಟ್ಟದ ಕೆಳಗಿನವರು
ಹಳೇಪೈಕದ ಮುದುಕಿ : ಸೂಲಗಿತ್ತಿ
???? : ಐಗಳ ಶಾಲೆಯಲ್ಲಿದ್ದ ಇನ್ನೂ ನಾಲ್ಕು ಮಕ್ಕಳು
ಕುದುಕ : ಹಸಲೋರ ಆಳು
? : ಹಸಲೋರ ಆಳು
? : ಕುದುಕನ ಹೆಂಡತಿ
 
ಕೋಣುರು ಮನಗೆ ಸೇರಿದ್ದ ಘಟ್ಟದ ಕೆಳಗಿನ ಬಿಲ್ಲವರ ಆಳುಗಳು
ಚೀಂಕ್ರ : ಸೇರೆಗಾರನೆಂದು ಕರೆದುಕೊಳ್ಳುವ ವ್ಯಕ್ತಿ
ದೇಯಿ : ಚೀಂಕ್ರನ ಹೆಂಡತಿ
??? : ಚೀಂಕ್ರ-ದೇಯಿಯ ಮೂರು ಮಕ್ಕಳು
ಪಿಜಣ
ಅಕ್ಕಣಿ : ಪಿಜಣನ ಹೆಂಡತಿ
ಐತ
ಪೀಂಚಲು : ಐತನ ಹೆಂಡತಿ
ಮೊಡಂಕಿಲ
ಬಾಗಿ : ಮೊಡಂಕಿಲನ ಹೆಂಡತಿ
ಚಿಕ್ಕಿ
 
ಹೂವಳ್ಳಿ
ವೆಂಕಟಣ್ಣ : ವೆಂಕಟಪ್ಪನಾಯಕ ಮೂಲಹೆಸರು. ಹಳೆಮನೆ ಸುಬ್ಬಣ್ಣಹೆಗ್ಗಡೆಯವರ ಒಕ್ಕಲು. ಈತನ ಅಜ್ಜನೋ ಮುತ್ತಜ್ಜನೋ ದುರ್ಗದ ಪಾಳೆಗಾರಿಕೆಯ ಕಾಲದಲ್ಲಿ ದಂಡನಾಯಕನಾಗಿದ್ದನು.
? : ವೆಂಕಟಣ್ಣನ ದಿವಂಗತ ಹೆಂಡತಿ
ಚಿನ್ನಮ್ಮ : ವೆಂಕಟಣ್ಣನ ಮಗಳು. ಮುಕುಂದಯ್ಯನ ಬಗ್ಗೆ ಪ್ರೀತಿ.
? : ಚಿನ್ನಮ್ಮನನ್ನು ನೋಡಿಕೊಳ್ಳುತ್ತಿರುವ ಅಜ್ಜಿ. ಚಿನ್ನಮ್ಮನ ದಿವಂಗತ ತಾಯಿಯ ತಾಯಿ. ವೆಂಕಟಣ್ಣನ ಅತ್ತೆ.
ಸುಬ್ಬಿ : ಮನೆಯ ಆಳು
ಬೈರ : ಮನೆ ಆಳು
ಬೀರಿ : ಚಿನ್ನಮ್ಮನ ಸಾಕುಬೆಕ್ಕು
 
ಕಮ್ಮಾರಸಾಲೆ
ಪುಟ್ಟಾಚಾರಿ : ಕಮ್ಮಾರ
 
ಕಲ್ಲೂರು
ಮಂಜಭಟ್ಟ : ಜೋಯಿಸ, ಸಾಹುಕಾರ
ಕಿಟೈತಾಳ : ಕರಣಿಕ
ನಾರಾಯಣಭಟ್ಟ : ಮಂಜಭಟ್ಟನ ಮಗ
? : ಕಿಟ್ಟೈತಾಳನ ಹೆಂಡತಿ
? : ನಾರಾಯಣಭಟ್ಟನ ಹೆಂಡತಿ
? : ಬೋಳು ಮಡಿ ಹೆಂಗಸು
? : ಅರ್ಚಕರು
ಗಡ್ಡದಯ್ಯ
 
ಬಾವಿಕೊಪ್ಪ
? : ಸಿಂಬಾವಿ ಭರಮೈಹೆಗ್ಗಡೆಯ ದಿವಂಗತ ಆಳು. ನಾಗತ್ತೆ ಎನ್ನುವವಳಿಗೆ ಎರಡನೇ ಗಂಡ
ನಾಗತ್ತೆ : ಸಿಂಬಾವಿ ಹೆಗ್ಗಡೆಯ ದಿವಂಗತ ಆಳಿನ ನಾಲ್ಕನೇ ಹೆಂಡತಿ
ನಾಗಣ್ಣ : ನಾಗತ್ತೆಯ ದಿವಂಗತ ಮಗ
ನಾಗಕ್ಕ : ನಾಗತ್ತೆಯ ಸೊಸೆ
 
ಹೊಸಕೇರಿ
ಬಸಪ್ಪನಾಯಕರು : ಸಾಹುಕಾರರು. ಚಿನ್ನಮ್ಮನ ತಾಯಿ ವೆಂಕಟಪ್ಪನನ್ನು ಮದುವೆಯಾಗುವ ಮೊದಲು ಬಸಪ್ಪನಾಯಕರು ತಮ್ಮ ಮಗನಿಗೆ ತಂದುಕೊಳ್ಳಲು ಕೇಳಿದ್ದವರು. ಹಳೆಮೆನ ಸುಬ್ಬಣ್ಣಹೆಗ್ಗಡೆಯವರ ಹೆಂಡತಿಯ ಮಾತ್ಸರ‍್ಯದಿಂದಾಗಿ ಅದು ತಪ್ಪಿ ಕೊನೆಗೆ ವೆಂಕಟಣ್ಣನನ್ನು ಮದುವೆಯಾಗಬೇಕಾಯಿತು.
 
ತೀರ್ಥಹಳ್ಳಿ
ದಾಸಯ್ಯ : ತೀರ್ಥಹಳ್ಳಿಯವನು. ಹಳೇಮನೆ ದೊಡ್ಡಣ್ಣಹೆಗ್ಗಡೆಯವರ ಜೊತೆ ತಿರುಪತಿ ಯಾತ್ರೆಗೆ ಹೋಗಿದ್ದವನು
ಅಣ್ಣಪ್ಪಯ್ಯ : ತೀರ್ಥಹಳ್ಳಿಯಲ್ಲಿ ಕಾಫಿ ಹೋಟೆಲ್ ಇಟ್ಟುಕೊಂಡಿದ್ದವನು
ಜೀವರತ್ನಯ್ಯ : ಕಿಲಸ್ತರ ಪಾದ್ರಿ. ಶಿವಮೊಗ್ಗದಲ್ಲಿ ನೆಲೆಸಿರುತ್ತಾನೆ
ಜ್ಯೋತಿರ್ಮಣಿಯಮ್ಮ : ಜೀವರತ್ನಯ್ಯನ ಮಗಳು
ಮಾನನಾಯಕ : ದಫೇದಾರ
ಮಯಿಂದಪ್ಪ : ಪೋಲೀಸು
ತಮ್ಮಯ್ಯಣ್ಣ : ಅಂಬಿಗ
ಪೋಲೀಸರು
ಜಮಾದಾರ
ಅಮುಲ್ದಾರರು
ಡಾಕ್ಟರ್
ಹಾರುವರು
ಹೊಳೆ ದಾಟಲು ಬಂದವರು
 
ಕಾಗಿನಹಳ್ಳಿ
? : ಕಾಗಿನಹಳ್ಳಿ ಗೌಡರು, ಕೋಣೂರು ದಾನಮ್ಮನವರ ತಮ್ಮ
? : ಹಳೆಪೈಕದವನು
 
ಶಿವಮೊಗ್ಗ
ರೆವರೆಂಡ್ ಲೇಕ್‌ಹಿಲ್ : ಹಿರಿಯ ಪಾದ್ರಿ. ಯುರೋಪೇನ್ ಬಿಳಿದೊರೆ
 
ಮಂಡಗದ್ದೆ
ಮಿಸ್ ಕ್ಯಾಂಬೆಲ್ : ಮಿಷನ್ ಆಸ್ಪತ್ರೆಯ ಲೇಡಿ ಡಾಕ್ಟರ್
 
ಮಾಕಿಮನೆ
ಈರಣ್ಣ : ಕೊಲೆಯಾಗಿ ಹೋಗಿರುವ ವ್ಯಕ್ತಿ
 
ಸೀತೆಮನೆ
ಸಿಂಗಪ್ಪಗೌಡರು : ಸೀತೆಮನೆ ಯಜಮಾನರು, ಮುಂದೆ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಬರುವ ಪಾತ್ರ
 
ಮತ್ತೂರು
ಶಾಮಯ್ಯಗೌಡರು : ಮತ್ತೂರು ಮನೆಯ ಯಜಮಾನರು, ಮುಂದೆ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಬರುವ ಪಾತ್ರ. ಕಾನೂರು ಹೆಗ್ಗಡತಿಯಲ್ಲಿ ಮುತ್ತಳ್ಳಿ ಎಂದಾಗಿದೆ.
 
ಕಾನೂರು
ಚಂದ್ರಯ್ಯಗೌಡರು : ಕಾನೂರು ಮನೆಯ ಯಜಮಾನರು, ಮುಂದೆ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಬರುವ ಮುಖ್ಯಪಾತ್ರ
 

‍ಲೇಖಕರು G

February 16, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

26 ಪ್ರತಿಕ್ರಿಯೆಗಳು

  1. ಸಿ ಪಿ ನಾಗರಾಜ

    ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಬರುವ ಪಾತ್ರಗಳನ್ನು ಕುರಿತು ಈ ಬಗೆಯ ಮಾಹಿತಿಯ ಪಟ್ಟಿಯನ್ನು ನಾನು ನೋಡಿದ್ದೆ . ಕನ್ನಡದ ಒಂದು ಮಹಾಕಾದಂಬರಿಯನ್ನು ಕುರಿತು ಕೊಟ್ಟಿರುವ ಈ ವಿವರ ಕನ್ನಡದ ಓದಿನಲ್ಲಿಯೇ ಒಂದು ಹೊಸ ಬಗೆಯನ್ನು ತೆರೆದು ತೋರಿಸಿದೆ . ದೊಡ್ಡ ಕಾಡಿನಲ್ಲಿ ಹೋಗುತ್ತಿರುವಾಗ , ನಾವು ನಡೆದು ಬಂದ ಜಾಡನ್ನೇ ಮರೆತು ಒದ್ದಾಡುವಂತೆ ” ಮಲೆಗಳಲ್ಲಿ ಮದುಮಗಳು ” ಹೊತ್ತಿಗೆಯನ್ನು ಓದುವಾಗ ಕಾದಂಬರಿಯಲ್ಲಿನ ಪಾತ್ರಗಳು – ಸನ್ನಿವೇಶಗಳು – ಮಾತುಕತೆಗಳು – ಜಾಗಗಳು ಮತ್ತು ಇತರ ವಿಚಾರಗಳೆಲ್ಲವೂ ಒಂದರೊಡನೆ ಮತ್ತೊಂದು ಸೇರಿಕೊಂಡು ತಬ್ಬಿಬ್ಬಾಗುತ್ತಿದ್ದೆವು. ಇದೀಗ ಬಿ.ಆರ್.ಸತ್ಯನಾರಾಯಣ ಅವರು ಕೊಟ್ಟಿರುವ ಟಿಪ್ಪಣಿ ” ನಾಲ್ಕು ದಾರಿಗಳು ಸೇರಿರುವ ಕಡೆ ಹಾಕಿರುವ ಊರುಗಳ ಹೆಸರನ್ನು ಸೂಚಿಸುವ ಕೈಮರದಂತೆ ” ಓದುಗರಿಗೆ ನೆರವಾಗುತ್ತದೆ . ಸಿ.ಪಿ.ನಾಗರಾಜ ಬೆಂಗಳೂರು .

    ಪ್ರತಿಕ್ರಿಯೆ
  2. Arvind Subbanna

    Laudable effort by Shri B.R.Satyanarayana. Concerned persons can think of including this work as an appendix in the coming editions of Malegalli Madhumagalu.

    ಪ್ರತಿಕ್ರಿಯೆ
  3. G N Mohan

    ನಿಮ್ಮ ಟಿಪ್ಪಣಿ ಹಿಡಿದುಕೊಂಡು ಮತ್ತೆ ಮಲೆಗಳಲ್ಲಿ ಮದುಮಗಳನ್ನು ಓದಬೇಕು ಎನ್ನುವಂತಾಗಿದೆ..good attempt
    ಖಂಡಿತಾ ಅದು ಇನ್ ಮುಂದೆ ಆ ಪುಸ್ತಕದ appendix ಆಗಬೇಕು

    ಪ್ರತಿಕ್ರಿಯೆ
  4. nageshrao maney

    namasthe,
    nanage eega 53 varsha,kannada sahihtyad bagge nanage enu
    gothilla, adaroo oduva abhyasavide,omme “thatantha heli” karyakramadalli
    dr. na someshwara avaru,obba kannadinagi ‘malegalalli madumagalu’
    odadiddare avamana endaga nanage thumba mujugaravaithu, innu mundadaru odalu prayathnisuthene.
    -thappina arivinondige
    dhanyavadagalu-nagesh.

    ಪ್ರತಿಕ್ರಿಯೆ
  5. ANAND HOSUR TEACHER

    as a science teacher , i am very eager read this novel “SRI RAMAYANA DARSHANAM”.
    so very thanks to you sir, make this much of good work.

    ಪ್ರತಿಕ್ರಿಯೆ
  6. Radhika

    Wish this info is provided to all the audience when they go to watch the play. Will be quite handy.

    ಪ್ರತಿಕ್ರಿಯೆ
  7. D.Ravivarma

    ನಿಮ್ಮ ಈ ಟಿಪ್ಪಣಿ ಓದಿದಮೇಲೆ ಮರುಓದಿಗಾಗಿ ಮನಸು ತಡಪದಿಸುತ್ತಿದೆ..ನೋಡಿದ್ರೆ ಮನೆಯಲ್ಲಿ ಆ ಕಾದಂಬರಿ ಇಲ್ಲ..ಓದಿಕೊದುತ್ತೆನೆಂದು ಅದು ಯಾವ ಪುಣ್ಯಾತ್ಮ ಎತ್ತಿಕೊಂಡು ಹೋಗಿದ್ದನೋ ನೆನಪಿಲ್ಲ….ಮತ್ತೆ ಪುಸ್ತಿಕೆ ತರಿಸಿಕೊಳ್ಳಬೇಕು…ಆ ಮುಂಚೆ ಬಸವಲಿಂಗಯ್ಯ ಮತ್ತು ಗೆಳೆಯರು ಮಾಡಿದ ಈ ಅದ್ಬುತ ನಾಟಕ ನೋಡಬೇಕು ..ನಾಟಕ ನೋಡಲು ಬೆಂಗಳೂರು ಗೆ ಬರಬೇಕು ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು ಹಳ್ಳಿಗರನ್ನು ನಮ್ಮಂಥ ಆಸಕ್ತರನ್ನು ತಲುಪುವ ದಿನಗಳು ಬಂದಾವೆ…..ನಿಮ್ಮ ಈ ಆಳವಾದ ಓದು,ಮತ್ತೆ ಅದರ ಅರ್ಥಪೂರ್ಣ ಟಿಪ್ಪಣಿ ನನಗೆ ಕುಶಿನೀಡಿತು…….

    ಪ್ರತಿಕ್ರಿಯೆ
  8. ಹನುಮಂತ ಹಾಲಿಗೇರಿ

    ಕಾದಂಬರಿ ಬರಿಯುವ ಕನಸು ಹೊತ್ತವರು ಮೊದಲಿಗೆ ಹೀಗೆ ಮ್ಯಾಪ್ ತಯಾರಿಸಿಕೊಂಡರೆ ಒಳ್ಳೆಯದೆನಿಸುತ್ತೆ. ಸಾಧ್ಯವಾಗುವುದಾದರೆ ಒಂದು ಕೈ ನೋಡುವಾ. ಥ್ಯಾಂಕ್ಸ್ ಸತ್ಯ ನಾರಾಯಣ ಸರ್.

    ಪ್ರತಿಕ್ರಿಯೆ
  9. chalam

    ಒಂದು ಮಹಾಕೃತಿ ಯಾವ ರೀತಿ ಆವರಿಸಬಹುದು ಎಂಬುದಕ್ಕೆ ಈ ಟಿಪ್ಪಣಿಯೇ ಸಾಕ್ಷಿ…..

    ಪ್ರತಿಕ್ರಿಯೆ
  10. shivu K

    ಮಲೆಗಳಲ್ಲಿ ಮದುಮಗಳು ಕಾದಂಬರಿಯ ವಿಚಾರವಾಗಿ ನೀವು ಮಾಡಿರುವ ಅದ್ಬುತವಾದ ಟಿಪ್ಪಣಿ ಇದು ಸರ್….
    ಬಹುದಿನಗಳ ಆಸೆಯಾದ “ಮಲೆಗಳಲ್ಲಿ ಮದುಮಗಳು” ನಾಟಕವನ್ನು ನೋಡಲು ಇವತ್ತು ಹೋಗುತ್ತಿದ್ದೇನೆ. ಕ್ಯಾಮೆರ ಸಮೇತ…

    ಪ್ರತಿಕ್ರಿಯೆ
  11. ದೀಪಕ .ನಾ. ಹಾಲಿವಾಣ

    ನೀವು ಕಾದಂಬರಿಯ ಎರಡು ಸನ್ನಿವೇಶಗಳ ಬಗ್ಗೆ ಬರೆದಿದ್ದೀರಿ.
    ೧. ಒಂದು ಸನ್ನಿವೇಶ ಕಾದಂಬರಿಕಾರನ ಉದ್ದೇಶಪೂರ್ವಕ ನಡೆ.
    ೨. ಮತ್ತೊಂದು ಇಬ್ಬರು ವ್ಯಕ್ತಿಗಳ ಹೆಸರು ಮತ್ತು ವೃತ್ತಿಯ ಅದಲು ಬದಲು .
    ಇವುಗಳ ಬಗ್ಗೆ ವಿವರಣೆ ಕೊಡಲು ಸಾದ್ಯವೇ, ಅಂದರೆ ಆ ಸನ್ನಿವೇಶ ಮತ್ತು ಆ ವ್ಯಕ್ತಿಗಳ ಹೆಸರನ್ನು ತಿಳಿಸುತ್ತಿರಾ .

    ಪ್ರತಿಕ್ರಿಯೆ
    • ಸತ್ಯನಾರಾಯಣ

      ದೀಪಕ್,
      ಒಂದು, ಹಳೆ ಮನೆ ಸುಬ್ಬಣ್ಣ ಹೆಗ್ಗಡೆಯವರು ಒಮ್ಮೆ ವ್ಯಕ್ತಿಯೊಬ್ಬರ ಹೆಸರನ್ನು ಅದಲು ಬದಲು ಮಾಡಿದಂತೆ ನೆನಪು. ಆದರೆ ಅದು ಅವರು ವಿಸ್ಮೃತಿಗೆ ಒಳಗಾಗಿದ್ದ ಸಂದರ್ಭ. ಾಗ ಅವರ ಮಾತು ಹೆಚ್ಚು ಕಮ್ಮಿ ಆಗುತ್ತಿರುತ್ತದೆ. ಆ ಸಂದರ್ಭವಾದ್ದರಿಂದ, ಅದು ಕಾದಂಬರಿಕಾರನ ಉದ್ದೇಶಪೂರ್ವಕ ನಡೆ ಎನ್ನಬಹುದು.
      ಎರಡನೆಯದು, ಮೇಗರವಳ್ಳಯ ದಿನಸಿ ಅಂಗಡಿ ಕಾಮತರನ್ನು ಜವಳಿ ಅಂಗಡಿ ಕಾಮತರೆಂದು ಒಮ್ಮೆ ಕರೆದಿರುವುದು. ಬಹುಶಃ ಮೇಗರವಳ್ಳಿ ಒಂದು ಚಿಕ್ಕಪೇಟೆಯಾಗಿದ್ದರಿಂದ ದಿನಸಿ ಮತ್ತು ಜವಳಿ ಎರಡನ್ನೂ ಮಾರುವ ಅಂಗಡಿ ಕಾಮತರದಾಗಿತ್ತೆಂದು ಭಾವಿಸಬಹುದಾಗಿದೆ. ಆಗ ೀ ಗೊಂದಲದ ಪ್ರಶ್ನೆಯೇ ಇರುವುದಿಲ್ಲ!
      ಪ್ರಸ್ತುತ ಮ.ಮ.ಮ. ಪುಸ್ತಕ ನನ್ನ ಎದುರಿಗೆ ಇಲ್ಲ. ಪುಸ್ತಕ ನನ್ನ ಕೈಗೆ ಬಂದಾಗಿ ಮತ್ತೊಮ್ಮೆ ನಿಖರವಾಗಿ ಪುಟಸಂಖ್ಯೆ ಸಮೇತ ಬರೆಯುತ್ತೇನೆ.

      ಪ್ರತಿಕ್ರಿಯೆ
      • ದೀಪಕ.ನಾ. ಹಾಲಿವಾಣ, ಹುಬ್ಬಳ್ಳಿ

        ಧನ್ಯವಾದಗಳು .

        ಪ್ರತಿಕ್ರಿಯೆ
  12. Dr. Azad Ismail Saheb

    ಡಾ. ಸತ್ಯ. ಕುವೆಂಪುರವರ ಕೃತಿಗಳ ಸರಳ ಹಿನ್ನೆಲೆಗಳ ನಿಮ್ಮ ಲೇಖನಗಳು ಮುಂದಿನ ದುರ್ಗಮ ಹಾದಿಯನ್ನು ಸುಗಮ ಮಾಡುವ ಪರಿ ಚನ್ನಾಗಿದೆ.

    ಪ್ರತಿಕ್ರಿಯೆ
  13. ಉದಯಕುಮಾರ್ ಹಬ್ಬು

    ನಿಮ್ಮ ಟಿಪ್ಪಣಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ಕಾದಂಬರಿಯನ್ನು ಪ್ರವೇಶಿಸಲು ಅತ್ಯಂತ ಸಹಾಯಕಾರಿಯಾಗಿದೆ. ಧನ್ಯವಾದಗಳು ಉದಯಕುಮಾರ ಹಬ್ಬು, ಕಿನ್ನಿಗೋಳಿ

    ಪ್ರತಿಕ್ರಿಯೆ
  14. Shashidhara

    ಮಲೆನಾಡಿನ ಹುಡುಗಿ ಚಿನ್ನಮ್ಮ ಮತ್ತು ಮುಕುಂದಯ್ಯನ ವಿವಾಹ ಪ್ರಸಂಗದ ಕಥೆಯಿರುವ ‘ಮಲೆಗಳಲ್ಲಿ ಮದುಮಗಳು’ ಒಂದು ಮಹಾ ಕಾದಂಬರಿಯೇ ನಿಜ. ನವನಾಗರೀಕತೆಯ ಎಳ್ಳಷ್ಟೂ ಗಂಧವಿಲ್ಲದ ಕಾಲದ ಪಾತ್ರಗಳ ನಿರ್ವಹಣೆಯಲ್ಲಿ ಕುವೆಂಪುರವರ ಕಲಾತ್ಮಕತೆಯ ಕೈಚಳಕ ಒಂದು ಪವಾಡ. ಕಗ್ಗಾಡಿನ ನಡುವಿನ ಹಳ್ಳಿಗಳಲ್ಲಿನ ಒಂದು ಸುಂದರ ಪ್ರೇಮಕಥೆಯ ಜೊತೆ ಜೊತೆಗೆ ಅಲ್ಲಿನ ಜನಜೀವನ ವ್ಯಾಪಾರ ಮುಗ್ಧತೆ ಪರಿಸರ ಆಳುಗಳ ಸ್ವಾಮಿನಿಷ್ಠೆ ಶಿಕಾರಿ ಬೈಸಿಕಲ್ಲಿನ ( ಬೀಸೇಕಲ್ಲು) ಸವಾರಿ ಆಧ್ಯಾತ್ಮ .. ಇನ್ನು ಅನೇಕ ವಿಚಾರಗಳನ್ನು ಕುವೆಂಪುರವರು ಅತ್ಯಂತ ಸಂಕೀರ್ಣ ಅನ್ನುವ ಪಾತ್ರ, ಸನ್ನಿವೇಶ, ಪರಿಸರ,ಸಂಬಂಧ ,ಸ್ಥಳಗಳ ಹಿನ್ನೆಲೆಯಲ್ಲಿ ಬರೆದಿದ್ದಾರೆ. ಈ ಕಾದಂಬರಿಯನ್ನು ಓದಲು ಶುರು ಮಾಡಿದರೆ ಮನಸ್ಸು ಮಲೆನಾಡಿಗೆ ಪ್ರಯಾಣಿಸುತ್ತದೆ..

    ಪ್ರತಿಕ್ರಿಯೆ
  15. Gopalaiah.E

    ನಾನು ಓದಿದ ಕಾದಂಬರಿಗಳಲ್ಲಿ ಅದ್ಬುತವಾದ ಕಾದಂಬರಿ “ಮಲೆಗಳಲ್ಲಿ ಮದು ಮಗಳು” ನೀವು ನೀಡಿರುವ ಟಿಪ್ಪಣಿಯನ್ನು ಓದಿದ ಮೇಲೆ ಮತ್ತೊಮ್ಮೆ ಆ ಕಾದಂಬರಿಯನ್ನು ಓದಿದಂತಾಯಿತು.

    ಪ್ರತಿಕ್ರಿಯೆ
  16. ಮಲ್ಲಿಕಾರ್ಜುನ ಹೊಸಪಾಳ್ಯ

    ನಿಮ್ಮ ಟಿಪ್ಪಣಿಯನ್ನು ನೋಡಿದರೆ ನಿಮಗೆ ಕಾದಂಬರಿ ನಡೆಯುವ ಸ್ಥಳ ಪರಿಚಯ ಚೆನ್ನಾಗಿ ಇರುವ ಹಾಗಿದೆ. ದಯಮಾಡಿ ಆ ಇಡೀ ಪ್ರದೇಶದ ಒಂದು ಮ್ಯಾಪ್ ಮಾಡಲು ಸಾಧ್ಯವೇ? ಆ ಎಲ್ಲಾ ಸ್ಥಳ ಹಾಗೂ ಹಳ್ಳಿಗಳನ್ನು ನೋಡುವ ಬಯಕೆ ತುಂಬಾ ದಿನಗಳಿಂದಲೂ ಇದೆ. ಈಗ ಹೇಗಿವೆ ಆ ಹಳ್ಳಿಗಳು ಎಂದು ತಿಳಿಯುವ ಕುತೂಹಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: