ಗಾನಕೆ ಒಲಿಯದ ಮನಸೇ ಇಲ್ಲ….

ಲಕ್ಷ್ಮಿಕಾಂತ ಇಟ್ನಾಳ್

………..ಏನಾಯ್ತೂಂದ್ರೆ, ನಾವು ಜೋಧಪುರ ಅರಮನೆಯ ಭವ್ಯತೆಯನ್ನು ಮನತಣಿದು ನೋಡಿ, ದಣಿದು, ಅರಮನೆಯ ಇಳಿಜಾರಿನ ಕಲ್ಲು ಚಪ್ಪಡಿ ಹೊದಿಸಿದ ದಾರಿಗುಂಟ ಕೆಳಗಿಳಿಯುತ್ತಿದ್ದೆವು, ಒಂದು ತಿರುವಿನಲ್ಲಿ ಮಾಡಿನಂತಹ ಮೂಲೆಯಲ್ಲಿ ಕುಳಿತು ಸುಶ್ರಾವ್ಯವಾಗಿ ಡ್ರಮ್ಗಗಳನ್ನು ಎದುರು ಬದುರು ನುಡಿಸುತ್ತ ಹಾಡುತ್ತಿದ್ದವ ಮನಸೆಳೆದ. ಬಹಳ ಟ್ರೇನ್ಡ್ ವಾಯ್ಸ್. ಮಧುರ ರಾಜಸ್ಥಾನಿ ಫೋಲ್ಕ್ ಕೇಳಿ ಖುಷಿಯಿಂದ ಬಕ್ಷೀಸು ಕೊಟ್ಟು ಮುಂದೆ ಹೆಜ್ಜೆ ಇಟ್ಟವನಿಗೆ ಆ ಸಂಗೀತಗಾರ ಕೇಳಿದ, ಕಹಾಂ ಸೆ ಆನಾ ಹುವಾ ಸರ್ ಜಿ. ….ನಾನು ಹೇಳಿದೆ, ಬೆಂಗಳೂರು, ಒಹೋ ಸೌಥ್ ಎಂದ.. ಆಪಕಾ ಜಬಾಂ ಮೇಂ ಗಾವೂಂ ಎಂದು ಕೇಳಿದ. ಹುರುಪಿನಿಂದ ಏನು ಹಾಡುವನು ಎಂದು ಕುತೂಹಲದಿಂದ ಹೂಂ’ ಹೇಳಿದೆವು.

‘ಚಲ್ಲಿದರು ಮಲ್ಲಿಗೆಯ ಬಾನಾಸುರು ಏರಿ ಮ್ಯಾಲೆ, ಅಂದದ ಚಂದದ ಮಾಯಕಾರ್ ಮಾದೇವಗೆ ಚಲ್ಲಿದರು ಮಲ್ಲಿಗೆಯ” ಅದೆಂಥ ಶೃತಿಶುದ್ಧತೆ. ದಿಙ್ಮೂಢರಾದೆವು. ಎಲ್ಲಿಯ ಜೋಧಪುರ, ಎಲ್ಲಿಯ ಕನ್ನಡವಾಡು., ಕಣ್ಣಲ್ಲಿ ನಿಜಕ್ಕೂ ಅಶ್ರುತರ್ಪಣವಾಯ್ತು. ಅವನನ್ನು ತಬ್ಬಿ ಅಭಿನಂದಿಸಿದೆ, ಆಪ್ ಜೈಸೆ ಲೋಗ್ ಕಮ್ ಹೀ ಮಿಲ್ತೇ ಹೈಂ ಸರ್ ಜಿ,, … ಎಂದು ಹೇಳಿ ‘ಕೊಯೀ ಏಕ್ ಮೇರೀ ರಾಜಸ್ಥಾನ ಕೀ ಗೀತ ಮಾಲೂಮ್ ಹೈ ಸರ್? ಕೇಳಿದ. ನನಗೂ ತಡೆಯುವುದಾಗಲಿಲ್ಲ, ಅವನ ರಾಜಸ್ಥಾನದ ” ಕೇಸರಿಯಾ ಬಾಲಮ್ ಸಾ, ಆವೋ ….ಪಧಾರೋ …ಮಾರೇ ದೇಶ, …ರೆ…..ಸಾಜನ ಸಾಜನ….. . ”ರಾಗ ಮಾಂಡ್ ದ ತುಣುಕೊಂದನ್ನು ಹಾಡಿದೆ, ಅವನ ಕಣ್ಣಾಲಿಗಳು ತುಂಬಿ ಬಂದು , ಎದ್ದು ಬಂದು ನನ್ನ ಕಾಲಿಗೆ ಉದ್ದಕ್ಕು ಬಿದ್ದು ನಮಸ್ಕರಿಸಿದ. ಅವನಂತಹ ಸಂಗೀತ ಸಾರಥಿಯ ಮುಂದೆ ಬಾಥರೂಂ ಸಿಂಗರ್ ನಾನು. ಅವನಿಗೆ ತನ್ನ ರಾಜಸ್ಥಾನದ ದನಿಯನ್ನು ದಕ್ಷಿಣ ಭಾರತೀಯನೊಬ್ಬನ ಕಂಠದಲ್ಲಿ ಕೇಳಿದ್ದು ತಡೆಯದ ಅಭಿಮಾನ ಉಕ್ಕಿಸಿತ್ತು.
ಅವನ ನೆಲದ ಪ್ರಿತಿಗೆ, ಅವನಿಗೆ ತಬ್ಬಿ ವಂದಿಸಿ, ಮುಂದೆ ಸಾಗಿದೆ. ಇನ್ನೂ ಏನೇನು ಅನುಭವ ವಾಗಲಿದೆಯೋ ಎಂಬ ಯೋಚನೆಯಲ್ಲಿ ಆಶ್ಷರ್ಯದೊಂದಿಗೆ. …
 

‍ಲೇಖಕರು G

February 26, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Shwetha.A......

    ಅಭಿಮಾನನೇ ಹಾಗೇ ನಿಜಕ್ಕೂ ಅದ್ಬುತ…ನಿಮ್ಮ ಲೇಖನ ಓದಿ ನಮ್ಗೂ ಅಭಿಮಾನ…

    ಪ್ರತಿಕ್ರಿಯೆ
  2. Hanumanth Ananth Patil

    ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
    ’ಗಾನಕೆ ಒಲಿಯದ ಮನಸೆ ಇಲ್ಲ’ ಮನ ಮಿಡಿದ ಒಂದು ಹೃದಯಸ್ಪರ್ಶಿ ಬರಹ, ಇಬ್ಬರು ಕಲಾರಾಧಕರ ಉತ್ತರ ಮತ್ತು ದಕ್ಷಿಣಗಳ ಹೃದಯ ಸಮ್ಮಿಲನ. ಚಿತ್ರಗಳು ಮುದ ನೀಡಿದವು ಆತ ಹಾಡಿದ ಕನ್ನಡ ತಾವು ಗುನುಗುಟ್ಟಿದ ರಾಜಸ್ಥಾನಿ ಗಾನದ ತುಣುಕು ಮನಃಪಟಲದ ಮೇಲೆ ಬಿಚ್ಚಿಕೊಂಡು ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಮಾಡಿದವು.

    ಪ್ರತಿಕ್ರಿಯೆ
  3. Anil Talikoti

    ಗಾನದ ಗುಂಗಿಗೆ ಗಡಿಗಳ ಗೀಳಿಲ್ಲ -ತುಂಬಾ ಚೆನ್ನಾಗಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: