ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಇಂದು ’ರುದ್ರ ತಾಂಡವ’
’ನಾಟಕ ಬೆಂಗಳೂರು’ನಲ್ಲಿ ಚಿರೆಬಂದಿವಾಡೆ
ಬೇಲೂರು ರಘುನಂದನ್ ಕಾಲಂ : ಜರದಾಬೀಡ ತಿಂದ ಉಮಾಶ್ರೀ
ಅಂದ ಹಾಗೆ ಸ್ನೇಹಿತರೇ ಮದುವೆಯಲ್ಲಿ ನಡೆದ ಕೆಲ ಸ್ವಾರಸ್ಯಕರ ವಿಷ್ಯ ಹೇಳೋದು ಮರೆತಿದ್ದೆ. ಈಗ ಹೇಳ್ತೀನಿ ಕೇಳಿ. ಮದುವೆ ಛತ್ರದ ತುಂಬಾ ಉಮಾಶ್ರೀ ಅವರನ್ನೇ ನೋಡ್ತಿದ್ರು, ನೆಂಟ್ರು ಇಷ್ಟ್ರು ಎಲ್ಲಾ. ಎಲ್ಲಾ ಮದುವೆಗಳಲ್ಲಿ ಗಂಡು ಹೆಣ್ಣು ಮದುವೆಯ ಪ್ರಧಾನ ಕೇಂದ್ರವಾದರೆ ನಮ್ಮನೆ ಮದುವೆಯಲ್ಲಿ ಉಮಾಶ್ರೀ ಅವರೇ ಕೇಂದ್ರ ಪರಿಧಿ ಎಲ್ಲಾ....
'ಪಿಕೆ' ನೆಪದಲ್ಲಿ ಒಂದು ಅಭಿಪ್ರಾಯ
- ಸೂರ್ಯಕಾಂತ ಬಳ್ಳಾರಿ ಕೀಳು ಅಭಿರುಚಿಯ ಸಿನಿಮಾ, ಸಾಹಿತ್ಯಗಳ ಪ್ರಭಾವ ದಟ್ಟವಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಸದಭಿರುಚಿ ವೇಗವಾಗಿ ಅಧಃಪತನ ಹೊಂದುತ್ತಿದೆ. ಕಲಾಪ್ರಕಾರಗಳಲ್ಲೇ ಅತ್ಯಂತ ಪ್ರಭಾವಶಾಲಿಯಾದ ಸಿನಮಾ ಮಾಧ್ಯಮ ಕೇವಲ ಮನರಂಜನೆ ನೀಡದೇ ಪ್ರೇಕ್ಷಕರಲ್ಲಿ ಹೊಸ ದೃಷ್ಟಿಕೋನ ಮತ್ತು ಚಿಂತನೆಯ ಹುಟ್ಟಿಗೆ ಕಾರಣವಾಗಬಲ್ಲುದು....
ಡೈಲಿ ಬುಕ್ : ನಾರಾಯಣ ಬಾಬಾನಗರ ಅವರ ’ಗುಬ್ಬಿ ಗೂಡು’
’ನಿಮ್ಮೆಲ್ಲರ ಮಾನಸ’ ಮಾಸಪತ್ರಿಕೆಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಕಟಗೊಂಡ ನಾರಾಯಣ ಬಾಬಾನಗರ ಅವರ ಗುಬ್ಬಿಗೂಡು ಅಂಕಣ ಬರಹಗಳ ಅಪರೂಪದ ಸಂಕಲನವೇ 'ಗುಬ್ಬಿಗೂಡು' ಪುಸ್ತಕ. ಪ್ರಸ್ತುತ ವಿಜ್ಞಾನ ಶಿಕ್ಷಕರಾಗಿ ವಿಜಯಪುರದಲ್ಲಿ ಕೆಲಸ ನಿರ್ವಹಿಸುತ್ತಿರುವ ನಾರಾಯಣ ಬಾಬಾನಗರ ಅವರು ತಮ್ಮ ವೃತ್ತಿ ಬದುಕಿನ ಹಲವು ಅಪರೂಪದ ಅನುಭವಗಳನ್ನು...
'ಎಲ್ಲ ಕೆ೦ಪಾಯಿತಲ್ಲ, ಎಲ್ಲ ಕೆ೦ಪಾಯಿತು' – ಜಯಶ್ರೀ ದೇಶಪಾಂಡೆ
ಬ೦ಡಿರೆಡ್ಡಿ ವೃತ್ತದ ನಾಯಿ ಜಯಶ್ರೀ ದೇಶಪಾಂಡೆ ಕಪ್ಪಗಿನ ಕಾಲಿಗೆ ಬಿಳಿ ಚುಕ್ಕಿಯ ತೇಪೆ, ಆ ಮೂಲೆ ಈ ಮೂಲೆ ಮೂಸಿ ಮೂಳೆಕಚ್ಚಲು ಬಾಯಿಟ್ಟು, ಕಿರಿದೊ೦ದು ಲಾತ ಕೊಟ್ಟಾಗ ಬೆಚ್ಚಿ ಕಿತ್ತಿದ ಓಟ, ಎಲ್ಲೆಲ್ಲೋ ನುಗ್ಗುವ ಹುಚ್ಚು...ಸ೦ದಿಗೊ೦ದಿ, ರಸ್ತೆಯ೦ಚು.. ಡೊ೦ಕು ಬಾಲಕ್ಕೆ ನಾಚಿಕೊಳ್ಳದ ಶ್ವಾನಸ೦ತಾನ ! ಅಲ್ಲಿ೦ದ ಹುರಿಗೊ೦ಡ...
ಜಾನಪದ ಕಲಾಮೇಳಕ್ಕೆ ಬನ್ನಿ
ಟೈಮ್‌ಪಾಸ್ ಕಡ್ಲೆಕಾಯ್ ’ಒಂದರ ತೊಂದರೆ!’
- ಎಸ್ ಜಿ ಶಿವಶಂಕರ್ ಛೀ...ಇದೆಂತಾ ಶೀರ್ಷಿಕೆ ಎಂದು ಹುಬ್ಬೇರಿರಬಹುದು! 'ತೊಂದರೆ' ಎಂದರೇನೋ ಸರಿ. ಈ 'ಒಂದರ ತೊಂದರೆ' ಅಂದರೇನು..? ಇಂತಾ ವಿಚಿತ್ರ ಶೀರ್ಷಿಕೆ ಕೊಟ್ಟು ಈ ಲೇಖಕ ನಮ್ಮ ತಲೆಯನ್ನೇಕೆ ತಿನ್ನುತ್ತಿದ್ದಾನೆ ಎಂದುಕೊಳ್ಳುತ್ತಿದ್ದೀರಾ..? ನಿಜವಾಗಿ ಹೇಳಿ, ಈ ಲೇಖನದ ಬಗೆಗೆ ಒಂದು ಅಂದಾಜು ನಿಮಗೆ ಬಂದಿಲ್ಲವೆ..? ಹೌದು,...
’ಮೊದಲಿನಂತೆ ನಾನಿಲ್ಲ, ಮೊದಲಿನಂತೆ ನಾವಿಲ್ಲ…’ – ವಿದ್ಯಾ ಕವನ
ವಿದ್ಯಾ ಮೊದಲಿನಂತೆ ನಾನಿಲ್ಲ ನಿಜ ಹುಡುಗ! ನಾನೀಗ ಹೆಚ್ಚು ಸಮಾಧಾನಿ ದೂರುಗಳೆದ್ದು, ಮನ ಕೆಂಪಾದಾಗಲೆಲ್ಲ ನೀನು ಕೆರಳಿಕೆಯೋ, ಕಾರಣವೋ ಯೋಚಿಸುತ್ತೇನೆ.. ಹೊತ್ತು ಬಂದ ದುಮ್ಮಾನದ ಗಂಟು ಚಿಲ್ಲರೆಯ ಕೋಪಕ್ಕಿಂತ ಭಾರ ಬಿಳಿಯ ಕಾಗದದ ಮೇಲೆ ಮಾಡಿದ ರುಜು ನಿನ್ನೊಬ್ಬನದೇ ಅಲ್ಲ ಆತ್ಮಕ್ಕಂಟಿದವರೆಲ್ಲ ಕೊಂಚ ಕೊಂಚವೇ ಬಡಿದು ಮಾಡಿದ...
ಮನುಕುಲ ಎಚ್ಚೆತ್ತುಕೊಳ್ಳಬೇಕಾದ ಸಮಯ
ನಾ ದಿವಾಕರ್ ಭಯೋತ್ಪಾದನೆ, ಉಗ್ರವಾದ ಮತ್ತು ಹಿಂಸಾತ್ಮಕ ಧೋರಣೆ ಮಾನವ ಇತಿಹಾಸದಲ್ಲಿ ಇತ್ತೀಚಿನ ವಿದ್ಯಮಾನವೇನಲ್ಲ. ಪ್ರಭುತ್ವದ ವಿರುದ್ಧ ಹೋರಾಟ ನಡೆಸಿರುವ ಅನೇಕ ಚಳುವಳಿಗಳು ಹಿಂಸಾತ್ಮಕ ಮಾರ್ಗ ಅನುಸರಿಸುವ ಮೂಲಕ ಲಕ್ಷಾಂತರ ಅಮಾಯಕ ಜೀವಿಗಳು ಬಲಿಯಾಗಿರುವುದು ಇತಿಹಾಸದ ಒಂದು ಭಾಗವೇ ಆಗಿ ಹೋಗಿದೆ. ಮಾನವ ಸಮಾಜ ಇಂತಹ ಅಮಾನವೀಯ...
ಡಾ. ಸಿಂಧುವಳ್ಳಿ ಅನಂತಮೂರ್ತಿ ನೆನಪಿನ ಕನ್ನಡ ನಾಟಕ ರಚನಾ ಸ್ಪರ್ಧೆ
ಡಾ. ಸಿಂಧುವಳ್ಳಿ ಅನಂತಮೂರ್ತಿ ನೆನಪಿನ ಕನ್ನಡ ನಾಟಕ ರಚನಾ ಸ್ಪರ್ಧೆ ಕನ್ನಡ ರಂಗಭೂಮಿಯ ಉನ್ನತಿಗೆ ಪ್ರಾಮಾಣಿಕ ಕಳಕಳಿಯನ್ನು ಹೊಂದಿದ್ದ ಡಾ. ಸಿಂಧುವಳ್ಳಿ ಅನಂತಮೂರ್ತಿಯವರ ಕೊಡುಗೆಯನ್ನು ಗೌರವಿಸುವ ಧ್ಯೇಯೋದ್ದೇಶದಿಂದ ಮೈಸೂರಿನ ಕಲಾಸುರುಚಿಯು ಅವರ ನೆನಪಿನಲ್ಲಿ ಕನ್ನಡ ನಾಟಕ ರಚನಾ ಸ್ಪರ್ಧೆಯನ್ನು ಆಯೋಜಿಸಿದೆ. ನಾಟಕ ಸ್ವತಂತ್ರ...
ಸಾಹಿತ್ಯ ಪರಿಷತ್ನಲ್ಲಿ ಇಂದು
ಸಂಧ್ಯಾರಾಣಿ ಕಾಲಂ : ಪಿ ಸಾಯಿನಾಥ್ ಹೇಳಿದ ’ನೋವು ಮತ್ತು ವ್ಯಂಗ್ಯ’ದ ಕಥೆ
(ಕಳೆದ ವಾರ ಬರೆದಿದ್ದ ಲೇಖನದ ಮುಂದುವರೆದ ಭಾಗ) ನೋವು ಮತ್ತು ವ್ಯಂಗ್ಯ ಇಲ್ಲಿ ವ್ಯಂಗ್ಯ ಇರುವುದು ಜಗತ್ತಿನೆಲ್ಲೆಡೆ ಎಷ್ಟೊಂದು ಜನ ಮಹಿಳೆಯರು ವರ್ಷಾನುವರ್ಷ ಅಷ್ಟು ಕಷ್ಟಕಾರ್ಪಣ್ಯಗಳನ್ನು ಸಹಿಸುತ್ತಿದ್ದಾರೆ ಎನ್ನುವುದರಲ್ಲಲ್ಲ. ಈ ಕಾಲಘಟ್ಟದ ಎಷ್ಟೋ ಸಮಸ್ಯೆಗಳನ್ನು ಪರಿಹರಿಸಲು ಬೇಕಾದ ಮುನ್ನೋಟ, ದರ್ಶನ ಇರುವುದು ಅವರಲ್ಲೇ...
’ಇಬ್ಬರಿಗೂ ಅದರ ಮೇಲೆ ಅಸಡ್ಡೆ ಎಳೆಯದ ಗೆರೆಯನ್ನು ಅಳಿಸುವುದೇತಕೆ?’ – ಸ್ಮಿತಾ
ಗೆರೆ ಸ್ಮಿತಾ ಅಮೃತರಾಜ್ ಹೇಗೋ ಬಂದು ನುಸುಳಿಕೊಂಡಿದೆಯಲ್ಲ ನನ್ನ-ನಿನ್ನ ನಡುವಲ್ಲೊಂದು ತೆಳು ಗೆರೆ. ಎಳೆದದ್ದು ನೀನಲ್ಲವೆಂದೆ ನಾನಂತೂ ಮೊದಲೇ ಅಲ್ಲ ಕಂಡೂ ಕಾಣದಂತಿರುವ ಎಳೆ ಸೂಕ್ಷ್ಮ ಗೆರೆ. ಹಾಗಾದರೆ ಬಂದದ್ದಾದರೂ ಎಲ್ಲಿಂದ? ಇಂಚಿಂಚೇ ಬೆಳೆಯುತ್ತಿದೆ ಬಲಿಯುತ್ತಿದೆ. ಇಬ್ಬರಿಗೂ ಅದರ ಮೇಲೆ ಅಸಡ್ಡೆ ಎಳೆಯದ ಗೆರೆಯನ್ನು...
ಮತ್ತೆ ಬರ್ತಾ ಇದಾನೆ ’ಹ್ಯಾಮ್ಲೆಟ್’
ವಿಶ್ವದಾದ್ಯಂತ ಹಲವು ಥಿಯೇಟರ್ ಗಳಲ್ಲಿ ವಿಭಿನ್ನ ಪ್ರಯೋಗಗಳಿಗೆ ತನ್ನನ್ನು ತಾನು ಅರ್ಪಿಸಿಕೊಂಡು ಶ್ರೇಯ ಹ್ಯಾಮ್ಲೆಟ್ ಗೆ ಸಲ್ಲುತ್ತದೆ.. ದೇಶಗಳು ಬೇರೆಯಾದರೂ ಭಾಷೆಗಳು ಬೇರೆಯಾದರೂ, ನಾಟಕರಂಗಗಳು ಬೇರೆಯದ್ದಾದರೂ, ವೀಕ್ಷಕರು ಬೇರೆ ಬೇರೆಯವರಾದರೂ, ಯಾವ ಪ್ರತ್ಯೇಕತೆಯ ಲೇಶವಿಲ್ಲದೆ ಎಲ್ಲಾ ಮೂಲೆಗಳನ್ನು ಹೊಕ್ಕು ಮನೋರಂಜಿಸಿ,...
ಸಾವನ್ನ ಪ್ರಕಾಶನದ ಪುಸ್ತಕ ಸಂಭ್ರಮ ಫೋಟೋ ಆಲ್ಬಂ
ಇತ್ತೀಚಿಗೆ ’ಸಾವನ್ನ ಪ್ರಕಾಶನ’ದಿಂದ ಅಂಜಲಿ ರಾಮಣ್ಣ ಅವರ ’ಜೀನ್ಸ್ ಟಾಕ್’ ಮತ್ತು ಶ್ರೀ ನಾಗೇಶ್ ಅವರ ’ಆಕಾಶಕ್ಕೆ ಏಣಿ ಹಾಕಿ’, ಈ ಎರಡು ಪುಸ್ತಕಗಳು ಬಿಡುಗಡೆ ಆದವು ಪುಸ್ತಕ ಬಿಡುಗಡೆಯ ಸಂಭ್ರಮ ’ಅವಧಿ’ ಓದುಗರಿಗಾಗಿ : ಫೋಟೋ : ಸೀಮಾ ತಬಸ್ಸುಮ್ [gallery link="file" columns="4"...
ನಿನ್ನೆಯ ಕ್ವಿಜ಼್‌ಗೆ ಉತ್ತರ ಇಲ್ಲಿದೆ
ನಿನ್ನೆ ಗೋಪಾಲ ವಾಜಪೇಯಿ ಒಂದು ಚಿತ್ರ ಕಳುಹಿಸಿ, ಚಿತ್ರದಲ್ಲಿರುವವರು ಯಾರು ಎಂದು ಕೇಳಿದ್ದರು ಅವರು ಕಳುಹಿಸಿದ ಉತ್ತರ ಇಲ್ಲಿದೆ : ಆಕಾಶದೆಡೆ ನೋಡುತ್ತಿರುವವರು NSD ಪದವೀಧರ ಜಯತೀರ್ಥ ಜೋಶಿ (ಮೊದಲ ವ್ಯಕ್ತಿ) ಮತ್ತು, ಆಕಾಶದೆಡೆ ಕೈ ತೋರಿಸುತ್ತಿರುವವರು ನೀನಾಸಂ ಪದವೀಧರ ಪ್ರಮೋದ್ ಶಿಗ್ಗಾಂವ್ (ಒಂಬತ್ತನೆಯ ವ್ಯಕ್ತಿ)...
ಡಾ ಶಿವಾನಂದ ಕುಬಸದ ’ನೆನಪಿನ ಸಂಚಿಯಿಂದ’ : ಅಪ್ಪ ಎಂಬ ‘ಹೊರೆ’ ಇಳಿಸಿಕೊಂಡವರು
ಆತ ಏದುಸಿರು ಬಿಡುತ್ತಿದ್ದ. ತೀವ್ರ ಎದೆನೋವಿನಿಂದ ಸಂಕಟ ಪಡುತ್ತಿದ್ದ. ಆವಳು ಅವನ ಎದೆಯ ಮೇಲೆ ಕೈಯಾಡಿಸುತ್ತ ಸಾಂತ್ವನ ಹೇಳುತ್ತಿದ್ದಳು. ಮೈಯೆಲ್ಲಾ ಬೆವೆತು ತಣ್ಣಗಾಗಿದೆ. ನಿಶ್ಚೇಷ್ಟಿತನಾಗಿದ್ದಾನೆ. ಅವಳು ತನ್ನ ಸೆರಗಿನಿಂದ ಅವನ ಮುಖದ ಮೇಲಿನ ಬೆವರು ಒರೆಸುತ್ತ ಗಾಳಿ ಹಾಕುತ್ತಿದ್ದಾಳೆ..... ಮೂವತ್ತು ವರ್ಷಗಳ ಸುಖೀ ಸಂಸಾರ...
'ವಿಳಾಸವಿಲ್ಲದ ಲಕೋಟೆ…' – ರಾಘವೇಂದ್ರ ಜೋಶಿ ಕವಿತೆ
ರಾಘವೇಂದ್ರ ಜೋಶಿ ನೆನಪಿನಲ್ಲಿ ಕಂಡ ಮುಖ ಕನವರಿಕೆಯಲ್ಲಿ ಬಂದಾಗ ಬಾಗಿಲು ತಟ್ಟಿದ ಶಬ್ದ. ಬೆರಳ ಶಬ್ದವೇ? ರೋಮಾಂಚಿತಗೊಂಡು ಬಾಗಿಲು ತೆರೆದರೆ- ತೆರೆದಷ್ಟೇ ವೇಗವಾಗಿ ಮುಚ್ಚಿದ ಸದ್ದು. ಹೊಸ್ತಿಲಲ್ಲಿ ಜೋರು ಮಳೆ! ನಗುವೇ ಎಲ್ಲದಕ್ಕೂ ಅಂತಿಮವಲ್ಲ. ಬೆಟ್ಟದ ತುದಿಯಲ್ಲಿ ಧ್ವಜವೊಂದನ್ನು ನೆಟ್ಟ ಮೇಲೆ ಉದ್ವೇಗಕ್ಕೋ...
'ಆ ಸುಪ್ರಸಿದ್ಧ ರಂಗ ನಿರ್ದೆಶಕರು ಯಾರು ಹೇಳಬಲ್ಲಿರಾ?' – ಗೋಪಾಲ ವಾಜಪೇಯಿ ಕೇಳ್ತಾರೆ
'ನಂದಭೂಪತಿ' ನಾಟಕದ (ಮೂಲ : ಶೇಕ್ಸ್ ಪಿಯರನ 'ಕಿಂಗ್ ಲಿಯರ್') ಒಂದು ಸನ್ನಿವೇಶ 1985ರಲ್ಲಿ ಹುಬ್ಬಳ್ಳಿಯ 'ಅಭಿನಯ ಭಾರತಿ' ತಂಡದ ಮೊದಲ ಪ್ರಯೋಗದ ಈ ಚಿತ್ರದಲ್ಲಿ ಇಬ್ಬರು ಸುಪ್ರಸಿದ್ಧ ರಂಗ ನಿರ್ದೆಶಕರು ಇದ್ದಾರೆ. ಆ ಪೈಕಿ ಒಬ್ಬರು ರಂಗಜಂಗಮ ಬಿ. ವಿ. ಕಾರಂತರ ಶಿಷ್ಯ. ನೀವು ಆ ಇಬ್ಬರು ಸುಪ್ರಸಿದ್ಧ ರಂಗ ನಿರ್ದೆಶಕರು ಯಾರು...
ಪ್ರೀತಿಸಿದೋಳ್ನ ಮರಿಬೇಕು ಅಂದ್ರೆ ಕಟ್ಕೊಂಡೋಳ್ನ ಪ್ರೀತಿಸ್ಬೇಕು…
ಮಂಜುನಾಥ. ಅಮರಗೋಳ ಆವತ್ತು ಹುಣ್ಣಿಮೆ ಬೆಳದಿಂಗಳು ಮೌಂಟ್ ಎವರಡಸ್ಟನಲ್ಲಿನ ಐಸ್ ತುಂಡುಗಳನ್ನು ಎಲ್ಲೆಡೆ ಹರಡಿದಂತೆ ಬಾನಂಗಳದಿಂದ ಬೆಳಕು ಚೆದುರಿತ್ತು. ಅಮ್ಮನೊಂದಿಗೆ ಜಗಳ ಕಾಯ್ದು ಮನಸ್ಸಿನ ಅಳಲನ್ನು ಪ್ರಕೃತಿಯೊಡನೆ ತೋಡಿಕೊಳ್ಳಲು ಹೊರಗಡೆ ಬಂದಿದ್ದೆ. ಆದ್ರೆ ನನ್ನ ಗ್ರಹಚಾರವೇನೋ? ಯಾವುದೊಂದು ಬಸ್ಸು, ಟೆಂಪೊಗಳಿಲ್ಲದ್ದರಿಂದ ಕರಿ...
