ಪಲ್ಲವಿ ರಾವ್ Recommends

ಪಲ್ಲವಿ ರಾವ್

ನಮ್ಮ ಸೋ ಕಾಲ್ಡ್ ಸಂಸ್ಕೃತಿ ರಕ್ಷಕರಿಗೆ ಈ ಹೋಮೋಸೆಕ್ಷುಯಲ್ಸ್ ಅಂದ್ರೆ ಭಯಂಕರ ಮುಜುಗರ ಮತ್ತು ಅವರು ನಿಸರ್ಗ ವಿರೋಧಿಗಳು ಎಟ್ಸೆಟ್ರ ಅಲ್ವ,ಈ ಬಗ್ಗೆ ತಮ್ಮ ಅಸಹ್ಯ ,ಇರಿಟೇಷನ್ ಎಲ್ಲಾ ತೋಡ್ಕೊಳ್ಳೋಕೆ ಅವರು ಮೊರೆ ಹೋಗೋದು ಆನ್ ಲೈನ್ /ಸೋಷಿಯಲ್ ಮೀಡಿಯ ಬೇಸಿಕಲಿ ಕಂಪ್ಯೂಟರ್ .ಹೋಮೋಸೆಕ್ಷುಯಾಲಿಟಿಗೂ,ಕಂಪ್ಯೂಟರ್ಗೂ ಎತ್ತಣಿಂದೆತ್ತಣ ಸಂಬಂಧವಯ್ಯ ಅಂದ್ಕೊಬೇಡಿ.ಸಂಬಂಧ ಇದೆ. ಕಂಪ್ಯೂಟರ್ ಇಲ್ಲದೆ ಬದುಕನ್ನು ಕಲ್ಪಿಸಿ ಕೊಳ್ಳೋಕೆ ಸಾಧ್ಯ ಇಲ್ಲ ಅನ್ನುವಷ್ಟರ ಮಟ್ಟಿಗೆ ನಮ್ಮ ಬದುಕನ್ನು ಆವರಿಸಿಕೊಂಡಿರೋ ಕಂಪ್ಯೂಟರ್ ನಮ್ಮ ಶತಮಾನದ ಅದ್ಭುತ ಸಂಶೋಧನೆಗಳಲ್ಲೊಂದು.ಇಂತಹ ಅದ್ಭುತ ಗಣಕಯಂತ್ರವನ್ನು ಕಂಡುಹಿಡಿದ ಅಲೆನ್ ಟ್ಯುರಿನ್ ಓರ್ವ ಗೇ. ಜರ್ಮನಿಯ ಭೇದಿಸಲಾಧ್ಯ ಎಂದು ನಂಬಿದ್ದ ಎನಿಗ್ಮ ಎಂಬ ಮಿಲಿಟ್ರಿ ಸಂಕೇತ ಭಾಷೆಯನ್ನು ತನ್ನ ರುಡಿಮೆಂಟರಿ ಗಣಕಯಂತ್ರದಿಂದ ಡಿಕೋಡ್ ಮಾಡಿ ,ಮಿಲಿಯಗಟ್ಟಲೇ ಜನರ ಜೀವಹಾನಿಯನ್ನೂ,ಎರಡನೇ ಮಹಾಯುಧ್ಧವನ್ನೂ ನಿಲ್ಲಿಸಿದ ಮಹಾನ್ ಪ್ರತಿಭೆ ಈತನದ್ದು. ಟ್ಯುರಿನ್ ಮಷೀನ್ ಎಂದೇ ಪ್ರಖ್ಯಾತವಾದ ಗಣಕಯಂತ್ರಗಳ ಆಧುನಿಕ ರೂಪವೇ ಇಂದಿನ ಕಂಪ್ಯೂಟರ್ ಗಳು, ಸ್ಮಾರ್ಟ್ ಫೋನುಗಳು. ಇಂತಹ ಅಧ್ಬುತ ಪ್ರತಿಭೆ ಸಮಾಜದ ಗೌರವ ಮನ್ನಣೆಗೆ ಪಾತ್ರವಾಗುವುದರ ಬದಲು ಅವಮಾನ,ಗೇಲಿ, ಜೈಲುವಾಸ ಅನುಭವಿಸಿ, ಕೊನೆಗೆ ರಾಸಾಯಾನಿಕಗಳ ಬಲತ್ಕಾರದ ಸೇವನೆಯಿಂದ ಪುರುಷತ್ವವನ್ನೂ ಕಳೆದುಕೊಳ್ಳಬೇಕಾಯ್ತು.
ಸಂಕುಚಿತ ಸಮಾಜ ,ತನ್ನರಿವಿಗೆ ನಿಲುಕಿದ್ದಷ್ಟೇ ಸತ್ಯ ಅನ್ನುವ ಅಹಂಕಾರೀ ಧೋರಣೆಯಿಂದ ೪೧ ರ ಹರೆಯದಲ್ಲಿಯೇ ಮರೆಯಾದ ಈ “ಅಸಾಧಾರಣ ಪ್ರತಿಭೆಯ ಕಥೆಯೇ ಇಮಿಟೇಶನ್ ಗೇಮ್ ಅನ್ನುವ ಸಿನೆಮ. ಹೃದಯ ಸ್ಪರ್ಷಿ ಕಥೆಯನ್ನು ಅಷ್ಟೇ ಮಾನವೀಯವಾಗಿ ತೆರೆಗೆ ತಂದಿರುವುದು ನಿರ್ದೇಶಕ ಮಾರ್ಟಿನ್ ಟೈಲ್ಡ್ಮ್ . ಮನುಷ್ಯ ಸಂಬಂಧಗಳನ್ನು ಜಾತಿ, ವರ್ಗ,ದೇಶ ಲಿಂಗಾಧರಿತವಾಗಿ ತುಂಡರಿಸಿ ,ಸದಾ ದ್ವೇಷಕ್ಕೊಂದು ಕಾರಣ ಹುಡುಕುವ ಹುಕಿಯಲ್ಲೇ ಬದುಕುವ ನಾವು ಕೇವಲ ಮನುಶ್ಯರು ನೋಡಲೇಬೇಕಾದ ಅಪರೂಪದ ಸಿನೆಮಾ ಇಮಿಟೇಷನ್ ಗೇಮ್.

We keep looking for reasons to hate , excuses like caste ,creed, language and SEXUAL PREFERENCES . We do it on every medium known to Man,News paper, radio, TV, and Internet. But the very Man who gave a platform which we use to vent out this meaningless hatred , who invented the greatest invention of our century ‘Allen Turin’ father of the first generation computer like machines lived a life of ridicule, hate and imprisonment. His time and life is depicted in this moving portrayal called ” IMITATION GAME’ . His love, loss, humungous talent and the betrayal by people whom he saved in the name of Society and its so called ‘right way of living ‘ is beautifully captured in this piognant drama. may win couple of academy honours too .. if U R A MOVIE BUFF, dont miss it .
 

‍ಲೇಖಕರು G

February 18, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vasanth

    Allen Turing Commits suicide for not his mistakes. He was jailed for his different sexual behaviour. He was at his best in his research and ended very promising career in a sorry way.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: