ವಿದ್ಯಾರಶ್ಮಿ ಬರೆದ 'ಅವಳ ಕಥೆ'

ವಿದ್ಯಾರಶ್ಮಿ ಪೆಲತ್ತಡ್ಕ

ಅವಳು ದಿನವೂ ಬೆಳಿಗ್ಗೆ ಮಗಳನ್ನು ಸ್ಕೂಲಿಗೆ ಬಿಟ್ಟು ಹೊರಡುವಾಗ ಸ್ಕೂಲ್ ಗೇಟಿನಿಂದ ಸ್ವಲ್ಪ ದೂರದಲ್ಲೇ ಇಬ್ಬರು -ಮೂವರು ಅಮ್ಮಂದಿರು ನಿಂತು ಮಾತಾಡುತ್ತಿದ್ದರು. ಇವಳು ಪ್ರತಿದಿನ ಅವರ ಈ ಮೀಟಿಂಗ್ ನೋಡುತ್ತಿದ್ದಳು. ತನ್ನ ಮಗಳ ಕ್ಲಾಸ್ಮೇಟ್ಗಳ ಅಮ್ಮಂದಿರೇ ಆದ್ದರಿಂದ ತಾನೂ ಸೇರಬಹುದೇನೋ ಅಂದುಕೊಂಡು ಇವಳೂ ಒಂದಿನ ಅವರ ಗುಂಪಿನಲ್ಲಿ ಸೇರಿಕೊಂಡಳು.
`ನಮ್ಮತ್ತೆ ಒಂದು ಕಸಕಡ್ಡಿ ಕೂಡ ಎತ್ತಿಡಲ್ಲಪ್ಪ… ನಾನು ವರ್ಕಿಂಗ್  ವುಮನ್ ಏನೂ ಅಲ್ಲ ಸರಿ, ಆದ್ರೂ ಸ್ವಲ್ಪ ಹೆಲ್ಪ್ ಮಾಡ್ಬಾರ್ದಾ..? ಏನ್ ಜನಾನೋ..’ ಮೂಗು ಮುರಿದಳು ಒಬ್ಬಳು.

ನಮ್ಮನೇಲೂ ಅಷ್ಟೆ. ಅತ್ತೆ-ಮಾವ ಇಬ್ರೂ ದೊಡ್ಡ ಸೌಂಡ್ನಲ್ಲಿ ಸೀರಿಯಲ್ ನೋಡ್ತಿರ್ತಾರೆ. ಮಗೂಗೆ ಹೋಮ್ವರ್ಕ್ ಮಾಡ್ಸೋಕೂ ಕಷ್ಟ, ಬೆಡ್ರೂಮೇ ಹೋಗ್ಬೇಕು ನಾನು’ ಅಂತಂದಳು ಇನ್ನೊಬ್ಬಳು.
ಇವಳು ತನಗೆ ಮಾತಾಡುವುದಕ್ಕೇನೂ ವಿಷಯವಿಲ್ಲವೆಂಬಂತೆ ಹೊರಡಲನುವಾದಳು. ಅಷ್ಟರಲ್ಲಿ ಒಬ್ಬ ತಾಯಿ ಕೇಳಿದಳು, `ನಿಮ್ಮ ಅತ್ತೆ-ಮಾವ ಊರಲ್ಲಿದ್ದಾರಾ?’
`ಇಲ್ಲ, ನಂಗೆ ಅತ್ತೆ-ಮಾವ ಇಲ್ಲ. ನಾವೇ ಗಂಡ-ಹೆಂಡ್ತಿ-ಮಗು, ಅಷ್ಟೆ’ ಅಂದಳು.
`ಓ, ಮಜಾ… ಹಾಗಾದ್ರೆ ನಿಮ್ಗೆ ನಮ್ಮ ಹಾಗೆ ಕಷ್ಟ ಹೇಳ್ಕೊಳ್ಳೋಕೆ ಏನೂ ಇಲ್ಲ ಬಿಡಿ’ ಅಂದಳು ಇನ್ನೊಬ್ಬಳು.
`ಹೂಂ’ ಅನ್ನುತ್ತ ಹೊರಟಳು ಇವಳು. `ಗಂಡ ಕೊಡೋ ಕಷ್ಟಾನಾ ಹೇಳ್ಕೊಳ್ಳೋಕಾಗುತ್ತಾ?’ ಅಂತ ಗೊಣಗಿದ್ದು ಅವರಾರಿಗೂ ಕೇಳಲಿಲ್ಲ.

‍ಲೇಖಕರು G

February 26, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

14 ಪ್ರತಿಕ್ರಿಯೆಗಳು

  1. ಅಕ್ಕಿಮಂಗಲ ಮಂಜುನಾಥ

    ಗಂಡ ಕೊಡುವ ಕಷ್ಟ ಹೇಳಿಕೊಳ್ಳದೇ ನಶಿಸಿ ಹೋದ ಹೆಣ್ಣುಗಳು ಅಸಂಖ್ಯಾತ. ಹಾಗೇ ಬೀದಿಯಲ್ಲಿ ನಿಂತು ಬೊಂಬಡಾ ಬಾರಿಸಿ ಬದಕು ಹಾಳು ಮಾಡಿಕೊಂಡವರೂ ಅನೇಕರು. ಹೆಣ್ಣು ಹೇಗೆ ಬದುಕಿದರೂ ಕಷ್ಟ. ಸಮಾಜದ ನಿಯಮವೇ ಹಾಗಿದೆ. ಹೇಳಿಕೊಂಡ ಮಾತ್ರಕ್ಕೆ ಸಮಸ್ಯೆ ಪರಿಹಾರವಾಗಿ ಬಿಡುವುದೇ ? ಕತೆ ತುಂಬಾ ಚೆನ್ನಾಗಿದೆ ; ಅಭಿನಂದನೆಗಳು.

    ಪ್ರತಿಕ್ರಿಯೆ
  2. Aravind

    @malatesh aras…..
    Kathe chennagide embudu sari. Aadare hege madhura embudu tiliyalilla 🙂

    ಪ್ರತಿಕ್ರಿಯೆ
  3. ತಿರುಪತಿ ಭಂಗಿ

    ಈಗಿನ ಮಹಿಳೆಯರು ಅತ್ತೆ ಮಾವ ಇರದಿದದ್ದರೆ ಅದೆಷ್ಟು ಖುಷಿ ಪಡುತ್ತಾರಪ್ಪಾ..? ಗಂಡ ಎಂಬ ಪ್ರಾಣಿ ಕೊಡುವ ಕಿಟಿಕಿಟಿಗೆ ಬೇಸತ್ತು ಮದುವೆ ಯಾಕಾದೆ..? ಅನ್ನುವವರೂ ಇದ್ದಾರೆ.
    ನಿಮ್ಮ ಪುಟ್ಟ ಕಥೆಯಲ್ಲಿ ಈ ತಳಮಳ ಮುಪ್ಪುರಗೊಂಡಿದೆ.

    ಪ್ರತಿಕ್ರಿಯೆ
  4. Anonymous

    ನೀರಸವಾದ ಕಥೆ. ಹೇಳಿಕೊಳ್ಳುವಂಥ ವಿಶೇಷತೆ ಏನೂ ಇಲ್ಲ. ಬರೆಯಲೇಬೇಕೆಂಬ ಹಠಕ್ಕೆ ಬಿದ್ದು ಬರೆದಂತಿದೆ.

    ಪ್ರತಿಕ್ರಿಯೆ
  5. Anonymous

    ನಾಲ್ಕೈದು ಮಹಿಳೆಯರು ಒಂದೆಡೆ ಸೇರಿದಾಗ ನಡೆಯುವ ಸಾಮಾನ್ಯ ಚರ್ಚೆಯ ವಿಷಯವಿದು. ಲೇಖಕರ ಮನಸ್ಥಿತಿಯೂ ಇದಕ್ಕೆ ಹೊರತಗಿರುವಂತೆ ಕಾಣುತ್ತಿಲ್ಲ. ಇದನ್ನೆಲ್ಲಾ ಯಾಕೆ ಅಂತ ಪ್ರಕಟಿಸ್ತಾರೋ… ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: