ಫೇಸ್‌ಬುಕ್ ಸ್ನೇಹ, ಪ್ರೇಮ ಇತ್ಯಾದಿ

ಆಶಾದೀಪಾ

ಯಾಕೋ ಈ ಸಂಬಂಧಗಳು ಒಂಥರ ಗೊಜಲು,ಗೊಜಲು.. ಕೇವಲ ರಿಕ್ವೆಸ್ಟ್​ವೊಂದರಿಂದ ಆರಂಭವಾಗುವ ಪರಿಚಯ ನಂತರ ಗಾಢ ಸ್ನೇಹಕ್ಕಿಳಿದಾಗ ವಿಚಿತ್ರ ಅನ್ನಿಸಿ ಕೊಲ್ಲುತ್ತದೆ..ಅದರಲ್ಲೂ ಈ ಗೆಳೆತನ ಹೆಸರಿಡದ ಸಂಬಂಧವಾಗಿ ಪರಿವರ್ತನೆಯಾದಾಗಲಂತೂ ಅನಭವಿಸುವ ನೋವು ಹೇಳತೀರದು..ಪರಿಚತ ಆರಂಭವಾದ ಹೊತ್ತಿನಲ್ಲಿ ನಾವು ಮಾಡುವ ಪ್ರತಿ ಲೈಕ್ ಗೊಂದು ಥ್ಯಾಂಕ್ಸ್, ಕಮೆಂಟ್​ಗೊಂದು ಪ್ರತಿಕ್ರಿಯೆ ಇರುತ್ತದೆ. ಆದರೆ ಸ್ನೇಹ ಗಾಢವಾದಂತೆಲ್ಲ ಎಲ್ಲದಕ್ಕೂ ಒಂದು ಕಡಿವಾಣ ಪ್ರಾರಂಭವಾಗುತ್ತದೆ.. ಅದು ಬೇಡ ಇದು ಬೇಡ, ಹಾಗಾದರೆ ಎಲ್ಲರಿಗೂ ಗೊತ್ತಾಗುತ್ತದೆ.. ಹೀಗಾದರೆ ಗೊತ್ತಾಗುತ್ತೆ ಅನ್ನೋ ಬಂಧನದಿಂದ ಮನಸ್ಸು ರೋಸಿಹೋಗುತ್ತದೆ. ಯಾಕೆ ಹೀಗೆ..?ಹರಿಯುವ ನದಿಗೆ ಅಣೆಕಟ್ಟು ಕಟ್ಟಿದ ಹಾಗೆ, ಪ್ರೀತಿಗ್ಯಾಕೆ ಕಡಿವಾಣ..?ಇದೇಲ್ಲಾ ಮಾರ್ಡನ್​ ಸಂಬಂಧಗಳ ಪರಿವಿಡಿನಾ.

ಟೆಕ್ನಾಲಜಿ ಮುಂದುವರೆದಂತೆಲ್ಲ. Net ನಲ್ಲೆ ಸ್ನೇಹ,ಪ್ರೀತಿ ಶುರುವಾಗಿದೆ Facebook ನಲ್ಲಿ ನಾನೆಷ್ಟು ಪಾಪುಲರ್ ಗೊತ್ತಾ ಅನ್ನೋ ಮಟ್ಟಕ್ಕೆ ನಾವು ನಮ್ಮ ಪರಿಚಯ ಹೇಳಿಕೊಳ್ಳುತ್ತೇವೆ, Facebook ನ ಬಳಕೆ ಹೆಚ್ಚಾದಂತೆಲ್ಲಾ, ಸದಾ ಹೊಸ ಸ್ನೇಹಿತರ ಅನ್ವೇಷಣೆಯಲ್ಲಿರುತ್ತಾರೆ..ಹೊಸ ಜನರ ಪರಿಚಯಕ್ಕೆ ಪರಿತಪಿಸುವುದು, ಹಾಗೆಯೇ ಹೊಸ ಜನ ಸಿಕ್ಕಿದ ಕೂಡಲೆ ಹಳೆ ಸಂಬಂಧವನ್ನು ಸಮಾಧಿ ಮಾಡುವುದು ಹೀಗೆ ಮುಂದುವರೆಯುತ್ತದೆ, ಜೀವನವೆಲ್ಲ. ಹೀಗೆ ಕಳೆದುಬಿಟ್ಟರೇ ಪ್ರೀತಿ ವಿಶ್ವಾಸವೆಲ್ಲಿರುತ್ತದೆ.. ಸಂಬಂಧಗಳ ಗಮಲು ಎಲ್ಲುಳಿಯುತ್ತದೆ..
ನಮ್ಮ ಅಭ್ಯಾಸ ,ಮುನಿಸು, ಸಣ್ಣ ಜಗಳ, ಆಶಯ, ಆದರ್ಶಗಳು , ಅವುಗಳನ್ನು ಪಾಲಿಸಲಾಗದ ನಮ್ಮ ವೈಫಲ್ಯ ಯಾವುದನ್ನು ನಾವು ಇಲ್ಲಿ ಮುಚ್ಚಿಡಲಾಗದು ಅಥವಾ ಮುಚ್ಚಿಟ್ಟು ಬಡಾಯಿ ಕೊಚ್ವಿಕೊಳ್ಳುತ್ತೆವಾ..?ಎಷ್ಟೋ ಸಿದ್ಧತೆಗಳನ್ನು ಮಾಡಿಕೊಂಡು ನಾವು ಈ Facebook ಸಂಬಂಧಗಳನ್ನು ಶುರುಮಾಡಬೇಕು.. ಹಾಗೆ ಸಿದ್ಧತೆಗಳೊಂದಿಗೆ ಹೊರಟಾಗ ಸಹ ಸೋಲುಗಳಾಗಲಿ ಅಪಹಾಸ್ಯಗಳಾಗಲಿ , ಕಿರಿಕಿರಿಗಳಾಗಲಿ, ಎದುರಾಗದೇ ಇರುವುದಿಲ್ಲ. ಆದರೆ ಇದರಲ್ಲಿ ಒಂದು ಡಿಫರೆಂಟ್ ಎಂದರೆ ಹೆಚ್ಚು confidence ಆಗಿ ನಾವು positive, ಆಗಿ ಇದೇಲ್ಲಾವನ್ನು ತೆಗೆದುಕೊಳ್ಳುತ್ತೆವೆ..
Facebook ನಿಂದಾ ಪ್ರೀತಿ ಅಥವಾ ಸ್ನೇಹಕ್ಕೆ ಘಾಸಿಯಾದಾಗ,ಅದಕ್ಕೆ ಸಂಬಂಧಿಸಿದವರು ಹೀಗಾಗಬಹುದು ಎಂದು ಯೋಚಿಸಿಯು ಯೋಚಿಸುವುದಿಲ್ಲ, ಇಷ್ಟು ಹತ್ತಿರದವರು ಅಷ್ಟು ಆತ್ಮಿಯರಾದವರು ನಮ್ಮನು ತುಂಬಾ ಪ್ರೀತಿಸಿದ್ದವರ ನಂಬಿಕೆಯನ್ನು ನಾವು ಕಳೆದುಕೊಳ್ಳುತ್ತೆವೆ. ಅತ್ಯಂತ ಸಂದಿಗ್ಧ ಪರಿಸ್ಥಿತಿ ಇದಕ್ಕೆ ಉತ್ತರಿಸುವುದು ಕೂಡ ತುಂಬಾ ಕಷ್ಟ…
ಒಬ್ಬ. ಮಗಳು ಅಪ್ಪನ ನಂಬಿಕೆಯನ್ನು ಕಳೆದುಕೊಂಡು ಬಿಡುತ್ತಾಳೆ, ಒಬ್ಬ ಗೆಳೆಯ ತನ್ನ ಗೆಳತಿಯ ವಿಶ್ವಾಸವನ್ನು ಕಳೆದುಕೊಂಡುಬಿಡುತ್ತಾನೆ ,ಹಾಗಂತ ಅವರ ಸಂಬಂಧ ಮುರಿದು ಹೋಗುವುದಿಲ್ಲ, ಅವತ್ತಿಗೆ ಋಣ ತಿರಿಹೋಗುವುದಿಲ್ಲ, ಬಂಧನ ಕಡಿದುಹೊಗುವುದಿಲ್ಲ. ಆದರೆ “ಇಬ್ಬರ ನಡುವಿನ ಅತ್ಯಂತ ಅವಶ್ಯವಾದ ಸದಾ ಜಾಗೃತವಾಗಿರಬೇಕಾದ ಜೀವ ಸೆಲೆಯಂತಹ ವಸ್ತು ನಂಬಿಕೆಯೇ ಸತ್ತುಹೋಗಿಬಿಟ್ಟಿರುತ್ತದೆ “ಅಲ್ಲಿ ಸೂತಕದ ನೆರಳು ತಾಂಡವವಾಡುತ್ತಿರುತ್ತದೆ ಮತ್ತೆ ಅದಕ್ಕೆ ಜೀವ ತುಂಬುವುದು ಹೇಗೆ?
ಮತ್ತೆ ನಂಬಿಕೆ ಗಳಿಸುವುದು ಹೇಗೆ?ನಮ್ಮ ಪ್ರೀತಿ ಈ face book ge ಮಾತ್ರ ಸೀಮಿತವಲ್ಲ. ಅದರಾಚೆಗೂ ಸಂಬಂಧಗಳ ಕಾಯುವಿಕೆಯನ್ನು ಕಾಪಾಡುವುದು ಹೇಗೆ ಬಹುಶಃ ಜಗತ್ತಿನ ಅತಿ ಕ್ಲೀಷ್ಟ ಪ್ರಶ್ನೆ ಇದು ಎನ್ನಿಸುತ್ತದೆ
ಒಬ್ಬ ವ್ಯಕ್ತಿಯ ನಂಬಿಕೆಯನ್ನು ಗಳಿಸುವುದು ಸುಲಭ ಅದೆ ವ್ಯಕ್ತಿಯನ್ನು ಒಮ್ಮೆ ಕಳೆದುಕೊಂಡ ಮೇಲೆ ಮತ್ತೆ ಆತನ ನಂಬಿಕೆಯನ್ನು ಗಳಿಸುವುದು ಕಷ್ಟ. ಅನೇಕ ಸಲ ಅದು ಇಂಪಾಸಿಬಲ್ , ತಪ್ಪು ಮಾಡಿದವರು ತುಂಬಾಸಲ ಕ್ಷಮಾಪಣೆ ಕೇಳಿದ್ದರೆ ಸ್ವಲ್ಪ ಅವಕಾಶ ಕೊಡಿ , ನಿಜ ಗಾಯಗೊಂಡವರು ಅಷ್ಟು ಬೇಗ ನಂಬುವುದಿಲ್ಲ, ಅದು ವಿಶ್ವಾಸಕ್ಕೆ ಆದ ಗಾಯ ಬೇಗ ಅದು ಮಾಗುವುದಿಲ್ಲ ಆದರೆ ಅವರನ್ನು ನಂಬಿಸುವುದಕ್ಕೆ ಇರೋದು ಒಂದೆ ದಾರಿ. ನಮ್ಮ ಸಮಸ್ತ ವರ್ತನೆಯನ್ನು ಬದಲಿಸಿಕೊಳ್ಳುವುದು ಆ ಸಂಬಂಧ ಬೇಕು ಎಂದರೆ ನಾವು ಶರಣಾಗಲೇ ಬೇಕು
“ನಾವು ಒಳ್ಳೆಯ ಆದಶ೯ ಗೆಳೆಯರು ಎಂಬ ಹಣೆಪಟ್ಟಿಯ ಅವಶ್ಯಕತೆ ಇಲ್ಲಿ ಬೇಡ, ಒಳ್ಳೆಯ ಗೆಳೆಯರಾಗಿ ಸಂಬಂಧಗಳನ್ನು ಕಾಪಾಡಿಕೊಳ್ಳಲು ಆರ್ದಶಗಳು ಬೇಕಿಲ್ಲ. ಆದರವೊಂದಿದ್ದರೆ ಸಾಕು ಏನಂತಿರಾ “ನಾವು ಡಿಪಾರ್ಟಮೆಂಟ್ ಆಫ್ ಡೌಟ್ಸ್​ ಆಗುವುದು ಬೇಡ. ಬಣ್ಣ ಬದಲಿಸುವ ಬೆಸಿಗೆಯಂತೆ ನಾವ್ಯಾಕೆ ಸಂಬಂಧಗಳಲ್ಲಿ ತ್ರಿವತೆಯ ಏರುಪೇರು ಮಾಡುವುದು. ಆ ಸಂಬಂಧಗಳಿಗೆ ವ್ಯವಹಾರಿಕ ಚೌಕಟ್ಟು ಹಾಕುವುದು, ನಗುಬಾರದ, ಅಳಲಾಗದ ಮನಸ್ಥಿತಿಗೆ ನಮ್ಮವರನ್ನೆ ನಾವ್ಯಾಕೆ ದೂರುವುದು ಮತ್ತು ದೂಡುವುದು ..ಕೊನೆಯದಾಗಿ ಹೇಳಬೇಕಂದ್ರೆ ..ಟೆಕ್ನಾಲಜಿಯ improvement ಸ್ನೇಹ ಸಂಬಂಧಗಳಲ್ಲಿ ಬೇಡ ಏನಂತಿರ ?
 

‍ಲೇಖಕರು G

February 26, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. umavallish

    eegina technology avantharadalli onedu reethiyalli ellarigu namagondu identity beku ennuva hapahapike idakkella karana irabahuda?

    ಪ್ರತಿಕ್ರಿಯೆ
  2. mmshaik

    nija..geLetana manassige sambandhisiddu..yochaneyalli thantrikate beda..nice..asha madam.

    ಪ್ರತಿಕ್ರಿಯೆ
  3. Dr.Prakash Khade

    ಗೆಳೆತನ,ಬಂಧುತ್ವದ ವ್ಯಾಪ್ತಿ ವಿಸ್ತರಿಸಿದ ಲೇಖನ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: